ಸದಸ್ಯ:Bhavya gopal

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭವ್ಯ

ಕುಟುಂಬ[ಬದಲಾಯಿಸಿ]

ನನ್ನ ಹೆಸರು ಭವ್ಯ. ನನ ತಂದೆ, ತಾಯಿ ಉಡುಪಿ ಜಿಲ್ಲೆಗೆ ಸೇರಿದ್ದವರು. ಅವರು ಮದುವೆಯಾದ ಮೇಲೆ ಬೆಂಗಳೂರಿಗೆ ಬಂದರು.ನಮ್ಮ ತಂದೆಯ ಕುಟುಂಬ ದೆಹಲಿಯಿಂದ ೧೯೫೬ ಹೊಸ ಕರ್ನಾಟಕ ರಾಜ್ಯ ಸ್ಥಾಪಿಸಿದಾಗ ಇಲ್ಲಿಗೆ ಬಂದರು. ಇಲ್ಲಿನ ಕೆ.ಇ.ಬಿಯಲ್ಲಿ ನನ್ನ ಅಜ್ಜ ಕೆಲಸಕ್ಕೆ ಸೆರಿದ್ದರು.ನನ್ನ ತಂದೆ ಹಾಗು ತಾಯಿಯು ಬ್ರಾಹ್ಮಣ ವರ್ಗಕ್ಕೆ ಸೆರಿದ್ದರಿಂದ ಅವರು ಸಾಂಪ್ರದಾಯಿಕ ಕುಟುಂಬ ಸಾಗಿಸುತ್ತದ್ದರು. ಮದುವೆಯಾದ ಎರಡನೆ ವರ್ಷ್ದಲ್ಲಿ ನಾನು ಹುಟ್ಟಿದೆ. ನಾನು ನಮ್ಮ ತಂದೆ ತಾಯಿಗೆ ಒಬ್ಬಳೆ ಮಗಳು. ಆದ್ದರಿಂದ ನನ್ನನು ಅತಿ ಪ್ರಿತಿಯಿಂದ ಬೆಳಸಿದರು. ಚಿಕ್ಕಂದಿನಿಂದಲೆ ನನ್ನ ತಾಯಿ ಒಳ್ಳಯ ಗುಣಗಳು ಮತ್ತು ಮೌಲ್ಯಗಳನ್ನು ಹೆಳಿಕೊಟ್ಟು ಬೆಳಸಿದ್ದರು. ನನ್ನ ತಂದೆ ಕಾಲೆಜು ಪ್ರಾದ್ಯಪಕರಾಗಿ ಪಕ್ಕದ್ದಿನ ವಿಜಯಾ ಕಾಲೆಜಿನಲ್ಲಿ ಕೆಲಸ ಮಾಡುತ್ತಿದ್ದರು. ಪ್ರತಿ ದಿನ ಸಂಜೆಯ ಹೊತ್ತಿಗೆ ಮನೆಯಲ್ಲಿ ನಾನು ತಂದೆಯೊಂದಿಗೆ ಸಮಾಚಾರ ಪತ್ರಿಕೆ 'ದೀ ಹಿಂದು'ಯನ್ನು ಓದುತ್ತ ವಿಶ್ವದಾದ್ಯಂತ ನಡೆಯುವ ಘಟನೇಗಳನ್ನು ಅತಿ ಸುಲಭವಾಗಿ ತಿಳಿಸುತ್ತಿದ್ದರು.

ಶಿಕ್ಷಣ[ಬದಲಾಯಿಸಿ]

ನನಗೆ ನಾಲ್ಕು ವರ್ಷ್ ತುಂಬಿದೊಡನೆಯೆ ನನ್ನನು ಸ್ಕೂಲಿಗೆ ಸೇರಿಸಿದರು.ನಾನು ನನ್ನ ಗುರುಗಳ ಬಳಿ ಒಳ್ಳೆಯ ಹುಡುಗಿಯಂದು ಹೆಸರುಗಳಿಸಿದೆ. ನಾನು ಆರನೇ ತರಗತಿಯಲ್ಲಿ ಇರುವಾಗ ನನ್ನನು ಪೂನೆಯ ಶಾಲೆಯೊಂದಲ್ಲಿ ಸೇರಿಸಿದ್ದರು. ಪೂನೆಯಲ್ಲಿ ನಾನು ಮೊದಲಿನಬಾರಿಗೆ ಹಿಂದಿ ಭಾಷೆಯನ್ನು ಕಲಿಯಲು ಪ್ರಾರಂಭಿಸಿದೆ. ಮೊದಲು ಕಷ್ಟವಿದ್ದರು ಸ್ವಲ್ಪ ಸಮಯದಲ್ಲೆ ಸ್ಪಷ್ಟವಾಗಿ ಮಾತನಾಡಿಸಲು ಕಲಿತೆ. ಅಲ್ಲಿನ ಶಿಕ್ಷಕರೊಬ್ಬರಾದ ನನ್ನಲ್ಲಿ ಜೀವನದಲ್ಲಿ ಮುಂದುವರೆಯಲು ಪ್ರೆರಣೆ ನೀಡಿದರು. ಅವರು ನನಗೆ ಇಂಗ್ಲಿಷ್ ಹೇಳಿಕೊಡುತ್ತಿದ್ದರು. ಜಾನ್ ಕೀಟ್ಸ್ ನ ಪದ್ಯಗಳಂದರೆ ಅವರಿಗೆ ತುಂಬ ಹತ್ತಿರವಾಗಿತ್ತು. ಪದ್ಯಗಳನ್ನು ಓದುವ ಬಗೆ ಹಾಗು ಸ್ವತಃ ಬರೆಯಲು ನನಗೆ ಪರಿಚಯಿಸಿದರು. ಹಲವಾರು ವಿಷಯ ಮುಖ್ಯವಾಗಿ ಇತಿಹಾಸದಲ್ಲಿ ಆಸಕ್ತಿ ಮೂಡಿಸಿದವರು ಅವರೆ. ಆ ಆಸಕ್ತಿಯಿಂದ ನಾನು ಹತ್ತನೇ ತರಗತಿಯಾದ ಮೇಲೆ ನಾನು ಸಾಮಾಜಿಕ ಶಾಸ್ತ್ರ ತೆಗೆದುಕೊಂಡೆ. ಅಲ್ಲಿನಿಂದ ಬೆಂಗಳೂರಿನಲ್ಲಿ ಬಿ.ಎ ಓದುತ್ತಿದ್ದೆನೆ.

ಹವ್ಯಾಸ[ಬದಲಾಯಿಸಿ]

ಹಾಗೆಯೆ ಬೆಳೆಯುತ್ತಾ ನನಗೆ ಪುಸ್ತಕ ಓದುವುದರಲ್ಲಿ ಆಸಕ್ತಿ ಉಂಟಾಯಿತು. ಸಣ್ಣ ಪುಸ್ತಕಗಳಿಂದ ಹಿಡಿದು ನಾವೆಲ್ಸ್ ಓದುವುದೆಂದರೆ ಬಹಳ ಸಂತೋಷ. ನನಗೆ ಇಷ್ಟವಾದ ಲೆಖಕರು ಜೇನ್ ಆಸ್ಟೇನ್, ಯೂ. ಆರ್. ಅನಂತಮೂರ್ತಿ, ನರಸಿಂಹಸ್ವಾಮಿ, ಪೂರ್ಣಚಂದ್ರ ತೇಜಸ್ವಿ, ಮುಂತಾದವರು. ನನ್ನ ಯೋಚನೆಗಳಿಗೆ ಇವು ಹೊಸ ತಿರುವನ್ನು ಕೊಟ್ಟಿತು. ನನಗು ಇವರಂತೆಯೇ ಪ್ರಮುಖ ಲೆಖಕಿಯಾಗಬೇಕು ಎಂಬ ಆಸೆ ಮೂಡಿತು. ನಾನು ಈ ಮೂಲಕ ಸಮಾಜದ ಬಗ್ಗೆ ಹೆಚ್ಚು ವಿಷಯ ತಳಿದುಕೋಂಡು ಸಮಾಜ ಸೇವೆ ಮಾಡಲು ಇಷ್ಟಪಡುತ್ತೇನೆ. ನಮ್ಮ ದೇಶ ಹಾಗು ಸಮಾಜವನ್ನು ನಾವು ಸರಿಪಡಿಸದಿದ್ದರೆ ನಾವು ಬೇರೆಯವರಿಂದ ಅಪೇಕ್ಷಿಸಲು ಸಾದ್ಯವಿಲ್ಲ. ನಾನು ಈ ರೀತಿಯಲ್ಲಿ ನಮ್ಮ ತಂದೆ ತಾಯಿಯ ಕನಸನ್ನು ಪೂರಿಸುತ್ತೆನೆ.

This user is a member of WikiProject Education in India

ಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Bhavya gopal