ಐಸಾಕ್ ಅಸಿಮೋವ್ ರವರ ರೋಬಾಟ್ ಸರಿಣಿ
ಐಸಾಕ್ ಅಸಿಮೋವ್ ರವರ ಪಾಸಿಟ್ರಾನ್ ಚಾಲಿತ ರೋಬಾಟ್ ವಿಷಯಕ ಸಣ್ಣ ಕಥೆಗಳು ಮತ್ತು ಕಾದಂಬರಿಗಳು ರೋಬಾಟ್ ಸರಣಿಗಳಡಿ ಸೇರುತ್ತವೆ.
ಸಣ್ಣ ಕಥೆಗಳು
[ಬದಲಾಯಿಸಿ]ಅಸಿಮೋವ್ ರವರ ಬಹುತೇಕ ಸಣ್ಣ ಕಥೆಗಳೆಲ್ಲವೂ ಪಾಸಿಟ್ರಾನ್ ಚಾಲಿತ ರೋಬಾಟ್ ಶಾಸ್ತ್ರ ಮತ್ತು ಅಂತರಿಕ್ಷಾನ್ವೇಷಣೆಯ ಯುಗಕ್ಕೆ ಸೇರುತ್ತವೆ. ಅಸಿಮೋವ್ ರವರ ರೋಬಾಟ್ ಗಳ ಅನನ್ಯ ಗುಣವೈಶಿಷ್ಟ್ಯವೆಂದರೆ ಅವುಗಳೆಲ್ಲವೂ ರೋಬಾಟ್ ಶಾಸ್ತ್ರದ ಮೂರು ನಿಯಮಗಳಿಗೆ ವಿಧೇಯರಾಗಿರುತ್ತವೆ - ಈ ನಿಯಮಗಳು ಅವುಗಳ ಪಾಸಿಟ್ರಾನ್ ಚಾಲಿತ ಮಿದುಳಿನಲ್ಲಿ ಮಾರ್ಪಾಟಿಗೆ ಅವಕಾಶವಿಲ್ಲದಂತೆ ಗಡುಸುಗೊಳಿಸಲಾಗಿದ್ದು, ಈ ಮೂಲಕ ಅವುಗಳು ತಮ್ಮ ಮಾನುಷ ಸೃಷ್ಟಿಕರ್ತರ ವಿರುದ್ಧ ಬಂಡೇಳುವ ಸಾಧ್ಯತೆಯನ್ನು ತೊಡೆದುಹಾಕಲಾಗಿರುತ್ತದೆ. ಈ ಕಥೆಗಳಲ್ಲಿ ರೋಬಾಟ್, ಮನುಷ್ಯರು ಮತ್ತು ನೈತಿಕತೆಗಳ ವಿಶ್ಲೇಷಣೆಗಳು ಒಡಗೂಡಿವೆ.
ರೋಬಾಟ್ ಕಾದಂಬರಿಗಳು
[ಬದಲಾಯಿಸಿ]ಈ ಸರಣಿಯಲ್ಲಿನ ಕೆಲವು ಕಾದಂಬರಿಗಳೆಂದರೆ: ಉಕ್ಕಿನ ಗುಹೆಗಳು, ನಗ್ನ ಸೂರ್ಯ, ಪ್ರಾತಃಕಾಲಿಕ ರೋಬಾಟ್ ಗಳು, ರೋಬಾಟ್ ಗಳು ಮತ್ತು ಸಾಮ್ರಾಜ್ಯ.
ಇವುಗಳಲ್ಲಿ ನಾಲ್ಕು ಕಾದಂಬರಿಗಳು ಎಲೈಜಾ ಬೇಲೀ ಸರಣಿಗಳಾಗಿದ್ದು ಅವುಗಳು ಎಲೈಜಾ ಬೇಲೀ ಮತ್ತು ಅವನ ಮಾನವ ಸದೃಶ ರೋಬಾಟ್ ಸಂಗಡಿಗ ಆರ್. ಡೇನೀಲ್ ಓಲಿವಾ ಇವರ ನಿಗೂಢಗಳು. ಈ ಕಾದಂಬರಿಗಳು ಸಣ್ಣ ಕಥೆಗಳಾದ ಸಹಸ್ರಾರು ವರ್ಷಗಳ ನಂತರದ ಕಾಲದಲ್ಲಿ ಕಲ್ಪಿಸಲಾಗಿದ್ದು, ಇವುಗಳು ಆಂತರೀಕ್ಷಕರು (ಪೃಥ್ವಿಯಿಂದ ವಲಸೆಹೋದ ಇತರ ಗ್ರಹನಿವಾಸಿ ಮಾನವ ವಂಶಜರು) ಮತ್ತು ಕಿಕ್ಕಿರದ ಪೃಥ್ವಿಯ ನಿವಾಸಿಗಳ ನಡುವಿನ ಸಂಪರ್ಕಗಳ ಮೇಲೆ ಕೇಂದ್ರೀಕರಿಸುತ್ತವೆ.
ಚಲಚ್ಚಿತ್ರಗಳು
[ಬದಲಾಯಿಸಿ]ವಿಲ್ ಸ್ಮಿತ್ ರವರು ನಟಿಸಿದ 'ಐ ರೋಬಾಟ್' (ಜುಲೈ ೨೦೦೪) ಅವರ ಸಣ್ಣ ಕಥೆಗಳಲ್ಲೊಂದರಲ್ಲಿ ಚಲಚ್ಚಿತ್ರೀಕೃತವಾದುದು.