ಆರ್ಥರ್ ಜೇಮ್ಸ್ ಟರ್ನರ್
ಆರ್ಥರ್ ಜೇಮ್ಸ್ ಟರ್ನರ್, CBE, FTI | |
---|---|
ಜನನ | , England | ೧೩ ಜೂನ್ ೧೮೮೯
ಮರಣ | {{ಅಕ್ಟೋಬರ್ 1971, 82.
death date and age|df=yes|1829|05|10|1773|06|13}} ಲಂಡನ್, ಇಂಗ್ಲೆಂಡ್ |
ಕಾರ್ಯಕ್ಷೇತ್ರ | Fabrics testing Parachute fabric study Textiles |
ಅಭ್ಯಸಿಸಿದ ವಿದ್ಯಾಪೀಠ | scholar of Gonville and Caius College, Cambridge,under Sir William Pope. and of London University |
ಪ್ರಸಿದ್ಧಿಗೆ ಕಾರಣ | Appointed Director ofTL(Bombay) Setting up a Technological laboratory, with the support of R.P.Richardson, F.T.I; the Spg.Msr. To evaluate the fiber properties, and to assess Spinnability of Indian cottons 1923 March 1956, The Foundation of yarn strength", JTI, Technological reports, pub.in Sh.Inst. Mem, , retired in March 1956, aged 67. |
ಗಮನಾರ್ಹ ಪ್ರಶಸ್ತಿಗಳು | |
ಟಿಪ್ಪಣಿಗಳು appointed HOD of the Fabrics Research Section of the Royal Aircraft Factory. the Manchester College chair of textile technology, which he held until 1923 1. Council of Textile Institute, for (1941–1948), 2.Vice-President of TI(Manchester) from 1949–1952. 3.Diplomas' Award Committee, for 24 years. 4.Journal Publication Committee, for 15 years. 5.UTMC, for 19 years. 6.At Northern Ireland, from 1940–1956. 7.Visited Bombay, (BTRA), as a consultant in 1958 |
