ಸದಸ್ಯ:Pushpa.r1910169
ನನ್ನ ಪರಿಚಯ
[ಬದಲಾಯಿಸಿ]ಎಲ್ಲರಿಗೂ ನಮಸ್ಕಾರ. ನನ್ನ ಹೆಸರು ಪುಷ್ಪ.ಆರ್.ನನ್ನ ತಂದೆಯ ಹೆಸರು ರಾಮಾಂಜಿನಿ ಮತ್ತು ನನ್ನ ತಾಯಿಯ ಹೆಸರು ಕಲಾವತಿ. ನನ್ನ ತಂದೆ ಕೇಂದ್ರ ಸರ್ಕಾರದ ಅಂಚೆ ಇಲಾಖೆಯಲ್ಲಿ ಕ್ಲರ್ಕ್ ಆಗಿ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.ನನ್ನ ತಾಯಿ ಮನೆಯಲ್ಲಿ ಗೃಹಿಣಿಯಾಗಿದ್ದಾರೆ ಹಾಗಾಗಿ ನಾನು ಹೆಚ್ಚು ಸಮಯ ನನ್ನ ತಾಯಿಯೊಡೊನೆ ಕಳೆಯುತ್ತೇನೆ. ನನ್ನ ತಂದೆ-ತಾಯಿಗೆ ಇಬ್ಬರು ಮಕ್ಕಳು ನಾನು ಮತ್ತು ನನ್ನ ಅಣ್ಣ ಹೇಮಂತ್.ನನ್ನ ಅಣ್ಣ ವಯಸ್ಸಿನಲ್ಲಿ ನನಗಿಂತ ಎರಡು ವರ್ಷ ದೊಡ್ಡವರು.ನಾವು ನೆಲೆಸಿರುವ ಸ್ಥಳ ಜರಗನಹಳ್ಳಿ ಜೆ.ಪಿ ನಗರ 6ನೇ ಅಂತ, ಬೆಂಗಳೂರು ಇದು ನನ್ನ ತಂದೆ ಉಟ್ಟಿದ ಊರು.ಈ ಊರಿನಲ್ಲಿಯೇ ನಮ್ಮ ಅಜ್ಜಿ-ತಾತ, ಚಿಕ್ಕಪ್ಪ-ಚಿಕ್ಕಮ್ಮ ಎಲ್ಲರೂ ಒಂದೇ ಊರಿನಲ್ಲಿ ಅಕ್ಕ-ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದೇವೆ.ನನ್ನ ಮಾತೃ ಭಾಷೆ ಕನ್ನಡ ಹಾಗಾಗಿ ನನಗೆ ಕನ್ನಡ ಓದುವುದು, ಬರೆಯುವುದು ಸುಲಭ.ನನಗೆ ಇಷ್ಟವಾದ ದೇವರು ಆಂಜನೇಯ ಸ್ವಾಮಿ. ನಮ್ಮ ಮನೆಯ ದೇವರು ಸಹ ಆಂಜನೇಯ ಸ್ವಾಮಿಯೇ ಆಗಿರುವುದರಿಂದ ನನಗೆ ಆಂಜನೇಯನ ಮೇಲೆ ಭಕ್ತಿ ಜಾಸ್ತಿ ಇದೆ.ನನ್ನ ಅಭ್ಯಾಸಗಳೇನೆಂದರೆ ಸಿನಿಮಾ ನೋಡುವುದು, ಹಾಡುಗಳನ್ನು ಕೇಳುವುದು, ಚಿತ್ರ ಬಿಡಿಸುವುದು ಹಾಗೂ ಅಮ್ಮನಿಗೆ ಸಹಾಯ ಮಾಡುವುದು, ವಾರದ ದಿನಗಳಲ್ಲಿ ದೇವರಿಗೆ ಪೂಜೆ ಮಾಡುವುದು ನನ್ನ ಅಭ್ಯಾಸಗಳು.ನನಗೆ ಇಷ್ಟವಾದ ನಟ ಅಭಿನಯ ಚಕ್ರವರ್ತಿ ಸುದೀಪ್.ನನಗೆ ತಿನಿಸುಗಳಲ್ಲಿ ಸಿಹಿ ತಿಂಡಿ ಎಂದರೆ ಬಹಳ ಇಷ್ಟ ಅದರಲ್ಲೂ ನನ್ನ ಅಜ್ಜಿ ಮಾಡುವ ಅಡಿಗೆ ನನಗೆ ಇನ್ನೂ ಇಷ್ಟ. ಇವೆಲ್ಲವೂ ನನ್ನ ಇಷ್ಟದ ವಿಷಯಗಳು.
