ಸದಸ್ಯ:Deepthi donepudi/ನನ್ನ ಪ್ರಯೋಗಪುಟ
ಮೆಂಡೆಲ್ ರ ಸಂಶೋಧನೆ ಮತ್ತು ಆನುವಂಶೀಯತೆಯ ನಿಯಮಗಳು
[ಬದಲಾಯಿಸಿ]ಹುಣಸೆ ಬೀಜವನ್ನು ನೆಟ್ಟರೆ ಹುಣಸೆಯ ಗಿಡ ಮೊಳೆಯುವುದೇ ಹೊರತು ಮಾವಿನ ಗಿಡ ಎಂದೂ ಮೊಳೆಯುವುದಿಲ್ಲ. ಸಂಹದ ಹೊಟ್ಟೆಯಿಂದ ಸಿಂಹದ ಮರಿಯೇ ಜನಿಸುವುದು. ಹೀಗೆ ಪೀಳಿಗೆಯಿಂದ ಪೀಳಿಗೆಗೆ ಜೀವಿಗಳ ಗುಣಲಕ್ಷಣಗಳು ಹರಿಯುವುದಕ್ಕೆ ಆನುವಂಶೀಯತೆ (ಹೆರಿಡಿಟಿ) ಎಂದು ಹೆಸರು. ಆದರೆ ಈ ಸಾದೃಶ್ಯಗಳ ಸಾಗಣೆಯು ಎಂದೂ ನೂರಕ್ಕೆ ನೂರು ಆಗಿರುವುದಿಲ್ಲ. ಸಂತತಿಯಿಂದ ಸಂತತಿಗೆ ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತವೆ. ಇವುಗಳಿಗೆ ವ್ಯತ್ಯಯನ (ವೇರಿಯೇಷನ್) ಗಳೆಂದು ಹೆಸರು. ಆನುವಂಶೀಯತೆ ಮತ್ತು ವ್ಯತ್ಯಯನಗಳ ಆಧ್ಯಯನವೇ ತಳಿವಿಜ್ಞಾನ (ಜೆನೆಟಿಕ್ಸ್).
ಆನುವಂಶಿಕ ಲಕ್ಷಣಗಳು ಪೀಳಿಗೆಗೆ ವರ್ಗಾವಣೆಯಾಗುವಾಗ ಪಾಲಿಸುವ ನಿಯಮಗಳು ಏನಾದರೂ ಇವೆಯೇ ? ಎಂಬ ಬಗ್ಗೆ ಕೂಲಂಕಷ ಅಧ್ಯಯನ ಮಾಡಿ ಆನುವಂಶಿಕತೆಯ ನಿಯಮಗಳನ್ನು ಪ್ರಥಮ ಬಾರಿ ಮಂಡಿಸಿದ ಕೀರ್ತಿ ಜೋಹಾನ್ ಗ್ರೆಗೋರ್ ಮೆಂಡೆಲರಿಗೆ ಸಲ್ಲುತ್ತದೆ. ಇವರು ಆಸ್ಟ್ರಿಯಾದಲ್ಲಿ ೧೮೨೨ರ ಜುಲೈ ೨೨ರಂದು ಜನ್ಮ ತಾಳಿದರು. ಧರ್ಮಗುರುವಾದ ಇವರು ಶಾಲೆಯೊಂದರಲ್ಲಿ ಗಣಿತದ ಅಧ್ಯಾಪಕರೂ ಆಗಿದ್ದರು. ತಮ್ಮ ಪ್ರಯೋಗಗಳಿಗೆ ಬಟಾಣಿ ಗಿಡಗಳನ್ನು ಆಯ್ದುಕೊಂಡು ಎಂಟು ವರ್ಷಗಳು (೧೮೫೬ - ೧೮೬೪) ಸತತ ಶ್ರಮದಿಂದ ಆನುವಂಶೀಯತೆ ನಿಯಮಗಳನ್ನು ಅಭ್ಯಸಿಸಿ ಪ್ರಬಂಧ ಮಂಡಿಸಿದರು. ೧೮೬೫ ರಲ್ಲೇ ಪ್ರಚುರಪಡಿಸಿದ ಇವರ ಈ ಅತಿ ಮಹತ್ವದ ಸಂಶೋಧನೆಯು ದುರದೃಷ್ಟವಶಾತ್ ಯಾರ ಗಮನವನ್ನು ಸೆಳೆಯದೇ ಹೋಯಿತು. ಆಗಿನ ಕಾಲದ ಪ್ರಸದ್ದ ಸಸ್ಯವಿಜ್ಞಾನ ನಾಗೇಲಿಯವರೂ ಇವರ ಸಂಶೋಧನೆಯನ್ನು ನಿರ್ಲಕ್ಷಿಸಿದರು. ೧೮೮೪ರ ಜನವರಿ ೬ ರಂದು ಮೆಂಡೆಲ್ ರು ತೀರಿಕೊಂಡರು. ಮುಂದೆ ೧೯೦೦ರಲ್ಲಿ ಹಾಲೆಂಡಿನ ಹ್ಯಾಗೋ ಡಿ ವ್ರೀಸ್ , ಆಸ್ಟ್ರಿಯಾದ ಎರಿಕ್ ಫಾನ್ ಷೆರ್ಮಾಕ್ ಹಾಗೂ ಜರ್ಮನಿಯ ಕಾರ್ಲ್ ಕೊರೆನ್ಸ್ ರು ಏಕ ಕಾಲದಲ್ಲಿ ಆನುವಂಶೀಯತೆಯಲ್ಲಿ ಆಸಕ್ತರಾಗಿ, ಮೆಂಡಲರ ಪ್ರಬಂಧವನ್ನು ಕಂಡು ಬೆರಗಾಗಿ ಇದನ್ನು ವಿಜ್ಞಾನ ಜಗತ್ತಿನ ಗಮನಕ್ಕೆ ತಂದರು. ಹೀಗೆ "ಮೆಂಡೆಲಿಸಂ" ಪುನರ್ಜನ್ಮ ಪಡೆಯಿತು. ತಮ್ಮ ಮರಣದ ಹದಿನಾರು ವರ್ಷಗಳ ಅನಂತರ ಮೆಂಡೆಲರು ಪ್ರಸಿದ್ದರಾದರು! ಇಂದು ಅವರು 'ತಳವಿಜ್ಞಾನದ ಪಿತಾಮಹ' ರೆಂದು ಖ್ಯಾತರು. ಸಂಖ್ಯಾಶಾಸ್ತ್ರವನ್ನು ಜೀವಶಾಸ್ತ್ರಕ್ಕೆ ಹೊಂದಿಸಿ ಅವರು ಮಂಡಿಸಿದ ಸಿದ್ದಾಂತ ಆಗಿನ ಸಸ್ಯ ವಿಜ್ಞಾನಿಗಳಿಗೆ ವಿಚಿತ್ರವಾಗಿ ಕಂಡಿತೇನೋ ! ಅದಕ್ಕೇ ನಿರ್ಲಕ್ಷ್ಯಕ್ಕೊಳಗಾಯಿತು ; ಪರಿಣಾಮವಾಗಿ ತಳಿ ವಿಜ್ಞಾನದ ಬೆಳವಣಿಗೆ ೩೫ ವರ್ಷಗಳ ಕಾಲ ತಡೆಹಿಡಿಯಲ್ಪಟ್ಟಿತು ! ಅನಂತರವಷ್ಟೆ ಅದು ಈ ವಿಜ್ಞಾನಕ್ಕೆ ನೀಡಿದ ಒಂದು ಮಹತ್ತರ ಕೊಡುಗೆಯೆಂದು ಮನ್ನಣೆ ಪಡೆಯಿತು.[೧]
ಬಟಾಣಿ ಗಿಡಗಳ ಆಯ್ಕೆ : ಮೆಂಡೆಲರು ಬಟಾಣಿ ಗಿಡಗಳನ್ನೇ ಏಕೆ ತಮ್ಮ ಪ್ರಯೋಗಗಳಿಗೆ ಆರಿಸಿದರು ? ಅವರು ತಮ್ಮ ಪ್ರಯೋಗಗಳಲ್ಲಿ ಹೇಗೆ ಜಯಶೀಲರಾದರು ?......ಕಾರಣಗಳು ಹಲವಾರು. ಬಟಾಣಿ ಗಿಡಗಳಲ್ಲಿ ಬೇಗ ಬೇಗನೆ ಸಂತತಿಗಳನ್ನು ಪಡೆಯಬಹುದು. ಹೂಗಳ ರಚನೆಯು ಸ್ವಕೀಯ ಅಥವಾ ಪರಕೀಯ ಪರಾಗಣವನ್ನು (ಪಾಲಿನೇಶನ್) ಬೇಕಾದಂತೆ ನಡೆಸಲು ಅನುಕೂಲವಾಗಿದೆ. ತೀವ್ರ ವೃರುಧ್ಯದ ಹಲವಾರು ಗುಣಗಳುಳ್ಳ ತಳಿಗಳು ಬಟಾಣಿ ಗಿಡಗಳಲ್ಲಿ ದೊರೆತವು. (ಗಿಡದ ಎತ್ತರ - ಉದ್ದ, ಗಿಡ್ಡ; ಬೀಜದ ಬಣ್ಣ- ಹಸರು, ಹಳದಿ....ಹೀಗೆ ಏಳು ಜೊತೆ ಗುಣಗಳ ೧೪ ತಳಿಗಳನ್ನು ಮೆಂಡೆಲರು ಆರಿಸಿಕೊಂಡರು). ಅತ್ಯಂತ ಜಾಗರೂಕತೆಯಿಂದ, ಒಮ್ಮೆಗೆ ಒಂದು ಅಥವಾ ಎರಡು ಗುಣಗಳನ್ನಷ್ಟೆ ಗಮನದಲ್ಲಿರಿಸಿ ಸಂಕರ ಪ್ರಯೋಗಗಳನ್ನು ನಡೆಸಿದರು. ಗಿಡಗಳ ನಿಷ್ಕ್ರುಷ್ಟವಾದ ಲೆಕ್ಕವನ್ನು ಪ್ರತಿ ಸಂತತಿಯಲ್ಲೂ ಇಟ್ಟುಕೊಂಡರು. ಈ ಕಾರಣಗಳಿಂದಲೇ ಮೆಂಡಲರು ಆನುವಂಶೀಯತೆ ನಿಯಮಗಳನ್ನು ಪತ್ತೆ ಹಚ್ಚುವಲ್ಲಿ ಜಯಶೀಲರಾದರು.
