ಸದಸ್ಯ:Deepthi donepudi

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದೀಪ್ತಿ

ಪರಿಚಾಯ[ಬದಲಾಯಿಸಿ]

ನನ್ನ ಹೆಸರು ದೀಪ್ತಿ.ನಮ್ಮ ಊರಿನ ಹೆಸರು ಶ್ರೀರಾಮನಗರ ಅದೊಂದು ಸಣ್ಣ ಗ್ರಾಮ.ನಮ್ಮ ಊರಿನಲ್ಲಿ ಎಲ್ಲಾವಸತಿಗಳೂ ಇರುತ್ತೆವೆ. ಬಸಿನ ವ್ಯವಸ್ಥೆ ಇದೆ. ಎಲ್ಲಾ ದೇವರ ಗುಡಿಗಳೂ ಇವೆ ಹಾಗು ಶಾಲಾ,ಕಾಲೇಜುಗಳೂ ಸಹ ಇವೆ. ನಮ್ಮ ಊರಿನಲ್ಲಿ ಸುಮಾರು ೨೦೦ ಕ್ಕೂ ಹೆಚ್ಚು ಮನೆಗಳು ಇರುತ್ತವೆ.ಎಲ್ಲಾರು ತುಂಬ ಹತ್ತಿರದ ಬಂಧುಗಳಂತೆ ಇರುತ್ತಾರೆ.ಒಬ್ಬರಿ ಗೊಬ್ಬರು ಸಹಾಯ ಮಾಡಿಕೊಳ್ಳುತ್ತಾರೆ .ನಮ್ಮ ಊರಿನಲ್ಲಿವ್ಯವಸಾಯದ ಕುಟುಂಬಿಕರು ಜಾಸ್ತಿ.ಎಲ್ಲರೂ ಅವರವರ ಹೊಲಗದ್ದೆಗಳಲ್ಲಿ ನೆಲ್ಲು ಬೆಳೆಸುತ್ತಾರೆ.ನಮ್ಮ ಗ್ರಾಮದ ಹತ್ತಿರದಲ್ಲಿರುವ ಸಣ್ಣನಗರ,ತಾಲೂಕು ಗಂಗಾವತಿ.ನಮ್ಮ ಊರಿನಲ್ಲಿ ಒಂದೊಂದು ಹಬ್ಬ ಜಾತ್ರೆಯಂತೆ ಮಾಡುತ್ತಾರೆ ರಾಮದೇವರ ಗುಡಿಯಲ್ಲಿ ಶ್ರೀರಾಮನವಮಿಗೆ ಕಳ್ಯಾಣ,ವಿನಾಯಕ ದೇವರ ಗುಡಿಯಲ್ಲಿ ವಿನಾಯಕಚವಿತಿ ಮೆರವಣೆಗೆ,ಸುಬ್ರಮ್ಮಣ್ಯ ದೇವರ ಗುಡಿಯಲ್ಲಿ ಕಳ್ಯಾಣ ಜಾತ್ರೆ ,ಶಿವದೇವರ ಗುಡಿಯಲ್ಲಿ ಕಾರ್ತೀಕ ಹುಣ್ಣೆಮೆಯ ಲಕ್ಷದೀಪೋತ್ಸವ ಹಾಗೂ ದುರ್ಗಾಮಾತೆಯ ಗುಡಿಯಲ್ಲಿ ದಸರಾ ನವರಾತ್ರಿಗಳು ತುಂಬ ಪ್ರಸಿದ್ಧಿ ಹಾಗು ಚೆನ್ನಾಗಿರುತ್ತವೆ.

ಕುಟುಂಬ[ಬದಲಾಯಿಸಿ]

ನನ್ನ ತಂದೆಯ ಹೆಸರು ರವೀಂದ್ರಪ್ರಸಾದ್ ಹಾಗು ನನ್ನ ತಾಯಿಯ ಹೆಸರು ಲಕ್ಷ್ಮಿ.ನನ್ನ ತಂದೆ ವ್ಯವಸಾಯ ಮಾಡುತ್ತಾರೆ.ನನ್ನತಾಯೆ ಗೃಹಿಣಿ.ನನಗೆ ಸಣ್ಣ ತಮ್ಮನೂ ಇದ್ದಾನೆ.ಆತನ ಹೆಸರು ಸುಮಂತ್ ಹಾಗೂ ಅವನು ೫ ನೇ ತರಗತಿ ಓದುತ್ತಿದ್ದಾನೆ ನಾನು ಅವನ ಜೋತೆ ತುಂಬಾ ಜಗಳ ಆಡುತ್ತೇನೆ.ಆದರೆ ಅವನೆಂದರೆ ನನಗೆ ತುಂಬ ಇಷ್ಟ.

