ವಿಷಯಕ್ಕೆ ಹೋಗು

ಅವಿರೊಯಿಜ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅವಿರೊಯಿಜ್ ( ಜನನ ೧೧೨೬, ಮರಣ ೧೧೯೮ ). ಸ್ಪೇನಿನ ಅರಬ್ಬೀ ದಾರ್ಶನಿಕ. ಇಬ್ನೆರಷ್ದ್‌ ಎಂಬ ಹೆಸರೂ ಉಂಟು. ಖಗೋಳ, ಔಷಧ ಮತ್ತು ನ್ಯಾಯಶಾಸ್ತ್ರದ ಮೇಲೂ ಗ್ರಂಥಗಳನ್ನೂ ರಚಿಸಿದ್ದಾನೆ.

ಸ್ಪೇನಿನ ಕಾರ್ಡೋಬದಲ್ಲಿ ಹುಟ್ಟಿದ ಇವನು ಅವೆಂಜೋಯರ್‌ನ ಶಿಷ್ಯ. ಅವಿಸೆನ್ನನ ಗ್ರಂಥಗಳ ಮೇಲೆ ಟಿಪ್ಪಣಿಗಳನ್ನು ಬರೆದ. ಸಿಡುಬು ಒಂದು ಬಾರಿ ತಗುಲಿದರೆ ಮತ್ತೆ ಬರದೆಂದು ಗಮನಿಸಿದವರಲ್ಲಿ ಇವನೇ ಮೊದಲಿಗ.

೧೪ ನೇಶತಮಾನದ ಒಂದು ಚಿತ್ರ

ಮೂಲಗ್ರಂಥಗಳು ಅರಬ್ಬೀ ಭಾಷೆಯಲ್ಲಿದ್ದರೂ ಲ್ಯಾಟಿನ್ ಮತ್ತು ಹೀಬ್ರೂಗೆ ಭಾಷಾಂತರವಾಗಿದೆ. ಇಸ್ಲಾಂ ಧರ್ಮವನ್ನು ಕುರಿತು ಬರೆದ ಗ್ರಂಥಗಳೂ ಅರಿಸ್ಟಾಟಲ್‌ನನ್ನು ಕುರಿತು ಬರೆದ ಟಿಪ್ಪಣಿಗಳೂ ಮನನೀಯವಾಗಿವೆ. ಅರಿಸ್ಟಾಟಲ್‍ನ ವಿಚಾರಗಳನ್ನು ಕ್ಯಾಥೊಲಿಕ್ ಸಿದ್ಧಾಂತಗಳಿಗೆ ಅಳವಡಿಸುವ ಪ್ರಯತ್ನವನ್ನು ಇವನ ಲೇಖನಗಳಲ್ಲಿ ಕಾಣಬಹುದು. ಇವನ ವಿಚಾರಗಳು ಮಧ್ಯಯುಗದ ಯುರೋಪಿನಲ್ಲಿ ಪ್ರಚಲಿತವಾದ ಸಂಪ್ರದಾಯಬದ್ಧ ವಿದ್ಯಾಭ್ಯಾಸ ಹಾಗೂ ಧಾರ್ಮಿಕ ಶಿಕ್ಷಣದ (ಸ್ಕೊಲ್ಯಾಸ್ಟಿಸಿಸಮ್) ಮೇಲೆ ಬಹಳ ಪ್ರಭಾವ ಬೀರಿವೆ. ಆಕ್ಟಿನಸ್ ಮತ್ತು ಡಾಂಟೆ ಮುಂತಾದವರು ಇವನ ವಿಚಾರಗಳ ಪ್ರಭಾವಕ್ಕೊಳಗಾಗಿರುವುದು ಸರ್ವವಿದಿತ. ಕಿತಾಬ್ ಅಲ್ ಕುಲ್ ಯಾತ್ (ವಿಶ್ವಗಳ ಪುಸ್ತಕ) ಇವನ ಪ್ರಮುಖ ವೈದ್ಯಕೀಯ ಪುಸ್ತಕ.