ಅಸಿನ್ಯಾಫ್ತೀನ್
ಅಸಿನ್ಯಾಫ್ತೀನ್[೧] ಬಿಳಿ ಬಣ್ಣದ ಸೂಜಿ ರೂಪದ ಹರಳಿನ ಅಸಿನ್ಯಾಫ್ತೀನ್ ಇಂಗಾಲದ ಒಂದು ಸಂಯುಕ್ತ. ಇದರ ರಾಸಾಯನಿಕ ಸಂಯೋಜನೆ C12H10 ಇದು ೯೫ ಸೆಂ.ಗ್ರೇ. ನಲ್ಲಿ ಕರಗುವುದು ಮತ್ತು ೨೭೮೦ ಸೆಂ. ಗ್ರೇ. ನಲ್ಲಿ ಕುದಿಯುವುದು. ಈ ಸಂಯುಕ್ತವನ್ನು ೨೬೦೦-೨೭೦೦ ಸೆಂ. ಗ್ರೇ.ನ ಅಂತರದಲ್ಲಿ ಕುದಿಯುವ ಕೋಲ್‍ಟಾರ್ ಎಣ್ಣೆಯಿಂದ ಎಂ.ಪಿ.ಇ ಬರ್ಥೆಲಾಟ್ ಎಂಬಾತ ಪ್ರತ್ಯೇಕಿಸಿದ. ಬಾರ್ಡೆ ಎಂಬ ಮತ್ತೊಬ್ಬ ವಿಜ್ಞಾನಿ α-β ಥೈಲ್ ನ್ಯಾಫ್ತ್‍ಲೀನ್ ಸಂಯುಕ್ತದಿಂದ ಅಸಿನ್ಯಾಫ್ತೀನ್ ಸಂಯುಕ್ತವನ್ನು ತಯಾರಿಸಿದ. ನ್ಯಾಫ್ತಲಿಕ್ ಅನ್‍ಹೈಡ್ರೈಡನ್ನು ಅಪಕರ್ಷಿಸಿ, ಡೈಬ್ರೋಮೈಡನ್ನಾಗಿ ಪರಿವರ್ತಿಸಿದ ಮೇಲೆ, ಈ ಡೈಬ್ರೊಮೈಡು ಫಿನೈಲ್ ಲೀಥಿಯಂನೊಡನೆ ವರ್ತಿಸಿದಾಗಲೂ ಅಸಿನ್ಯಾಫ್ತೀನ್ ಉತ್ಪತ್ತಿಯಾಗುವುದು.
O OC CO HOH2C CH2OH Br H2C CH2 Br H2C CH2 L1 A1 H4 P Br3 C6H5L1
ತಯಾರಿಸುವ ವಿಧಾನ
[ಬದಲಾಯಿಸಿ]ಪಿಕ್ರಿಕ್ ಆಮ್ಲದೊಡನೆ ನ್ಯಾಫ್ತಲೀನ್ ಸಂಕೀರ್ಣ(ಕಾಂಪ್ಲೆಕ್ಸ್) ಸಂಯುಕ್ತವನ್ನು ಕೊಡುವ ಹಾಗೆ ಅಸಿನ್ಯಾಫ್ತೀನ್ ಸಂಯುಕ್ತವೂ ಕೂಡ ಪಿಕ್ರಿಕ್ ಆಮ್ಲದೊಡನೆ, ೧೬೨ ಸೆಂ.ಗ್ರೇ.ನಲ್ಲಿ ಕರಗುವ ಕಿತ್ತಳೆ ಬಣ್ಣದ ಅಸಿನ್ಯಾಫ್ತೀನ್ ಸಂಯುಕ್ತವನ್ನು ಶುದ್ಧೀಕರಿಸುವುದರಲ್ಲಿಯೂ ಮತ್ತು ಗುರುತಿಸುವುದರಲ್ಲಿಯೂ ಈ ಪಿಕ್ರೇಟು ಬಹಳ ಉಪಯುಕ್ತವಾಗಿರುವುದು. ಬೇಗ ಸ್ಫಟೀಕೀಕರಿಸುವ ಗುಣವನ್ನೂ, ಹೆಚ್ಚಿನ ಕರಗುವಿಕೆಯ ಉಷ್ಣವನ್ನೂ ಮತ್ತು ಅತಿ ಕಡಿಮೆ ವಿಲೀನವಾಗುವ ಗುಣವನ್ನೂ ಈ ಪಿಕ್ರೇಟುಗಳು ಹೊಂದಿರುವ ಕಾರಣ, ಅಸಿನ್ಯಾಫ್ತೀನ್ ಪಿಕ್ರೇಟನ್ನು ಮಿಶ್ರಣಗಳಿಂದ ಬೇರ್ಪಡಿಸಲು ಅನುಕೂಲವಾಗಿರುವುದು. ಹೀಗೆ ಬೇರ್ಪಡಿಸಿ ಶುದ್ಧಗೊಳಿಸಿದ ಈ ಪಿಕ್ರೇಟಿನ ಈಥರ್ ದ್ರಾವಣಕ್ಕೆ ಅಮೋನಿಯಂ ಹೈಡ್ರಾಕ್ಸೈಡನ್ನು ಹಾಕಿದಾಗ ಅಸಿನ್ಯಾಫ್ತೀನ್ ಪುನರುತ್ಪತ್ತಿಯಾಗುವುದು.
ಉಪಯೋಗಗಳು
[ಬದಲಾಯಿಸಿ]ವ್ಯಾಟ್ ವರ್ಣದ್ರವ್ಯಗಳ ತಯಾರಿಕೆಯಲ್ಲಿ ಬೇಕಾಗುವ ಅಸಿನ್ಯಾಫ್ತಕ್ವಿನೋನ್ ಸಂಯುಕ್ತದ ತಯಾರಿಕೆಯಲ್ಲಿ ಇದನ್ನು ಉಪಯೋಗಿಸುವರು.