ಆರ್ಥರ್ ಜೇಮ್ಸ್ ಟರ್ನರ್,[೧]'ಮುಂಬಯಿನ ಟೆಕ್ನೊಲಾಜಿಕಲ್ ಲ್ಯಾಬೊರೇಟೊರಿ'ಯ ಪ್ರಥಮ ನಿರ್ದೇಶಕರು.(ಜನವರಿ, ೧೯೨೪-ಡಿಸೆಂಬರ್, ೧೯೩೦) ಇಲ್ಲಿಗೆ ಬರುವ ಮೊದಲು, ಮ್ಯಾಂಚೆಸ್ಟರ್ ನ, 'ಶರ್ಲಿ ಇನ್ಸ್ಟಿ ಟ್ಯೂಟ್' ನಲ್ಲಿ ಸಂಶೋಧಕರಾಗಿ ಕೆಲಸಮಾಡುತ್ತಿದ್ದರು. ಕೇವಲ ೬ ವರ್ಷಗಳ ತಮ್ಮ ಕಾಲಾವಧಿಯಲ್ಲಿ ಟರ್ನರ್ ಮಾಡಿದ ಕಾರ್ಯ ಅನುಕರಣೀಯವಾದದ್ದು. ಟರ್ನರ್ ರವರು, ಲಂಡನ್ ವಿಶ್ವವಿದ್ಯಾಲಯದಿಂದ ಪದವಿಗಳಿಸಿದಮೇಲೆ, 'ಫರನ್ಬರೊ'ದಲ್ಲಿ 'ರಾಯಲ್ ಏರ್ ಕ್ರಾಫ್ಟ್ ಸಂಸ್ಥೆ'ಯಲ್ಲಿ 'ಬಟ್ಟೆ ಅನುಸಂಧಾನ ಶಾಖೆಯ ಮುಖ್ಯಸ್ಥ' ರಾಗಿ ನೇಮಿಸಲ್ಪಟ್ಟರು. 'ದಾರ', ಮತ್ತು 'ವಸ್ತ್ರಗಳ ಮೂಲರಚನೆ'ಯಬಗ್ಗೆ ನಡೆಸಿದ ಸಂಶೋಧನೆಗಳನ್ನು ಗುರುತಿಸಿ, ಆಗತಾನೇ 'ಮ್ಯಾಂಚೆಸ್ಟರ್' ನಲ್ಲಿ ಉದಯಿಸಿದ, ’ಟೆಕ್ಸ್ ಟೈಲ್ ತಂತ್ರಜ್ಞಾನ ಸಂಸ್ಥೆ'ಯ 'ಮುಖ್ಯಸ್ಥ'ನನ್ನಾಗಿ ನೇಮಿಸಲಾಯಿತು. ೧೯೨೩ ರ ವರೆಗೆ ನಡೆಸಿದ ಈ ಮೌಲಿಕ ಕಾರ್ಯಗಳನ್ನು ಗುರುತಿಸಿ, ಮುಂದೆ, 'ಡಿ.ಎಸ್ಸಿ. ಪದವಿ'ಯನ್ನು ಪ್ರದಾನಮಾಡಲಾಯಿತು. ಭಾರತದ ಮುಂಬಯಿ ಮಹಾನಗರದಲ್ಲಿ ಆಗತಾನೇ ಹುಟ್ಟುಹಾಕಿದ, 'ಟೆಕ್ನೊಲಾಜಿಕಲ್ ಲ್ಯಾಬೊರೇಟೊರಿ'ಯಲ್ಲಿ ಬ್ರಿಟಿಷ್ ಸರಕಾರದ ಬಹು ಮುಖ್ಯವಾದ ಯೋಜನೆಯಾಗಿದ್ದ ಹತ್ತಿ ಗುಣವನ್ನು ಸುಧಾರಿಸುವ ಸಂಶೋದನಾ ಕಾರ್ಯದ ರುವಾರಿಯಾಗಿ ಮುಂದುವರೆದರು.[೨]
ಮುಂಬಯಿನ ಟೆಕ್ನೊಲಾಜಿಕಲ್ ಲ್ಯಾಬೊರೇಟೊರಿಯಲ್ಲಿ
[ಬದಲಾಯಿಸಿ]ಡಾ.ಟರ್ನರ್ ಬರುವ ಮೊದಲೇ, ಸನ್, ೧೯೧೯ ರಲ್ಲೇ, 'ಕೇಂದ್ರೀಯ ಹತ್ತಿ ಸಮಿತಿಯ ಘಟನೆಯಾಗಿತ್ತು. ಅದರ ಮೊದಲ ಕಾರ್ಯದರ್ಶಿಯಾಗಿದ್ದ, 'ಬ್ರೈಸ್ ಬ್ರೈಟ್' ರವರು ಒಬ್ಬ ಸಮರ್ಥ ಆಡಳಿತಗಾರ, ಹಾಗೂ ದೂರಾಲೋಚನೆಯನ್ನು ಮಾಡಿ, ಮುಂದಿನ ದಶಕಗಳಲ್ಲಿ 'ಹತ್ತಿ ನಾರಿ'ನ ಬೆಳವಣಿಗೆಗಳನ್ನು ನಿರ್ಧರಿಸುವಲ್ಲಿ ಗಣ್ಯರು. ಅವರು ಮತ್ತು ಅವರ ಹಿಂಬಾಲಕರು ಬಹಳ ಕಡಿಮೆ ಅವಧಿಯಲ್ಲಿ ಭಾರತ ದೇಶದ ಜಲ-ವಾಯು,ಹವಾಮಾನಗಳ ಪಟ್ಟಿಯನ್ನು ತಯಾರಿಸಿ, ಪ್ರತಿರಾಜ್ಯದಲ್ಲಿ ಪ್ರಚಲಿತದಲ್ಲಿರುವ ಹತ್ತಿ ತಳಿಗಳನ್ನು ದಾಖಲಿಸಿ, ಅದರ ವಿಸ್ತೃತ ವರದಿಯನ್ನು ಪ್ರಕಟಿಸಿದ್ದರು. ಪಂಜಾಬ್, ಕೊಯಮತ್ತೂರು, ಧಾರವಾಡ, ಜಲಗಾಂ, ನಂದ್ಯಾಲ್ ಮುಂತಾದ ಸ್ಥಳಗಳಲ್ಲಿ ಆಗಲೇ ಹತ್ತಿಯ ಹೊಸ ಅಮೆರಿಕನ್, ಮತ್ತು ಇಜಿಪ್ಶಿಯನ್ ತಳಿಗಳನ್ನು ದೇಸೀ ತಳಿಗಳ ಜೊತೆಗೆ ಬೆಳೆಸುವ ಪ್ರಕ್ರಿಯೆ ಜಾರಿಯಲ್ಲಿತ್ತು. ಆ 'ಹತ್ತಿಯ ಸ್ಯಾಂಪಲ್' ಗಳೆಲ್ಲಾ 'ಟೆಕ್ನೊಲಾಜಿಕಲ್ ಲ್ಯಾಬೊರೇಟೊರಿ'ಗೆ ಕಳಿಸಲು ಏರ್ಪಾಡನ್ನೂ ಮಾಡಲಾಗಿತ್ತು. ಹಾಗಾಗಿ, ಮುಂಬಯಿನಲ್ಲಿ, 'ಡಾ. ಟರ್ನರ', ನಿರ್ದೇಶಕರಾಗಿ, ತಮ್ಮ ಅಧಿಕಾರವನ್ನು ವಹಿಸಿಕೊಂಡಾಗ, ಅವರಿಗೆ 'ಭಾರತೀಯ ಹತ್ತಿಯ ಹಲವಾರು ಮಹತ್ವಪೂರ್ಣ ಮಾಹಿತಿಗಳ ಪಕ್ಕಾ ವರದಿ,' ಅವರ 'ಟೇಬಲ್' ಮೇಲೆ ಸಿದ್ಧವಾಗಿತ್ತು.[೩] ಇದು ಅತ್ಯಂತ ನಿಖರವಾಗಿ ಕೆಲಸಗಳನ್ನು ದಕ್ಷವಾಗಿ ಮತ್ತು ಸಮಯಕ್ಕೆ ಸರಿಯಾಗಿ ಮಾಡುತ್ತಿದ್ದ ಟರ್ನರ್ ರಿಗೆ ವರದಾನವಾಯಿತು. ಅವರ ಮನಸ್ಸೆಲ್ಲಾ, ಇಂಗ್ಲೆಂಡ್ ದೇಶಕ್ಕೆ ಹೋಗುವ ಬಗ್ಗೆ ಆಸಕ್ತಿ ಇತ್ತು. ಅವರ ತಾಯ್ನಾಡದ 'ಐರ್ಲ್ಯಾಂಡ್' ನಲ್ಲಿ ಬೆಳೆಯುತ್ತಿದ್ದ 'ಲಿನನ್' ನಾರಿನ ಬಗ್ಗೆ ಅವರಿಗೆ ಸಹಜವಾಗಿ ಕಳಕಳಿಯಿತ್ತು. ಹತ್ತಿಯ ಅನುಸಂಧಾನದಲ್ಲಿ ಗಳಿಸಿದ ಅನುಭವಗಳನ್ನು ಸಕ್ಷಮವಾಗಿ 'ಲಿನನ್ ನಾರಿನ ತಂತುಗಳ ಗುಣಗಳನ್ನು ವೃದ್ಧಿಪಡಿಸುವ' ನಿಟ್ಟಿನಲ್ಲಿ ಅವರು ಮನಸ್ಸಿನಲ್ಲೇ ಯೋಚಿಸುತ್ತಿದ್ದರು. ಮುಂದೆ ಸ್ವಲ್ಪ ವರ್ಷಗಳನಂತರ ಆ ಅವಕಾಶಗಳನ್ನೂ ಒದಗಿಸಲಾಯಿತು.
