ಅಸ್ಸಾಂನಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ
| |||||||
ರೋಗ | ಕೊರೋನಾವೈರಸ್ ಸಾಂಕ್ರಾಮಿಕ (COVID-19) | ||||||
---|---|---|---|---|---|---|---|
ಸ್ಥಳ | ಅಸ್ಸಾಂ, ಭಾರತ | ||||||
ದಿನಾಂಕ | 31 March 2020 – ongoing | ||||||
ಸಕ್ರಿಯ ಪ್ರಕರಣಗಳು | Expression error: Missing operand for -.[೧] | ||||||
ಚೇತರಿಸಿಕೊಂಡ ಪ್ರಕರಣಗಳು | [೧] | ||||||
ಸಾವುಗಳು | [೧] | ||||||
ಪ್ರಾಂತ್ಯಗಳು | 15 districts | ||||||
ಅಧಿಕೃತ ಜಾಲತಾಣ | |||||||
Covid-19 Advisory Assam |
ಭಾರತದ ಅಸ್ಸಾಂನಲ್ಲಿ ೨೦೧೯-೨೦ರ ಕೊರೊನಾವೈರಸ್ ಸಾಂಕ್ರಾಮಿಕ ರೋಗದ ಮೊದಲ ಪ್ರಕರಣವನ್ನು ಮಾರ್ಚ್ ೩೧, ೨೦೨೦ ರಂದು ದೃಢಪಡಿಸಲಾಯಿತು.[೨] ೨೦೨೦ರ ಏಪ್ರಿಲ್ ೮ ರ ವೇಳೆಗೆ ಕೋವಿಡ್-೧೯ರ ಒಟ್ಟು ೨೮ ಸಕಾರಾತ್ಮಕ ಪ್ರಕರಣಗಳನ್ನು ರಾಜ್ಯ ದೃಢಪಡಿಸಿದೆ.[೩]
ಜನರು ನಿಜಾಮುದ್ದೀನ್ ಮಾರ್ಕಾಜ್ನಲ್ಲಿರುವ ಧಾರ್ಮಿಕ ಸಭೆಗೆ ಹಾಜರಾಗಿದ್ದರು. ಅಸ್ಸಾಂಗೆ ಹಿಂದಿರುಗಿದ ನಂತರ ಅಧಿಕಾರಿಗಳಿಗೆ ವರದಿ ಮಾಡಲಿಲ್ಲ. ಇದು ಅಸ್ಸಾಂನಲ್ಲಿ ಕೋವಿಡ್ -೧೯ಕ್ಕೆ ಕಾರಣವಾಗಿದೆ. ಅಸ್ಸಾಂನಲ್ಲಿ ಇದುವರೆಗೆ ಸಕಾರಾತ್ಮಕವೆಂದು ವರದಿಯಾದ ಹೆಚ್ಚಿನ ಪ್ರಕರಣಗಳು ಸಹ ನಿಜಾಮುದ್ದೀನ್ ಮಾರ್ಕಾಜ್ ನಿಂದ ಬಂದಿದೆ ಎಂದು ಹೇಳಲಾಗಿತ್ತಿದೆ.[೪]
ಮಾರ್ಚ್
[ಬದಲಾಯಿಸಿ]ಅಸ್ಸಾಂನಲ್ಲಿ ೩೧ ಮಾರ್ಚ್ ೨೦೨೦ ಕಾರೋನವೈರಸ್ ನ ಮೊದಲ ಪ್ರಕರಣ ದೃಢಪಟ್ಟಿದ್ದು ಬದಾರ್ಪುರ್, ಕರೀಂಗಂಜ್ ನಲ್ಲಿ. ಈ ಸಂದರ್ಭದಲ್ಲಿ ದೆಹಲಿಯ ನಿಜಾಮುದ್ದೀನ್ ಮಾರ್ಕಾಜ್ ನಿಂದ ಹಿಂದಿರುಗಿ ಬಂದ ೫೨ ವರ್ಷದ ವ್ಯಕ್ತಿಯನ್ನು ಸಿಲ್ಚಾರ್ ಮೆಡಿಕಲ್ ಕಾಲೇಜಿನಲ್ಲಿ ಪರೀಕ್ಷಿಸಲಾಯಿತು. ಈತನಿಗೆ ಕೋರೋನಾವೈರಸ್ ಇರುವುದು ದೃಢಪಟ್ಟಿತು.[೫]
