ಆನೆ (ಚದುರಂಗ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಾಮಾನ್ಯ ಚದುರಂಗದ ಬೋರ್ಡ ಗಳಲ್ಲಿ ಕಂಡುಬರುವ ಕಾಯಿStaunton design

ಆನೆ ಚದುರಂಗದಲ್ಲಿ ಉಪಯೋಗವಾಗುವ ಕಾಯಿಗಳಲ್ಲಿ ಒಂದು. ಸಾಮಾನ್ಯವಾದ ಚದುರಂಗದ ಆಟಗಳಲ್ಲಿ ಮಂತ್ರಿಯನ್ನು ಬಿಟ್ಟರೆ ಆನೆ ಅತ್ಯಂತ ಪ್ರಬಲವಾದ ಕಾಯಿ. ಪ೦ದ್ಯದ ಪ್ರಾರಂಭದಲ್ಲಿ ಇಬ್ಬರು ಆಟಗಾರರ ಬಳಿಯೂ ಎರಡು ಆನೆಗಳಿರುತ್ತವೆ. ಆನೆ ನೇರ ರೇಖೆಗಳಲ್ಲಿ ಉದ್ದ ಸಾಲುಗಳು ಮತ್ತು ಅಡ್ಡಸಾಲುಗಳ ಮೇಲೆ ಚಲಿಸುತ್ತದೆ.ಆನೆ ಮತ್ತು ರಾಜ - ಎರಡೂ ಕಾಯಿಗಳೂ ಒಟ್ಟಿಗೇ ಚಲಿಸುವ "ಕ್ಯಾಸಲಿಂಗ್" ಎಂಬ ವಿಶೇಷ ನಡೆಯೂ ಉಂಟು. ಆನೆ ಚಲಿಸುವ ರೀತಿಯ ಪರಿಣಾಮವಾಗಿ ಖಾಲಿಯಿರುವ ಉದ್ದ ಸಾಲುಗಳ ತುದಿಯಲ್ಲಿ ಆನೆಯನ್ನು ಸ್ಥಾಪಿಸಲು ಆಟಗಾರರು ಪ್ರಯತ್ನಿಸುತ್ತಾರೆ. ಏಳನೇ ಅಡ್ಡಸಾಲಿನಲ್ಲಿ ಸ್ಥಾಪಿಸಿರುವ ಆನೆ ಬಹಳ ಪ್ರಬಲವಾದ ಪರಿಣಾಮ ಬೀರುತ್ತದೆ.

ಚಿತ್ರ ಗ್ಯಾಲರಿ[ಬದಲಾಯಿಸಿ]

ಚದುರಂಗದ ಕಾಯಿಗಳು
Chess kdt45.svg ರಾಜ Chess klt45.svg
Chess qdt45.svg ರಾಣಿ Chess qlt45.svg
Chess rdt45.svg ಆನೆ Chess rlt45.svg
Chess bdt45.svg ಒಂಟೆ Chess blt45.svg
Chess ndt45.svg ಕುದುರೆ Chess nlt45.svg
Chess pdt45.svg ಪದಾತಿ Chess plt45.svg

External links[ಬದಲಾಯಿಸಿ]


ಉಲ್ಲೇಖಗಳು[ಬದಲಾಯಿಸಿ]