ಅರಿಮರ್ದನಪುರ ಸಾಮ್ರಾಜ್ಯ
ಪಾಗನ್ ಸಾಮ್ರಾಜ್ಯ ပုဂံခေတ် | |||||||||||||||||||
---|---|---|---|---|---|---|---|---|---|---|---|---|---|---|---|---|---|---|---|
849–1297 | |||||||||||||||||||
Status | ಅರಸೊತ್ತಿಗೆ | ||||||||||||||||||
Capital | Pagan (Bagan) (849–1297) | ||||||||||||||||||
Common languages | Old Burmese, Mon, Pyu | ||||||||||||||||||
Religion | Theravada Buddhism, Mahayana Buddhism, Animism, ಹಿಂದೂ ಧರ್ಮ | ||||||||||||||||||
Government | Monarchy | ||||||||||||||||||
• 1044–1078 | Anawrahta | ||||||||||||||||||
• 1084–1113 | Kyansittha | ||||||||||||||||||
• 1113–1167 | Alaungsithu | ||||||||||||||||||
• 1174–1211 | Narapatisithu | ||||||||||||||||||
• 1256–1287 | Narathihapate | ||||||||||||||||||
Legislature | Hluttaw | ||||||||||||||||||
Historical era | Middle Ages | ||||||||||||||||||
• Founding of Kingdom | 23 December 849 | ||||||||||||||||||
• Earliest evidence of Burmese script | 984 and 1035 | ||||||||||||||||||
• Founding of Pagan Empire | 1050s–1060s | ||||||||||||||||||
• Peak of Pagan Empire | 1174–1250 | ||||||||||||||||||
1277–1301 | |||||||||||||||||||
• End of kingdom | 17 December 1297 | ||||||||||||||||||
Population | |||||||||||||||||||
• c. 1210 | 1.5 to 2 million | ||||||||||||||||||
Currency | silver kyat | ||||||||||||||||||
|
ಅರಿಮರ್ದನಪುರ ಸಾಮ್ರಾಜ್ಯ : ಭಾರತೀಯ ಸಂಸ್ಕೃತಿಯನ್ನು ಮಯನ್ಮಾರ್ ದೇಶದಲ್ಲಿ ಹರಡಲು ನೆರವಾದ ಸಾಮ್ರಾಜ್ಯಗಳಲ್ಲಿ ಅತಿ ಮುಖ್ಯವಾದುದು. 11ನೆಯ ಶತಮಾನದಿಂದ ಮೂರು ಶತಮಾನಗಳವರೆಗೆ ಈ ಸಾಮ್ರಾಜ್ಯ ಉಚ್ಛ್ರಾಯ ಸ್ಥಿತಿಯಲ್ಲಿತ್ತು.
ಸ್ಥಾಪನೆ
[ಬದಲಾಯಿಸಿ]ಮಯನ್ಮಾರ್ (ಹಿಂದಿನ ಬರ್ಮ) ಚರಿತ್ರೆಯಲ್ಲಿ ಅಗ್ರಸ್ಥಾನವನ್ನು ಪಡೆದಿರುವ ಅನೋರಥನೇ ಈ ವಂಶದ ಸ್ಥಾಪಕ. ಆ ಸಮಯದಲ್ಲಿ ಅರಿ ಎಂಬ ಬೌದ್ಧರ ತಂಡವೊಂದು ಬಹು ಕೀಳುಮಟ್ಟದ ತಾಂತ್ರಿಕ ಬೌದ್ಧಧರ್ಮವನ್ನು ಪ್ರಚಾರ ಮಾಡುತ್ತಿತ್ತು. ಷಿನ್ ಅರ್ಹನ್ ಎಂಬ ಬೌದ್ಧಗುರುವಿನ ಸಹಾಯದಿಂದ ಅನೋರಥ ಅರಿಗಳ ಬೌದ್ಧ ಸಂಪ್ರದಾಯಗಳನ್ನು ನಾಶಮಾಡಿದ. ಇದರಿಂದ ಅರಿಗಳು ನಿರ್ನಾಮವಾಗಿ ಹೋದರು. ಥೇಟನ್ನಿನ ರಾಜನ ಮೇಲೆ ಯುದ್ಧವನ್ನು ಮಾಡಿ, ಅನೋರಥ ಬೌದ್ಧ ತ್ರಿಪಿಟಕ ಗ್ರಂಥಗಳ ಪ್ರತಿಗಳನ್ನು ಪಡೆದು ಥೇರವಾದ ಬೌದ್ಧಧರ್ಮ ಮಯನ್ಮಾರ್‍ನಲ್ಲಿ ಬೇರೂರುವಂತೆ ಮಾಡಿದ. ಥೇಟನ್ನಿನ ಮಾನ್ ಜನಗಳು ಬರ್ಮೀಯರ ಮೇಲೆ ಪ್ರಭಾವ ಬೀರಿ ಮಯನ್ಮಾರ್‍ಗೆ ಹೊಸಲಿಪಿಯನ್ನು ಕೊಟ್ಟರು. ಅನೋರಥನ ಖ್ಯಾತಿಯನ್ನು ನೋಡಿದ ಸಿಂಹಳದ ವಿಜಯಬಾಹು ಚೋಳರ ಮೇಲೆ ಯುದ್ಧಮಾಡಲು ಅವನ ಸಹಾಯ ಕೋರಿದ. ವಿಜಯಬಾಹು ಬೌದ್ಧ ಅವಶೇಷಗಳನ್ನು ಅನೋರಥನಿಗೆ ಕಳುಹಿಸಿದ. ಇವುಗಳನ್ನು ಷೆಜಗಾನ್ ಪಗೋಡದಲ್ಲಿ ಸ್ಥಾಪಿಸಲಾಯಿತು. ಅನೋರಥ ಅನೇಕ ಶಾಸನಗಳನ್ನು ಬರೆಸಿ ಬೌದ್ಧಧರ್ಮಕ್ಕೆ ವಿಶೇಷವಾಗಿ ಪೋತ್ಸಾಹಕೊಟ್ಟ. ಈತ 1077ರಲ್ಲಿ ಮರಣ ಹೊಂದಿದ.
