ಅನುರಣನೆ
ಗೋಚರ
ಭೌತಶಾಸ್ತ್ರದಲ್ಲಿ, ಅನುರಣನೆ (ಅನುರಣನ) ಒಂದು ವಿದ್ಯಮಾನ ಮತ್ತು ಇದರಲ್ಲಿ ಒಂದು ಕಂಪಿಸುವ ವ್ಯವಸ್ಥೆ ಅಥವಾ ಬಾಹ್ಯ ಬಲವು ನಿರ್ದಿಷ್ಟ ಆವರ್ತನಗಳಲ್ಲಿ ಮತ್ತೊಂದು ವ್ಯವಸ್ಥೆಯನ್ನು ಹೆಚ್ಚಿನ ಅಲೆಯೆತ್ತರದಿಂದ ತೊನೆದಾಡುವಂತೆ ಚಾಲನೆ ಮಾಡುತ್ತದೆ.
ಪ್ರತಿಕ್ರಿಯಾ ಅಲೆಯೆತ್ತರವು ಸಾಪೇಕ್ಷ ಗರಿಷ್ಠವಾಗಿರುವ ಆವರ್ತನಗಳನ್ನು ವ್ಯವಸ್ಥೆಯ ಅನುರಣನ ಆವರ್ತನಗಳೆಂದು ಕರೆಯಲಾಗುತ್ತದೆ. ಅನುರಣನ ಆವರ್ತನದಲ್ಲಿ, ಸಣ್ಣ ಆವರ್ತಕ ಚಾಲಕ ಬಲಗಳು ಭಾರಿ ಅಲೆಯೆತ್ತರದ ತೂಗಾಟಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತವೆ. ಇದಕ್ಕೆ ಕಾರಣ ಕಂಪನ ಶಕ್ತಿಯ ಸಂಗ್ರಹಣೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |