ಉಮ್ಮನ್ ಚಾಂಡಿ
ಉಮ್ಮನ್ ಚಾಂಡಿ | |
---|---|
ಕೇರಳದ 10ನೇ ಮುಖ್ಯಮಂತ್ರಿ
| |
ಅಧಿಕಾರ ಅವಧಿ 18 ಮೇ 2011 – 20 ಮೇ 2016 | |
ರಾಜ್ಯಪಾಲ |
|
ಪೂರ್ವಾಧಿಕಾರಿ | ವಿ. ಎಸ್. ಅವ್ಯುತಾನಂದನ್ |
ಉತ್ತರಾಧಿಕಾರಿ | ಪಿಣರಾಯಿ ವಿಜಯನ್ |
ಅಧಿಕಾರ ಅವಧಿ 31 ಆಗಸ್ಟ್ 2004 – 12 ಮೇ 2006 | |
ರಾಜ್ಯಪಾಲ | ಆರ್. ಎಲ್. ಭಟಿಯಾ |
ಪೂರ್ವಾಧಿಕಾರಿ | ಎ. ಕೆ. ಆಂಟೋನಿ |
ಉತ್ತರಾಧಿಕಾರಿ | ವಿ. ಎಸ್. ಅಚ್ಯುತಾನಂದನ್ |
ಶಾಸಕರು, ಕೇರಳ ವಿಧಾನಸಭೆ
| |
ಅಧಿಕಾರ ಅವಧಿ 1970 – 2023 | |
ಪೂರ್ವಾಧಿಕಾರಿ | ಇ. ಎಂ. ಜಾರ್ಜ್ |
ಮತಕ್ಷೇತ್ರ | ಪುತ್ತುಪಲ್ಲಿ |
ಗೃಹಸಚಿವರು, ಕೇರಳ ಸರ್ಕಾರ
| |
ಅಧಿಕಾರ ಅವಧಿ 18 ಮೇ 2011 – 13 ಏಪ್ರಿಲ್ 2012 | |
ಮುಖ್ಯಮಂತ್ರಿ | Himself |
ಪೂರ್ವಾಧಿಕಾರಿ | ಕೊಡಿಯೇರಿ ಬಾಲಕೃಷ್ಣನ್ |
ಉತ್ತರಾಧಿಕಾರಿ | ತಿರುವಂಚೂರು ರಾಧಾಕೃಷ್ಣನ್, ಪಿಣರಾಯಿ ವಿಜಯನ್ |
ಅಧಿಕಾರ ಅವಧಿ 31 ಆಗಸ್ಟ್ 2004 – 12 ಮೇ 2006 | |
ಮುಖ್ಯಮಂತ್ರಿ | Himself |
ಪೂರ್ವಾಧಿಕಾರಿ | ಎ. ಕೆ. ಆಂಟೋನಿ |
ಉತ್ತರಾಧಿಕಾರಿ | ಕೊಡಿಯೇರಿ ಬಾಲಕೃಷ್ಣನ್ |
ಅಧಿಕಾರ ಅವಧಿ 28 ಡಿಸೆಂಬರ್ 1981 – 17 ಮಾರ್ಚ್ 1982 | |
ಮುಖ್ಯಮಂತ್ರಿ | ಕೆ. ಕರುಣಾಕರನ್ |
ಪೂರ್ವಾಧಿಕಾರಿ | ಟಿ. ಕೆ. ರಾಮಕೃಷ್ಣನ್ |
ಉತ್ತರಾಧಿಕಾರಿ | ವಯಲಾರ್ ರವಿ |
ವಿತ್ತ ಸಚಿವರು, ಕೇರಳ ಸರ್ಕಾರ
| |
ಅಧಿಕಾರ ಅವಧಿ 10 ನವೆಂಬರ್ 2015 – 20 ಮೇ 2016 | |
ಮುಖ್ಯಮಂತ್ರಿ | Himself |
ಪೂರ್ವಾಧಿಕಾರಿ | ಕೆ. ಎಂ. ಮಾಣಿ |
ಉತ್ತರಾಧಿಕಾರಿ | ಟಿ. ಎಂ. ಥಾಮಸ್ ಐಸಾಕ್ |
ಅಧಿಕಾರ ಅವಧಿ 2 ಜುಲೈ 1991 – 22 ಜೂನ್ 1994 | |
ಮುಖ್ಯಮಂತ್ರಿ | ಕೆ. ಕರುಣಾಕರನ್ |
ಪೂರ್ವಾಧಿಕಾರಿ | ವಿ. ವಿಶ್ವನಾಥ ಮೆನನ್ |
ಉತ್ತರಾಧಿಕಾರಿ | ಸಿ. ವಿ. ಪದ್ಮರಾಜನ್ |
ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕರು
| |
ಅಧಿಕಾರ ಅವಧಿ 18 ಮೇ 2006 – 14 ಮೇ 2011 | |
ರಾಜ್ಯಪಾಲ |
|
ಪೂರ್ವಾಧಿಕಾರಿ | ವಿ. ಎಸ್. ಅಚ್ಯತಾನಂದನ್ |
