ಅಮೃತ
ಗೋಚರ
- ಅಮರ್ದು ಇಲ್ಲಿ ಪುನರ್ನಿರ್ದೇಶಿಸುತ್ತದೆ. ಹಾಲು ಲೇಖನಕ್ಕಾಗಿ ಇಲ್ಲಿ ನೋಡಿ.
ಅಮೃತ ಎಂದರೆ ಅಮರತ್ವ ಎಂದು ಅರ್ಥ. ಇದು ಗ್ರೀಕ್ ಭಾಷೆಯ "ಅಂಬ್ರೋಸಿಯ" ಎಂಬ ಶಬ್ದದಿಂದ ಉತ್ಪತ್ತಿಯಾದುದು[೧]. ಗ್ರೀಕ್ ಭಾಷೆಯಲ್ಲಿಯೂ ಇದಕ್ಕೆ ಅಮರತ್ವ ಎಂದೇ ಅರ್ಥವಿದೆ[೨].ಈ ಶಬ್ದದ ಪ್ರಥಮ ಉಲ್ಲೇಖ ಋಗ್ವೇದದಲ್ಲಿ ದೊರೆಯುತ್ತದೆ.ಇದು ದೇವತೆಗಳಿಗೆ ಅಮರತ್ವವನ್ನು ತಂದುಕೊಟ್ಟ ಪಾನೀಯವಾದ ಸೋಮಕ್ಕೆ ಸಮಾನಾರ್ಥಕವಾಗಿ ಉಪಯೋಗಿಸಲಾಗಿದೆ.
ಪುರಾಣಗಳಲ್ಲಿ
[ಬದಲಾಯಿಸಿ]ಅಮೃತ ದೇವದಾನವರು ಕ್ಷೀರಸಮುದ್ರವನ್ನು ಮಥಿಸಿದಾಗ ಲಕ್ಷ್ಮಿ, ಚಂದ್ರ, ಐರಾವತ, ಉಚ್ಚೈಃಶ್ರವಸ್, ಹಾಲಾಹಲ ಮುಂತಾದುವುಗಳ ಜೊತೆಗೆ ಉದ್ಭವಿಸಿದುದು[೩]. ಚಂದ್ರ ಅಮೃತಭರಿತ ಎಂದು ಹಿಂದೂಗಳ ನಂಬಿಕೆ. ಕದ್ರುವಿನಿಂದ ತನ್ನ ತಾಯಿಯನ್ನು ಮುಕ್ತಗೊಳಿಸುವುದಕ್ಕಾಗಿ ಗರುಡ ಇದನ್ನು ದೇವಲೋಕದಿಂದ ಅಪಹರಿಸಿದ. ಶ್ರೀ ಕೃಷ್ಣನೂ ಇದನ್ನು ಉದಂಕ ಮಹರ್ಷಿಯ ತೃಪ್ತ್ಯರ್ಥವಾಗಿ ತರಿಸಿಕೊಟ್ಟ. ಇದನ್ನು ಕುಡಿದವರು ಮರಣವನ್ನು ಗೆಲ್ಲಬಲ್ಲರೆಂದೂ ಇದು ಸ್ವರ್ಗದಲ್ಲಿನ ದೇವತೆಗಳ ಪಾನೀಯವೆಂದೂ ನಂಬಿಕೆ.
ಉಲ್ಲೇಖಗಳು
[ಬದಲಾಯಿಸಿ]- ↑ Walter W. Skeat, Etymological English Dictionary
- ↑ "Ambrosia" in Chambers's Encyclopædia. London: George Newnes, 1961, Vol. 1, p. 315.
- ↑ Gopal, Madan (1990). K.S. Gautam (ed.). India through the ages. Publication Division, Ministry of Information and Broadcasting, Government of India. p. 66.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Ayurvedic Rasayana - Amrit Archived 2008-05-31 ವೇಬ್ಯಾಕ್ ಮೆಷಿನ್ ನಲ್ಲಿ.
- Immortal Boons of Amrit and Five Kakars Archived 2012-02-22 ವೇಬ್ಯಾಕ್ ಮೆಷಿನ್ ನಲ್ಲಿ.
- Depictions in stone at Angkor Wat and Angkor Thom (Cambodia) of how the gods dredged amrit from the bottom of the ocean
- http://earthrites.org/magazine_article_crowley.htm Archived 2011-01-10 ವೇಬ್ಯಾಕ್ ಮೆಷಿನ್ ನಲ್ಲಿ.
- http://www.20kweb.com/etymology_dictionary_A/origin_of_the_word_ambrosia.htm Archived 2011-07-07 ವೇಬ್ಯಾಕ್ ಮೆಷಿನ್ ನಲ್ಲಿ.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: