ವಿಷಯಕ್ಕೆ ಹೋಗು

ಸದಸ್ಯ:BASAVARAJE URS.L/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶೈಕ್ಷಣಿಕ ಸಂಶೋಧನೆ

 ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪಠ್ಯಕ್ರಮ, ಪಠ್ಯವಸ್ತು, ಪಠ್ಯಪುಸ್ತಕ  ಮಾರ್ಗದರ್ಶನ, ಆಡಳಿತ, ಮೌಲ್ಯಮಾಪನ ಮತ್ತಿತರ ಪರಿಕಲ್ಪನೆಗಳಿಗೆ ಸಮಸ್ಯೆಗಳಿಗೆ  ಸಂಬಂಧಿಸಿದಂತೆ  ವೈಜ್ಞಾನಿಕವಾಗಿ ಕೈಗೊಳ್ಳಬಹುದಾದ ಯಾವುದೇ ಸಂಶೋಧನೆಯನ್ನು  ಶೈಕ್ಷಣಿಕ ಸಂಶೋಧನೆ ಎನ್ನಬಹುದು.
 ಶೈಕ್ಷಣಿಕ  ಸಮಸ್ಯೆಗಳ ಪರಿಹಾರಕ್ಕೆ ಹುಡುಕುವ ಅನ್ವೇಷಣಾ  ಶಾಸ್ತ್ರವೇ  ಶೈಕ್ಷಣಿಕ ಸಂಶೋಧನಾ ವಿಧಾನ.
 ಶೈಕ್ಷಣಿಕ ಸಂಶೋಧನೆಯು ಒಂದು ಪ್ರಕ್ರಿಯೆಯಾಗಿದ್ದು  ಇದು ಶೈಕ್ಷಣಿಕ  ವಸ್ತುಸ್ಥಿತಿಯ  ವರ್ತನೆಗಳು ವೈಜ್ಞಾನಿಕವಾಗಿ ಅಭಿವೃದ್ದಿ  ಹೊಂದಲು ಮಾರ್ಗದರ್ಶನವನ್ನು ನೀಡುತ್ತದೆ.
 ಶೈಕ್ಷಣಿಕ ಸಂಶೋಧನೆಯು  ವೈಜ್ಞಾ ‌ನಿಕ ಮತ್ತು  ತತ್ವಶಾಸ್ತ್ರೀಯ ವಿಧಾನಗಳನ್ನು  ಉಪಯೋಗಿಸಿಕೊಂಡು  ಶಿಕ್ಷಣ ಕ್ಷೇತ್ರದಲ್ಲಿನ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ  ವಿಧಾನವು ಪುನರಾವರ್ತನೆ ಆಲೋಚನೆಗಳಿಗೆ ವಿಮರ್ಶಾತ್ಮಕ ದೃಷ್ಠಿಕೋನವನ್ನು  ಒದಗಿಸುತ್ತದೆ. 
 'ವಿಟ್ನಿ' ಯವರು ಎರಡು ವಿಧವಾದ  ಶೈಕ್ಷಣಿಕ ಸಂಶೋಧನೆಗಳಿಗೆ ಹೆಚ್ಚು ಒತ್ತನ್ನು ಕೊಡುತ್ತಾರೆ. (೧)  ವೈಜ್ಞಾನಿಕ  (೨)  ತತ್ವಶಾಸ್ತ್ರೀಯ .  ವೈಜ್ಞಾನಿಕ  ಸಂಶೋಧನೆಯು ಪ್ರಾಯೋಗಿಕ ವಿಧಾನದಿಂದ ಕೈಗೊಂಡರೆ, ಎರಡನೆಯದು  ತತ್ವಶಾಸ್ತ್ರೀಯ ವಿಧಾನದಿಂದ ಕೈಗೊಳ್ಳಬಹುದಾಗಿದೆ. 
 'ಮನ್ರೋ' ರವರ ಪ್ರಕಾರ :ಶೈಕ್ಷಣಿಕ ಸಂಶೋಧನೆಯ ಅಂತಿಮ ಗುರಿ ಶಿಕ್ಷಣ  ರಂಗದಲ್ಲಿ ಮೂಲತತ್ವಗಳು ಮತ್ತು ಅಭಿವೃದ್ದಿ  ಕಾರ್ಯಾವಿಧಾನಗಳನ್ನು  ಕಂಡುಹಿಡಿಯುವುದಾಗಿದೆ. 

