ವಿಷಯಕ್ಕೆ ಹೋಗು

ಸದಸ್ಯ:M.S.Srivardhan

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಾಷಾ ಉತ್ಸವದ ದಿನದಂದು ತೆಗೆದೆ ನನ್ನ ಚಿತ್ರ.
ಬಾಷಾ ಉತ್ಸವದ ದಿನದಂದು ತೆಗೆದೆ ಚಿತ್ರ.

ನನ್ನ ಪರಿಚಯ

[ಬದಲಾಯಿಸಿ]

ನಮಸ್ಕಾರಗಳು ನನ್ನ ಹೆಸರು ಶ್ರಿವರ್ಧನ ನಾನು ಹುಟ್ಟಿ ಬೆಳೆದಿದ್ದು ದಕ್ಷಿಣ ಕರ್ನಾಟಕಬೆಂಗಳೂರಿನಲ್ಲಿ. ನನ್ನ ತಂದೆಯ ಹೆಸರು ಶ್ರೀಧರ್ ಕುಮಾರ್ ಅವರು ಔಷಧಿ ವ್ಯಾಪಾರಿ ಮತ್ತು ನನ್ನ ತಾಯಿಯ ಹೆಸರು ರೂಪ ಅವರು ಗೃಹಿಣಿ. ನನ್ನ ತಂದೆ ಈ ದಿನದವರೆಗೂ ನಾನು ಕೇಳಿದ್ದನ್ನೆಲ್ಲ ಕೊಡಿಸಿದ್ದರು. ನನ್ನ ತಾಯಿ ಚೆನ್ನಾಗಿ ಆಹಾರವನ್ನು ತಯಾರಿಸುತ್ತಾರೆ ಅದು ತುಂಬಾ ರುಚಿಕರವಾಗಿರುತ್ತದೆ. ನನ್ನ ತಂದ ತಾಯಿಗೆ ನಾವು ಇಬ್ಬರು ಮಕ್ಕಳು ನನಗೆ ಒಬ್ಬರು ಅಕ್ಕ ಇದ್ದಾರೆ ಅವರು ಅಂತಿಮ ಬಿಕಾಂ ಮಾಡುತ್ತಿದ್ದಾರೆ. ನನ್ನ ಕುಟುಂಬದಲ್ಲಿ ಒಟ್ಟು ಐದು ಜನ ಇರುತ್ತೇವೆ (ನನ್ನ ಅಜ್ಜಿ, ತಂದೆ, ತಾಯಿ, ಅಕ್ಕ, ಮತ್ತು ನಾನು) . ನಮ್ಮ ಜೊತೆ ನನ್ನ ಅಜ್ಜಿಯು ಇರುತ್ತಾರೆ. ಅವರು ತುಂಬಾ ಚೆನ್ನಾಗಿರುವ ಸಿಹಿತಿಂಡಿಯನ್ನು ಮಾಡಿಕೊಡುತ್ತಾರೆ. ಅವರನ್ನು ಕಂಡರೆ ನನಗೆ ತುಂಬಾ ಇಷ್ಟ.

ನನ್ನ ಶಾಲಾ ಶಿಕ್ಷಣ

[ಬದಲಾಯಿಸಿ]