ಅನಂತರ ಇವನ ಮಗನಾದ ಕ್ಯಾನ್‍ಜಿತ್ಥ ಪಟಕ್ಕೆ ಬಂದ. ಇವನೂ ತನ್ನ ತಂದೆಯಂತೆ ಮಯನ್ಮಾರ್ ದ ಚರಿತ್ರೆಯಲ್ಲಿ ಪ್ರಮುಖ ಸ್ಥಾನ ಪಡೆದಿದ್ದಾನೆ. ಇವನ ಕಾಲದಲ್ಲಿ ಭಾರತಕ್ಕೂ ಬರ್ಮಕ್ಕೂ ಸಾಂಸ್ಕೃತಿಕ ಸಂಬಂಧಗಳು ವಿಶೇಷವಾಗಿದ್ದುವು. ಬೌದ್ಧಧರ್ಮ ಉಚ್ಛ್ರಾಯ ಸ್ಥಿತಿಯಲ್ಲಿದ್ದರೂ ವೈಷ್ಣವಧರ್ಮ ಪಾಲಿಸಲ್ಪಡುತ್ತಿತ್ತು. ಇವನ ಅತಿ ಮುಖ್ಯ ಕೊಡುಗೆ ಆನಂದ ದೇವಾಲಯ. ಇದು ಭಾರತದ ಒರಿಸ್ಸದಲ್ಲಿರುವ ಉದಯಗಿರಿಯ ಅನಂತ ದೇವಾಲಯದ ಮಾದರಿಯಲ್ಲಿದೆ. ಇಂದಿಗೂ ಇದು ಬೌದ್ಧರ ಮುಖ್ಯ ಯಾತ್ರಾಸ್ಥ ಳಗಳ ಲ್ಲೊಂದು. ಕ್ಯಾನ್‍ಜಿತ್ಥ ಭಾರತದ ಬುದ್ಧಗಯ ದೇವಾಲಯದ ಜೀರ್ಣೋದ್ಧಾರ ಕಾರ್ಯವನ್ನೂ ಮಾಡಿದ. ಈತ 1112ರಲ್ಲಿ ಮರಣ ಹೊಂದಿದ. ಕ್ಯಾನ್‍ಜಿತ್ಥನ ಮರಣಾನಂತರ ಅವನ ಮೊಮ್ಮಗನಾದ ಅಲಾಂಗ್ ಸಿಥುಜಯಶೂರ ಎಂಬ ಹೆಸರಿನಿಂದ ರಾಜನಾದ. ಇವನು ದಕ್ಷಿಣ ಅರಕಾನ್ ರಾಜ್ಯದ ದಂಗೆಯನ್ನು ಅಡಗಿಸಿದ. ಲೋಕೋಪಯೋಗಿ ಕಾರ್ಯಗಳನ್ನು ವಿಶೇಷವಾಗಿ ಮಾಡಿ, ದೇವಾಲಯ ಗಳನ್ನೂ ಆಶ್ರಮಗಳನ್ನೂ ನಿರ್ಮಿಸಿದ. ಪಾಳಿಭಾಷೆಯ ಪಂಡಿತರಿಗೆ ವಿಶೇಷ ಪೋತ್ಸಾಹ ಕೊಟ್ಟ. 1167ರಲ್ಲಿ ತನ್ನ ಮಗನಾದ ನರಥುವಿನಿಂದ ಕೊಲೆಯಾದ. 1173ರಲ್ಲಿ ರಾಜನಾದ ನರಪತಿ ಸಿಥುವಿನ ಕಾಲದಲ್ಲಿ ಥೇರವಾದ ಬೌದ್ಧಧರ್ಮ ಕ್ಷೀಣಿಸಿ, ಸಿಂಹಳದ ಬೌದ್ಧಧರ್ಮ ಮಯನ್ಮಾರ್‍ನಲ್ಲಿ ಬೆಳೆಯಿತು. 1210ರಲ್ಲಿ ನರಪತಿಮಸಿಥುವಿನ ಮಗನಾದ ಜಯಥೆಲಿಕ ರಾಜನಾದ. ಈತ ಭಾರತದ ಬುದ್ಧಗಯ ದೇವಾಲಯದ ಮಾದರಿಯಲ್ಲಿ ಮಹಾಬೋಧಿ ದೇವಾಲಯವನ್ನು ನಿರ್ಮಿಸಿದ. ಮುಂದೆ ಬಂದ ರಾಜರು ಅಶಕ್ತರಾದುದರಿಂದ ಮಂಗೋಲಿಯನ್ನರು ಮಯನ್ಮಾರ್‍ನ ಮೇಲೆ ದಾಳಿ ನಡೆಸಿ 1287ರಲ್ಲಿ ಲೂಟಿ ಮಾಡಿ ರಾಜ್ಯವನ್ನು ವಶಪಡಿಸಿಕೊಂಡರು.