'ಟರ್ನರ್ ಹತ್ತಿಗುಣ ವಿಶ್ಲೇಷಣೆಯಲ್ಲಿ ಮಾಡಿದ ಸಂಶೋಧನೆಗಳು'
[ಬದಲಾಯಿಸಿ]ಟರ್ನರ್ ರವರು,, 'ಭಾರತೀಯ ವಿಜ್ಞಾನಿಗಳತಂಡ'ವೊಂದನ್ನು ತರಪೇತುಮಾಡಿ,ಹತ್ತಿ ಸಂಶೋಧನೆಯ ಕೆಲಸದಲ್ಲಿ ತೊಡಗಿಸಿಕೊಂಡರು. 'ಫಂಡೇಷನ್ ಆಫ್ ಯಾರ್ನ್ ಸ್ಟ್ರೆನ್ಗ್ತ್,' ಎಂಬ ಸಂಶೋಧನಾ ಶೀರ್ಷಿಕೆಯಡಿಯಲ್ಲಿ, ಕೆಲವು 'ಮಾನಕ ಹತ್ತಿತಳಿಗಳ ಪಟ್ಟಿ'ಯನ್ನು ತಯಾರಿಸಿದರು. ವರ್ಷ-ವರ್ಷವೂ, ಸಾವಿರಾರು ಹತ್ತಿ-ತಳಿಗಳಲ್ಲಿ 'ಕೃತಕ ಪರಾಗ-ಸ್ಪರ್ಷ ಕ್ರಿಯೆ' ಯ ಮೂಲಕ, 'ಸಂಶೋಧನಾ ಹೊಲ'ಗಳಲ್ಲಿ ಮಾಡುವ 'ಅನುಸಂಧಾನ'ದ ನಂತರ ಆ ಹತ್ತಿಯನ್ನು 'ಟೆಕ್ನೊಲಾಜಿಕಲ್ ಲ್ಯಾಬೊರೇಟೊರಿ'ಗೆ ತಂದು, ಅವನ್ನು ಹಲವಾರು ಪರೀಕ್ಷಣೆಗಳಿಗೆ ಒಳಪಡಿಸಿ, ಅವುಗಳ ಗುಣಮಟ್ಟವನ್ನು ನಿರ್ಧರಿಸಲಾಗುವುದು. ಈಗಾಗಲೇ ದಾಖಲಿಸಿದ, 'ಮಾನಕ ತಳಿ'ಗಳಲ್ಲಾಗುವ ಗುಣ-ವೃದ್ಧಿಯ ವಿವರಗಳನ್ನು ಪ್ರತಿ ವರ್ಷವೂ ದಾಖಲೆ ಮಾಡುವುದು, ಪ್ರಮುಖ ಉದ್ದೇಶವಾಗಿತ್ತು. ಇದು ನಿರಂತರವಾಗಿ ಹತ್ತಿ ಗುಣವನ್ನು ಉತ್ತಮಪಡಿಸುವ ದಿಶೆಯಲ್ಲಿ ಮಾಡಲೇ ಬೇಕಾದ ಪ್ರಕ್ರಿಯೆ. ಹೀಗೆ ತರಪೇತಿಹೊಂದಿದ ಭಾರತದ ಯುವ-ಸಂಶೋಧಕರನ್ನು ಪ್ರೋತ್ಸಾಹಿಸಿ, ಅವರಿಗೆ, ಮಾಡಬೇಕಾದ ಕಾರ್ಯಗಳನ್ನೂ ಮುಂದೆ ಸಾಧಿಸಬೇಕಾದ ಲಕ್ಷ್ಯಗಳನ್ನೂ ಸ್ಪಸ್ಟವಾಗಿ ತಿಳಿಯಪಡಿಸಿ, ೧೯೩೦ ರಲ್ಲಿ, 'ಡಾ. ಟರ್ನರ್' ರವರು ತಮ್ಮ ನಿವೃತ್ತಿಯನ್ನು ಘೋಶಿಸಿದರು. ೧೯೩೦ ರಲ್ಲಿ 'ಬ್ರಿಟಿಷ್ ಸರ್ಕಾರ,' ಅವರನ್ನು ವಾಪಸ್ ಬ್ರಿಟನ್ ಗೆ ಕರೆಸಿಕೊಂಡು, ಅಲ್ಲಿಯ 'ಬ್ರಿಟಿಷ್ ಕಾಟನ್ ಇಂಡಸ್ಟ್ರೀಸ್ ರಿಸರ್ಚ್ ಇನ್ ಸ್ಟಿ ಟ್ಯೂಟ್,' ನ 'ಸ್ಪಿನ್ನಿಂಗ್ ಪ್ರಭಾಗದ ಮುಖ್ಯಸ್ಥ,'ನನ್ನಾಗಿ ನೇಮಿಸಿತು.
ನಿಧನ
[ಬದಲಾಯಿಸಿ]ಡಾ.ಟರ್ನರ್ ರವರು, ಅಕ್ಟೋಬರ್,೧೯೭೧ ರಲ್ಲಿ ತಮ್ಮ ೮೨ ನೆಯ ವಯಸ್ಸಿನಲ್ಲಿ ನಿಧನರಾದರು.