ಬಾಲ್ಯ[ಬದಲಾಯಿಸಿ]

ನನ್ನ ಬಾಲ್ಯದಲ್ಲಿ ನಮ್ಮಬೀದಿಯ ಎಲ್ಲ ಮನೆಗಳಿಗೂ ಹೋಗಿ ಆಟವಾಡುತ್ತಿದ್ದೆ.ನನ್ನ ಮನೆಯಲ್ಲಿ ಚಿಕ್ಕಪ್ಪ.ಅಜ್ಜ,ಅಜ್ಜಿ,ಅತ್ತೆ,ಚಿಕ್ಕಮ್ಮ ಎಲ್ಲಾರೂ ಕೂಡಿ ಇರುತ್ತಿದ್ದಿವಿ. ನನ್ನ ಶಾಲೆಯ ಹೆಸರು ವಿವೇಕಾನಂದ ಪಬ್ಲಿಕ್ ಸ್ಕೂಲ್.ದಿನವು ಶಾಲೆಗೆ ಹೋಗಲ್ಲ ಅಂದು ಅತ್ತರೆ ದಿನವು ಒಂದು ಫ್ರೂಟಿ ಪಾಕೆಟ್ ಕೊಟ್ಟ ರೆ ಹೊಗ್ತಿದ್ದೆಅಂತೆ.ಆತರ ಒಂದು ವಾರ ಕೊಡಿಸಿದರೆ ಶಾಲೆಗೆ ಹೊಗೋದು ರೂಢಿ ಆಗಿದೆಯಂತೆ.ನಾನು ನಮ್ಮ ಊರಿನಲ್ಲಿ ಇರುವ ಶಾಲೆಗೆ ದಿನವು ಕುದುರೆ ಗಾಡಿಯ ಮೇಲೆ ಹೊಗ್ತಿದೆ.ಅಲ್ಲಿ ಇರುವ ಉಪಾದ್ಯಾಯಿನಿಗಳು ತುಂಬ ಮುದ್ದುಮಾಡಿದ್ದರು.ಅಲ್ಲಿ ಜಯಶ್ರೀ ಮಿಸ್ ಅಂದರೆ ನನಗೆ ತುಂಬ ಇಷ್ಟ ಹಾಗೆ ನಾನು ಅಂದರೆ ಅವರಿಗೂನು ತುಂಬ ಇಷ್ಟ.ನಾನು ಆ ಶಾಲೆಯಲ್ಲಿ ೧ ನೇ ತರಗತಿಯವರಗೆ ಓದಿದ್ದೆ.ಆ ಮೇಲೆ ನನ್ನ ಅಪ್ಪಾಜಿಯವರು ಗಂಗಾವತಿಯ ಶಾಲೆಗೆ ಸೇರಿಸಿದರೆ.ಗಂಗಾವತಿಯ ಶಾಲೆಯ ಹೆಸರು ಲಿಟಲ್ ಹಾರ್ಟ್ಸ್ ಅಂಥ ಅಲ್ಲಿ ೨ನೇ ತರಗತಿಯಿಂದ ೧೦ ನೇ ತರಗತಿಯವರಗೆ ಓದಿದ್ದೆನೆ.ಅಲ್ಲಿಗೆ ಹೋದ ಮೇಲೆ ಇಂಗ್ಲೀಷ್ ಚೆನ್ನಾಗಿ ಮಾತನಾಡುವುದು ಕಲಿತಿದ್ದೆ.ಅಲ್ಲಿಯ ಉಪಾದ್ಯಾಯರು ಪಾಠಗಳನ್ನು ಅರ್ಥವಾಗುವ ರೀತಿಯಲ್ಲಿ ಹೇಳುತ್ತಿದ್ದರು .ಅಲ್ಲಿ ಶಾರೋನ್ ಮಿಸ್,ಉದಯಶ್ರೀ ಮಿಸ್ ಇಬರು ತುಂಬ ಇಷ್ಟ. ನಾನು ೩ನೇ ತರಗತಿಯಲ್ಲಿದ್ದಾಗ ನನ್ನ ಅಜ್ಜ ಮೋಟಾರ್ ಗಾಡಿ ಯಾಕ್ಸಿಡೆಂಟ್ ಆಗಿ ತೀರಿ ಕೋಂಡರು .ನನ್ನಗೆ ತುಂಬಾ ವಿಷಾದಕರ ಘಟನೆ ಅದೆ .ನಾನು ಅದುವರೆಗೂ ತೀರಿಕೊಂಡದ್ದವರನ್ನು ಯಾರನ್ನು ನೋಡಿಲ್ಲ .ಅಜ್ಜ ನನ್ನನ್ನು ತುಂಬಾ ಪ್ರೀತಿಸುತಿದ್ದರು.ನನ್ನನ್ನು ಗಾಡಿಯ ಮೇಲೆ ಬಂಧುಗಳ ಮನೆಗೆ ಕರೆದುಕೊಂಡು ಹೋಗುತ್ತಿದ್ದರು .ನಮ್ಮ ಶಾಲೆಯಲ್ಲಿ ಯಾರಾದರು ನನಗೆ ಬಡೆದರೆ ಶಾಲೆಗೆ ಬಂದು ಆ ಮಕ್ಕಳಿಗೆ ಭಯ ತುಂಬುವಂತೆ ಬಯ್ಯುತ್ತಿದ್ದರು ನಾನು ಆತರದ ತರೆ ಕೆಲಸಗಳಿಗೆ ನಮ್ಮ ಅಜ್ಜ ನನ್ನ ಧೈರ್ಯ ,ನನಗೆ ಯಾರೂ ಏನು ಅನ್ನಲಾರದೆ ಬಡಿತಾರ ಅಂತ.ನನ್ನ ಅಜ್ಜನ ಸಿಹಿ ನೆನಪುಗಳೆಲ್ಲ ನನ್ನ ತಮ್ಮನಿಗೆ ಇಲ್ಲ.ಯಾಕೆಂದರೆ ಅವನು ಹುಟ್ಟುವುದಕ್ಕಿಂತ ಮುಂಚೆನೆ ನಮ್ಮ ಅಜ್ಜ ತೀರಿಕೊಂಡಿದ್ದಾರೆ.ಆಮೇಲೆ ಸಣ್ಣ ,ಪುಟ್ಟ ತಮ್ಮನ ಜೊತೆ ಆಟಗಳು ಜಾಸ್ತಿ ಆಡುವುದು,ಓದುವುದು ಕಡಿಮೆ ಆಗುವುದು,ಅಂಕಗಳು ಕಡಿಮೆ ಬಂದಿರುವುದಕ್ಕೆ ಮನೆಗೆ ದೂರುಗಳು, ಒಳ್ಳೊಳ್ಳೆ ಸ್ನೇಹಿತರು,ಎಲ್ಲಾರು ಕೂಡಿ ಆಡಿದನೆನಪುಗಳು ಜೊತೆ ೧೦ನೇ ತರಗತಿಯ ವಿದ್ಯಾಬ್ಯಾಸವನ್ನು ಮುಗಿಸಿದ್ದೇನೆ.