ನನ್ನ ಶಿಕ್ಷಣ ವನ್ನ ಮೀರಾಂಬಿಕಾ ಸ್ಕೂಲ್ ಫಾರ್ ನ್ಯೂ ಏಜ್ ನಲ್ಲಿ ಮುಗಿಸಿದ್ದೇನೆ. ನಾನು ಶಾಲೆಯಲ್ಲಿ ನೃತ್ಯಪ್ರದರ್ಶನ ಕೊಡುತ್ತಿದ್ದೆ. ಅನೇಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದೆ. ನನ್ನ ಶಾಲೆಯಲ್ಲಿ ನಾನು ಕೆಲವು ಒಳ್ಳೆಯ ಚಿತ್ರಗಳನ್ನು ಬಿಡಿಸಿದ್ದೇನೆ. ನಾನು ಶಾಲೆಯಲ್ಲಿ ಉಪಾಧ್ಯಾಯರಿಗೆ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದೆ. ನಾನು ಹಾಗೆಯೇ ನಾಟಕದಲ್ಲಿಯೂ ಭಾಗವಹಿಸುತ್ತಿದ್ದೆ. ನಾನು ಅಲ್ಪಸ್ವಲ್ಪ ಕ್ರೀಡೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗೆದ್ದನು. ಕ್ರೀಡೆಗಳಲ್ಲಿ ನನಗೆ ಕ್ರಿಕೆಟ್ ತುಂಬಾ ಇಷ್ಟವಾದದ್ದು. ಶಾಲೆಯಿಂದ ನನಗೆ ಯೋಗದ ಮೇಲೆ ಆಸಕ್ತಿ ಮೂಡಿತು. ಈ ಶಾಲೆಯಲ್ಲಿ ನಾನು ಹೆಚ್ಚು ಓದುತ್ತಿರಲಿಲ್ಲ. ‌‌‌‌ ಇದರಿಂದ ನನ್ನನ್ನು ಟ್ಯೂಷನ್ ಗೆ ಸೇರಿಸಿದರು. ನಂತರ ನನ್ನ ಹೈಸ್ಕೂಲ್ ಶಿಕ್ಷಣವನ್ನು ನಾರಾಯಣ ಶಾಲೆಯಲ್ಲಿ ಮುಂದುವರೆಸಿದೆ. ಈ ಶಾಲೆಯಲ್ಲಿ ಹೆಚ್ಚಿನ ಚಟುವಟಿಕೆಗಳಿಗೆ ಆದ್ಯತೆ ಇರಲಿಲ್ಲ. ಈ ಶಾಲೆಯಲ್ಲಿ ಓದಿಗೆ ಹೆಚ್ಚಿನ ಪ್ರಾಮುಖ್ಯತೆ ಇತ್ತು. ಈ ಶಾಲೆಯಲ್ಲಿ ನಮಗೆ ವಾರಕ್ಕೆ ಒಂದು ಪರೀಕ್ಷೆ ಇರುತ್ತಿತ್ತು. ಒಳ್ಳೆಯ ಅಂಕಗಳನ್ನು ಪಡೆಯದಿದ್ದರೆ ನಾವು ಆರೇಳು ಗಂಟೆಯ ತನಕ ಶಾಲೆಯಲ್ಲಿ ಇರಬೇಕಾಗಿತ್ತು. ಇದರಿಂದ ನನಗೆ ಓದಿನಲ್ಲಿ ಆಸಕ್ತಿ ಹೆಚ್ಚಾಯಿತು. ಈ ಶಾಲೆಯಲ್ಲಿ ಹೆಚ್ಚಿನ ಚಟುವಟಿಕೆಗಳಿಗೆ ದ್ಯತೆ ಇರಲಿಲ್ಲ. ಈ ಶಾಲೆಯಲ್ಲಿ ಯಾವಾಗಲೂ ಓದಿನ ಬಗ್ಗೆ, ಪರೀಕ್ಷೆಗಳ ಬಗ್ಗೆಯೇ ಯೋಚಿಸುತ್ತಿದ್ದರು. ನನ್ನ ಶಿಕ್ಷಕರು ನನಗೆ ಚೆನ್ನಾಗಿ ಹೇಳಿಕೊಡುತ್ತಿದ್ದರು. ನಾನು ಎರಡು ವರ್ಷಗಳ ಕಾಲ ಕ್ಲಾಸ್ ಲೀಡರ್ ಆಗಿದ್ದೆ. ನಾನು ಕಷ್ಟ ಪಟ್ಟು ಓದಿ ನನ್ನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಪಡೆದನು. ನನಗೆ ಎಸೆಸೆಲ್ಸಿ ಪರೀಕ್ಷೆಯಲ್ಲಿ 9.8 ಸಿ.ಜಿ.ಪಿ.ಎ ಬಂತು ಹಾಗೆಯೇ ಕನ್ನಡದಲ್ಲಿ 10 ಸಿ.ಜಿ.ಪಿ.ಎ ಪಡೆದಿದ್ದೇನು.

ಕಾಲೇಜ್ ಲೈಫ಼್

[ಬದಲಾಯಿಸಿ]

