ವಿಷಯಕ್ಕೆ ಹೋಗು

ಸದಸ್ಯ:Varsha R Achar

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವರ್ಷ.ಆರ್

ನಾನು ಮತ್ತು ನನ್ನ ಕುಟುಂಬ

[ಬದಲಾಯಿಸಿ]

ನನ್ನ ಹೆಸರು ವರ್ಷ.ಆರ್. ನಾನು ೧೯೯೭ರ ಮಾರ್ಚ್ ೧೪ ರಂದು ಬೆಂಗಳೂರಿನ ಬೃಂದಾವಾನ ಆಸ್ಪತ್ರೆಯಲ್ಲಿ ಹುಟ್ಟಿದ್ದೀನಿ. ನನ್ನ ತಂದೆಯ ಹೆಸರು ಎಂ.ಪಿ. ರಾಜೇಶ್ ಹಾಗೂ ತಾಯಿಯ ಹೆಸರು ಟಿ.ಎಸ್.ಪದ್ಮಾವತಿ.ನಮ್ಮ ತಂದೆ ತಾಯಿಗೆ ನಾನೊಬ್ಬಳೆ ಮಗಳು.ನಮ್ಮ ಮನೆಯಲ್ಲಿ ನಮ್ಮೊಂದಿಗೆ ನನ್ನ ಅಜ್ಜಿ ತಾತ, ಅತ್ತೆ ಮಾವ ಹಾಗು ಅವರ ಇಬ್ಬರು ಮಕ್ಕಳು ವಾಸವಾಗಿದ್ದಿವಿ. ನನ್ನ ತಂದೆ ತಾಯಿ ಇಬ್ಬರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತಿದ್ಧಾರೆ. ನನ್ನ ಹುಟ್ಟಿನಿಂದ ಬೆಂಗಳೂರಿನಲ್ಲಿ ವಾಸವಾಗಿಧ್ಹಿವಿ. ನನ್ನ ಅಜ್ಜಿ ಸಕಲೇಶಪುರದವರು, ಹಾಗು ನನ್ನ ತಾತ ತಲಕಾಡಿನವರು. ಅವರಿಬ್ಬರು ತಮ್ಮ ಜೀವನದಲ್ಲಿ ಬಹಳ ಕಷ್ಟಪಟ್ಟವರು. ನಾವೆಲ್ಲರು ಈ ದಿವಸ ಖುಷಿಯಿಂದಿರಲು ಅವರೇ ಮೂಲ ಕಾರಣ.

ನನ್ನ ವಿಧ್ಯಾಭ್ಯಾಸ ಹಾಗು ನನ್ನ ಹವ್ಯಾಸಗಳು

[ಬದಲಾಯಿಸಿ]

ನನ್ನ ಪ್ರಾರ್ಥಮಿಕ ವಿದ್ಯಾಭ್ಯಾಸವನ್ನು ನಾನು ಮಿಲ್ಲೆರ್ಸ್ ರಸ್ತೆಯ ಪ್ರೈಮರಿ ಶಾಲೆಯಲ್ಲಿ ಮುಗಿಸಿದ್ಧು, ಜೆ.ಪಿ ನಗರದಲ್ಲಿ ಸೆಂಟ್ ಮಾರ್ಕ್ಸ್ ಪ್ರೌಢ ಶಾಲೆಯಲ್ಲಿ ೮ನೇ ತರಗತಿಯಿಂದ ೧೦ನೇತರಗಯವರೆಗು ವ್ಯಾಸಾಂಗ ಮಾಡಿದ್ದೆನಿ.ಪ್ರಸ್ತುತವಾಗಿ ನಾನು ಕ್ರೈಸ್ಟ್ ಯೂನಿವರ್ಸಿಟಯಲ್ಲಿ ನನ್ನ ಪದವಿ ಶಿಕ್ಷಣವನ್ನು ಮಾಡುತ್ತಿರುವೆ.ನನಗೆ ನೃತ್ಯ ಮತ್ತು ಚಿತ್ರಕಲೆಯಲ್ಲಿ ಆಸಕ್ತಿಯಿದ್ದು, ಇದುವರಿಗು ಬಹಳಷ್ಟು ಬಹುಮಾನಗಳನ್ನು ಗಳಿಸಿಕೊಂಡಿರುವೆ.ನನಗೆ ನೆಚ್ಚಿನ ವಿಷಯ ಭೌತಶಾಸ್ತ್ರ.ನನಗೆ ನನ್ನ ಮೆಚ್ಚಿನ ವಿಷ್ಯವಾದ ಭೌತಶಾಸ್ತ್ರದಲ್ಲಿ ಪಿ.ಹೆಚ್.ಡಿ ಮಾಡಬೇಕೆಂದು ಮಹದಾಸೆ ಇದೆ.ಕ್ರೀಡೆಗಳಲ್ಲಿ ನನಗೆ ತ್ರೋ ಬಾಲ್,ವಾಲಿ ಬಾಲ್ ಹಾಗೂ ಕೇರಮ್ ಎಂದರೆ ಬಹಳ ಇಷ್ಟ.ನಾನು ನನ್ನನ್ನು ವಿಧ್ಯಭ್ಯಾಸ ಮಾತ್ರವಲ್ಲದೆ, ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತೆನಿ. ಮನೆಯಲ್ಲಿ, ಬಿಡುವಿನ ಸಮಯದಲ್ಲಿ ನಾನು ಪುಸ್ತಕಗಳನ್ನು ಓದುವುದು, ಹೊಸ ಅಡಿಗೆಗಳನ್ನು ಮಾಡುವುದು, ಹಾಗು ನನ್ನ ತಮ್ಮ ತಂಗಿಯ ಜೊತೆ ಆಟ ಆಡುವುದು ಇತ್ಯಾದಿಗಳು ನನ್ನ ಹವ್ಯಾಸಗಳು.