ಪರೀಕ್ಷೆ ಮುಗಿದನಂತರ ಸ್ನೇಹಿತರೆಲ್ಲ ನಮ್ಮ ಮನೆಗೆ ಬಂದು ೨ ದಿವಸ ಇದ್ದು,ಮಾತುಗಳು,ಆಡಿದ ನೆನಪುಗಳು,ಎಲ್ಲರೂ ಕಾಲುವೆಯಲ್ಲಿ ಆಡಿದ ಆಟಗಳು ತುಂಬಾ ಚೆನ್ನಾಗಿರುತ್ತವೆ ,ಎಲ್ಲಾ ಸ್ನೇಹಿತರು ಬೇರೆ ಬೇರೆ ಕಾಲೇಜುಗಳಲ್ಲಿ ಸೇರಿ ಓದು ಮುಂದು ವರಿಸಿದ್ದಾರೆ.ಎಲ್ಲಾರೂ ಬೇರೆ ಬೇರೆ ಆಗಿಬಿಟ್ಟಿದ್ದಾರೆ.ನಾನು ರೆಡ್ಡಿ ವೀರಣ್ಣ ಸಂಜೀವಪ್ಪ ಕಾಲೇಜು,ರವಿನಗರದಲ್ಲಿ ಸೇರಿದ್ದೇನೆ,ಮತ್ತೆ ಹೊಸ,ಹೊಸಗೆಳತಿಯರು,ಹೊಸವಾತಾವರಣದಲ್ಲಿ ಎರಡು ವರ್ಷ ಎರಡು ತಿಂಗಳಂತೆ ಮುಗಿಸಿ ಮನೆ ಬಿಟ್ಟು ಬೆಂಗಳೂರಿನ ಹಾಸ್ಟಲ್ ಗೆ ಬಂದು ಬಿತ್ತಿದ್ದೇನೆ.