ಏಕ ಸಂಕರೀಕರಣ ಮತ್ತು ಪ್ರತ್ಯೇಕತೆಯ ನಿಯಮ
[ಬದಲಾಯಿಸಿ]'ಓರೆ ಅಕ್ಷರಗಳು' ತಮ್ಮ ಮೊದಲ ಹಂತದಲ್ಲಿ ಮೆಂಡೆಲರು ಒಮ್ಮೆಗೆ ಒಂದು ಗುಣವನ್ನಷ್ಟೇ ಗಮನದಲ್ಲಿರಿಸಿ ಪ್ರಯೋಗ ನಡೆಸಿದರು. ಒಂದು ಗುಣದ ಎರಡು ಲಕ್ಷಣಾಂಶಗಳುಳ್ಳ ಗಿಡಗಳನ್ನು(ಅಲೀಲ್ ಗಳು ಅಧವಾ ಅಲಿಲೋ ಮಾರ್ಫ್ ಗಳು) ತೆಗೆದುಕೊಂಡು ಪರಕೀಯ ಪರಾಗಣ (ಕ್ರಾಸ್ ಪಾಲಿನೇಶನ್ ) ನಡೆಸಿದರು.ಹೀಗೆ ಸಂಕರಿಸಿ ದೊರೆತ ಸಂತತಿಯನ್ನು F1 (ಒಂದನೇ ಫಿಲಿಯಲ್) ಸಂತತಿ ಎಂದು ಕರೆದರು. F1 ಸಂತತಿಯನ್ನು ಸ್ವಪರಾಗಣ (ಸೆಲ್ಪ್ ಪಾಲಿನೇಶನ್) ನಡೆಸಿ F2 ಸಂತತಿಯನ್ನು ಹಾಗು F2 ಸ್ವಪರಾಗಣದಿಂದ F3 ಸಂತತಿ ಪಡೆದರು. ಪ್ರತಿ ಸಂತತಿಯಲ್ಲೂ ಗಮನದಲ್ಲಿರಿಸಿದ ಗುಣಲಕ್ಷಣ (ಉದಾ : ಎತ್ತರ-ಉದ್ದ ಅಥವ ಗಿಡ್ಡ)ದ ಬಗ್ಗೆ ನಿಖರ ಲೆಕ್ಕೆವನ್ನು ಇರಿಸಿಕೊಂಡರು. ಈ ರೀತಿಯ ಪ್ರಯೋಗಗಳನ್ನು ಏಳು ವಿವಿಧ ಗುಣಗಳಿಗೆ ಪ್ರತ್ಯೇಕವಾಗಿ ನಡೆಸಿದರು. ಈ ಎಲ್ಲವು ಏಕ ಸಂಕರ ಮೊನೊಹೈಬ್ರಿಡ್ ಪ್ರಯೋಗಗಳು. ಅವರಿಗೆ ಈ ಎಲ್ಲ ಪ್ರಯೋಗಗಳಲ್ಲೂ ದೊರೆತ ಫಲಿತಾಂಶನ್ ಒಂದೇ ಆಗಿತ್ತು. ಈ ಆಧಾರದಲ್ಲಿ ಆನುವಂಶೀಯತೆ ಪ್ರಥಮ ನಿಯಮವಾಗಿ ಪ್ರತ್ಯೇಕತೆಯ ನಿಯಮ (ಲಾ ಆಫ್ ಸೆಗ್ರಿಗೇಷನ್)ವನ್ನು ಪ್ರಸ್ತುತಪಡಿಸಿದರು.
