ವಿಷಯಕ್ಕೆ ಹೋಗು

ಉಜ್ಜಯಂತ ಅರಮನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಜ್ಜಯಂತ ಅರಮನೆಯು (ಕೋಕ್ ಬೊರೋಕ್ ಭಾಷೆಯಲ್ಲಿ ನುಯುಂಗ್ಮಾ) ಈಗ ತ್ರಿಪುರಾ ರಾಜ್ಯದ ರಾಜಧಾನಿಯಾಗಿರುವ ಅಗರ್ತಲದಲ್ಲಿ ಸ್ಥಿತವಾಗಿರುವ ಒಂದು ವಸ್ತು ಸಂಗ್ರಹಾಲಯ ಮತ್ತು ತ್ರಿಪುರಾ ರಾಜ್ಯದ ಹಿಂದಿನ ಅರಮನೆಯಾಗಿದೆ. ಈ ಅರಮನೆಯನ್ನು ಮಹಾರಾಜ ರಾಧಾ ಕಿಶೋರ್ ಮಾಣಿಕ್ಯ ದೇಬ್‍ಬರ್ಮ ೧೮೯೯ ಮತ್ತು ೧೯೦೧ರ ನಡುವೆ ಕಟ್ಟಿಸಿದರು. ಇದು ಎರಡು ಸರೋವರಗಳ ದಡದ ಮೇಲೆ ನಿಂತಿದೆ ಮತ್ತು ಮುಘಲ್ ಶೈಲಿಯಿಂದ ಸ್ಫೂರ್ತಿ ಪಡೆದ ಉದ್ಯಾನವನಗಳಿಂದ ಸುತ್ತುವರಿಯಲ್ಪಟ್ಟಿದೆ. ಇದು ಅಕ್ಟೋಬರ್ ೧೯೪೯ರಲ್ಲಿ ಭಾರತದಲ್ಲಿ ತ್ರಿಪುರಾ ವಿಲೀನವಾಗುವವರೆಗೆ ಅಲ್ಲಿ ಆಳ್ವಿಕೆ ನಡೆಸುತ್ತಿದ್ದ ಮಾಣಿಕ್ಯ ರಾಜವಂಶದ ಗೃಹವಾಗಿತ್ತು. ತ್ರಿಪುರಾ ಸರ್ಕಾರವು ಈ ಅರಮನೆಯನ್ನು ಅರಸರ ಕುಟುಂಬದಿಂದ ೧೯೭೨-೭೩ರಲ್ಲಿ ರೂ. ೨.೫ ದಶಲಕ್ಷಕ್ಕೆ ಖರೀದಿಸಿ ಜುಲೈ ೨೦೧೧ರ ವರೆಗೆ ರಾಜ್ಯದ ವಿಧಾನಸಭೆಯನ್ನು ನಡೆಸಲು ಬಳಸಿತು. ಈಗ ಉಜ್ಜಯಂತ ಅರಮನೆಯು ರಾಜ್ಯ ವಸ್ತು ಸಂಗ್ರಹಾಲಯವಾಗಿದೆ. ಇದು ಮುಖ್ಯವಾಗಿ ಈಶಾನ್ಯ ಭಾರತದಲ್ಲಿ ವಾಸಿಸುತ್ತಿರುವ ಸಮುದಾಯಗಳ ಜೀವನಶೈಲಿ, ಕಲೆ, ಸಂಸ್ಕೃತಿ, ಸಂಪ್ರದಾಯ ಮತ್ತು ಸೌಲಭ್ಯ ಕರಕೌಶಲಗಳನ್ನು ಪ್ರದರ್ಶಿಸುತ್ತದೆ. ಜೊತೆಗೆ, ಬಹಳಷ್ಟು ಶಿಲಾಶಿಲ್ಪಗಳು, ಮಾಣಿಕ್ಯ ರಾಜವಂಶದ ನಾಣ್ಯಗಳು ಮತ್ತು ಕೆಲವು ಇತರ ಕಲಾಕೃತಿಗಳನ್ನು ಪ್ರದರ್ಶಿಸುತ್ತದೆ.

ಅರಮನೆಯ ವಿಹಂಗಮ ನೋಟ

ಛಾಯಾಂಕಣ

[ಬದಲಾಯಿಸಿ]

ಹೊರಗಿನ ಕೊಂಡಿಗಳು

[ಬದಲಾಯಿಸಿ]

Video of Ujjayanta Palace