ವಿಷಯಕ್ಕೆ ಹೋಗು

ಉದಯಗಿರಿ, ಆಂಧ್ರಪ್ರದೇಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉದಯಗಿರಿ ಭಾರತದ ಆಂಧ್ರಪ್ರದೇಶ ರಾಜ್ಯದ ನೆಲ್ಲೂರು ಜಿಲ್ಲೆಯ ಉದಯಗಿರಿ ಮಂಡಲದಲ್ಲಿರುವ ಒಂದು ಪಟ್ಟಣ.[]

ಇತಿಹಾಸ

[ಬದಲಾಯಿಸಿ]

ನಗರದ ಮೊದಲ ಪರಿಚಿತ ಇತಿಹಾಸವು 14 ನೇ ಶತಮಾನದಿಂದ ಬಂದಿದೆ. ಇದು ಒಡಿಶಾದ ಗಜಪತಿಗಳ ಮುಖ್ಯಸ್ಥನಾದ ಲಾಂಗುಲ ಗಜಪತಿಯ ಸ್ಥಳೀಯ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಇದು 1512 ರ ಸುಮಾರಿಗೆ ವಿಜಯನಗರದ ಕೃಷ್ಣದೇವರಾಯನ ಆಳ್ವಿಕೆಗೆ ಒಳಪಟ್ಟಿತು. ಲಾಂಗುಲ ಗಜಪತಿ ನಿರ್ಮಿಸಿದ ಉದಯಗಿರಿ ಕೋಟೆಯು ಬಹುತೇಕ ಪಾರ್ಶ್ವಗಳಲ್ಲಿ ದುರ್ಗಮವಾಗಿತ್ತು. ಇದನ್ನು ಪೂರ್ವ ಭಾಗದಲ್ಲಿನ ಕಾಡು ಹಾದಿ ಮತ್ತು ಪಶ್ಚಿಮ ಭಾಗದಲ್ಲಿನ ಒಂದು ಮಾರ್ಗದಿಂದ ಮಾತ್ರ ಭೇದಿಸಬಹುದಾಗಿತ್ತು. ಕೃಷ್ಣದೇವರಾಯನ ಮುತ್ತಿಗೆಯು 18 ತಿಂಗಳುಗಳ ಕಾಲ ನಡೆಯಿತು ಮತ್ತು ಗಜಪತಿಗಳ ಪ್ರತಾಪರುದ್ರ ದೇವನಿಗೆ ಸೋಲುಂಟಾಯಿತು.

ಗಜಪತಿಗಳು ಮತ್ತು ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಲ್ಲಿ, ಕೋಟೆಯನ್ನು ವಿಸ್ತರಿಸಲಾಯಿತು. ಇಡೀ ನಗರ ಮತ್ತು ಸುತ್ತಲಿನ 1000 ಅಡಿ ಎತ್ತರದ ಬೆಟ್ಟವನ್ನು ಗೋಡೆಗಳಿಂದ ಸುತ್ತುವರಿಯಲಾಯಿತು. ಕೋಟೆಯು ಹದಿಮೂರು ಕಟ್ಟಡಗಳನ್ನು ಒಳಗೊಂಡಿತ್ತು, ಅವುಗಳಲ್ಲಿ ಎಂಟು ಬೆಟ್ಟದ ಮೇಲೆ ಮತ್ತು ಐದು ಕೆಳಗೆ ಇದ್ದವು. ಇದು ಹಲವಾರು ಸುಂದರವಾದ ದೇವಾಲಯಗಳು ಮತ್ತು ಉದ್ಯಾನಗಳನ್ನೂ ಒಳಗೊಂಡಿತ್ತು.

ವಿಜಯನಗರ ಸಾಮ್ರಾಜ್ಯದ ಪತನದ ನಂತರ, ಇದನ್ನು ಅಬ್ದುಲ್ಲಾ ಅರಾಫತ್ ಅವರ ಪ್ರತಿನಿಧಿ ಸುಲ್ತಾನ್ ಅಹಮದ್ ಆಳಿದನು. ಗುಡ್ಡದ ಮೇಲಿರುವ ಮಸೀದಿಯು ಎರಡು ಪರ್ಷಿಯನ್ ಶಾಸನಗಳನ್ನು ಹೊಂದಿದ್ದು ಅದು ಮಸೀದಿಯ ನಿರ್ಮಾಣ ಮತ್ತು ಹತ್ತಿರದ ಉದ್ಯಾನದಲ್ಲಿ ನೆಟ್ಟ ಸಸ್ಯಗಳ ಶ್ರೇಯ ಅವನಿಗೆ ಸಲ್ಲುತ್ತದೆ ಎಂದು ಹೇಳುತ್ತದೆ. ನಂತರ ಅದು 1682 ರಲ್ಲಿ ಅಬ್ದುಲ್ಲಾ ಅರಾಫತ್ ಆಳ್ವಿಕೆಗೆ ಒಳಪಟ್ಟಿತು. ಅವನ ವಂಶಸ್ಥರು 1859 ರವರೆಗೆ ಅದನ್ನು ನಿಯಂತ್ರಿಸಿದರು.