ಹತ್ತಿ ತಂತುವಿನ ಬಗ್ಗೆ ಟರ್ನರ್ ಸಂಶೋಧನೆಗಳು
[ಬದಲಾಯಿಸಿ]- Turner, A. J; The spinning value of cotton, Emp. Cotton Gr. Rev; 1, 107 (1924)
- Gulati, A. N. and Turner, A. J ; The foundations of yarn strength and yarn extension : Part IV-The influence of yarn twist on the diameters of the cotton yarns and on the proportions of fibre slippage and fibre fracture in yarn breakage, J. Text. Inst; 21, T561 (1930) ; Technol. Bull. B-9 (1930)
- Statistics in Research and Management in the Cotton Industry,L. H. C. Tippett,The Incorporated Statistician,Vol. 5, No. 3 (Nov., 1954), pp. 147–159
ಪ್ರಶಸ್ತಿಗಳು
[ಬದಲಾಯಿಸಿ]- ೧೯೩೧ ರಲ್ಲಿ ಟರ್ನರ್ ರಿಗೆ, ಸರ್.ಫ್ರಾಂಕ್ ವಾರ್ನರ್ ನೆನಪಿನಲ್ಲಿ ಅತಿ ಉತ್ಕೃಷ್ಟ ವಿಜ್ಞಾನಿ/ತಂತ್ರಜ್ಞನಿಗೆ ಸಲ್ಲುವ 'ವಾರ್ನರ್ ಮೆಡಲ್' ದೊರೆಯಿತು. ಈ ಪ್ರಶಸ್ತಿ ೧೯೩೦ ರಿಂದ ಪ್ರಾರಂಭವಾಯಿತು. [೪]
- ೧೯೫೦ ರಲ್ಲಿ CBE ಪ್ರಶಸ್ತಿ ದೊರೆಯಿತು.
ಉಲ್ಲೇಖಗಳು
[ಬದಲಾಯಿಸಿ]- ↑ "The Textile Institute Warner Memorial Medal Winners". Archived from the original on 2007-09-21. Retrieved 2014-07-28.
- ↑ The foundations of yarn-strength and yarn extension. Arthur James Turner
- ↑ A.J.Turner, The First director, of The technological laboratory, Mumbai-1924
- ↑ Warner memorial medal