ನನ್ನ ರಜೆಯ ದಿನಗಳು

[ಬದಲಾಯಿಸಿ]

ನಾನು ನನ್ನ ರಜೆ ದಿನಗಳಲ್ಲಿ ಮಡಿಕೇರಿಯ ಬಳಿ ಇರುವ ವಿರಾಜಪೇಟೆ ಎಂಬ ನಮ್ಮ ಊರಿಗೆ ಹೋಗಿ ಬರತ್ತೇನೆ.ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯುವುದು ನನಗೆ ಬಹಳ ಇಷ್ಟ.ಕಣ್ಣಿಗೆ ಹಬ್ಬವೆನಿಸುವ ನಮ್ಮ ಊರಿನಲ್ಲೇ ಇರುವ ಮನಸ್ಸು ನನಗೆ.ಇಲ್ಲಿ ನಮ್ಮ ಅಜ್ಜಿಯ ಮನೆ ಮತ್ತು ಮಾವನ ಮನೆಗಳಿವೆ.ಆದರೆ ರಜೆ ಬಂತೆಂದರೆ ನಾವುಗಳೆಲ್ಲಾ ಸುಮಾರು ೨೦ ರಿಂದು ೩೦ ಜನರು ಒಟ್ಟಿಗೆ ಸೇರುತ್ತೇವೆ. ಅದರಲ್ಲೂ ಸುಮಾರು ೭ ರಿಂದ ೮ ಮಂದಿ ಎಲ್ಲಾ ಸಮವಯಸ್ಕರು ಅಂದರೆ ನನ್ನ ವಯಸ್ಸಿನವರು.ಹಾಗಾಗಿ ನಾವು ಒಟ್ಟಾಗಿ ಸೇರಿದರೆ ನಮಗೆ ಬೇರೆಯಾವುದರ ಪರಿವೆಯೇ ಇರುವುದಿಲ್ಲ.ಬೇರೆ ಪ್ರಪಂಚವೊಂದಿದೆ ಎಂಬುದನ್ನೇ ಮರೆತು ಬಿಡುತ್ತೇವೆ. ಮನೆಯ ಹಿರಿಯರೂ ಕೂಡ ನಮ್ಮಗಳ ಜೊತೆ ಚೆನ್ನಾಗಿ ಬೆರೆತು ಹೋಗುತ್ತಾರೆ.ಎಲ್ಲರೂ ಸೇರಿದಾಗ ಮನೆಯಲ್ಲಿ ಹಬ್ಬದ ವಾತಾವರಣ ಮೂಡಿರುತ್ತದೆ.ಆ ಸಮಯದಲ್ಲಿ ದಿನಗಳು ಗಳಿಗೆಗೆಳ ರೀತಿಯಲ್ಲಿ ಕೆಳೆದುಹೋಗುತ್ತವೆ. ಒಟ್ಟಾಗಿ ನಾವುಗಳು, ಸಿನಿಮಗಳನ್ನು ನೋಡುವುದು, ಅಲ್ಲಿನ ಸುತ್ತಮುತ್ತಲಿನ ಜಾಗಗಳಿಗೆ ಹೋಗುವುದು, ದಿನವಿಡಿ ಆಟ ಆಡುವುದು, ರಾತ್ರಿ ನಿದ್ದೆಯನ್ನೂ ಸಹಾ ಮಾಡದೆ, ಖುಷಿಯಿಂದ ಇರುತ್ತೇವಿ.

ನಾನು ಇರುವ ಊರಿನ ಕುರಿತು

[ಬದಲಾಯಿಸಿ]

ದೇಶದ "ಗಾರ್ಡನ್ ಸಿಟಿ" ಏಂದೇ ಪ್ರಸಿದ್ದವಾಗಿರುವ ಬೆಂಗಳೂರಿನಲ್ಲಲ್ಲಿ ಇರುವುದು ಹೆಮ್ಮೆಯ ವಿಷಯ. ಇಲ್ಲಿರುವ ಸೌಲಭ್ಯಗಳನ್ನು, ಅವಕಾಶಗಳನ್ನು, ಭಾರತದ ಬೇರೆ ಯಾವ ಊರಿನಲ್ಲೂ ಸಿಗುವುದಿಲ್ಲ. ನಮ್ಮ ನಗರಿಯಲ್ಲಿ, ಸಿಕ್ಕ ಸೌಲಭ್ಯ ದುರುಪಯೋಗ ಪಡಿಸಿಕೊಳ್ಳುವವರೇ ಹೆಚ್ಛು. ಎಲ್ಲಾ ರೀತಿಯಿಂದಲೂ ಸುರಿಕ್ಷಿತವಾಗಿರುವ ನನ್ನೂರಿನಲ್ಲಿ ವಾಸಿಸಲು, ಪ್ರಪಂಚದಾದ್ಯಂತ ಜನರು ಬರುತ್ತಾರೆ. ಇಲ್ಲಿನ ಹವಾಮಾನ, ಅಡಿಗೆ, ಸಿಗುವ ಸೌಲಭ್ಯಗಳು ಎಲ್ಲರಿಗೂ ಅಚ್ಚುಮೆಚ್ಚು. ಬೆಂಗಳೂರಿಗೆ ಸಿಕ್ಕಿರುವ ಪ್ರತಿಷ್ಟೆ ಮತ್ತಷ್ಟು ಹೆಚ್ಚಬೇಕೆಂದು ನನ್ನಾಸೆ.

This user is a member of WikiProject Education in India



ಉಪಪುಟಗಳು

[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Varsha R Achar