ಸದಸ್ಯ:HANU MARTINA/sandbox
ಸಂಜುಕ್ತ ಪರಶರ್ | |
---|---|
ಜನನ | ೩ ಅಕ್ಟೋಬರ್ ೧೯೭೯ ಅಸ್ಸಾಂ, ಭಾರತ |
ವೃತ್ತಿ | ಐ.ಪಿ.ಎಸ್ ಅಧಿಕಾರಿ |
ರಾಷ್ಟ್ರೀಯತೆ | ಭಾರತ |
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ | ಹೋಲಿ ಚೈಲ್ಡ್ ಶಾಲೆ, ಗುವಹಟ್ಟಿ |
ಬಾಳ ಸಂಗಾತಿ | ಪುರು ಗುಪ್ತ (ಐ.ಎ.ಎಸ್ ಅಧಿಕಾರಿ) |
ಸಂಜುಕ್ತ ಪರಶರ್ ಒಬ್ಬ ಸಾಧಾರಣ ಮಹಿಳೆ ಅಲ್ಲ. ಇವರನ್ನು ಕಂಡರೆ ಬೋಡೊ ಮಿಲಿಟನ್ಟ್ ಕೂಡ ಹೆದರುವರು. ಇವರು ಅಸ್ಸಾಂಮಿನ ಐ.ಪಿ.ಎಸ್ ಅಧಿಕಾರಿ. ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಸ್ಸಾಂ, ಸೋನಿತ್ಪುರ್ ನಗರಗಳಲ್ಲಿ ಕೆಲಸ ನಿರ್ವಹಿಸುತ್ತಿರುವರು. ಇವರ ಹದಿನೆಂಟು ತಿಂಗಳ ಕೆಲಸದ ಅವಧಿಯಲ್ಲೇ 'ಬೋಡೊ ಮಿಲಿಟನ್ಟ್ಸ್' ರಲ್ಲಿ ಭಯವೇರಿಸಿದ್ದಾರೆ. ಇವರು ಮಹಿಳೆಯರಿಗೆ ಅದರಲ್ಲೂ ಅಸ್ಸಾಂಮಿನ ಮಹಿಳೆಯರಿಗೆ ಒಂದು ಉದಾಹರಣೆಯಾಗಿದ್ದಾರೆ. ಇವರು ಯಾರೇ ಏನೇ ತಪ್ಪು ಮಾಡಿದ್ದಲ್ಲಿ ತಮ್ಮ ಉಪಕರಣಗಳನ್ನು ಬಳಸಲು ಹಿಂಜರಿಯುವುದಿಲ್ಲ. ಕಳೆದ ಒಂದಷ್ಟು ತಿಂಗಳಲ್ಲಿ, ೬೪ ಉಗ್ರಗಾಮಿಗಳನ್ನು ಬಂಧಿಸಿದ್ದಾರೆ.
ಜೀವನ
[ಬದಲಾಯಿಸಿ]ಇವರು ಅಕ್ಟೋಬರ್ ೩, ೧೯೭೯ ರಂದು ಹುಟ್ಟಿದರು. ಇವರು ಆಗಸ್ಟ್ ೨೯, ೨೦೦೬ರಲ್ಲಿ ಐ.ಪಿ.ಎಸ್ ಕೆಲಸವನ್ನು ಶುರು ಮಾಡಿದರು. ಇವರು ಅಸ್ಸಾಂಮಿನ ಮೊದಲ ಐ.ಪಿ.ಎಸ್ ಅಧಿಕಾರಿ ಎಂಬ ಹೆಮ್ಮೆಯಿದೆ. ಇವರ ತಾಯಿ ಮೀನಾ ದೇವಿ. ಇವರು ಅಸ್ಸಾಂಮಿನ ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಿದರು. ಇವರ ತಂದೆ ದುಲಾಲ್ ಚಂದ್ರ, ನೀರಾವರಿ ಇಲಾಖೆಯಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿದರು. ಸಂಜುಕ್ತ ತಮ್ಮ ಹತ್ತನೆಯ ತರಗತಿಯನ್ನು ಹೋಲಿ ಚೈಲ್ಡ್ ಶಾಲೆಯಲ್ಲಿ ಮುಗಿಸಿ, ಹನ್ನೆರಡನೆಯ ತರಗತಿಯನ್ನು ಸೇನಾ ಶಾಲೆಯಲ್ಲಿ ಮುಗಿಸಿದರು.
ಇವರು ಪೊಲೀಸ್ ಅಧಿಕಾರಿ ಅಲ್ಲದೆ, ಒಬ್ಬ ಪಂಡಿತೆ ಕೂಡ. ಇವರು ತಮ್ಮ ಪದವಿ ಪೂರ್ಣ ಶಿಕ್ಷಣವನ್ನು ದಿಲ್ಲಿಯಲ್ಲಿ ಮುಗಿಸಿ, ತಮ್ಮ ಮಾಸ್ಟರ್ಸ್, ಎಂ.ಫಿಲ್, ಪಿ.ಹೆಚ್.ಡಿ ವ್ಯಾಸಂಗವನ್ನು ದಿಲ್ಲಿಯ ಜವಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಮಾಡಿದರು. ಈ ಕಾರಣದಿಂದಲೇ ಪೊಲೀಸ್ ಜಾಲತಾಣದಲ್ಲಿ ಇವರ ಹೆಸರನ್ನು ಡಾ. ಶ್ರೀಮತಿ. ಸಂಜುಕ್ತ ಪರಶರ್, ಐ.ಪಿ.ಎಸ್ ಎಂದು ಬರೆಯಲಾಗಿದೆ. ಇವರು ಚಿಕ್ಕಂದಿನಿಂದಲೇ ಶಾಲೆಯ ಕ್ರೀಡೆಗಳಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿದ್ದರು. ಇವರು ಈಜುವುದು, ಶಾಲೆಯ ಕ್ರೀಡೆಗಳಲ್ಲಿ ಸ್ಪರ್ಧಿಸುವುದು, ಏಕ ಪಾತ್ರ ಅಭಿನಯ ಮತ್ತು ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದರು.
ಶಿಕ್ಷಣ
[ಬದಲಾಯಿಸಿ]ಇವರ ಪ್ರೌಢ ಶಿಕ್ಷಣ ಮುಗಿದ ಮೇಲೆ, ರಾಜ್ಯಶಾಸ್ತ್ರದಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಐ.ಪಿ ಕಾಲೇಜ್, ದೆಹಲಿ ವಿಶ್ವವಿದ್ಯಾಲಯದಲ್ಲಿ ಮುಗಿಸಿದರು.[೧] ಸಂಜುಕ್ತ ತಮ್ಮ ಸ್ನಾತಕೋತ್ತರ ಪದವಿಯನ್ನು ಅಂತರಾಷ್ಟ್ರೀಯ ಸಂಬಂಧದ ಬಗ್ಗೆ ಜೆ.ಎನ್.ಯು ವಿಶ್ವವಿದ್ಯಾಲಯ, ದೆಹಲಿಯಲ್ಲಿ ಮಾಡಿದರು. ಇದರ ನಂತರ ವಿದೇಶಾಂಗ ನೀತಿಯಲ್ಲಿ ಪಿ.ಹೆಚ್.ಡಿಯನ್ನು ಪಡೆದರು. ಸಂಜುಕ್ತ ಯು.ಪಿ.ಎಸ್.ಸಿಯಲ್ಲಿ ಎಂಬತ್ತೈದನೆಯ ಸ್ಥಾನ ಪಡೆದುಕೊಂಡರು. ಇದರಿಂದ ಇವರು ಪೊಲೀಸ್ ಕಾರ್ಯಕ್ಕೆ ಸೇರಬೇಕೆಂದು ಇಚ್ಛಿಸಿದರು. ಇವರಿಗೆ ಕ್ರೀಡೆಯೆಂದರೆ ಬಹಳ ಇಷ್ಟ, ಇವರು ಶಾಲೆಯಲ್ಲಿ ಓದುವಾಗ ಅನೇಕ ಕ್ರೀಡೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಈಜನ್ನು ಕಲಿತು, ಸ್ಪರ್ಧೆಯಲ್ಲಿ ಕೂಡ ಭಾಗವಹಿಸಿದರು. ಇವರು ಮಾರ್ಚ್ ಫಾಸ್ಟ್ ಮತ್ತು ಅನೇಕ ನಾಟಕದಲ್ಲಿ ಕೂಡ ಭಾಗಿಯಾಗಿದ್ದರು.
ಕಾರ್ಯ
[ಬದಲಾಯಿಸಿ]ಸಂಜುಕ್ತ ೨೦೦೬ ರಲ್ಲಿ, ಐ.ಪಿ.ಎಸ್ ಅಧಿಕಾರಿ ತಂಡಕ್ಕೆ ಸೇರಿದವರು. ಇವರನ್ನು ಮೊದಲು ಸಹಾಯಕ ಕಮಾಂಡೆಂಟ್, ಮಾಕುಂಮ್ ನಲ್ಲಿ ಪೋಸ್ಟ್ ಮಾಡಿದರು. ಸಂಜುಕ್ತರಿಗೆ ಬೊಡೊ ಮತ್ತು ಅಕ್ರಮ ಬಾಂಗ್ಲಾದೇಶದ ಉಗ್ರಗಾಮಿಗಳ ಘರ್ಷಣೆಗಳನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ನೀಡಿದರು. ಇವರು ಕೇವಲ ಹದಿನೈದು ತಿಂಗಳಲ್ಲಿ, ಹದಿನಾರು ಉಗ್ರಗಾಮಿಗಳನ್ನು ಕೆಲಸದಿಂದ ವಿಮುಕ್ತಿಗೊಳಿಸಿದರು. ಅರವತ್ತೈದಕ್ಕೂ ಹೆಚ್ಚಿನ ಉಗ್ರಗಾಮಿಗಳನ್ನು ಬಂಧಿಸಿ ಅವರ ಆಯುಧ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡರು. ಇವರು ನಿವೇದಿಸುವ ತಂಡದ ಜೊತೆಗೆ ಸೇನೆಯ ಬೆಂಗಾವಲರ ಮೇಲೆ ದಾಳಿ ಮಾಡಿರುವ ಉಗ್ರಗಾಮಿಗಳನ್ನು ಬಂಧಿಸಿದರು. ಇವರು ಇದಕ್ಕೆ ಸುಪರಿಚಿತರಾಗಿದ್ದಾರೆ.
ಇವರು ಪುರು ಗುಪ್ತ ಎಂಬವರ ಜೊತೆ ಮದುವೆಯಾದರು. ಇವರು ಚೀರಾಂಗ್ ಜಿಲ್ಲೆಯ ಅಸ್ಸಾಂನಲ್ಲಿ ಐ.ಎ.ಎಸ್ ಅಧಿಕಾರಿ/ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಒಬ್ಬ ಮಗನಿದ್ದಾನೆ. ಅವನನ್ನು ನೋಡಿಕೊಳ್ಳಲು ಸಂಜುಕ್ತ ಇಲ್ಲದಿದ್ದರೆ ಅವರ ತಾಯಿ ನೋಡಿಕೊಳ್ಳುತ್ತಾರೆ. [೨]ಸಂಜುಕ್ತ ಸೋನಿತ್ಪುರದಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅವರ ತಂಡವನ್ನು ಸಿ.ಆರ್.ಪಿ.ಎಫ್ ಜವಾನ್ ಜೊತೆ ಎ.ಕೆ-೪೭ ಭಯೋತ್ಪಾದನೆಯ ಇನ್ಛೆಸ್ಟೆಡ್ ಸ್ಥಳದ ಕಡೆ ಮುಂದುವರಿಸಿದರು. ಎಲ್ಲರು ಭಯ ಪಡುವ ಪೊಲೀಸ್ ಅಧಿಕಾರಿ ಆಗಿ ಸಂಜುಕ್ತ ಬೊಡೊ ಉಗ್ರಗಾಮಿಗಳ ನಡುವೆ ಬೆಳೆದರು. ಸಂಜುಕ್ತ ಅವರು ಬಹಳ ವಿನೀತ ಮತ್ತು ಪ್ರಿಯ ವ್ಯಕ್ತಿ. ಇವರು ಕಠಿಣ ಪೊಲೀಸ್ ಕೆಲಸ ಮಾಡುವುದರ ಜೊತೆಗೆ ಕೆಲವು ದಿನ 'ಶಮನ ಗುಡಾರ'ಕ್ಕೆ ಹೋಗಿ ಜನರನ್ನು ಭೇಟಿ ಮಾಡುತ್ತಿರುತ್ತಾರೆ. ಇವರು ಹೆಲ್ಮೆಟ್ ಧರಿಸಿ ಗಾಡಿ ಓಡಿಸುವವರಿಗೆ ಮಿಠಾಯಿ ಕೊಡುತ್ತಿದ್ದರು.
ಇವರಿಗೆ ಎನ್.ಡಿ.ಎಫ್.ಬಿ ಕಡೆಯವರು ಹಲವು ಬಾರಿ ಬೆದರಿಕೆಯನ್ನು ಹಾಕಿದರು. ಆದರೆ ಈ ಹೆದರಿಕೆ ಸಂಜುಕ್ತರ ಕೆಲಸಕ್ಕೆ ಅಡ್ಡಿಯಾಗಿರಲಿಲ್ಲ. ಅವರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದರು. ಇವರು ಯಾವಾಗಲು ಹೇಳುವರು - 'ಅಪರಾಧಿಗಳು ಮಾತ್ರ ಭಯ ಪಡಬೇಕು' ಎಂದು.
ಹೊರಗಿನ ಸಂರ್ಪಕಗಳು
[ಬದಲಾಯಿಸಿ]- http://www.thebetterindia.com/25724/10-amazing-facts-about-sanjukta-parashar-brave-ips-officer-who-is-a-nightmare-for-militants-in-assam/
- http://www.huffingtonpost.in/2015/06/10/assam-first-woman-ips-officer_n_7551154.html
- http://scroll.in/article/734814/before-sanjukta-parashar-there-was-another-gritty-female-cop-from-assam
ಉಲ್ಲೇಖಗಳು
[ಬದಲಾಯಿಸಿ]