ಉತ್ತರಾಧಿಕಾರಿ | ವಿ. ಎಸ್. ಅಚ್ಯತಾನಂದನ್ |
ಅಖಿಲ ಭಾರತ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಕಾರ್ಯದರ್ಶಿ (ಆಂಧ್ರ ಪ್ರದೇಶ)
| |
ಅಧಿಕಾರ ಅವಧಿ 6 ಜೂನ್ 2018 – 18 ಜುಲೈ 2023 | |
ರಾಷ್ಟ್ರಪತಿ |
|
ವೈಯಕ್ತಿಕ ಮಾಹಿತಿ | |
ಜನನ | ಪುತ್ತುಪಲ್ಲಿ, ಕೊಟ್ಟಾಯಂ ಜಿಲ್ಲೆ, ಕೇರಳ | ೩೧ ಅಕ್ಟೋಬರ್ ೧೯೪೩
ಮರಣ | 18 July 2023 ಬೆಂಗಳೂರು, ಕರ್ನಾಟಕ, ಭಾರತ | (aged 79)
ರಾಜಕೀಯ ಪಕ್ಷ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
ಸಂಗಾತಿ(ಗಳು) | ಮರಿಯಮ್ಮ ಉಮ್ಮನ್ |
ಮಕ್ಕಳು | 3 |
ವಾಸಸ್ಥಾನ |
|
ಅಭ್ಯಸಿಸಿದ ವಿದ್ಯಾಪೀಠ | ಸಿಎಂಎಸ್ ಕಾಲೇಜು, ಕೊಟ್ಟಾಯಂಂ
ಸೇಂಟ್ ಬರ್ಸ್ಮ್ಯಾನ್ಸ್ ಕಾಲೇಜು (ಬಿಎ) (ಸರ್ಕಾರಿ ಕಾನೂನು ಕಾಲೇಜು, ಎರ್ನಾಕುಲಂ ಎಲ್ಎಲ್ಬಿ) |
ಜಾಲತಾಣ | www |
As of 9 ಎಪ್ರಿಲ್ 2014 ಮೂಲ: [೧] |
ಉಮ್ಮನ್ ಚಾಂಡಿ (31 ಅಕ್ಟೋಬರ್ 1943 - 18 ಜುಲೈ 2023) ಒಬ್ಬ ಭಾರತೀಯ ರಾಜಕಾರಣಿಯಾಗಿದ್ದು, 2004 ರಿಂದ 2006 ರವರೆಗೆ ಮತ್ತು 2011 ರಿಂದ 2016 ರವರೆಗೆ ಕೇರಳದ 10 ನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.[೧] 1970 ರಿಂದ 2023 ರಲ್ಲಿ ಅವರು ನಿಧನರಾಗುವವರೆಗೆ ಕೇರಳ ವಿಧಾನಸಭೆಯಲ್ಲಿ ಶಾಸಕರಾಗಿ ಪುತ್ತುಪ್ಪಲ್ಲಿ ಕ್ಷೇತ್ರವನ್ನು ಪ್ರತಿನಿಧಿಸಿದರು. ಅವರು ಕೇರಳ ವಿಧಾನಸಭೆಯಲ್ಲಿ ಸುದೀರ್ಘ ಕಾಲ ಶಾಸಕರಾಗಿ ಸೇವೆ ಸಲ್ಲಿಸಿದ ಮತ್ತು ವಿಶ್ವಸಂಸ್ಥೆಯಿಂದ ಸಾರ್ವಜನಿಕ ಸೇವೆಗಾಗಿ ಪ್ರಶಸ್ತಿಯನ್ನು ಗಳಿಸಿದ ಭಾರತದ ಏಕೈಕ ಮುಖ್ಯಮಂತ್ರಿಯಾಗಿದ್ದಾರೆ.[೨]
ಜೂನ್ 6, 2018 ರಂದು, ಕಾಂಗ್ರೆಸ್ ಪಕ್ಷದ ಅಂದಿನ ಅಧ್ಯಕ್ಷ ರಾಹುಲ್ ಗಾಂಧಿ, ಉಮ್ಮನ್ ಚಾಂಡಿ ಅವರನ್ನು ಆಂಧ್ರಪ್ರದೇಶದ ಉಸ್ತುವಾರಿ ವಹಿಸಿ, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿದರು. ಜೀವಮಾನದ ತಮ್ಮ ಕೊನೆಯ ದಿನಗಳಲ್ಲಿ ಚಾಂಡಿ ಅವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. ಅವರು ಜುಲೈ 18, 2023 ರಂದು ನಿಧನರಾದರು.
ಬಾಲ್ಯ ಮತ್ತು ಶಿಕ್ಷಣ
[ಬದಲಾಯಿಸಿ]ಉಮ್ಮನ್ ಚಾಂಡಿಯವರು ಅಕ್ಟೋಬರ್ 31, 1943 ರಂದು ಕೇರಳದ ಕೊಟ್ಟಾಯಂ ಜಿಲ್ಲೆಯ ಪುತ್ತುಪಲ್ಲಿಯಲ್ಲಿ ಜನಿಸಿದರು. ಚಾಂಡಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕವಾದ ಕೇರಳದ ಅತಿದೊಡ್ಡ ವಿದ್ಯಾರ್ಥಿ ಸಂಘಟನೆ ಕೇರಳ ವಿದ್ಯಾರ್ಥಿ ಒಕ್ಕೂಟದ (ಕೆಎಸ್‌ಯು) ಕಾರ್ಯಕರ್ತರಾಗಿ ರಾಜಕೀಯ ಪ್ರವೇಶಿಸಿದರು. ಪುತ್ತುಪಲ್ಲಿಯ ಸೇಂಟ್ ಜಾರ್ಜ್ ಹೈಸ್ಕೂಲ್‌ನಲ್ಲಿ ಕೆಎಸ್‌ಯು ಘಟಕದ ಅಧ್ಯಕ್ಷರಾಗಿದ್ದ ಅವರು ಬಳಿಕ ಸಂಘಟನೆಯ ರಾಜ್ಯಾಧ್ಯಕ್ಷರಾದರು.
ಚಾಂಡಿ ಅವರು ಕೊಟ್ಟಾಯಂನ CMS ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಪೂರ್ಣಗೊಳಿಸಿದರು ಮತ್ತು ಚಂಗನಾಸ್ಸೆರಿಯ ಸೇಂಟ್ ಬರ್ಚ್‌ಮ್ಯಾನ್ಸ್ ಕಾಲೇಜಿನಲ್ಲಿ B.A ಅರ್ಥಶಾಸ್ತ್ರವನ್ನು ಪೂರ್ಣಗೊಳಿಸಿದರು.[೩] ನಂತರ, ಅವರು ಎರ್ನಾಕುಲಂನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ (LL.B) ಪಡೆದರು.[೪]
ರಾಜಕೀಯ ಜೀವನ
[ಬದಲಾಯಿಸಿ]ಕೇರಳ ಸ್ಟೂಡೆಂಟ್ಸ್ ಯೂನಿಯನ್ (ಕೆಎಸ್‌ಯು) ಮೂಲಕ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ ಉಮ್ಮನ್ ಚಾಂಡಿ, 1967 ರಿಂದ 1969 ರವರೆಗೆ ಆ ಸಂಘಟನೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಬಳಿಕ 1970 ರಲ್ಲಿ ಕೇರಳ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದರು.