ನನ್ನ ವಿದ್ಯಾಭ್ಯಾಸ
[ಬದಲಾಯಿಸಿ]ಓದುವ ವಿಚಾರಕ್ಕೆ ಬರುವುದಾದರೆ ನಾನು ಮತ್ತು ನನ್ನ ಅಣ್ಣ ಇಬ್ಬರು ಸಹ ಮನೆಯ ಸಮೀಪದಲ್ಲಿರುವ 'ಶ್ರೇಯಸ್ ಪಬ್ಲಿಕ್ ಸ್ಕೂಲ್' ಎಂಬ ಶಾಲೆಯಲ್ಲಿ ಒಂದನೇ ತರಗತಿಯಿಂದ ಎಸ್ ಎಸ್ ಎಲ್ ಸಿಯವರೆಗೂ ಅದೇ ಶಾಲೆಯಲ್ಲಿ ನಮ್ಮ ಓದನ್ನು ಮುಗಿಸಿದೆವು.ನನ್ನ ತಂದೆ-ತಾಯಿ ಹೆಚ್ಚಿನ ವಿದ್ಯಾಭ್ಯಾಸವನ್ನು ಪಡೆದಿಲ್ಲ ಆದ್ದರಿಂದ ತಮ್ಮ ಮಕ್ಕಳಾದರು ಒಳ್ಳೆ ವಿದ್ಯಾವಂತರಾಗಬೇಕೆಂದು ಆಸೆಪಟ್ಟರು.ನಮಗೆ ಒಳ್ಳೆ ವಿದ್ಯಾಭ್ಯಾಸವನ್ನು ನೀಡಬೇಕೆಂದು ನನ್ನ ತಂದೆ ಬಹಳ ಕಷ್ಟ ಪಡುತ್ತಿದ್ದಾರೆ.ಬೆಳಗ್ಗೆ 8 ಗಂಟೆಗೆ ಕೆಲಸಕ್ಕೆ ಹೊರಟರೆ ರಾತ್ರಿ 8:30ಕ್ಕೆ ಬರುತ್ತಿದ್ದರು.8:30ಕ್ಕೆ ಬಂದು ಊಟ ಮಾಡಿ ಮತ್ತೆ 9:30ಕ್ಕೆ ಪ್ಯಾಸೆಂಜರ್ ಆಟೋವನ್ನು ಓಡಿಸಲು ಓಗಿ ಮತ್ತೆ 12:30ಕ್ಕೆ ಅಥವಾ 1 ಗಂಟೆಗೆ ಮನೆಗೆ ಬರುತ್ತಿದ್ದರು.ನಾನು ನನ್ನ ತಂದೆಯನ್ನು ನೋಡುತಿದ್ದಿದ್ದೇ ಅಪರೂಪ.ಯಾವುದೋ ಹಬ್ಬದ ದಿನಗಳ್ಳಲ್ಲಿ ಹಾಗೂ ಭಾನುವಾರದ ದಿನದೊಂದು ಮಾತ್ರ ನೋಡುತ್ತಿದ್ದೆವು.ಆದರೆ ನನ್ನ ಅಣ್ಣ ದ್ವಿತೀಯ ಪಿ.ಯು.ಸಿ ನಲ್ಲಿ ಫೇಲ್ ಆದರು.ಆದ್ದರಿಂದ ನನ್ನ ಅಣ್ಣ ವಿದ್ಯಾಭ್ಯಾಸವನ್ನು ಮುಂದುವರಿಸಲಿಲ್ಲ.ಈ ವಿಷಯ ನನ್ನ ತಂದೆಗೆ ಬಹಳ ನೋವನ್ನುಂಟು ಮಾಡಿತು.