ಏಪ್ರಿಲ್
[ಬದಲಾಯಿಸಿ]- ಏಪ್ರಿಲ್ ೧ ರಂದು ಇನ್ನೂ ನಾಲ್ಕು ಜನರಲ್ಲಿ ಕೋವಿಡ್-೧೯ ಇರುವುದು ದೃಢಪಟ್ಟಿತು. ಗೌಹತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಜಿಎಂಸಿಎಚ್) ೪ ಜನರನ್ನು ಪರೀಕ್ಷಿಸಲಾಯಿತು. (ಜಿಎಂಸಿಎಚ್) ಇವರಲ್ಲಿ ಕೊರೋನಾವೈರಸ್ ಇರುವುದು ದೃಢಪಟ್ಟಿದೆ. ಆ ನಾಲ್ವರಲ್ಲಿ ಮೂವರು ಜಾಗಿರೋಡ್ ನವರಾದರೆ ಒಬ್ಬ ಮಾತ್ರ ನಲ್ಬರಿಯವನು. ಇನ್ನೂ ದೆಹಲಿಯಲ್ಲಿ ನಡೆದ ನಿಜಾಮುದ್ದೀನ್ ಮಾರ್ಕಾಜ್ ಕಾರ್ಯಕ್ರಮದಲ್ಲಿ ಎಲ್ಲಾ ಐದು ರೋಗಿಗಳು ಭಾಗವಹಿಸಿದ್ದರು. ಅದೇ ದಿನ, ಗೋಲಾಘಾಟ್‌ನಿಂದ ಇನ್ನೂ ೮ ರೋಗಿಗಳನ್ನು ತಪಾಸನೆಗೆ ಒಳಪಡಿಸಿದಾಗ ಕೊರೋನಾ ಇರುವುದು ದೃಢಪಟ್ಟಿದೆ. ಈ ಸಂಖ್ಯೆ ಈಗ ೧೩ ಕ್ಕೆ ತಲುಪಿದೆ. ದೆಹಲಿಯಲ್ಲಿ ನಡೆದ ನಿಜಾಮುದ್ದೀನ್ ಮಾರ್ಕಾಜ್ ಕಾರ್ಯಕ್ರಮದಲ್ಲಿ ಈ ಎಲ್ಲಾ ೧೩ ರೋಗಿಗಳು ಭಾಗವಹಿಸಿದ್ದರು. [೬] [೭]
- ಏಪ್ರಿಲ್ ೨ ರಂದು ಅಸ್ಸಾಂನಲ್ಲಿ ಇನ್ನೂ ಮೂರು ಹೊಸ ಕೊರೋನಾವೈರಸ್ ಪ್ರಕರಣಗಳು ಪತ್ತೆಯಾಗಿವೆ. ನಿಜಾಮುದ್ದೀನ್ ಮಾರ್ಕಾಜ್‌ನಲ್ಲಿರುವ ತಬ್ಲಿಘಿ ಜಮಾತ್ ಸಭೆಗೆ ಹಾಜರಾದ ಗೋಲ್‌ಪಾರಾದ ಮೂವರು ವ್ಯಕ್ತಿಗಳು ಕೊರೋನಾವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಇದರೊಂದಿಗೆ ಅಸ್ಸಾಂನಲ್ಲಿನ ಕೊರೋನಾವೈರಸ್ ಸಕಾರಾತ್ಮಕ ಪ್ರಕರಣಗಳ ಸಂಖ್ಯೆ ೧೬ ರಾಗಿ ಮಾರ್ಪಟ್ಟಿದೆ.[೮]