ಮೆಂಡೆಲರು ಬಟಾಣಿ ಗಿಡದ ಎತ್ತರವನ್ನು ಗಮನದಲ್ಲಿರಿಸಿಕೊಂಡು ನಡೆಸಿದ ಪ್ರಯೋಗ ಹೀಗಿದೆ :- ಉದ್ದನೆಯ ಹಾಗು ಗಿಡ್ಡನೆಯ ಶುದ್ಧ ಗಿಡಗಳನ್ನು ಅವರು ಆರಿಸಿಕೊಂಡು ಅವುಗಳನ್ನು ಸಂಕರಿಸಿ F1 ಸಂತತಿಯನ್ನು ಪಡೆದರು. ಅವೆಲ್ಲವೂ ಉದ್ದನೆಯ ಗಿಡಗಳೇ ಆಗಿದ್ದವು. ಮೆಂಡಲರು ಗಲಿಬಿಲಿಗೊಳ್ಳಲಿಲ್ಲ. F1 ಸಂತತಿಯ ಸ್ವಪರಾಗಣ ( F1 X F1) ನಡೆಸಿ, F2 ಸಂತತಿ ಪಡೆದರು. F2 ಸಂತತಿಯಲ್ಲಿ ಗಿಡ್ಡನೆಯ ಗಿಡಗಳು ಮತ್ತೆ ಕಾಣಿಸಿಕೊಂಡವು. ಅದೃಶ್ಯವಾಗಿದ್ದ ಆ ಗುಣ ಪುನ್ಃ ಕಾಣಿಸಿಕೊಂಡಿತು. ಇದರಿಂದಾಗಿ ಒಂದು ಜೊತೆ ಲಕ್ಷಣಾಂಶಗಳಲ್ಲಿ ಒಂದು ಪ್ರಬಲ (ಡಾಮಿನೆಂಟ್) ಇನ್ನೊಂದು ದುರ್ಬಲ (ರಿಸೆಸೀವ್) ಘಟಕಗಳಿವೆ ಎಂಬ ಅಂಶ ಬೆಳಕಿಗೆ ಬಂತು. F2 ಸಂತತಿಯಲ್ಲಿ ಉದ್ದ : ಗಿಡ್ಡ ಗಿಡಗಳ ನಿಷ್ಫತ್ತಿ 3:1 ಆಗಿತ್ತು. ಉದ್ದಗಿಡಗಳೆಲ್ಲವೊ ಶುದ್ಧವಾದುವುಗಳೇ ಎಂಬುದನ್ನು ನೋಡಲು F2 ಸ್ವಪರಾಗಣ (F2 X F2) ದಿಂದ F3 ಸಂತತಿ ಪಡೆದರು. ಇದರಲ್ಲಿ 1\3 ಪಾಲು ಉದ್ದ ಗಿಡಗಳಷ್ಟೇ ಉದ್ದ ಗಿಡಗಳಿಗೆ ಜನ್ಮವಿತ್ತವು. ಉಳಿದ 2\3 ಉದ್ದ ಗಿಡಗಳು ಪುನ್ಃ 3:1 ಉದ್ದನೇ ಮತ್ತು ಗಿಡ್ಡ ಗಿಡಗಳನ್ನುಂಟು ಮಾಡಿದವು. ಮೆಂಡೆಲರು ಹೀಗೆ ಏಳು ಬೇರೆ ಬೇರೆ ಗುಣಗಳನ್ನು ಲಕ್ಷ್ಯದಲ್ಲಿರಿಸಿ ನಡೆಸಿದ ಎಲ್ಲ ಫಲಿತಾಂಶಗಳು ಒಂದೇ ಆಗಿದ್ದವು F1 ಸಂತತಿಯಲ್ಲಿ ಪ್ರಬಲ ಗುಣದ ಅಭಿವ್ಯಕ್ತಿ, F2 ಸಂತತಿಯಲ್ಲಿ 3:1ರ ನಿಷ್ಪತ್ತಿ. ಈ ಫಲಿತಾಂಶವನ್ನು ಸರಿಯಾದ ತರ್ಕಕ್ಕೆ ಒಳಪಡಿಸಿ ಸಿದ್ಧಾಂತ ಮಂಡಿಸಿದ್ದು ಮೆಂಡೆಲರ ಮೇಧಾಶಕ್ತಗೆ ಉದಾಹರಣೆ.
