ಸದಸ್ಯ:Meghana dholli
ಪರಿಚಯ/ಜನನ
[ಬದಲಾಯಿಸಿ]ನನ್ನ ಹೆಸರು ಮೇಘನ ಡೊಳ್ಳಿ. ನನ್ನ ತಂದೆಯ ಹೆಸರು ವಸಂತ.ಡಿ.ಸಿ. ಹಾಗು ನನ್ನ ತಾಯಿಯ ಹೆಸರು ಯಶೋಧ. ನನಗೆ ಒಬ್ಬ ಸಹೋದರನಿದ್ದಾನೆ. ಅವನ ಹೆಸರು ವಿಶ್ವ. ನಾನು ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾನಿಲಯದಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದೇನೆ. ನಾನು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ಜನಿಸಿದ್ದೇನೆ. ನಾನು ಓದಿದ್ದು ಬೆಳೆದಿದ್ದು ಮೈಸೂರು ಹಾಗು ಬೆಂಗಳೂರಿನಲ್ಲಿ.
ವಿದ್ಯಾಭ್ಯಾಸ
[ಬದಲಾಯಿಸಿ]ನನ್ನ ವಿದ್ಯಾಭ್ಯಾಸವು ಮೈಸೂರಿನಲ್ಲಿ ಶುರುವಾಯಿತು. ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು 'ಗೀತ ಭಾರತಿ ಶಾಲೆ'ಯಲ್ಲಿ ಮುಗಿಸಿದೆ. ನಂತರ ನನ್ನ ತಂದೆಯವರಿಗೆ ಬೆಂಗಳೂರಿಗೆ ವರ್ಗಾವಣೆಯಾಯಿತು. ಅದಕ್ಕಾಗಿ ನಾನು ನನ್ನ ಪ್ರೌಢ ಶಿಕ್ಷಣವನ್ನು 'ಅಚಲ ವಿದ್ಯಾ ಮಂದಿರ'ದಲ್ಲಿ ಮಾಡಿದೆ. ನಂತರ ನನ್ನ ಪದವಿ ಪೂರ್ವ ಶಿಕ್ಷಣವನ್ನು 'ವಿಜಯ ಸಂಯುಕ್ತ ಪದವಿ ಪೂರ್ವ ಕಾಲೇಜಿ'ನಲ್ಲಿ ಮುಗಿಸಿದೆ. ಈಗ ಬಿಎಸ್ಸಿಯನ್ನು 'ಕ್ರೈಸ್ಟ್ ವಿಶ್ವವಿದ್ಯಾನಿಲಯ'ದಲ್ಲಿ ಮಾಡುತ್ತಿದ್ದೇನೆ. ಮುಂದೆ ಎಮ್.ಎಸ್ಸಿ ಮಾಡುವ ಯೋಚನೆಯಿಟ್ಟುಕೊಂಡಿದ್ದೇನೆ.