- ಏಪ್ರಿಲ್ ೩ ರಂದು ಅಸ್ಸಾಂನ ನಲ್ಬಾರಿ ಮತ್ತು ದಕ್ಷಿಣ ಸಲ್ಮರಾದಲ್ಲಿ ಇನ್ನೂ ನಾಲ್ಕು ಹೊಸ ಕೊರೊನಾವೈರಸ್ ಸಕಾರಾತ್ಮಕ ಪ್ರಕರಣಗಳು ಪತ್ತೆಯಾಗಿವೆ.[೯] ಎಲ್ಲರೂ ದೆಹಲಿಯ ನಿಜಾಮುದ್ದೀನ್ ಮಾರ್ಕಾಜ್ಗೆ ಹಾಜರಾಗಿದ್ದರು. ಅದೇ ದಿನ ರಾಜಧಾನಿಯಾದ ಗುವಾಹಟಿಯಲ್ಲಿ ಮೊದಲ ಪ್ರಕರಣದೊಂದಿಗೆ ಇನ್ನೂ ಮೂರು ಸಕಾರಾತ್ಮಕ ಪ್ರಕರಣಗಳು ದೃಢಪಟ್ಟಿದೆ.[೧೦] ಈ ಪೈಕಿ ಇಬ್ಬರು ರೋಗಿಗಳು ನಿಜಾಮುದ್ದೀನ್ ಮಾರ್ಕಾಜ್‌ಗೆ ಸಂಬಂಧಿಸಿದ್ದಾರೆ.[೧೧]
- ಏಪ್ರಿಲ್ ೪ ರಂದು ನಿಜಾಮುದ್ದೀನ್ ಮಾರ್ಕಾಜ್‌ಗೆ ಸಂಬಂಧಿಸಿದ ಗೋಲಾಘಾಟ್‌ನಲ್ಲಿ ಕೊರೋನಾವೈರಸ್ ಮತ್ತೊಬ್ಬ ವ್ಯಕ್ತಿಯಲ್ಲಿ ಕಂಡುಬಂದಿದೆ.[೧೨] ಅದೇ ದಿನ ಅಸ್ಸಾಂನ ಉತ್ತರ ಲಖಿಂಪುರದಲ್ಲಿ ಇನ್ನೂ ಒಂದು ಕೋವಿಡ್-೧೯ ಪ್ರಕರಣ ಪತ್ತೆಯಾಗಿದೆ.[೧೩] ಅವರು ದೆಹಲಿಯ ನಿಜಾಮುದ್ದೀನ್ ಮಾರ್ಕಾಜ್ನಲ್ಲಿ ತಬ್ಲೀಘಿ ಜಮಾಅತ್ಗೆ ಹಾಜರಾಗಿದ್ದರು. ದಿನದ ಕೊನೆಯಲ್ಲಿ ಅಸ್ಸಾಂನ ಕ್ಯಾಚರ್ ಜಿಲ್ಲೆಯಲ್ಲಿ ಮತ್ತೊಂದು ಸಕಾರಾತ್ಮಕ ಪ್ರಕರಣ ದಾಖಲಾಗಿದ್ದು, ಅವರು ನಿಜಾಮುದ್ದೀನ್ ಮಾರ್ಕಾಜ್ನಲ್ಲಿನ ಧಾರ್ಮಿಕ ಸಭೆಗೆ ಹಾಜರಾಗಿದ್ದರು.[೧೪]
- ಏಪ್ರಿಲ್ ೭ ರಂದು ಧುಬ್ರಿ ಜಿಲ್ಲೆಯ ಚಾಪರ್ ನಲ್ಲಿ ಕೊರೋನಾವೈರಸ್ ಇನ್ನೊಬ್ಬ ವ್ಯಕ್ತಿಯಲ್ಲಿ ಕಂಡುಬಂದಿದೆ.[೧೫] ಇದು ನಿಜಾಮುದ್ದೀನ್ ಮಾರ್ಕಾಜ್‌ನ ತಬ್ಲಿಘಿ ಜಮಾತ್‌ಗೆ ಸಂಬಂಧಿಸಿದೆ.[೧೬] ಅದೇ ದಿನ ಅಸ್ಸಾಂನ ಹೈಲಕಂಡಿ ಜಿಲ್ಲೆಯಲ್ಲಿ ಇನ್ನೂ ಒಂದು ಕೋವಿಡ್-೧೯ ಪ್ರಕರಣ ಪತ್ತೆಯಾಗಿದೆ. ಅವರು ಸೌದಿ ಅರೇಬಿಯಾಕ್ಕೆ ಪ್ರಯಾಣದ ಇತಿಹಾಸವನ್ನು ಹೊಂದಿದ್ದಾರೆ ಮತ್ತು ನವದೆಹಲಿಯ ನಿಜಾಮುದ್ದೀನ್ ಮಾರ್ಕಾಜ್ನಲ್ಲಿ ನಡೆದ ತಬ್ಲಿಘಿ ಜಮಾಅತ್ ಘಟನೆಗೆ ಸಂಬಂಧ ಹೊಂದಿದ್ದಾರೆ.[೧೭] ಇದು ಅಸ್ಸಾಂನಲ್ಲಿ ಭಾರತದ ಹೊರಗಿನ ಪ್ರಯಾಣದ ಇತಿಹಾಸ ಹೊಂದಿರುವ ಮೊದಲ ಕೋವಿಡ್-೧೯ ಸಕಾರಾತ್ಮಕವಾದ ಪ್ರಕರಣವಾಗಿದೆ.[೧೮]
- ಏಪ್ರಿಲ್ ೯ ರಂದು ಧುಬ್ರಿ ಜಿಲ್ಲೆಯಲ್ಲಿ ಕೊರೊನಾವೈರಸ್ ಮತ್ತೊಬ್ಬ ವ್ಯಕ್ತಿಯಲ್ಲಿ ಕಂಡುಬಂದಿದೆ. ವ್ಯಕ್ತಿಯು ಅದೇ ಜಿಲ್ಲೆಯ ಸಕಾರಾತ್ಮಕ ರೋಗಿಯೊಂದಿಗೆ ಸಂಪರ್ಕದಲ್ಲಿದ್ದನು. ಆದ್ದರಿಂದ ರೋಗಿಯು ನಿಜಾಮುದ್ದೀನ್ ಮಾರ್ಕಾಜ್ನಲ್ಲಿರುವ ಧಾರ್ಮಿಕ ಸಭೆಗೆ ಸಹ ಪರೋಕ್ಷವಾಗಿ ಸಂಬಂಧ ಹೊಂದಿದ್ದಾನೆ.[೧೯]
ಪರೀಕ್ಷೆ
[ಬದಲಾಯಿಸಿ]೬ನೇ ಏಪ್ರಿಲ್ ೨೦೨೦ ರಂದು ಅಸ್ಸಾಂನ ಐದು ಪ್ರಯೋಗಾಲಯಗಳಲ್ಲಿ ೨೦೦೦ ಕೋವಿಡ್-೧೯ರ ಪರೀಕ್ಷೆಗಳನ್ನು ನಡೆಸಲಾಯಿತು. ಆ ಐದು ಪ್ರಯೋಗಾಲಯಗಳೆಂದರೆ, ಕೇಂದ್ರಗಳು ಗೌಹತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಅಸ್ಸಾಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಸಿಲ್ಚಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಜೋರ್ಹತ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಬಾರ್ಪೆಟಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ.[೨೦] ಆರಂಭದಲ್ಲಿ ಲ್ಯಾಬ್‌ಗಳಲ್ಲಿ ಹೊರ ದೇಶಗಳ ಅಥವಾ ಅಸ್ಸಾಂನ ಹೊರಗಿನ ಪ್ರಯಾಣದ ಇತಿಹಾಸ ಹೊಂದಿರುವವರ ಮಾದರಿಗಳನ್ನು ಮಾತ್ರ ಪರೀಕ್ಷಿಸಿದವು. ಜೊತೆಗೆ ಕೊರೋನಾವೈರಸ್ ಇರುವವರ ಸಂಪರ್ಕಕ್ಕೆ ಬಂದವರು ಅಥವಾ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಯಾರಲ್ಲಿ ರೋಗಲಕ್ಷಣಗಳು ಕಂಡು ಬರುತ್ತದೆಯೋ ಅವರನ್ನು ಮಾತ್ರ ಪರೀಕ್ಷಿಸಲಾಗುತ್ತಿತ್ತು. ಇದರಲ್ಲಿ, ಕೋವಿಡ್-೧೯ ರ ೧೮೦೯ ಮಾದರಿಗಳು ನಕಾರಾತ್ಮಕವಾಗಿದ್ದರೆ, ೨೬ ಮಾದರಿಗಳನ್ನು ಧನಾತ್ಮಕವಾಗಿವೆ. ೧೬೫ ಮಾದರಿಗಳ ಫಲಿತಾಂಶವನ್ನು ನಿರೀಕ್ಷಿಸಲಾಗಿದೆ. ಒಟ್ಟು ಪರೀಕ್ಷೆಗಳಲ್ಲಿ ೮೧೨ ಮಾತ್ರ ನಿಜಾಮುದ್ದೀನ್ ಲಿಂಕ್ ಹೊಂದಿರುವ ಮಾದರಿಗಳಾಗಿವೆ. ಇದರಲ್ಲಿ ೨೫ ಮಾದರಿಗಳು ಧನಾತ್ಮಕವಾಗಿವೆ.[೨೧]
ರಾಜ್ಯ ಪರಿಹಾರ ನಿಧಿ
[ಬದಲಾಯಿಸಿ]೨೬ ಮಾರ್ಚ್ ೨೦೨೦ ರಂದು, ಅಸ್ಸಾಂ ಸರ್ಕಾರವು ಕೋವಿಡ್-೧೯ ಕ್ಕಾಗಿ ರಾಜ್ಯ ಪರಿಹಾರ ನಿಧಿಯನ್ನು ಅಸ್ಸಾಂ ಆರೋಗ್ಯ ನಿಧಿಯಾಗಿ ಪ್ರಾರಂಭಿಸಿತು. ಜೊತೆಗೆ ಅಸ್ಸಾಂ ರಾಜ್ಯ ನಿಧಿಗೆ ಕೊಡುಗೆ ನೀಡಲು ಸಾರ್ವಜನಿಕರಲ್ಲಿ ಕೋರಿಕೆಯನ್ನು ಕೇಳಿಕೊಂಡಿತು. ಈ ನಿಧಿಯು ಅಸ್ಸಾಂನಲ್ಲಿ ಕೊರೋನಾವೈರಸ್ ಹರಡುವುದನ್ನು ಎದುರಿಸಲು ರಾಜ್ಯ ಸರ್ಕಾರಕ್ಕೆ ಸಹಾಯ ಮಾಡುತ್ತದೆ.[೨೨] [೨೩] ೧೨ನೇ ಏಪ್ರಿಲ್ ೨೦೨೦ರ ಹೊತ್ತಿಗೆ, ೪೦೦೦೦ ಕ್ಕೂ ಹೆಚ್ಚು ಜನರು ಒಟ್ಟು ರೂ.೯೦.೩೧ ಕೋಟಿ ಯನ್ನು ಅಸ್ಸಾಂ ಆರೋಗ್ಯ ನಿಧಿಗೆ ನೀಡಿದ್ದಾರೆ.[೨೪]
ಇದಲ್ಲದೆ, ಅಸ್ಸಾಂ ಆರೋಗ್ಯ ನಿಧಿಗೆ ನೀಡುವ ಎಲ್ಲಾ ದೇಣಿಗೆಗಳು ಶೇಕಡಾ ೧೦೦ ರಷ್ಟು ಕಡಿತಕ್ಕೆ ಅರ್ಹವಾಗಿವೆ ಎಂದು ಆದಾಯ ತೆರಿಗೆ ಇಲಾಖೆ ಮತ್ತು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ ಏಕೆಂದರೆ ಇದು ರಾಜ್ಯ ಪರಿಹಾರ ನಿಧಿಗೆ ನೀಡಿದ ದೇಣಿಗೆಯಾಗಿದ್ದು, ವೈದ್ಯಕೀಯ ಪರಿಹಾರವನ್ನು ಒದಗಿಸಲು ರಾಜ್ಯ ಸರ್ಕಾರವು ರಾಜ್ಯ ಪರಿಹಾರ ನಿಧಿಯನ್ನು ಸ್ಥಾಪಿಸಿದೆ. ಇದು ೮೦ ಜಿ (೧) ಕ್ಕೆ ಬರುತ್ತದೆ.[೨೫]
ಅನೇಕ ಪ್ರಸಿದ್ಧ ಉದ್ಯಮಿಗಳು, ಸಾಮಾಜಿಕ ಕಾರ್ಯಕರ್ತರು, ಸರ್ಕಾರಿ ನೌಕರರು, ಕ್ರೀಡಾ ವ್ಯಕ್ತಿಗಳು, ಧಾರ್ಮಿಕ ಟ್ರಸ್ಟ್‌ಗಳು ಮತ್ತು ಸಾಮಾನ್ಯ ಜನರು ಸಹ ಅಸ್ಸಾಂ ಆರೋಗ್ಯ ನಿಧಿಗೆ ಕೊಡುಗೆ ನೀಡಿದ್ದಾರೆ. ಕೋವಿಡ್-೧೯ರ ವಿರುದ್ಧದ ಹೋರಾಟವನ್ನು ಬಲಪಡಿಸಲು ಅಸ್ಸಾಂನ ಉದ್ಯಮಿಗಳು ಸಹ ದೊಡ್ಡ ಮೊತ್ತವನ್ನು ನೀಡಿದ್ದಾರೆ. ಗುವಾಹಟಿ ಮೂಲದ ಉದ್ಯಮಿ ಮತ್ತು ಸಾಮಾಜಿಕ ಕಾರ್ಯಕರ್ತ ಆನಂದ್ ಕುಮಾರ್ ಜೈನ್ ಅವರು ಕೊರೋನಾ ವಿರುದ್ಧದ ಹೋರಾಟಕ್ಕೆ ಬೆಂಬಲವಾಗಿ ೨ ಕೋಟಿ ರೂಪಾಯಿಗಳನ್ನು ನೀಡಿದ್ದಾರೆ.