ಮೆಂಡೆಲರ ವಿವರಣೆ : ಯಾವುದೇ ಜೀವಿಯಲ್ಲಿ ಪ್ರತಿಯೊಂದು ಗುಣಕ್ಕೂ ಎರಡು ಘಟಕ ಅಥವಾ ಅಂಶ (ಫ್ಯಾಕ್ಟರ್)ಗಳಿರುತ್ತವೆ. (ಈಗ ಇವನ್ನು ಜೀನ್ ಎನ್ನುತ್ತೇವೆ). ಶುದ್ದ ಉದ್ದನೆಯ ಗಿಡವು T T ಆದರೆ ಶುದ್ದ ಗಿಡ್ಡನೆಯ ಗಿಡವು t t ಆಗಿರುವುದು. T ಅಂಶವಿದ್ದಾಗ t ವ್ಯಕ್ತವಾಗದು. ಯಾಕೆಂದರೆ Tಯು ದುರ್ಬಲ ಅಂಶ (F1 ನಲ್ಲಿ ಗಿಡ್ಡ ಗಿಡ ಕಾಣಿಸದುದ ರಿಂದ) ಲೈಂಗಿಕ ಸಂತಾನೋತ್ಪಾದನೆಯಲ್ಲಿ ಲಿಂಗಾಣು (ಗ್ಯಾಮೀಟ್)ಗಳು ಉತ್ಪತ್ತಿಯಾಗುವುವು. ಆಗ ಒಂದು ಗುಣದ ಎರಡು ಅಂಶಗಳು ಪ್ರತ್ಯೇಕಯಾಗುವುವು. ಲಿಂಗಾಣುಗಳು ಸೇರಿ ಮುಂದಿನ ಸಂತತಿಯಾಗುವುದು. ಜನಕ ಗಿಡಗಳ T ಮತ್ತು t ಲಿಂಗಾಣುಗಳು ಸೇರಿ F1 ಸಂತತಿಯು T t ಆಗುವುದು. ಇದು ಮಿಶ್ರುತಳಿ. ಇದರಲ್ಲಿ Tಯು ಇರುವುದರಿಂದ, tಯು ವ್ಯಕ್ತವಾಗದು. T t X T t (F1 X F1) ನಡೆಸಿದಾಗ F2 ವಿನಲ್ಲಿ ಉದ್ದ:ಗಿಡ್ಡ ಗಿಡಗಳು 3:1 ನಿಷ್ಟತ್ತಿಯಲ್ಲಿ ಕಂಡುಬರುವುವು.
ಇದು ನೋಟ ರೂಪದ ನಿಷ್ಟತ್ತಿ (ಫಿನೊಟೈಪಿಕ್ ರೇಶ್ಯೊ). ಆದರೆ ಇದರಲ್ಲಿ ಉದ್ದನೇ ಗಿಡಗಳೆಲ್ಲಾ ಶುದ್ಧ ಉದ್ದ ಗಿಡಗಳಲ್ಲವೆಂದು F2 X F2 ನೆಡೆಸಿ ಸಿಕ್ಕಿದ F3 ಸಂತತಿಯಲ್ಲಿ ಮೆಂಡೆಲರಿಗೆ ಗೊತ್ತಾಯಿತು. (F2 ವಿನ ಉದ್ದನೇ ಗಿಡಗಳ ಪೈಕಿ 2\3 ಪುನ್ಃ F3 ಯಲ್ಲಿ ಉದ್ದನೇ ಗಿಡ್ಡೆನೇ ಗಿಡಗಳನ್ನು 3:1ರ ನಿಷ್ಟತ್ತಿಯಲ್ಲಿ ಉತ್ಪಾದಿಸಿದುವು.) ಆದುದರಿಂದ F2 ಸಂತತಿಯ ಜೀನ್ ರೂಪ ಜೀನೋಟೈಪ್ 1T T : 2 T t : 1 t t ಎಂಬ ನಿರ್ಧರಕ್ಕೆ ಬಂದರು. T T ಮತ್ತು t t ಗಳು ಸಮಲಕ್ಷಣಿ (ಹೊಮೊಜೈಗಸ್)ಗಳಾದರೆ , T t ಯು ಅಸಮಲಕ್ಷಣಿ (ಹೆಟಿರೊಜೈಗಸ್). F2 ವಿನಲ್ಲಿ 3:1 ನಿಷ್ಟತ್ತಿ ದೊರೆಯಬೇಕಾದರೆ, F2 ವಿನಲ್ಲಿ ಸೇರಿದ T ಮತ್ತು t ಅಂಶಗಳು ಪುನ್ಃ ಪ್ರತ್ಯೇಕವಾಗಲೇಬೇಕು ಎಂಬ ತರ್ಕಕ್ಕೆ ಮೆಂಡಲರು ಬಂದರು. ಎದರ ಪರಿಣಾಮವೇ ಅವರು ನಿರೂಪಿಸಿದ ಆನುವಂಶೀಯತೆಯ ಪ್ರಥಮ ನಿಯಮ ಪ್ರತ್ಯೇಕತೆಯ ನಿಯಮ.
"ಒಂದು ಗುಣದ ಎರಡು ವಿರುದ್ದ ಅಂಶ (ಅಲೀಲ್)ಗಳನ್ನು ಒಂದು ಜೀವಿಗೆ ತಂದಾಗ(ಮಿಶ್ರತಳಿ ಅಥವಾ ಸಂಕರ ಉಂಟುಮಾಡಿದಾಗ) ಅವು(ಅಂಶಗಳು) ಶಾಶ್ವತವಾಗಿ ಮಿಶ್ರಗೊಳ್ಳುವುದಿಲ್ಲ; ಬದಲಾಗಿ ಲಿಂಗಾಣುಗಳು ಉಂಟಾಗುವಾಗ, ಅವೆರಡು ಪ್ರತ್ಯೇಕವಾಗಿ ಬೇರೆ ಬೇರೆ ಲಿಂಗಾಣುಗಳನ್ನು ಸೇರುವುವು; ಪ್ರತಿಯೊಂದು ಲಿಂಗಾಣುವೂ ಪ್ರತಿಯೊಂದು ಗುಣಕ್ಕೂ ಒಂದೇ ಅಂಶ ಹೊಂದಿದ್ದು ಶುದ್ದವಾಗಿರುವುದು."
ದ್ವಿಸಂಕರೀಕರಣ ಮತ್ತು ಸ್ವತಂತ್ರ ವಿಂಗಡಣೆ ನಿಯಮ
[ಬದಲಾಯಿಸಿ]ಮುಂದಿನ ಹಂತದ ಪ್ರಯೋಗಗಳಲ್ಲಿ ಮೆಂಡೆಲರು ಎರಡು ಜೊತೆ ಗುಣಗಳನ್ನು ಗುರುತಿಸಿಕೊಂಡು ಇವು ಹೇಗೆ ಪ್ರತ್ಯೇಕಗೊಳ್ಳುತ್ತವೆ ಎಂಬ ಬಗ್ಗೆ ಅಭ್ಯಸಿಸಿದರು. ಈ ಪ್ರಯೋಗಗಳನ್ನು ದ್ವಿಸಂಕರ ಪ್ರಯೋಗಗಳು (ಡೈಹೈಬ್ರಿಡ್ ಪ್ರಯೋಗಗಳು) ಎನ್ನುವರು. ಇಲ್ಲಿಯೂ F1 ಸಂತತಿಯಲ್ಲಿ ಎರಡು ಗುಣಗಳ ಪ್ರಬಲ ಲಕ್ಷಣಾಂಶಗಳಷ್ಟೇ ಕಂಡವು. F2 ಸಂತತಿಯಲ್ಲಿ ಎರಡೂ ಜನಕ ಜೀವಿಯ ಗುಣಗಳಳ್ಳ ಗಿಡಗಳು ಮಾತ್ರವಲ್ಲಿ, ಹೊಸ ಗುಣ ಸಂಯೋಗದ ಮತ್ತೆರಡು ರೀತಿಯ ಗಿಡಗಳು ಕಂಡುಬಂದುವು. F2 ನಿಷ್ಟತ್ತಿ 9:3:3:1 ಆಗಿತ್ತು. ಇದು ಎರಡು ಏಕ ಸಂಕರ ನಿಷ್ಟತ್ತಿಗಳ ಗುಣಲಬ್ದವೇ ಆಗಿದೆ. (3:1) (3:1) =9:3:3:1 ಇದರಿಂದಾಗಿ ಅವರು ಆನುವಂಶೀಯತೆಯ ಎರಡನೇ ನಿಯಮವನ್ನು ರೂಪಿಸುವಂತಾಯಿತು. -"ಎರಡು (ಅಧವಾ ಅದಕ್ಕಿಂತ ಹೆಚ್ಚು) ಜೊತೆ ವಿರುದ್ದ ಅಂಶಗಳನ್ನು (ಅಲೀಲ್ ಗಳನ್ನು) ಒಂದು