ಇದು ಹಿಂದೆ ಅಪಾರ ಪ್ರಾಮುಖ್ಯದ ಸ್ಥಳವಾಗಿತ್ತು. ಒಂದು ಕಾಲದಲ್ಲಿ ಪಟ್ಟಣವನ್ನು ಸುತ್ತುವರೆದಿದ್ದ ಗೋಡೆಗಳು ಬಹುತೇಕ ಸಂಪೂರ್ಣವಾಗಿ ಕಣ್ಮರೆಯಾಗಿವೆ, ಆದರೆ ಪಶ್ಚಿಮಕ್ಕಿರುವ ಪಕ್ಕದ ಗುಡ್ಡದ ಮೇಲಿನ ಹೆಚ್ಚಿನ ರಕ್ಷಣಾ ಗೋಡೆಗಳು ಇನ್ನೂ ಉಳಿದಿವೆ. ಕೋಟೆಯು ಮೂಲತಃ ಹದಿಮೂರು ಪ್ರತ್ಯೇಕ ಸುಭದ್ರ ನೆಲೆಗಳನ್ನು ಹೊಂಡಿತ್ತು, ಎಂಟು ಗುಡ್ಡದ ಮೇಲೆ ಮತ್ತು ಐದು ಕೆಳಗೆ. ಗೋಡೆಗಳ ಒಳಗೆ ಸಮಾಧಿಗಳು, ದೇವಾಲಯಗಳು ಮತ್ತು ಅರಮನೆಗಳ ಪ್ರಾಚೀನ ಅವಶೇಷಗಳಿವೆ. ಗುಡ್ಡದ ಒಂದು ಭಾಗವು ತುಂಬ ಕಡಿದದ್ದಾಗಿರುವುದರಿಂದ ಪ್ರವೇಶಿಸಲಾಗುವುದಿಲ್ಲ. ಪ್ರಪಾತಗಳು ಸುಮಾರು 1,000 ಅಡಿ ಎತ್ತರದ ಸ್ಥಳಗಳಲ್ಲಿವೆ ಮತ್ತು ಕೋಟೆಯವರೆಗಿನ ಪ್ರತಿಯೊಂದು ಮಾರ್ಗವು ರಕ್ಷಣಾ ಪಡೆಗಳ ಸಾಲುಗಳಿಂದ ಆಜ್ಞಾಪಿಸಲ್ಪಟ್ಟಿತ್ತು.

ಇತರ ರಚನೆಗಳಲ್ಲಿ ಚಿನ್ನಾ ಮಸೀದಿ ಮತ್ತು ಪೆದ್ದಾ ಮಸೀದಿ ಸೇರಿವೆ. 18 ನೇ ಶತಮಾನಕ್ಕೆ ಸೇರಿದ ಒಬ್ಬ ಶ್ರೇಷ್ಠ ಸೂಫಿ ಸಂತ, ರಹಮತುಲ್ಲಾ ನಯಾಬ್ ರಸೂಲ್, ಇಲ್ಲಿ ಭಗವಂತನಲ್ಲಿ ಲೀನವಾದನು. ಪ್ರತಿ ವರ್ಷ ರಬಿ-ಉಲ್-ಅವಲ್ ತಿಂಗಳ 26 ರಂದು ಸ್ಯಾಂಡಲ್ ಹಬ್ಬವನ್ನು ಆಚರಿಸಲಾಗುತ್ತದೆ. ಮಹಬೂಬ್ ಸುಭಾನಿಯ ಸ್ಯಾಂಡಲ್‍ಗಳನ್ನೂ ಪ್ರತಿ ವರ್ಷ ಆಚರಿಸಲಾಗುತ್ತದೆ.[]

ಉಲ್ಲೇಖಗಳು

[ಬದಲಾಯಿಸಿ]
  1. "List of Sub-Districts". Census of India. Retrieved 2007-03-26.
  2. "Important Tourism Places in Nellore District". Archived from the original on 2012-04-28.


ಹೊರಗಿನ ಕೊಂಡಿಗಳು

[ಬದಲಾಯಿಸಿ]