[೨೬] ಇನ್ನು ಮೂರು ಉದ್ಯಮಿಗಳು ಅಂದರೆ ಅನಿಲ್ ದಾಸ್ ೫೦ ಲಕ್ಷ ರೂ., ಅನುಪಮ್ ಶರ್ಮಾ ೨೫ ಲಕ್ಷ ರೂ. ಮತ್ತು ಆದಿತ್ಯ ಗೋಸ್ವಾಮಿ ೨೧ ಲಕ್ಷ ರೂಪಾಯಿಗಳನ್ನು ಅಸ್ಸಾಂ ರಾಜ್ಯ ಪರಿಹಾರ ನಿಧಿಗೆ ನೀಡಿದರು.[೨೭] ಕಾಮಾಖ್ಯ ದೇವಲಯ ಸಹ ಕೊರೊನಾವೈರಸ್ ವಿರುದ್ಧದ ಹೋರಾಟಕ್ಕೆ ಅಸ್ಸಾಂ ಆರೋಗ್ಯ ನಿಧಿಗೆ ೫ ಲಕ್ಷ ರೂಪಾಯಿಗಳನ್ನು ನೀಡಿದೆ.[೨೮] ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತರಾದ ಹಿಮ ದಾಸ್ ರವರು ತನ್ನ ಒಂದು ತಿಂಗಳ ಸಂಬಳವನ್ನು ಅಸ್ಸಾಂ ರಾಜ್ಯ ನಿಧಿಗೆ ನೀಡಿದ್ದಾರೆ.[೨೯] ಅಸ್ಸಾಂನ ರಂಗಿಯಾದ ಕಾಲೇಜು ವಿದ್ಯಾರ್ಥಿನಿ ರೀಮಾ ಘೋಷ್ ಅಸ್ಸಾಂ ಆರೋಗ್ಯ ನಿಧಿಗೆ ೧.೯೩ ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡಿದ್ದು, ಆಕೆಯ ಪೋಷಕರು ಈ ಹಣವನ್ನು ಮದುವೆಗಾಗಿ ಉಳಿಸುತ್ತಿದ್ದರು. ಈ ಹಣವನ್ನೇ ಆಕೆ ಅಸ್ಸಾಂ ರಾಜ್ಯ ಪರಿಹಾರ ನಿಧಿಗೆ ನೀಡಿದ್ದಾಳೆ.[೩೦]
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ ೧.೨ ಉಲ್ಲೇಖ ದೋಷ: Invalid
<ref>
tag; no text was provided for refs named:7
- ↑ https://www.barakbulletin.com/en_US/first-corona-case-in-assam-52-year-old-tested-positive-in-silchar-medical-college/
- ↑ "ಆರ್ಕೈವ್ ನಕಲು". Archived from the original on 2020-05-26. Retrieved 2020-04-08.