ಅದೇ ವರ್ಷ ಮೊದಲ ಬಾರಿಗೆ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ ಅವರು, 1970, 1977, 1980, 1982, 1987, 1991, 1996, 2001, 2006, 2011, 2016 ಮತ್ತು 2021ರಲ್ಲಿ ಸತತವಾಗಿ ಕೇರಳ ವಿಧಾನಸಭೆಗೆ ಆಯ್ಕೆಯಾದರು. 5 ದಶಕಗಳ ಕಾಲ ಪುತ್ತುಪ್ಪಲ್ಲಿ ಕ್ಷೇತ್ರವನ್ನು ಪ್ರತಿನಿಧಿಸಿದ ಅವರು, 1996–98ರ ಅವಧಿಯಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಚುನಾವಣಾ ಗೆಲುವು | |||
---|---|---|---|
ವರ್ಷ | ಹತ್ತಿರದ ಎದುರಾಳಿ | ಅಂತರ | |
1970 | ಇ. ಎಂ. ಜಾರ್ಜ್ (ಸಿಪಿಐ(ಎಂ)) | 7,288 | |
1977 | ಪಿ. ಸಿ. ಚೆರಿಯನ್ (ಬಿ.ಎಲ್.ಡಿ) | 15,910 | |
1980 | ಎಂ. ಆರ್. ಜಿ. ಪನಿಕ್ಕರ್ (ಎನ್.ಡಿ.ಪಿ) | 13,659 | |
1982 | ಥಾಮಸ್ ರಾಜನ್ (ಐಸಿಎಸ್) | 15,983 | |
1987 | ವಿ. ಎನ್. ವಾಸವನ್ (ಸಿಪಿಐ(ಎಂ)) | 9,164 | |
1991 | ವಿ. ಎನ್. ವಾಸವನ್ (ಸಿಪಿಐ(ಎಂ)) | 13,811 | |
1996 | ರೇಜಿ ಝಶರಿಯಾ (ಸಿಪಿಐ(ಎಂ)) | 10,155 | |
2001 | ಚೆರಿಯನ್ ಫಿಲಿಪ್ (ಸ್ವತಂತ್ರ) | 12,575 | |
2006 | ಸಿಂಧು ಜಾಯ್ (ಸಿಪಿಐ(ಎಂ)) | 19,863 | |
2011 | ಸುಜಾ ಸುಸನ್ ಜಾರ್ಜ್ (ಸಿಪಿಐ(ಎಂ)) | 33,255 | |
2016 | ಜೈಕ್ ಸಿ. ಥಾಮಸ್ (ಸಿಪಿಐ(ಎಂ)) | 27,092 | |
2021 | ಜೈಕ್ ಸಿ. ಥಾಮಸ್ (ಸಿಪಿಐ(ಎಂ)) | 9,044 |
ಮಂತ್ರಿಯಾಗಿ ಉಮ್ಮನ್ ಚಾಂಡಿ
[ಬದಲಾಯಿಸಿ]ಚಾಂಡಿ ಅವರು ನಾಲ್ಕು ಬಾರಿಗೆ ಕೇರಳ ಸರ್ಕಾರದಲ್ಲಿ ಸಚಿವರಾಗಿದ್ದರು.[೫] ಮೊದಲ ಬಾರಿಗೆ ಕೆ. ಕರುಣಾಕರನ್ ಮಂತ್ರಿಮಂಡಲದಲ್ಲಿ 11 ಏಪ್ರಿಲ್ 1977 ರಿಂದ 25 ಏಪ್ರಿಲ್ 1977 ರವರೆಗೆ ಕಾರ್ಮಿಕ ಸಚಿವರಾಗಿದ್ದರು. ಬಳಿಕ, ಎ.ಕೆ. ಆಂಟನಿ ಅವರ ಮಂತ್ರಿಮಂಡಲದಲ್ಲಿ 27 ಅಕ್ಟೋಬರ್ 1978 ರವರೆಗೆ ಅದೇ ಖಾತೆಯನ್ನು ಮುಂದುವರೆಸಿದರು. ನಂತರ, ಕೆ. ಕರುಣಾಕರನ್ ಅವರ ಸಚಿವಾಲಯದಲ್ಲಿ ಗೃಹ ಖಾತೆಯನ್ನೂ ನಿರ್ವಹಿಸಿದ್ದರು. ಬಳಿಕ, ಕೆ. ಕರುಣಾಕರನ್ ಅವರ ನಾಲ್ಕನೇ ಸಚಿವಾಲಯದಲ್ಲಿ ಅವರು 2 ಜುಲೈ 1991 ರಂದು ಮತ್ತೊಮ್ಮೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆಗ ಅವರು ಹಣಕಾಸು ಖಾತೆಯ ಉಸ್ತುವಾರಿ ವಹಿಸಿದ್ದರು. ಆದರೆ, ನಂತರ ಕರುಣಾಕರನ್ ಅವರು ತಮ್ಮ ಬಣದ ನಾಯಕನಿಗೆ ರಾಜ್ಯಸಭಾ ಟಿಕೆಟ್ ನಿರಾಕರಿಸಿದ ಕಾರಣ, ಅದರ ವಿರುದ್ಧ ಪ್ರತಿಭಟನೆಯಾಗಿ 22 ಜೂನ್ 1994 ರಂದು ಸಂಪುಟದಿಂದ ರಾಜೀನಾಮೆ ನೀಡಿದರು.[೬]
ಚಾಂಡಿ ಅವರು ಈ ಕೆಳಗಿನ ಸಚಿವಾಲಯಗಳಲ್ಲಿ ಸಚಿವರಾಗಿದ್ದರು:
ಕ್ರ.ಸಂ. | ಮುಖ್ಯಮಂತ್ರಿ | ಅವಧಿ | ಖಾತೆ |
---|---|---|---|
1 | ಕೆ. ಕರುಣಾಕರನ್ | 11 ಏಪ್ರಿಲ್ 1977 – 25 ಏಪ್ರಿಲ್ 1977 | ಕಾರ್ಮಿಕ |
2 | ಎ. ಕೆ. ಆಂಟೋನಿ | 27 ಏಪ್ರಿಲ್ 1977 – 27 ಅಕ್ಟೋಬರ್ 1978 | ಕಾರ್ಮಿಕ |
3 | ಕೆ. ಕರುಣಾಕರನ್ | 28 ಡಿಸೆಂಬರ್ 1981 – 17 ಮಾರ್ಚ್ 1982 | ಗೃಹ |
4 | ಕೆ. ಕರುಣಾಕರನ್ | 2 ಜುಲೈ 1991 – 22 ಜೂನ್ 1994 | ವಿತ್ತ |
ಮುಖ್ಯಮಂತ್ರಿಯಾಗಿ ಮೊದಲ ಅವಧಿ (2004-2006)
[ಬದಲಾಯಿಸಿ]ಮೇ 2004 ರಲ್ಲಿ ನಡೆದ ಸಂಸತ್ತಿನ ಚುನಾವಣೆಯಲ್ಲಿ, ಕೇರಳದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಒಂದೇ ಒಂದು ಸ್ಥಾನವನ್ನೂ ಗೆಲ್ಲಲಿಲ್ಲ. ಆಗ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಎ.ಕೆ. ಆಂಟೋನಿ ಅವರು ರಾಜೀನಾಮೆ ನೀಡಲು ಮತ್ತು ಕಳಪೆ ಫಲಿತಾಂಶಗಳ ಹೊಣೆಗಾರಿಕೆಯನ್ನು ಸ್ವೀಕರಿಸಲು ಒತ್ತಾಯಿಸಲಾಯಿತು.[೭]30 ಆಗಸ್ಟ್ 2004 ರಂದು, AICC ವೀಕ್ಷಕರ ಸಭೆಯ ಕೊನೆಯಲ್ಲಿ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಅನುಮತಿಯ ಮೇರೆಗೆ ಚಾಂಡಿಯನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಯಿತು. ಹೀಗಿದ್ದರೂ, 2006ರ ಅಸೆಂಬ್ಲಿ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಕೇವಲ 42 ಸ್ಥಾನಗಳನ್ನು ಪಡೆಯಲು ಸಫಲವಾಯಿತು. ಅವರು 12 ಮೇ 2006 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.[೮]
ವಿರೋಧ ಪಕ್ಷದ ನಾಯಕ
[ಬದಲಾಯಿಸಿ]ಚಾಂಡಿ ಹನ್ನೆರಡನೇ ಕೇರಳ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. ಅವರ ನಾಯಕತ್ವದಲ್ಲಿ, UDF 2009 ರ ಲೋಕಸಭಾ ಚುನಾವಣೆಯಲ್ಲಿ ವಿಜಯಗಳನ್ನು ಗುರುತಿಸಿತು, ಕೇರಳದ 20 ಸಂಸತ್ತಿನ ಕ್ಷೇತ್ರಗಳಲ್ಲಿ 16 ಅನ್ನು ಗಳಿಸಿತು. ಕೇರಳ ರಾಜಕೀಯದ ಇತಿಹಾಸದಲ್ಲಿ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ UDF ಮೇಲುಗೈ ಸಾಧಿಸಿದ್ದು ಇದೇ ಮೊದಲು.[ಉಲ್ಲೇಖದ ಅಗತ್ಯವಿದೆ]
ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ
[ಬದಲಾಯಿಸಿ]2011 ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕೇರಳದಲ್ಲಿ ಬಹುಮತವನ್ನು ಪಡೆಯುವಲ್ಲಿ ಸಫಲವಾಯಿತು. ಕಾಂಗ್ರೆಸ್ ನ ಶಾಸಕಾಂಗ ಪಕ್ಷವು ಉಮ್ಮನ್ ಚಾಂಡಿಯನ್ನು ತಮ್ಮ ನಾಯಕನನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿತು. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ, ಉಮ್ಮನ್ ಚಾಂಡಿ ಅವರ ಹೆಸರನ್ನು ರಮೇಶ್ ಚೆನ್ನಿತ್ತಲ ಪ್ರಸ್ತಾಪಿಸಿದರು ಮತ್ತು ಆರ್ಯಾದನ್ ಮೊಹಮ್ಮದ್ ಅವರು ಅನುಮೋದಿಸಿದರು.