ಮಿಶ್ರತಳಿಯಲ್ಲಿ ಸಂಕರಿಸಿದರೆ ಲಿಂಗಾಣು ಉತ್ಪಾದನೆ ಸಮಯದಲ್ಲಿ ಯಾವುದೇ ಒಂದು ಜೊತೆಯ ಬೇರ್ಪಡುವಿಕೆ ಇನ್ನುಳಿದ ಜೊತೆ ಅಥವಾ ಜೊತೆಗಳ ಬೇರ್ಪಡುವಿಕೆಯಿಂದ ಸ್ವತಂತ್ರ ದಪ್ಪಗಿನ ಅಕ್ಷರವಾಗಿರುತ್ತದೆ." ಮುಂದೆ ಮಿಯೊಸಿಸ್ ಕೋಶ ವಿಭಜನೆಯ ಸಂಶೋಧನೆಯಾಯಿತು. ಮೆಂಡೆಲರ ಎರಡೆನೇ ನಿಯಮ ಇಲ್ಲಿಯ ಕ್ರೊಮೋಸೋಮುಗಳ ಬೇರ್ಪಡುವಿಕೆಗೆ ಅಚ್ಚುಕಟ್ಟಾಗಿಸರಿಹೊಂದಿತು. [ಕ್ರೊಮೋಸೋಮ್ ಜೀನ್ ಗಳ ಬಗೆಗೆ ಹಾಗೂ ಕೋಶವಿಭಜನೆಯ ಬಗೆಗೆ ಎಳ್ಳಷ್ಟೂ ಪರಿಜ್ಞಾನವಿಲ್ಲದ ಕಾಲದಲ್ಲಿ, ಬರಿಯ ಸಂಕರೀಕರಣ ಪ್ರಯೋಗ ಹಾಗೂ ಸಂಖ್ಯಾಶಾಸ್ತ್ರೀಯ ಲೆಕ್ಕಾಚಾರಗಳನ್ನಿಟ್ಟುಕೊಂಡು ಆನುವಂಶಿಕತೆಯ ನಿಯಮಗಳನ್ನು ಸಾರಿದ ಮೆಂಡೆಲರ ಮೇಧಾಶಕ್ತಿ ಅದ್ಬುತವಾದುದು. ಅವರ ಎರಡನೇ ನಿಯಮ ಎಲ್ಲಾ ಸಂದರ್ಭಗಳಲ್ಲೂ ಸರಿಯಲ್ಲವೆಂದು ಈಗ ಗೊತ್ತಾದರೂ ಬೇರೆ ಬೇರೆ ಕ್ರೊಮೋಸೋಮ್ ಗಳಿಲ್ಲಿರುವ ಜೀನ್ ಗಳು ಅವರು ಮಂಡಿಸಿದ ನಿಯಮದಂತೆಯೇ ಸ್ವತಂತ್ರ ವಿಂಗಡನೆಯಾಗುವುವು. ಮೆಂಡೆಲರ ಅದೃಷ್ಟದಿಂದ ಅವರು ದ್ವಿಸಂಕರ ಪ್ರಯೋಗಗಳಿಗೆ ಆರಿಸಿದ ಗುಣಲಕ್ಷಣಗಳ ಅಂಶಗಳು ಬೇರೆ ಬೇರೆ ಜೊತೆ ಕ್ರೊಮೋಸೋಮ್ ಗಳಲ್ಲಿದ್ದವು.
ಮೆಂಡೆಲರ ಪ್ರಯೋಗಗಳು ಚಾರಿತ್ರಿಕ ಮಹತ್ವದವು. ಮೆಂಡೆಲರ ಹೆಸರು ಜೀವ ವಿಜ್ಞಾನದಲ್ಲಿ ಎಂದೆಂದೂ ಉಳಿಯುವಂತಹುದು. [೨]
- ↑ www.indiana.edu/~p1013447/dictionary/mendel.htm
- ↑ https://explorable.com/law-of-segregation