- ↑ https://www.guwahatiplus.com/daily-news/assam-covid19-positive-toll-reaches-28
- ↑ https://www.indiatoday.in/india/story/coronavirus-assam-covid-19-patient-travelled-to-nizamuddin-1662092-2020-04-01
- ↑ https://www.pratidintime.com/assam-covid-19-positive-cases-rise-to-13/
- ↑ https://www.ndtv.com/india-news/coronavirus-assam-covid-19-cases-rise-to-13-all-attended-delhi-mosque-event-2204512
- ↑ https://www.newslivetv.com/top-news/big-breaking-3-coronavirus-cases-in-goalpara-total-number-rises-to-16-in-assam/
- ↑ https://www.pratidintime.com/assam-covid-19-positive-cases-rise-to-20/
- ↑ https://www.newslivetv.com/top-news/first-coronavirus-positive-case-in-guwahati/
- ↑ https://www.newslivetv.com/top-news/breaking-three-more-coronavirus-cases-in-assam-total-number-rises-to-23/
- ↑ https://www.newslivetv.com/top-news/big-breaking-one-more-coronavirus-case-with-nizamuddin-link-in-golaghat-total-24-in-assam/
- ↑ https://www.newslivetv.com/top-news/breaking-coronavirus-positive-case-in-north-lakhimpur-total-number-in-assam-rises-to-25/
- ↑ https://www.newslivetv.com/top-news/big-breaking-one-more-covid19-positive-in-cachar-total-26-in-assam/
- ↑ https://www.newslivetv.com/top-news/covid19-jamaluddin-hazi-from-dhubri-is-assams-patient-number-27/
- ↑ https://www.pratidintime.com/covid-19-positive-cases-in-assam-increase-to-27/
- ↑ https://www.thehindu.com/news/national/other-states/coronavirus-another-positive-case-in-assam-count-rises-to-28/article31285623.ece
- ↑ https://www.newslivetv.com/top-news/big-breaking-one-covid19-positive-case-in-hailakandi-total-number-in-assam-rises-to-28/
- ↑ https://www.newslivetv.com/top-news/breaking-another-covid19-positive-case-in-dhurbi-toll-rises-to-29-in-assam/
- ↑ https://www.sentinelassam.com/north-east-india-news/assam-news/covid-19-testing-5th-lab-of-assam-getting-accreditation-from-icmr/
- ↑ https://www.newslivetv.com/top-news/assam-read-key-points-from-himanta-biswa-sarmas-press-meet-on-covid19/
- ↑ https://www.guwahatiplus.com/daily-news/covid-19-over-rs-24-cr-donated-to-assam-arogya-nidhi-fund
- ↑ "ಆರ್ಕೈವ್ ನಕಲು". Archived from the original on 2020-04-10. Retrieved 2020-04-14.
- ↑ "ಆರ್ಕೈವ್ ನಕಲು". Archived from the original on 2020-04-12. Retrieved 2020-04-14.
- ↑ https://nenow.in/health/assam-arogya-nidhi-donations-exempted-from-taxes.html
- ↑ https://www.guwahatiplus.com/daily-news/guwahati-based-businessman-donates-over-rs-2-cr-to-fight-coronavirus
- ↑ https://www.newslivetv.com/assam/covid19-three-assam-businessmen-donate-rs-1-crore-46-lakh/
- ↑ https://www.sentinelassam.com/guwahati-city/kamakhya-devalaya-extends-rs-5-lakh-to-assam-arogya-nidhi-scheme-to-fight-against-covid-19/
- ↑ https://www.mykhel.com/more-sports/coronavirus-hima-das-donates-a-month-s-salary-to-assam-govt-140685.html
- ↑ https://www.indiatoday.in/india/story/assam-student-donates-nearly-rs-2-lakh-to-state-covid-19-relief-fund-1663833-2020-04-06