ಆದ್ದರಿಂದ ಇನ್ನು ಮುಂದೆ ನಾನಾದರೂ ಚೆನ್ನಾಗಿ ಓದಿ ಒಳ್ಳೆ ಅಂಕಗಳನ್ನು ಪಡೆದು ನನ್ನ ತಂದೆಯನ್ನು ಖುಷಿ ಪಡಿಸಬೇಕೆಂದೆನಿಸಿತು. ಎಂಬತೈದಕ್ಕು ಹೆಚ್ಚು ಪರ್ಸಂಟೇಜ್ ಗಳಿಸಬೇಕೆಂಬುದು ನನ್ನ ತಂದೆಯ ಆಸೆ ಆಗಿತ್ತು ನಾನು ಅದನ್ನು ಪೂರೈಸಿದೆ. ನಾನು ಎಸ್ ಎಸ್ ಎಲ್ ಸಿ ನಲ್ಲಿ ಒಟ್ಟು ಐನೂರ ಮೂವತ್ತು ನಾಲ್ಕು (534) ಅಂದರೆ 85.44%ರಷ್ಟು ಅಂಕಗಳನ್ನು ಗಳಿಸಿ ನನ್ನ ತಂದೆಯನ್ನು ಖುಷಿಪಡಿಸಿದೆ.ನಂತರ ಪಿ ಯು ಸಿಗೆ ನನ್ನ ತಂದೆ ಇಷ್ಟ ಪಟ್ಟಹಾಗೆ ತಲಘಟ್ಟಪುರದಲ್ಲಿರುವ 'ದೀಕ್ಷ ಜ್ಞಾನ ಸ್ವೀಕಾರ್ ಪಿ ಯು ಕಾಲೇಜ್ 'ಗೆ ಸೇರಿಸಿದರು. ಮೊಟ್ಟ ಮೊದಲ ಬಾರಿ ನಾನು ಆ ಕಾಲೇಜಿಗೆ ಹೋದಾಗ ಯಾರು ಪರಿಚಯದವರು ಇರಲಿಲ್ಲ ಹಾಗೂ ನನಗೆ ಆ ಕಾಲೇಜು ಇಷ್ಟವು ಇರಲಿಲ್ಲ.ನನ್ನ ತಂದೆಗೆ ಇಷ್ಟ ಎಂದು ಸೇರಿಕೊಂಡಿದ್ದೆ ಅಷ್ಟೆ. ಪ್ರಥಮ ಪಿ ಯು ನಂತರ ನನಗೆ ಆ ಕಾಲೇಜು ಇಷ್ಟವಾಯ್ತು. ದ್ವಿತೀಯ ಪಿ ಯು ಸಿ ನಲ್ಲಿರುವಾಗ ಈ ಒಂದು ವರ್ಷದಲ್ಲಿ ಈ ಕಾಲೇಜಿನಿಂದ ಏನಾದರೂ ಗುರುತಿಗೆ ಬಹುಮಾನ ಪಡಿಯಬೇಕೆಂದೆನಿಸಿತ್ತು. ಒಂದು ಬಾರಿ ಹೀಗೆ ಕಾಲೇಜಿನಲ್ಲಿ ಸ್ಪರ್ಧೆ ಇಟ್ಟಿದ್ದರು ಅದು ಏನೆಂದರೆ ಯಾವುದಾದರು ಭಾಷೆಯಲ್ಲಿ ಪ್ರಬಂಧ ಬರೆಯುವುದು. ನಾನು ಕನ್ನಡದಲ್ಲಿ ಮೂರು ಪುಟ ಬರೆದಿದ್ದೆ ನಾನು ಈ ಸ್ಪರ್ಧೆಯಲ್ಲಿ ಗೆದ್ದೆ. ಆದರೆ ಅವರು ಗುರುತಿಗೆ ಪ್ರಶಸ್ತಿ ಕೊಡದೆ ಡೈರಿ ಮಿಲ್ಕ್ ಚಾಕ್ಲೆಟ್ ಕೊಟ್ಟರು. ನಾನು ಆ ಚಾಕ್ಲೆಟ್ ತಿಂದು ಚಾಕ್ಲೆಟ್ ಪೇಪರನ್ನು ಗುರುತಿಗೆ ಇಟ್ಟು ಕೊಂಡಿದ್ದೇನೆ ಯಾಕೆಂದರೆ ಇದೇ ನನ್ನ ಮೊದಲ ಪ್ರಶಸ್ತಿ. ಪಿ ಯು ಸಿ ಕೊನೆಹಂತದಲ್ಲಿ ಬೀಳ್ಕೊಡುಗೆ ಸಮಾರಂಭದಲ್ಲಿ "ಬೆಸ್ಟ್ ಟ್ರಾನ್ಸ್ಫಾರ್ಮೆಷನ್ ಸ್ಟೂಡೆಂಟ್ "ಎಂದು ನನ್ನನ್ನು ಗುರುತಿಸಿ ಪ್ರಶಸ್ತಿ ನೀಡಿದರು.ಅಂತೂ ಇಂತೂ ಪಿ ಯು ಸಿ ಕೊನೆಯ ದಿನ ನಾನು ಈ ಕಾಲೇಜ್ ನ ಗುರುತಿಗೆ ಪ್ರಶಸ್ತಿ ಪಡೆಯಬೇಕು ಎನ್ನುವ ಆಸೆ ಪೂರಕಗೊಂಡಿತು. ನಾನು ಪಿ ಯು ಸಿನಲ್ಲಿ 91%ಅನ್ನು ಗಳಿಸಿದೆ. ನನ್ನ ತಂದೆಯ ಆಸೆಯನ್ನು ಎರಡನೇ ಬಾರಿ ಈ ಅಂಕಗಳ ಮೂಲಕ ಪೂರೈಸಿದೆ.ಪಿ ಯು ಸಿ ನಂತರ ಮತ್ತೆ ನನ್ನ ತಂದೆ ಇಷ್ಟ ಪಟ್ಟು ಸೇರಿಸಿದ ಕಾಲೇಜ್ ಇದೇ ಕ್ರೈಸ್ಟ್ ಯೂನಿವರ್ಸಿಟಿ (ಡೀಮ್ಡ್ ಟು ಬಿ ಯೂನಿವರ್ಸಿಟಿ )ಯಲ್ಲಿ ಬಿ. ಕಂ ಮೊದಲನೇ ವರ್ಷದ ವಿದ್ಯಾಭ್ಯಾಸ ನಡೆಸುತಿದ್ದೇನೆ.ಈ ಕಾಲೇಜಿಗೆ ಸೇರಿಕೊಳ್ಳುವುದಕ್ಕೆ ನನಗೆ ಇಷ್ಟ ಇರಲಿಲ್ಲ ಯಾಕೆಂದರೆ ಇಲ್ಲಿ ತುಂಬಾ ತಡವಾಗಿ ಬಿಡುತ್ತಾರೆ, ತುಂಬಾ ಸ್ಟ್ರಿಕ್ಟ್ ಎಂದು ಯೋಚಿಸಿದ್ದೆ ಆದರೆ ಇಲ್ಲಿ ಓದಿಸುವುದು ನನ್ನ ತಂದೆಗೆ ಇಷ್ಟ ಇದ್ದಿದ್ದರಿಂದ ಇಲ್ಲಿ ಸೇರಿಕೊಂಡೆ.