ಹವ್ಯಾಸಗಳು
[ಬದಲಾಯಿಸಿ]'ದೇಶ ಸುತ್ತಿ ನೋಡು, ಕೋಶ ಓದಿ ನೋಡು' ಎಂಬ ಗಾದೆಯು ಅನ್ವಯಿಸುವಂತೆ, ನಾನು ಕೂಡ ಪುಸ್ತಕಗಳನ್ನು ಓದುವ ಹವ್ಯಾಸ ಇಟ್ಟುಕೊಂಡಿದ್ದೇನೆ. ನಾನು ಪೌರಾಣಿಕ ಕಥೆಗಳು, ಪ್ರೇಮ ಕಥೆಗಳು, ಮಕ್ಕಳ ಕಥೆಗಳು ಮುಂತಾದವುಗಳನ್ನು ಓದಿದ್ದೇನೆ ಹಾಗು ಓದುತ್ತಿರುತ್ತೇನೆ. ಮಹಾ ಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತವನ್ನೂ ಓದಿದ್ದೇನೆ. ಇದರ ಜೊತೆಗೆ ನನಗೆ ದೇಶ ಸುತ್ತುವ ಆಸೆಯು ಇದೆ. ಪ್ರತಿಯೊಂದು ಸ್ಥಳಗಳಿಗೆ ಹೋಗಿ, ಆ ಸ್ಥಳದ ಸಾಮಾಜಿಕ ಪರಿಸ್ಥಿತಿ ಮತ್ತು ಅಲ್ಲಿನ ಆರ್ಥಿಕ ಸ್ಥಿತಿಗಳನ್ನು ತಿಳಿದು ಬರೆಯುವ ಆಸೆಯಿದೆ. ನನ್ನ ಅನುಭವದ ಬಗ್ಗೆ ಬರೆಯುವ ಆಸೆ ಇದೆ. ದೇಶ ಸುತ್ತುವುದರ ಜೊತೆಗೆ ಅಲ್ಲಿಯ ಜನರನ್ನು ನೋಡವ ಆಕಾಂಕ್ಷೆ ನನ್ನದು. ಅದರ ಜೊತೆಗೆ ಅಲ್ಲಿಯ ಸಂಸ್ಕೃತಿ, ಸಂಪ್ರದಾಯ ಮತ್ತು ಅಲ್ಲಿನ ವಿವಿಧ ಉಡುಪಿನ ರೀತಿಯನ್ನು ತಿಳಿದುಕೊಳ್ಳಲು ಇಷ್ಟ ಪಡುತ್ತೇನೆ. ನನಗೆ ಚಳಿ ವಾತಾವರಣವಿದ್ದು, ಬಿಸಿ ಬಿಸಿ ಕಾಫಿ ಕುಡಿಯುತ್ತಾ, ಹಸಿರು ಪ್ರಕೃತಿಯನ್ನು ಅನುಭವಿಸುತ್ತ, ಅಲ್ಲಿ ಸುತ್ತಾಡುವ ಕನಸು ನನ್ನದು. ಹಸಿರು ಪ್ರಕೃತಿ ಎಂದ ತಕ್ಷಣ, ನನಗೆ ಇಂದಿನ ಪರಿಸರದ ಬಗ್ಗೆ ಗಮನ ಹರೆಯುತ್ತದೆ. ಇಂದಿನ ಪರಿಸರವು ಬಹಳವೇ ಮಲಿನಗೊಂಡಿದೆ. ಅದಕ್ಕೆ ಮುಖ್ಯವಾದ ಕಾರಣ ಎಂದರೆ ನಾವು ಅಳವಡಿಸಿಕೊಂಡಿರುವ ಜೀವನ ಪದ್ದತಿ.
- ದಿನದಿಂದ ದಿನಕ್ಕೆ ಆಮ್ಲಜನಕದ ಆಯುಷ್ಯವು ಕಡಿಮೆಯಾಗುತ್ತಿದೆ. ವಾಹನಗಳ ಸಂಖ್ಯೆ ಮತ್ತು ಅದರಿಂದ ಹೊರಬರುವ ಹೊಗೆಯು, ನಾವು ಹುಸಿರಾಡುವ ಗಾಳಿಯನ್ನು ಮಲಿನಗೊಳಿಸುತ್ತಿದೆ.
- ಮನುಷ್ಯರು ತಮ್ಮ ದಿನಚರಿಯು ಸುಖಕರವಾಗಿರಲಿ ಎಂದು ಬಯಸಿ, ಹಸಿರನ್ನು ನಾಶ ಮಾಡುತ್ತಿದ್ದಾರೆ.
- ಜನರು ಮನೆಯ ಮುಂದೆ ಮರದ ಎಲೆಗಳು ಉದುರುತ್ತವೆಂದು ಮರಗಳನ್ನು ಕಡೆಯುತ್ತಿದ್ದಾರೆ. ಜನರಿಗೆ ತಮ್ಮ ವಾಹನವನ್ನು ನಿಲ್ಲಿಸಲು ತಂಪಾದ ನೆರಳು ಬೇಕು, ಆದರೆ ಅದೇ ನೆರಳಿಗೆ ಒಂದು ದೈತ್ಯವಾದ ಮರ ಬೇಕು ಎಂದು ಅರಿವಿಲ್ಲ.
