ಸದಸ್ಯ:Bhumika D Reddy
ಜನನ ಮತ್ತು ಕುಟುಂಬ
[ಬದಲಾಯಿಸಿ]ಭೂಮಿಕ.ಡಿ.ರೆಡ್ಡಿ ಎಂಬುದು ನನ್ನ ಹೆಸರು.ನಾನು ಬೆಂಗಳೂರಿನಲ್ಲಿರುವ ಆದಿಗೊಂಡನಹಳ್ಳಿ ಯಲ್ಲಿ, ೧೬/೦೭/೨೦೦೦ರಲ್ಲಿ ಜನಿಸಿದೆ. ನನ್ನ ಊರು ಬಹಳ ಸುಂದರವಾದದ್ದು. ನನ್ನ ಊರಿನ ಪಕ್ಕ ದೊಡ್ಡ ಕೆರೆ ಇದೆ. ನನ್ನ ತಂದೆಯ ಹೆಸರು ದಶರಥ ರೆಡ್ಡಿ. ನನ್ನ ತಾಯಿಯ ಹೆಸರು ಜ್ಯೊತಿ.ಎಸ್.ರೆಡ್ಡಿ. ನನ್ನ ಒಡಹುಟ್ಟಿದ ಅಣ್ಣನ ಹೆಸರು ಮನು.ಡಿ.ರೆಡ್ಡಿ.ನನ್ನ ಅಪ್ಪ ವ್ಯವಸಾಯಗಾರರಾಗಿದ್ದಾರೆ ಮತ್ತು ಅಮ್ಮ ಗೃಹಿಣಿಯಾಗಿದ್ದಾರೆ. ನನ್ನ ಸಹೊದರ ವೈದೆಹಿ ವೈದ್ಯಕಿಯ ವಿದ್ಯಾ ಕೇಂದ್ರದಲ್ಲಿ ಶಿಕ್ಷಣವನ್ನು ಅನುಸರಿಸುತ್ತಿದ್ದಾನೆ. ನಮ್ಮ ಮನೆಯಲ್ಲಿ ಒಂದು ಸಾಕು ನಾಯಿ ಇದೆ, ಅಧರ ಹೆಸರು ಚಿಕು, ಅದು ಜಪಾನಿನ ಅಕಿತ ಎಂಬುವ ಜಾತಿ.
ವಿದ್ಯಾಭ್ಯಾಸ ಮತ್ತು ಶಾಲಾ ಪ್ರವಾಸಗಳು
[ಬದಲಾಯಿಸಿ]ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಸೆಂಟ್ ಡೊಮಿನಿಕ್ ಶಾಲೆಯಲ್ಲಿ ಮುಗಿಸಿದೆ ಮತ್ತು ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಶಾರದಾ ವಸತಿ ಶಾಲೆಯಲ್ಲಿ ಮುಗಿಸಿದೆ. ನಾನು ಸೆಂಟ್ ಡೊಮಿನಿಕ್ ಶಾಲೆಯಿಂದ ಡೆಲ್ಲಿ, ಆಗ್ರಾ, ಜೈಪುರಕ್ಕೆ ಪ್ರವಾಸ ಹೋಗಿದ್ದೆ. ಈ ಪ್ರವಸದಲ್ಲಿ ನನು ರೆಡ್ ಪೊರ್ಟ್,ಇಂಡಿಯಾ ಗೇಟ್, ತಾಜ್ ಮಹಲ್[೧],ಆಗರ ಪೊರ್ಟ್,ಹವಾ ಮಹಲ್[೨] ಮುಂತಾದ ಪ್ರಮುಕ ಜಾಗಗಳಿಗೆ ಹೊಗೆದ್ದೆ. ನಾನು ಓದಿದ ಶಾರದಾವಸತಿಶಾಲೆ ಮಂಗಳೂರಿನ ಹತ್ತಿರ ಇರುವ ಉಡುಪಿಯಲ್ಲಿ ಇದೆ. ನಮ್ಮ ಶಾಳೆ ಬಹಳ ಹೆಸರು ಪಡೆದಿರುವ ಶಾಲೆ. ನಮ್ಮ ಶಾಲೆಯ ಸ್ಥಾಪಕರ ಹೆಸರು ಟಿ.ಎಂ.ಎ ಪೈ. ನಮ್ಮ ಶಿಕ್ಷಕರು ತೊಂದರೆಗಳು ಬಂದರೆ ಬೆಂಬಲ ನೀಡುತ್ತಿದ್ದರು ಮತ್ತು ಓದುವುದಕ್ಕೆ ಪ್ರೋತ್ಸಾಹಿಸುತ್ತಿದ್ದರು. ನಮ್ಮ ಶಾಲೆಯಲ್ಲಿ ಊಟ ಮತ್ತು ತಿಂಡಿ ಬಹಳ ಚೆನ್ನಾಗಿರುತ್ತಿತ್ತು. ಈ ಶಾಲೆಯಿಂದ ನಾವು ಬಿಜಾಪುರಕ್ಕೆ ಪ್ರವಾಸ ಹೋಗಿದ್ದೆವು.ಅಲ್ಲಿ ನನಗೆ ಬಾದಾಮಿ ಗುಹೆಗಳು ಬಹಳ ಆಕರ್ಷಕವಾಗಿ ಕಾಣಿಸಿದವು.
ಕ್ರೀಡಾ ಚಟುವಟಿಕೆಗಳು
[ಬದಲಾಯಿಸಿ]ನಾನು ಮತ್ತು ನನ್ನ ಸಹಪಾಠಿಗಳು ಶಾಲೆಯಿಂದ ಅಖಿಲ ಭಾರತ ಐ.ಪಿ.ಎಸ್.ಸಿ ಫುಟ್ಬಾಲ್ ಪಂದ್ಯಾವಳಿಗೆ ೨೦೧೫ರಲ್ಲಿ ಬೆಳಗಾವಿಗೆ ಹೋಗಿದ್ದೆವು. ನಮ್ಮ ಶಾಲೆಗೆ ಎರಡನೆಯ ಬಹುಮಾನ ಸಿಕ್ಕಿತು. ಆ ಶಾಲೆಯಿಂದ ನನಗೆ ತುಂಬಾ ಒಳ್ಳೆಯ ಗೆಳತಿಯರು ಸಿಕ್ಕಿದರು. ಆ ಶಾಲೆಯು ನನಗೆ ಹೊರಗಿನ ಪ್ರಪಂಚ ಹೇಗಿರುತ್ತದೆ ಎಂದು ತಿಳಿಸಿಕೊಟ್ಟಿತ್ತು ,ಆದ್ದರಿಂದ ನನಗೆ ಹೊರಗಿನ ಪ್ರಪಂಚದ ಬಗ್ಗೆ ಒಳ್ಳೆಯ ತಿಳುವಳಿಕೆ ಬಂದಿತ್ತು. ಇದರಿಂದಾಗಿ ನಾನು ಹೇಗೆ ಇರಬೇಕೆಂದು ತಿಳಿದುಕೊಂಡೆ.ರಜೆಗೆ ಮನೆಗೆ ಬಂದು ಮತ್ತೆ ಶಾಲೆಗೆ ಹೋಗುವಾಗ ನನ್ನ ಅಮ್ಮ ನನಗೆ ಸಿಹಿ ಮತ್ತು ಖಾರ ತಿಂಡಿಗಳು ಮಾಡಿ ಕೊಡುತ್ತಿದ್ದರು. ನನ್ನ ಸ್ನೇಹಿತರಿಗೆ ನನ್ನ ಅಮ್ಮ ಮಾಡುವ ಸಿಹಿ ಮತ್ತು ಖಾರ ತಿಂಡಿ ಎಂದರೆ ಬಹಳ ಇಷ್ಟ.
ಹವ್ಯಾಸಗಳು
[ಬದಲಾಯಿಸಿ]ನನ್ನ ಹವ್ಯಾಸಗಳೆಂದರೆ ಚಿತ್ರಕಲೆ, ಹಾಡುಗಾರಿಕೆ ಮತ್ತು ಪುಸ್ತಕಗಳನ್ನು ಓದುವುದು. ನಾನು ಬಹಳ ಕಾದಂಬರಿಗಳನ್ನು ಓದಿದ್ದೇನೆ. ಅದರಲ್ಲಿ ಸುಧಾ ಮೂರ್ತಿಯವರ ಕಾದಂಬರಿಗಳೆಂದರೆ ಬಹಳ ಇಷ್ಟ. ಚಿತ್ರಕಲೆಯಲ್ಲಿ ಬಹಳ ವಿಧಗಳಿವೆ,ಅದರಲ್ಲಿ ನಾನು ಮೈಸೂರು ಮತ್ತು ತಂಜಾವೂರು ಚಿತ್ರಕಲೆಯನ್ನು ಮಾಡುತ್ತೇನೆ. ನನ್ನ ಆದರ್ಶ ವ್ಯಕ್ತಿ ಸ್ವಾಮಿ ವಿವೇಕಾನಂದ ರವರು ಮತ್ತು ಕುವೆಂಪುರವರು[೩]. ನಾನು ಪ್ರಕೃತಿಯ ಜೊತೆಯಲ್ಲಿ ಇರುವಾಗ ತುಂಬಾ ಹಿತವಾಗಿರುತ್ತದೆ. ಗಿಡಗಳನ್ನು ಬೆಳೆಸುವುದು ಎಂದರೆ ನನಗೆ ಅಚ್ಚುಮೆಚ್ಚು. ನಮ್ಮ ಮನೆಯ ಹತ್ತಿರ ಇರುವ ಜಾಗದಲ್ಲಿ ನಾನು ಮತ್ತು ನನ್ನ ಅಣ್ಣ ಬಗೆಬಗೆಯ ಹೂವು ಗಿಡಗಳನ್ನು ಮತ್ತು ಮನೆಗೆ ಬೇಕಾಗುವ ತರಕಾರಿ, ಸೊಪ್ಪುಗಳನ್ನು ಬೆಳೆಸುತ್ತೇವೆ. ನಾನು ಯಾವಾಗಲೂ ತುಂಬಾ ಚಟುವಟಿಕೆಯಿಂದ ಇರುತ್ತೇನೆ. ಕಾಲಹರಣ ಮಾಡುವ ವ್ಯಕ್ತಿ ನಾನಲ್ಲ. ಎಲ್ಲರೊಂದಿಗೂ ಖುಷಿಖುಷಿಯಾಗಿ ಮಾತನಾಡುತ್ತ ಸಂತೋಷವಾಗಿ ನನ್ನ ಜೀವನವನ್ನು ಸಾಗಿಸುತ್ತಿದ್ದೇನೆ.