ನನ್ನ ಸ್ಫೂರ್ತಿ
[ಬದಲಾಯಿಸಿ]ನೀವು ಗಮನಿಸಿದ ಹಾಗೆ ನಾನು ಮೇಲೆ ಹೇಳಿರುವ ವಾಕ್ಯದಲ್ಲಿ ಬರೀ ನನ್ನ ತಂದೆಯ ಆಸೆ ಪೂರೈಸುವುದನ್ನು ಕಾಣಬಹುದು. ಹೌದು ನನಗೆ ನನ್ನ ತಂದೆ ಎಂದರೆ ತುಂಬಾ ಇಷ್ಟ.ಅವರಿಗೆ ಬೇಜಾರಾಗುವ ಯಾವ ಕೆಲಸವೂ ನಾನು ಮಾಡುವುದಿಲ್ಲ.ನನ್ನ ಅಣ್ಣ ನನ್ನ ತಂದೆಯ ಬುದ್ಧಿಮಾತುಗಳನ್ನು ಕೇಳುವುದು ಕಡಿಮೆ, ನಾನು ಸಹ ಹಾಗೆ ಮಾಡಿದರೆ ಅವರು ನಮಗಾಗಿ ಇಷ್ಟು ಕಷ್ಟ -ಪಟ್ಟರು ನೆಮ್ಮದಿ ಇಲ್ಲದದಂತೆ ಆಗುತ್ತದೆ. ಹಾಗಾಗಿ ನಾನು ನನ್ನ ತಂದೆಗೆ ಬೇಜಾರು ಪಡಿಸಲು ಇಷ್ಟ ಪಡವುದಿಲ್ಲ. ನಾನು ಚೆನ್ನಾಗಿ ಓದಬೇಕೆಂಬುವುದೇ ಅವರ ಆಸೆ. ಆದ್ದರಿಂದ ನಾನು ಆದಷ್ಟು ಹೆಚ್ಚು ಅಂಕಗಳನ್ನು ಪಡೆದೆ.ಇದರಿಂದ ನನ್ನ ತಂದೆಗೂ ಖುಷಿ ಹಾಗೂ ನನ್ನ ತಂದೆಯ ಸ್ನೇಹಿತರು ನಿಮ್ಮ ಮಗಳು ಎಷ್ಟು ಅಂಕಗಳನ್ನು ಪಡೆದಳು ಎಂದು ಕೇಳಿದಾಗ ನನ್ನ ತಂದೆ ಹೆಮ್ಮೆ -ಇಂದ ಹೇಳಿಕೊಳ್ಳಬಹುದು. ಇವತ್ತಿಗೂ ನನ್ನ ಗುರಿ ಏನೆಂದರೆ ನನ್ನ ತಂದೆ ನನ್ನ ಪರೀಕ್ಷೆಯ ಅಂಕಗಳನ್ನು ಯಾರಾದರೂ ಕೇಳಿದಾಗ ಹೇಗಪ್ಪಾ ಹೇಳುವುದು ಎಂದು ಇಂಜರಿಯಬಾರದು. ಯಾರಾದರೂ ಕೇಳಿದಾಗ ಹೆಮ್ಮೆ ಇಂದ ಹೇಳಿಕೊಳ್ಳುವಂತೆ ಓದಬೇಕು ಎನ್ನುವುದೇ ನನ್ನ ಗುರಿ. ನನ್ನ ತಂದೆ ಪಡುವ ಕಷ್ಟವೇ ನನಗೆ ಸ್ಪೂರ್ತಿ.ಏಕೆಂದರೆ ನನ್ನ ತಂದೆ ನಮಗಾಗಿ ಕಷ್ಟ ಪಡುವುದನ್ನು ನೆನೆಸಿಕೊಂಡು ನಾನು ಓದುತಿದ್ದೆ. ಆದ್ದರಿಂದ ಅವರೇ ನನಗೆ ಸ್ಫೂರ್ತಿ.ನನ್ನ ಜೀವನದ ಗುರಿ ಯಾವಾಗಲು ನನ್ನ ತಂದೆಯ ಆಸೆ, ಕನಸುಗಳನ್ನು ಪೂರೈಸುವುದು ಮಾತ್ರ. ಧನ್ಯವಾದಗಳು.