ನನ್ನ ಮುಂದಿನ ಓದು ಅಂದರೆ ಮೊದಲನೇ ಪಿಯುಸಿ ಮತ್ತು ಎರಡನೇ ಪಿಯುಸಿ ಎನ್ನು ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜಿನಲ್ಲಿ ಮುಗಿಸಿದೆ. ಈ ಕಾಲೇಜಿನಲ್ಲಿ ನನಗೆ ತುಂಬಾ ಒಳ್ಳೆಯ ಸ್ನೇಹಿತರು ಸಿಕ್ಕಿದ್ದರು. ಇವರು ನನ್ನಲ್ಲಿ ಧೈರ್ಯವನ್ನು ತುಂಬಿದ್ದರು. ನನಗೆ ಓದಿನಲ್ಲೂ ಸಹಾಯ ಮಾಡಿದರು. ಮೊದಲನೇ ಪಿಯುಸಿಯಲ್ಲಿ ನಾನು ಸರಿಯಾಗಿ ಓದುತ್ತಿರಲಿಲ್ಲ ನಂತರ ನಾನು ಚೆನ್ನಾಗಿ ಓದಿ ದ್ವಿತೀಯ ಪಿಯುಸಿ ಬೋರ್ಡ್ ಎಕ್ಸಾಮ್ ನಲ್ಲಿ 92 ಪರ್ಸೆಂಟ್ ಪಡೆದನು. ಮತ್ತು ನನಗೆ ಕನ್ನಡದಲ್ಲಿ 85 ಅಂಕಗಳು ಬಂದಿತು. ನನಗೆ ಪಿಯುಸಿ ನಲ್ಲಿಯೇ ಕ್ರೈಸ್ಟ್ ಕಾಲೇಜ್ ಗೆ ಸೇರಬೇಕು ಎಂದು ತುಂಬಾ ಆಸೆ ಇತ್ತು ಕೆಲವು ಕಾರಣದಿಂದ ನನಗೆ ಸೇರಲು ಸಾಧ್ಯವಾಗಲಿಲ್ಲ. ನಂತರ ದ್ವಿತೀಯ ಪಿಯುಸಿ ನಲ್ಲಿ ಒಳ್ಳೆಯ ಅಂಕಗಳನ್ನು ಗಳಿಸಿ ಈಗ ನಾನು ಕ್ರೈಸ್ಟ್ ಯೂನಿವರ್ಸಿಟಿ ಅಲ್ಲಿ ಓದುತ್ತಿದ್ದೇನೆ.

ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ನನ್ನ ಜೀವನ

[ಬದಲಾಯಿಸಿ]

ಕ್ರೈಸ್ಟ್ ಯುನಿವರ್ಸಿಟಿ ಸೇರಿಕೊಂಡ ಮುಖ್ಯವಾದ ಕಾರಣ ಅಲ್ಲಿಯ ಒಳ್ಳೆಯ ಜನ, ಒಳ್ಳೆಯ ವಿದ್ಯಾಭ್ಯಾಸ, ಒಳ್ಳೆಯ ಶಿಕ್ಷಕರು ಮತ್ತು ಒಳ್ಳೆಯ ವಾತಾವರಣದಿಂದ ನಾನು ಸೇರಿಕೊಂಡನು. ಇನ್ನೂ ನನ್ನ ಹೆಚ್ಚಿನ ವಿದ್ಯಾಭ್ಯಾಸವನ್ನು ಕ್ರೈಸ್ಟ್ ಯೂನಿವರ್ಸಿಟಿ ಎಲ್ಲಿ ಮುಗಿಸುತ್ತೇನೆ. ಈಗ ನಾನು ಕ್ರೈಸ್ಟ್ ಯೂನಿವರ್ಸಿಟಿ ಎಲ್ಲಿ ಒಳ್ಳೆಯ ಅಂಕಗಳನ್ನು ಪಡೆದು ಒಳ್ಳೆಯ ಕೆಲಸ ಸಿಗುವುದು ಸದ್ಯದ ಗುರಿ. ಈ ವರ್ಷ ನಮ್ಮ ಕಾಲೇಜಿನಲ್ಲಿ ನಡೆದ ಭಾಷಾಉತ್ಸವದಲ್ಲಿ ನಾನು ಕರ್ನಾಟಕ ನೃತ್ಯ ತಂಡದ ಭಾಗವಾಗಿದ್ದೆ. ಈ ಸ್ಪರ್ಧೆಯಲ್ಲಿ ನಮ್ಮ ತಂಡ ಮೊದಲ ಸ್ಥಾನ ಪಡೆಯಿತು. ಈ ವಷಯವು ನಮಗೆ ಮುಂದಿನ ವರ್ಷವೂ ಸಹ ಭಾಗವಹಿಸಲು ಸ್ಪೂರ್ತಿ ನೀಡಿತು.

ನನ್ನ ಗುರಿ

[ಬದಲಾಯಿಸಿ]

ನಾನು ಸಿ.ಎಂ.ಎ ಮಾಡಬೇಕೆಂದು ಗುರಿ ಇಟ್ಟಿದ್ದೇನೆ. ಚೆನ್ನಾಗಿ ಓದಿ ಒಳ್ಳೆಯ ಕೆಲಸಕ್ಕೆ ಸೇರಿ ನನ್ನ ತಂದೆತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬುದು ನನ್ನ ಆಸೆ. ಅದರ ಜೊತೆಗೆ ನನ್ನ ಸಮಾಜಕ್ಕೆ ನನ್ನ ಸೇವೆಯನ್ನು ಸಲ್ಲಿಸುವ ಆಸೆಯನ್ನು ಹೊಂದಿದ್ದೇನೆ.