ಮುಖ್ಯಮಂತ್ರಿಯಾಗಿ ಎರಡನೇ ಅವಧಿ (2011-2016)
[ಬದಲಾಯಿಸಿ]ಉಮ್ಮನ್ ಚಾಂಡಿ ನೇತೃತ್ವದ ಯುಡಿಎಫ್, 2011 ರ ಏಪ್ರಿಲ್ 13 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ 72 ಸ್ಥಾನಗಳನ್ನು ಗೆಲ್ಲುವ ಮೂಲಕ, 68 ಸ್ಥಾನಗಳನ್ನು ಗೆದ್ದ ಎಲ್‌ಡಿಎಫ್ ವಿರುದ್ಧ ಅಲ್ಪ ಬಹುಮತದ ಅಂತರವನ್ನು ಪಡೆದುಕೊಂಡಿತು. ಅವರು ತಮ್ಮ ಸಂಪುಟದ ಇತರ ಆರು ಮಂತ್ರಿಗಳೊಂದಿಗೆ 18 ಮೇ 2011 ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ನಂತರ, ಹದಿಮೂರು ಇತರ ಮಂತ್ರಿಗಳನ್ನು ಸಹ ಅವರ ಕ್ಯಾಬಿನ್‌ಗೆ ಸೇರಿಸಿಕೊಳ್ಳಲಾಯಿತು.[೯]
ಉಲ್ಲೇಖಗಳು
[ಬದಲಾಯಿಸಿ]- ↑ http://timesofindia.indiatimes.com/assembly-elections-2011/kerala/Kerala-assembly-elections-2011-UDF-wins-by-narrow-margin/articleshow/8288245.cms
- ↑ "ಆರ್ಕೈವ್ ನಕಲು". Archived from the original on 2023-07-18. Retrieved 2023-07-18.
- ↑ https://economictimes.indiatimes.com/news/politics-and-nation/rahul-gandhis-uae-visit-a-huge-success-oommen-chandy/articleshow/67512450.cms Archived 2019-05-28 ವೇಬ್ಯಾಕ್ ಮೆಷಿನ್ ನಲ್ಲಿ.
- ↑ "ಆರ್ಕೈವ್ ನಕಲು". Archived from the original on 2019-04-23. Retrieved 2023-07-18.
- ↑ https://www.indiatoday.in/india/story/rajya-saba-seat-sacrifice-triggers-flash-war-in-congress-1254922-2018-06-08
- ↑ https://www.indiatoday.in/magazine/special-report/story/19950331-kerala-narasimha-raos-troubleshooter-karunakaran-likely-to-face-a-tough-time-807099-1995-03-31
- ↑ https://www.rediff.com/news/2004/aug/29kerala.htm
- ↑ https://www.newindianexpress.com/states/kerala/2019/mar/30/udf-throws-down-the-gauntlet-to-incumbent-kerala-government-1957711.html
- ↑ https://www.elections.in/political-leaders/oomen-chandy%20.html/