- ಇದಕ್ಕೆ ಸರಿಯಾದ ಕ್ರಮ ಕೈಗೊಳ್ಳದ್ದಿದ್ದರೆ, ಮುಂದೊಂದು ದಿನ ಪ್ರಕೃತಿಯ ಬಲೆಗೆ ನಾವೆಲ್ಲ ತುತ್ತಾಗುತ್ತೇವೆ.
ನಾನು ಒಬ್ಬ ಪರಿಸರ ಸ್ನೇಹಿಯಾಗಿ ಹೇಳುವುದೇನೆಂದರೆ, ನಮ್ಮ ಸುಖ ಸಂತೋಷಕ್ಕೆ ಏನು ಬೇಕೋ ಎಲ್ಲಾ ಮಾಡೋಣ, ಅದರ ಜೊತೆಗೆ ಪರಿಸರವನ್ನು ನಮ್ಮ ಮಕ್ಕಳಾಗಿ ನೋಡೋಣ. ನಾವು ನೆಟ್ಟ ಗಿಡ, ಮುಂದೆ ನಮಗೆ ಆಸರೆಯಾಗಿರುತ್ತದೆ ಎಂದು ಹೇಳಬಯಸುತ್ತೇನೆ. ನಾನು ಹಲವಾರು ಕಡೆಗೆ ಟ್ರೆಕ್ಕಿಂಗೆ ಹೋಗಿ ಬಂದಿದ್ದೇನೆ. ಇದರಿಂದ ದೇಹವು ಆರೋಗ್ಯವಾಗಿರುತ್ತದೆ ಹಾಗು ಮನಸ್ಸು ಉತ್ಸಾಹದಿಂದ ಇರುತ್ತದೆ. ನನಗೆ ಹಾಡು ಕೇಳುವ, ಸಿನೆಮಾ ನೋಡುವ ಹವ್ಯಾಸವಿದೆ. ನಾನು ಜಗತ್ತಿನ ಆಗು-ಹೋಗುಗಳನ್ನು ತಿಳಿದುಕೊಳ್ಳಲು ಇಷ್ಟ ಪಡಿತ್ತೇನೆ, ಇದರಿಂದ ನನ್ನ ಜೀವನದಲ್ಲಿ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳುವುದಕ್ಕೆ ಅವಕಾಶವಿರುತ್ತದೆ. ನಾನು ನನ್ನ ಕೈಲಾದ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಳ್ಳುತ್ತಾ, ನಾನು ಸಂತೋಷವಾಗಿದ್ದು, ನನ್ನ ಸುತ್ತಮುತ್ತ ಇರುವವರನ್ನು ಸಂತೋಷವಾಗಿಡಲು ಇಚ್ಚಿಸುತ್ತೇನೆ.
ನಾನು ಓದಿದ ಪುಸ್ತಕಗಳು
[ಬದಲಾಯಿಸಿ]ಇಂಗ್ಲಿಷ್ ಕಾದಂಬರಿಗಳು
- ಫೈವ್ ಪಾಯಿಂಟ್ ಸಮ್ಒನ್(five point someone)
- ಒನ್ ನೈಟ್ ಅಟ್ ದಿ ಕಾಲ್ ಸೆಂಟರ್(one night at the call center)
- ದಿ ತ್ರಿ ಮಿಸ್ತೆಕ್ಸ್ ಆಫ್ ಮೈ ಲೈಫ್(the three mistakes of my life)
- ಟೂ ಸ್ತೇಟ್ಸ್(two states)
- ರೆವೊಲ್ಯುಷಂನ್ ೨೦೨೦(revolution 2020)
- ಹಾಫ್ ಗರ್ಲಫ್ರೆಂಡ್(half girlfriend)
- ವಾಟ್ ಯಂಗ್ ಇಂಡಿಯ ವಾಂಟ್ಸ್(what young India wants)
- ವಿಂಗ್ಸ್ ಆಫ್ ದಿ ಫೈರ್(wings of the fire)
- ಇಂಡಿಯಾ ೨೦೨೦(India 2020).... ಮುಂತಾದವು.
This user is a member of WikiProject Education in India |