ಬೆಂಗಳೂರಿನ ಜೀವನ[ಬದಲಾಯಿಸಿ]

ನನ್ನ ಎಲ್ಲಾ ಕುಟುಂಬವನ್ನು ಬಿಟ್ಟು ಇಲ್ಲಿಗೆ ಬಂದು ಇರೋದು ತುಂಬಾ ಕಷ್ಟ.ಆದರೆ ನನ್ನ ಪದವಿ ಪೂರ್ವದ ವಿದ್ಯಾಬ್ಯಾಸಕ್ಕಗಿ ಇರಲೇ ಬೇಕು ಚೆನ್ನಾಗಿ ಓದಲೇ ಬೇಕು.ನನ್ನ ತಂದೆ ತಾಯಿಗಳು ಹೆಮ್ಮೆ ಪಡುವಂತೆ ಒಳ್ಳೆಯ ನಡತೆಯಿಂದ ನನ್ನ ಈ ವಿದ್ಯಾಬ್ಯಾಸ ಮುಗಿಸಿ ಮನೆಗೆ ಸೇರ ಬೇಕು ನಮ್ಮ ಊರಿನ ವಾತಾವರಣಕ್ಕೂ ಈ ಬೆಂಗಳೂರಿನ ವಾತಾವರಣಕ್ಕೂ ತುಂಬಾ ವ್ಯತ್ಯಾಸ ಇದೆ.ನನಗೆ ತುಂಬಾ ಕಷ್ಟವಾಗ್ತಿತು ಇಲ್ಲಿನ ಸಹಪಾಠಿಗಳ ಜೊತೆ ಸೇರುವುದಕ್ಕೆ.ಇಲ್ಲಿಯ ಭಾಷೆಯೂ ಸಹ ವ್ಯತ್ಯಾಸವಿದೆ.ಇಲ್ಲಿಯ ಜನ ಅವರವರ ಕೆಲಸದ ಮೆಲೆ ಗುರಿ ಜಾಸ್ತಿ ಹಾಗೂ ಸಹಪಾಠಿಗಳಿಗೆ ಸಹಾಯ ಮಾಡುವ ವ್ಯಕ್ತಿತ್ವ ಕಡಿಮೆ.ಕ್ರೈಸ್ಟ್ ಯೂನಿವರ್ಸಿಟಿ ವಿದ್ಯಾಬ್ಯಾಸದ ಜೊತೆಗೆ ಬೇರೆ ಚಟುವತಿಕೆಗಳೂ ಜಾಸ್ತಿ.ಇಲ್ಲಿಯ ಉಪಾದ್ಯಾಯರು ಚೆನ್ನಾಗಿ ಹೇಳಿ ಕೊಡುತ್ತಾರೆ.ಕುಟುಂಬವನ್ನು ಬಿಟ್ಟು ಇಲ್ಲಿ ಇದ್ದು ರಜೆಗೆ ಮನೆಗೆ ಹೋದಗ ಬಂಧುಗಳೆಲ್ಲರನ್ನೂ ನೋಡಿದಾಗ,ಇಷ್ಠವಾದ ತಿಂಡಿಗಳನ್ನು ತಿಂದಾಗ ತುಂಬ ಖುಷಿ ಅನ್ನಿಸುತ್ತದೆ.೧೦ ದಿನದ ರಜೆ ೧ ದಿನದಂತೆ ಕರಗಿ ಹೊಗುತ್ತವೆ.ಹಾಗೆಯೇ ೧ ದಿನದ ಕಾಲ್ಛ್ಜನ ಪಾಠಗಳು ೧೦ ದಿನದಂತೆ ಕಷ್ಟ ಅನಿಸಿದ್ದರೂ ಸಹ ಕಷ್ಟಪಟ್ಟು ಓದಿ ಈ ವಿದ್ಯಾಬ್ಯಾಸದಲ್ಲಿ ಎಲ್ಲಾ ಒಳ್ಳೆಯ ಅಂಕಗಳನ್ನು ಪಡೆದು ನನ್ನ ತಂದೆ ತಾಯಿಗಳಿಗೆ ಹೆಮ್ಮೆಮತ್ತು ಗೌರವ ತರಬೇಕು . ನಮ್ಮ ತಂದೆ ತಾಯಿ ಮತ್ತು ಊರಿನ ದೇವರು ದುರ್ಗಾಮಾತೆಯ ಆಶೀರ್ವಾದದಿಂದ ಇವುಗಳನ್ನು ಪಡೆಯುತ್ತೆನೆ.

This user is a member of WikiProject Education in India



ಉಪಪುಟಗಳು[ಬದಲಾಯಿಸಿ]