ಶೈಕ್ಷಣಿಕ ಸಂಶೋಧನೆಯ ನಿರ್ದಿಷ್ಟ ಗುಣಲಕ್ಷಣಗಳು

 ಇದು ನಿರ್ದಿಷ್ಟ  ಕ್ಷೇತ್ರಕ್ಕೆ ಅನ್ವಯಿಸಿ ಮಾಡುವ ಸಂಶೋಧನೆಯಾದ್ದರಿಂದ ಇದನ್ನು 'ಅನ್ವಯಿಕ ಸಂಶೋಧನೆ ' ಎನ್ನಬಹುದು. ಎದು ಒಮ್ಮೊಮ್ಮೆ ಮೂಲ  ಸಂಶೋಧನೆಯೂ ಕೂಡ ಆಗಬಹುದು. ಶೈಕ್ಷಣಿಕ ಸಂಶೋಧನೆ ಇತ್ತೀಚಿನದು. ಬರೋಡದಲ್ಲಿ ಪ್ರಥಮವಾಗಿ 'CABE' ಈ  ಸಂಶೋಧನಾ ವಿಧಾನವನ್ನು ಪರಿಚಯಿಸಿತು. ಇದು ವೈಜ್ಞಾನಿಕ ಸಂಶೋಧನೆಗಿಂತ ಭಿನ್ನವಾಗಿದೆ. ಭೌತ ಮತ್ತು ರಸಾಯನಶಾಸ್ತ್ರದಂತಹ ಶುದ್ದ ಸಂಶೋಧನೆಯಲ್ಲ. ಲೆಕ್ಕಾಚಾರದಲ್ಲಿ ವಿಜ್ಞಾನದಂತೆ ಖಚಿತವಿಲ್ಲದ್ದು,  ವಿಜ್ಞಾನದ  ಸಂಶೋಧನೆ ವಸ್ತುವಾದರೆ ಶೈಕ್ಷಣಿಕ ಸಂಶೋಧನೆ ವಿದ್ಯಾರ್ಥಿಗಳನ್ನು ಅವಲಂಬಿಸಿದೆ.

ಗುಣಗಳು

  • ಶಿಕ್ಷಣದಲ್ಲಿ ನಡೆಯುವ ಸಂಶೋಧನೆಗಳು ತತ್ವಶಾಸ್ತ್ರದ ಮೇಲೆ ಅವಲಂಬಿತವಾಗಿವೆ. ಅಂತೆಯೇ "A Sound philosophy of education as the basis of research" ಎಂಬುದಾಗಿ ರಾಬರ್ಟ್ ಆರ್.ರಸ್ಕ್ ಅವಲೋಕಿಸಿದ್ದಾನೆ. ಆದ್ದರಿಂದ ಇದೊಂದು ವ್ಯವಸ್ಥಿತ ಪ್ರಕ್ರಿಯೆಯಾಗಿದೆ.
  • ಶೈಕ್ಷಣಿಕ ಸಂಶೋಧನೆಯು ಸೂಕ್ಷ ಪರಿಜ್ಞಾನ ಮತ್ತು ಭಾವನಾ ಶಕ್ತಿಯನ್ನು ಅವಲಂಬಿಸಿರುತ್ತದೆ. ಮೇಲಿನ ತಜ್ಞರೇ ಹೇಳುವಂತೆ "Education by its reliance on research must never fail to realize that in addition to its practical practitioners and skilled investigators. It stands in need of men and
      women  of imaginative insight,who look beyond the present and behold the vision splendid".
  • ಶೈಕ್ಷಣಿಕ ಸಂಶೋಧನೆಯು ಅಂತರಶಿಸ್ತೀಯ ವಿಧಾನವನ್ನು ಒಳಗೊಂಡಿದೆ. ಇದು ಪ್ರಕೃತಿಯ ಪ್ರಧಾನವಾದ ಸಂಗತಿಗಳನ್ನು ಆಧರಿಸಿ ವರ್ಣವೆಯನ್ನು ಮಾಡುವುದಿಲ್ಲ. ಭೇರೆ ಭೇರೆ ಸಂಗತಿಗಳ ಸಂಕೀರ್ಣವಾದ ಸಂಬಂಧಗಳನ್ನು ಜೋಡಿಸುವಲ್ಲಿ ಅಧ್ಯಯನವನ್ನು ಕೈಗೊಳ್ಳುತ್ತದೆ.
  • ಶೈಕ್ಷಣಿಕ ಸಂಶೋಧನೆಯು ಭೌತವಿಜ್ಞಾನ ಸಂಶೋಧನೆಯಷ್ಟು ನಿಖರವಾದುದಲ್ಲ. ಇಲ್ಲಿ ವಿದ್ಯಾರ್ಥಿಗಳನ್ನು ಅವಲಂಬಿಸಿರುವುದರಿಂದ ಫಲಿತಾಂಶಗಳು ಸ್ವಲ್ಪಮಟ್ಟಿಗೆ ಭಿನ್ನವಾಗಿರುತ್ತವೆ. ಶೈಕ್ಷಣಿಕ ಸಂಶೋಧನೆಗಳು ಮಾನಸಿಕವಾಗಿ ಹಾಗೂ ಚಿಂತನೆಯ ಶಕ್ತಿಯಲ್ಲಿ ವಿದ್ಯಾರ್ಥಿಗಳನ್ನು ಅವಲಂಬಿಸಿವೆ.
  • ಶೈಕ್ಷಣಿಕ ಸಂಶೋಧನೆಯು ಸಾಮಾನ್ಯವಾಗಿ ಸುಲಭ ಸಾಮಗ್ರಿಗಳ ಅವಶ್ಯಕತೆಯನ್ನು ಹೊಂದಿರಿತ್ತದೆ. ಕೆಲವು ಶೈಕ್ಷಣಿಕ ಸಂಶೋಧನೆಯಲ್ಲಿ ಕೇವಲ ಮಕ್ಕಳು, ಶೈಕ್ಷಣಿಕ ಸಾಧನಗಳಾದ ಪೇಪರ್, ಪೆನ್ಸಿಲ್ ಮತ್ತು ಕೆಲವೇ ಪರೀಕ್ಷೆಗಳು ಸಾಕಾಗುತ್ತವೆ.
  • ಶೈಕ್ಷಣಿಕ ಸಂಶೋಧನೆಯು ಕಾರಣ, ಪರಿಣಾಮಗಳ ನಡುವಿನ ಅಂತರ್ ಸಂಬಂಧವನ್ನು ಅವಲಂಬಿಸಿದೆ.
  • ಶೈಕ್ಷಣಿಕ ಸಂಶೋಧನೆಯು ಒಂದು ಯಾಂತ್ರಿಕ ಕ್ರಿಯೆ ಅಲ್ಲ ಇದು ಭೌತವಿಜ್ಞಾನದಂತೆ ಯಾಂತ್ರಿಕ ನಿರ್ಧಾರಕ್ಕೆ ಬರುವಂತಹ ಸಂಶೋಧನೆಯಲ್ಲ. ಇಲ್ಲಿ ಸಂಶೋಧಕ ಪ್ರಯೋಗ ಫಲಿತಾಂಶಗಳ ಆಚೆಯೂ ದೃಷ್ಟಿ ಹಾಯಿಸಿ ವಿಶ್ಲೇಷಿಸಬೇಕಾಗುತ್ತದೆ.
  • ಶೈಕ್ಷಣಿಕ ಸಂಶೋಧನೆಯಲ್ಲಿ ಚಲಕಗಳ ಪರಸ್ಪರ ಸಂಬಂಧವನ್ನು ಗುರುತಿಸಲಾಗುತ್ತದೆ ಹಾಗೂ ತಜ್ಞನತೆಯನ್ನು ಬಳಸಲಾಗುತ್ತದೆ.
  • ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಂಶೋಧನೆಗಳು ಪುನಃ ಪುನಃ ನಡೆಯುತ್ತಿರಬೇಕಾಗುತ್ತದೆ. ಏಕೆಂದರೆ ಶಿಕ್ಷಣವು ಸಾಮಾಜಿಕ ಅಗತ್ಯತೆಗಳಿಗೆ ಅನುಗುಣವಾಗಿ ಬದಲಾಗಬೇಕಾಗುತ್ತದೆ. ಆದ್ದರಿಂದ ಇದು ನಿರಂತರ ನಡೆಯುತ್ತಿರಬೇಕಾದ ಸಂಶೋಧನೆ.
  • ಶೈಕ್ಷಣಿಕ ಸಂಶೋಧನೆಯು ಹೆಚ್ಚು ಕಡಿಮೆ ಸಾಮಾನ್ಯೀಕರಣವಾಗಿರುತ್ತದೆ.
    Pockey Lam on Open Education Research, WikiSym, Hong Kong

ಶೈಕ್ಷಣಿಕ ಸಂಶೋಧನೆಯ ಸ್ವಭಾವ ಮತ್ತು ಮಹತ್ವ

  ಶೈಕ್ಷಣಿಕ ಸಂಶೋಧನೆಯನ್ನು ಸಾಮಾನ್ಯವಾಗಿ ಅನ್ವಯಿಕ  ಸಂಶೋಧನೆ ಎನ್ನಬಹುದು. ಇದು ನಿರ್ಧಿಷ್ಟ ಕ್ಷೇತ್ರಕ್ಕೆ ಜ್ಞಾನದ ಒಂದು ಅಂಶವನ್ನು ಅನುಷ್ಠಾನಕ್ಕೆ ತರುವುದು ಅಥವಾ ಅನ್ವಯಿಸುವುದು. ಇದು ಒಂದು ಸಿದ್ದಾಂತವನ್ನು ನಿಜವಾದ ಸಮಸ್ಯೆಯೊಂದರ ಸನ್ನಿವೇಶದಲ್ಲಿಟ್ಟು ಒರೆಹಚ್ಚಿ ನೋಡುವುದು.  ಶಿಕ್ಷಣದ ವಿವಿಧ ಅಂಶಗಳಾದ, ಪಠ್ಯಕ್ರಮ, ಪರೀಕ್ಷೆ ಮತ್ತು ಮೌಲ್ಯಮಾಪನ, ಶಿಕ್ಷಕರ ವರ್ತನೆಗಳು, ಭೋಧನಾ ವಿಧಾನ ಮುಂತಾದುವುಗಳನ್ನು ವೈಜ್ಞಾನಿಕವಾಗಿ ಮತ್ತು ಪ್ರಾಯೋಗಿಕವಾಗಿ ಒರೆಹಚ್ಚಿ ನೋಡಲಾಗುತ್ತದೆ. ಹಾಗೆಯೇ ಬೆಳವಣಿಗೆ ಮತ್ತು ವಿಕಾಸಗಳ ಬಗ್ಗೆಯೂ ಕೂಡ ಸಂಶೋಧನೆಗಳನ್ನು ಕೈಗೊಳ್ಳಲಾಗುತ್ತದೆ. ಶೈಕ್ಷಣಿಕ ಸಂಶೋಧನೆಗಳ ವ್ಯಾಪಕತೆ ಆಯ್ದುಕೊಳ್ಳುವ ಸಮಸ್ಯೆಯನ್ನು ಆವಲಂಬಿಸಿರುತ್ತದೆ. ಆದರೆ ಅದು  ಮೂಲಭೂತವಾಗಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ್ದು ಅಥವಾ ಶಿಕ್ಷಣದ ಉದ್ದೇಶಕ್ಕಾಗಿ ಉಪಯೋಗಿಸುವಂತದ್ದಾಗಿರುತ್ತದೆ.

ಶೈಕ್ಷಣಿಕ ಸಂಶೋಧನೆಯು ತುಂಬಾ ಮಹತ್ವವನ್ನು ಪಡೆದಿದೆ. ಬದಲಾಗುತ್ತಿರುವ ಪ್ರಪಂಚದಲ್ಲಿ ನಾವು ಕೂಡ ಬದಲಾಗಬೇಕು. ಶಿಕ್ಷಣವೆಂಬುದು ಜಡತ್ವವಲ್ಲ, ಅದು ಒಂದು ಪ್ರಕ್ರಿಯೆ, ಆದ್ದರಿಂದ ಸಂಶೋಧನೆಗಳು ಅಗತ್ಯ. ಸಮಾಜ , ಸಮುದಾಯ ಹಾಗೂ ಬದುಕು ಸದಾ ಪರಿವರ್ತನ ಶೀಲವಾದದ್ದು, ಅದಕ್ಕೆ ಹೊಂದಿಕೊಳ್ಳಲು ಸಂಶೋಧನೆಯ ಅಗತ್ಯ ಬಹಳವಿದೆ. ಬೇರೆ ಬೇರೆ ಜ್ಞಾನ ಶಾಖೆಗಳಲ್ಲಿ ಕಂಡು ಬರುವಂತಹ ಹೊಸ ವಿಚಾರಗಳನ್ನು ಶಿಕ್ಷಣ ಕ್ಷೇತ್ರದಲ್ಲಿಯೂ ಇಂದು ನಾವು ಅಳವಡಿಸಿಕೊಳ್ಳಬೇಕಾಗಿದೆ. ನಿರ್ದಿಷ್ಟ ಪರಿಕಲ್ಪನೆಗಳು ಅವುಗಳ ಅರ್ಥಗಳು, ಸಿದ್ದಾಂತಗಳು ಅವುಗಳಿಗೆ ಅರ್ಥ ನೀಡಲು ಸಂಶೋಧನೆಯು ಅವಶ್ಯವಾಗಿ ಬೇಕಾಗಿದೆ. ಶಿಕ್ಷಣ ರಂಗದಲ್ಲಿಯೂ ಕೂಡ ಆ ಪ್ರಯತ್ನ ಮಾಡಬೇಕಾಗಿರುವುದರಿಂದ ಶೈಕ್ಷಣಿಕ ಸಂಶೋಧನೆಯು ತುಂಬಾ ಮಹತ್ವವನ್ನು ಪಡೆದಿದೆ.

Institute of Education, Research & Training at CU 01
  ಮನಶಾಸ್ತ್ರಗಳಿಂದ ತೆಗೆದುಕೊಂಡ ಸಿದ್ದಾಂತಗಳನ್ನು, ತತ್ವಗಳನ್ನು, ನಿರ್ಧರಿಸಲ್ಲು ಹಾಗೂ ಮೌಗಳ ಬಗ್ಗೆ ಗಂಭೀರ ಅಧ್ಯಯನ ಮತ್ತು ವಿಶ್ಲೇಷಣೆಗಾಗಿ ಇಂದು ಶೈಕ್ಷಣಿಕ ಸಂಶೋಧನೆ ತನ್ನದೇ ಆದ ಮಹತ್ವವನ್ನು ಪಡೆದಿದೆ. ತಾಲ್ಲೂಕು, ಜಿಲ್ಲೆ, ರಾಜ್ಯಮಟ್ಟದಲ್ಲಿ ಶಿಕ್ಷಣದ ಯೋಜನೆಗಳನ್ನು ರೂಪಿಸಲು, ಶಿಕ್ಷಣ ಮಾಧ್ಯಮ, ತರಗತಿಯ ಗಾತ್ರ ನಿರ್ಧರಿಸಲು ಕೂಡ ಇದರ ಅಗತ್ಯತೆ ಇದೆ. ಅಪವ್ಯಯ, ಶಿಕ್ಷೆ, ಶಿಸ್ತು, ಸ್ವಾತಂತ್ರ್ಯ, ಸಹಪಠ್ಯ ವಿಷಯಗಳ ಚಟುವಟಿಕೆಗಳಂತಹ ವಿಚಾರಗಳನ್ನು ಉತ್ತಮಪಡಿಸಲು ಸಂಶೋಧನೆ ತುಂಬಾ ಮಹತ್ವ ಪಡೆಯುತ್ತದೆ. ಶೈಕ್ಷಣಿಕ ಸಂಶೋಧನೆಯು ವ್ಯವಸ್ಥಿತ ಪ್ರಕ್ರಿಯೆಯಾಗಿದ್ದು  ತಾರ್ಕಿಕ ವಿಧಾನದಿಂದ ಕೂಡಿದ್ದು, ಕಾರಣ ಪರಿಣಾಮಗಳನ್ನು ಹುಡುಕುತ್ತದೆ. ಚಲಕಗಳ ಪರಸ್ಪರ ಸಂಬಂಧ ಗುರುತಿಸುವುದರ ಜೊತೆಗೆ ಅನ್ವೇಷಣಾತ್ಮಕ ಸ್ವಭಾವವನ್ನು ಹೊಂದಿ ತಜ್ಞತೆಯನ್ನು ಬಯಸುತ್ತದೆ. ಇದು ಸಂಶೋಧಕನಿಗೆ ಆತ್ಮ ಸ್ಥೈರ್ಯವನ್ನು ಬೆಳೆಸುತ್ತದೆ. ಮತ್ತು ಹೆಚ್ಚು ಕಡಿಮೆ ಸಾಮಾನ್ಯೀಕರಣವಾಗಿರುತ್ತದೆ. ಆದ್ದರಿಂದ ಶೈಕ್ಷಣಿಕ ಸಂಶೋಧನೆಯು ಮಹತ್ವವನ್ನು ಪಡೆದಿದೆ. 

ಸಂಶೋಧನೆಯ ವರ್ಗೀಕರಣ

(೧) ಮೂಲಭೂತ ಸಂಶೋಧನೆ: ಈ ಸಂಶೋಧನೆಯು ಹಿಂದೆ ಯಾರು ಮಾಡಿರದೇ ಇರುವಂತಹುದು ಹೊಸದಾಗಿ ಸಂಶೋಧನೆ ಮಾಡುವಂತಹುದು ಇದು ಪ್ರಪಂಚದ ಎಲ್ಲೆಡೆಗೆ ಅನ್ವಯವಾಗುವಂತಹ ಮೂಲಭೂತ ಸತ್ಯಗಳನ್ನು ಶೋಧಿಸುವ  ಗುರಿಯುಳ್ಳದ್ದಾಗಿರುತ್ತದೆ. ಇದರಲ್ಲಿ ನಾವೀನ್ಯತೆ ಇದ್ದು ಹೊಸ ಸಿದ್ದಾಂತಗಳಿಂದ ಕೂಡಿರುತ್ತದೆ. 
(೨) ಆನ್ವಯಿಕ ಸಂಶೋಧನೆ: ನಿರ್ದಿಷ್ಟ ಕ್ಷೇತ್ರಕ್ಕೆ  ಜ್ಞಾನದ ಒಂದು ಅಂಶವನ್ನು ಅನುಷ್ಠಾನಕ್ಕೆ ತರುವುದು ಅಥಾವಾ ಅನ್ವಯಿಸುವುದು 'ಆನ್ವಯಿಕ ಸಂಶೋಧನೆ' ಎನಿಸುತ್ತದೆ. ಒಂದು ಸಿದ್ದಾಂತವನ್ನು ನಿಜವಾದ ಸಮಸ್ಯೆಯೊಂದರ ಸನ್ನಿವೇಶದಲ್ಲಿಟ್ಟು ಒರೆಹಚ್ಚಿ ನೋಡುವುದಾಗಿದೆ.
(೩) ಕ್ರಿಯಾ ಸಂಶೋಧನೆ: ಲಭ್ಯವಾದ ಜ್ಞಾನವನ್ನು ಸ್ಥಳೀಯ ಸಂದರ್ಭಕ್ಕೆ ಅನ್ವಯಿಸುವುದು ಇದರ ಉದ್ದೇಶವಾಗಿದ್ದು,ಇದು ಕ್ಷೇತ್ರ ಕಾರ್ಯಕರ್ತರಿಗೆ ಒಂದು ರೀತಿಯ ಸೇವಾವಧಿ ತರಬೇತಿಯಾಗಿದೆ. ಇದನ್ನು ಅತ್ಯಂತ ಸೀಮಿತ ವ್ಯಾಪ್ತಿಯ ಅನ್ವಯಿಕ ಸಂಶೋಧನೆ ಎನ್ನಬಹುದು.