ವಿಷಯಕ್ಕೆ ಹೋಗು

ಸದಸ್ಯ:Akshatha.venkatesh

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಕ್ಷತ

ನಮ್ಮ ಪುಟ್ಟ ಕುಟುಂಬ

[ಬದಲಾಯಿಸಿ]

ನನ್ನ ಹೆಸರು ಅಕ್ಷತ.ನಾನು ಕ್ರೈಸ್ಟ ವಿದ್ಯಾಸಂಸ್ತೆಯಲ್ಲಿ ಅಧ್ಯೇಯನ ಮಾಡುತ್ತಿದ್ದೇನೆ.ನಾನು ಬಿ.ಎಸ್.ಸಿಯ ಸಿ.ಎಮ್.ಎಸ್ ನಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ.ನಾನು ಉದ್ಯಾನ ನಗರಿ ಎಂದೇ ಪ್ರಸಿದ್ದವಾದ ಬೆಂಗಳೂರಿನವಳು . ನಾನು ನನ್ನ ತಂದೆ,ತಾಯಿ,ಅಜ್ಜಿ ಮತ್ತು ತಮ್ಮನೊಂದಿಗೆ ವಾಸಿಸುತ್ತೇನೆ . ನಮ್ಮ ತಾಯಿಯವರು ಒಂದು ಗ್ರಾಂಥಾಲದಲ್ಲಿ ಕೆಲಸ ಮಾಡುತಿದ್ದಾರೆ. ನನ್ನ ತಮ್ಮ ಈ ಬಾರಿ ಹತ್ತನೆ ತರಗತಿಯಲ್ಲಿ ಓದುತಿದ್ದಾನೆ.ಅವನು ಬಹಳ ತುಂಟ ,ಆದರೂ ನಾವು ಯಾವಾಗಲು ಲವಲವಿಕೆಯಿಂದ ಇರುತ್ತೇವೆ.ಅವನ ನೆಚ್ಚಿನ ಕ್ರೀಡೆ ಕ್ರಿಕೆಟ್ ಮತ್ತು ಅವನಿಗೆ ಬೌಲಿಂಗ್ನಲ್ಲಿ ಹೆಚ್ಚು ಆಸಕ್ತಿ. ನಮ್ಮ ತಾಯಿ ಒಂದು ಗ್ರಾಂಥಾಲಯದಲ್ಲಿ ಕೆಲಸ ಮಾಡುತ್ತಾರೆ.

ಗುರುಕುಲ ಮತ್ತು ಗುರುಗಳು

[ಬದಲಾಯಿಸಿ]

ನಾನು ಮಹಾತ್ಮ ವಿದ್ಯಾಲಯ ಎಂಬ ಶಾಲೆಯಲ್ಲಿ ಓದಿದ್ದೆ. ಆ ಶಾಲೆಯ ನೆನಪುಗಳು ಬಹಳ ಸುಂದರವಾದುದ್ದು ಮತ್ತು ಅದನ್ನು ನೆನಪಿಸಿಕೊಂಡಾಗ ನನ್ನ ಮನ ರೋಮಾಂಚನಗೊಳ್ಳುವುದು. ನಾನು ಮತ್ತು ನಮ್ಮ ಗೆಳೆಯರು ಒಟ್ಟಿಗೆಗೂಡಿ ಮಾಡಿದ ತರಲೆಗಳು, ನಾವು ಮಾಡಿದ ಜಗಳಗಳು ಇತ್ಯಾದಿ.ನನಗೆ ಬಹಳ ನೆನಪಿಗೆ ಬರುವುದು . ನಮ್ಮ ಶಿಕ್ಷಕರು ತುಂಬ ಒಳ್ಳೆಯವರು. ಅವರ ಮಾರ್ಗದರ್ಶನದಿಂದಲೇ ನಾನು ಜೀವನದ ಪಾಠ ಕಲಿತೆನು.ನನ್ನ ಹತ್ತನೆ ತರಗತಿಯ ಫಲಿತಾಂಶ ಬಂದದ್ದ ಮರೆಯಲಾಗದ ದಿನ . ಆ ದಿನ ಎಲ್ಲಾ ನಮ್ಮ ಮನೆಯವರಿಗೆ ಸಂತೋಷವೂ ಸಂತೋಷ.ನನ್ನ ಫಲಿತಾಂಶದ ಕಾರಣ ನನ್ನ ಶಿಕ್ಷಕರು,ಪೋಷಕರು ಮತ್ತು ನಾನು ಪಟ್ಟ ಶ್ರಮ. ಮಾತ್ರ.ನಾವು ಒಂಬತ್ತನೇ ತರಗತಿಯಲ್ಲಿ ಇರುವ ವೇಳೆ ನಮ್ಮ ಹಿರಿಯ ತರಗತಿಯವರ ಬೀಳ್ಕೊಡುಗೆ ಸಮಾರಂಭಕ್ಕೆ ನಾವು ನಾಲ್ಕು ಬೇರೆ ಬೇರೆ ಶೈಲಿಯ ನೃತ್ಯವನ್ನು ಪ್ರದರ್ಶಿಸಿದ್ದೆವು.ಅದರಲ್ಲಿ ನಾನು ಕಥಕ್ ಶೈಲಿಯ ನೃತ್ಯವನ್ನು ಪ್ರದರ್ಶಿಸಿದ್ದೆ.ಇಂತಹ ಬಗೆಯ ನೃತ್ಯವನ್ನು ಮಾಡಿದ್ದು ಇದೇ ಮೂದಲು ,ಆದರಿಂದ ನನಗೆ ಬಹಳ ಸಂತೊಷವಾಯಿತು. ನೃತ್ಯದ ಜೊತೆಗೆ ನಾವು ಹಾಡುಗಾರಿಕೆಯನ್ನು ಪ್ರರ್ದಶಿಸಿದೆವು. ಅನೇಕ ಪ್ರಕಾರದ ಜಾನಪದ ಗೀತೆ,ಭಕ್ತಿಗೀತೆ,ಭಾವಗೀತೆ ಇತ್ಯಾದಿಗಳಿಂದ ಅವರನ್ನು ಮನೋರಂಜಿಸಿದೆವು.ನಮ್ಮ ಕಾಲೇಜಿನ ಸಮಯವನ್ನು ಸಂತೋಷದಿಂದ ಕಳೆದೆವು. ಹೊಸ ಹೊಸ ಸ್ನೇಹಿತರ ಜೋತೆಗೊಡಿ ನಾನು ಮಾಡಿದ ಗಲಾಟೆ ನೆನಪಿಗೆ ಬರುತ್ತದೆ. ಕೆಳವೊಮ್ಮೆ ನಮಗೆ ನೀಡಿದ ಹಿತವಚನಗಳು ಕೆಲವೊಮ್ಮೆ ನೆನಪಿಗೆ ಬರುತ್ತದೆ.

ನನ್ನ ಪ್ರವಾಸಕಥನ

[ಬದಲಾಯಿಸಿ]

ನಾವು ಶಾಲೆಯಿಂದ ಹೋಗಿದ ಪ್ರವಾಸ ಸ್ಥಳ ಕೆಲವು.ಅದರಲ್ಲಿ ನನಗೆ ಹೆಚ್ಚಿಗೆ ನೆನಪಿಗೆ ಬರುವುದು ನಾವು ವಂಡರ್ ಲಾ ಗೆ ಹೋದ ಸಮಯ.ನಮ್ಮ ಗೆಳೆಯರು ಮತ್ತು ಶಿಕ್ಷಕರೊಂದಿಗೆ ಬಹಳ ಆನಂದದ ಸಮಯವನ್ನು ಕಳೆದೆನು.ನಾವು ಅಲ್ಲಿ ಆಡಿದ ನೀರಿನ ಆಟಗಳು , ಎಲ್ಲರನ್ನು ನೀರಿಗೆ ನೂಕಿದ್ದು ......ಎಲ್ಲಾ ಈಗ ಕೇವಲ ನೆನಪುಗಳುನಾವು ಹತ್ತನೇ ತರಗತಿಯ ರಜೆಯಲ್ಲಿ ಕೈವಾರಕ್ಕೆ ಪ್ರವಾಸಕ್ಕೆ ಹೋಗಿದ್ದೆವು.ನಾವು ಕೈವಾರಕ್ಕೆ ಒಂದುಬಾರಿ ಪ್ರವಾಸಕ್ಕೆ ಹೋಗಿದ್ದೆವು. ಅಲ್ಲಿನ ದೇವಸ್ಠಾನ ಬಹಳ ಸುಂದರವಾಗಿತ್ತು ಮತ್ತು ಅಲ್ಲಿಯ ಮಂಗಗಳ ಕಪಿಚೇಷ್ಟೆ ನೋಡುವಂತಿತ್ತು.ನಾನು,ನನ್ನ ತಮ್ಮ,ತಂಗಿ ಎಲ್ಲರು ಬಹಳ ಮಸ್ತಿ ಮಾಡಿದೆವು.ಆ ದೇವಸ್ಠಾನ ಬಹಳ ಶಾಂತಕರವಾಗಿತ್ತು ಮತ್ತು ಆ ಪರಿಸರ ನಮ್ಮ ತನು ಮತ್ತು ಮನವನ್ನು ತಣಿಸುವಂತಿತ್ತು.ಎಲ್ಲಿ ನೋಡಿದರೂ ಸುಂದರವಾದ ಬೆಟ್ಟಗಳೇ ಕಾಣುತಿತ್ತು. ನಾವು ಹಳೆಬೀಡು ಮತ್ತು ಬೇಳೂರು ಸ್ಥಳಕ್ಕೆ ಭೇಟಿ ನೀಡಿದ್ದೆವು. ಅಲ್ಲಿಯ ಶಿಲ್ಪಕಲೆ ಬಹಳ ಸುಂದರವಾಗಿತ್ತು ಮತ್ತು ಮನಸೆಳೆಯುವಂತಿತ್ತು. .ನನಗೆ ಕನ್ನಡದಲ್ಲಿ ಹೆಚ್ಚು ಪುಸ್ತಕ ಓದುವ ಹವ್ಯಾಸವಿಲ್ಲ.ಆದರೆ ಹಳೆಯ ಗೀತೆಗಳನ್ನು ಕೇಳುಲು ನನಗೆ ಬಹಳ ಇಷ್ಟ.ನನ್ನ ಪ್ರಕಾರ ಅವು ಬಹಳ ಅರ್ಥಪೂರ್ಣವಾಗಿ ಇರುತ್ತದೆ ಮತ್ತು ಜೀವನದ ಸಾರವನ್ನು ಕೊಡ ಕೆಲವು ವರ್ಣಿಸುತ್ತದೆ.

This user is a member of WikiProject Education in India



ಉಪಪುಟಗಳು

[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Akshatha.venkatesh