ವಿಷಯಕ್ಕೆ ಹೋಗು

ಸದಸ್ಯ:1840574manasa.b

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಪರಿಚಯ

ನನ್ನ ಹೆಸರು ಮಾನಸ.ಬಿ .ನಾನು ಬಿ.ಎಸ್.ಸಿ ತರಗತಿಯಲ್ಲಿ ಓದುತ್ತಿದ್ದೇನೆ.ನಾನು ಹುಟ್ಟಿದ್ದು ಉಡುಪಿ

ಉಡುಪಿ

ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ .ನಾನು ಸೆಪ್ಟೆಂಬರ್ ಹದಿನೈದು ಎರಡು ಸಾವಿರ ಇಸವಿಯಲ್ಲಿ ಜನಿಸಿದೆ ಆದರೆ ಬೆಳೆದಿದ್ದು ಬೆಂಗಳೂರಿನಲ್ಲಿರುವ ಕೋರಮಂಗಲದಲ್ಲಿ.

ಕುಟುಂಬ

ನನ್ನ ತಂದೆಯ ಹೆಸರು ಬಸವರಾಜ್.ಎಚ್.ಎ ಮತ್ತು ತಾಯಿಯ ಹೆಸರು ಮಾಲತಿ.

ಶಿಕ್ಷಣ

ಕೋರಮಂಗಲದಲ್ಲಿರುವ ಪಿ.ಎನ್ಎಸ್ ಎಂಬ ಪ್ರೌಢಶಾಲೆಯಲ್ಲಿ ನಾನು ಒಂದನೇ ತರಗತಿವರೆಗೆ ಶಿಕ್ಷಣ ಪಡೆದೆ.ನಂತರ ಕೋರಮಂಗಲದಲ್ಲಿರುವ ಬಿ.ಮೋನಾ ಪ್ರೌಢಶಾಲೆಯಲ್ಲಿ ನಾನು ನನ್ನ ಎಸ್ಎಸ್ಎಲ್ಸಿ ವಿದ್ಯಾಭ್ಯಾಸವನ್ನು ಮುಗಿಸಿದೆ.ನಾನು ಶಾಲೆಯಲ್ಲಿ ಭಾಷಾ ಚರ್ಚೆ,ಖೊಖೋ ಹಾಗೂ ಮುಂತಾದ ಆಟಗಳಲ್ಲಿ ಭಾಗವಹಿಸಿದ್ದೇನೆ.ನಾನು ನನ್ನ ಶಾಲೆಯಲ್ಲಿ ರಂಗೋಲಿ,ಚಿತ್ರ ಬಿಡಿಸುವುದು,ಚರ್ಚೆಯ ಸ್ಪರ್ಧೆ,ನೃತ್ಯ ಮಾಡುವುದು ಮುಂತಾದ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೇನೆ.ಒಂದೊಂದು ಸ್ಪರ್ಧೆಯಲ್ಲಿ ಭಾಗವಹಿಸುವಾಗಲೂ ನಾನು ಧೈರ್ಯ ಚುರುಕುತನ,ತಾಳ್ಮೆ ಎಂಬ ಮೌಲ್ಯಗಳನ್ನು ಅಳವಡಿಸಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸುತ್ತೇನೆ.ನಂತರ ನಾನು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ

ಕ್ರೈಸ್ಟ್ ಯೂನಿವರ್ಸಿಟಿ

ಓದಿದೆ.

ಆಸಕ್ತಿ ಮತ್ತು ಹವ್ಯಾಸಗಳು

ನಾನು ಕಾಲೇಜಿನಲ್ಲಿ ವಿಜ್ಞಾನವನ್ನು ಆಯ್ಕೆ ಮಾಡಿಕೊಂಡಿದ್ದೆ ಏಕೆಂದರೆ ನನಗೆ ಸಂಶೋಧನೆಯಲ್ಲಿ ಬಹಳ ಆಸಕ್ತಿ ಇತ್ತು.ನಾನು ಕಾಲೇಜಿನಲ್ಲಿ ನೃತ್ಯ ತಂಡದಲ್ಲಿ ಭಾಗವಹಿಸಿದೆ ಹಾಗೂ ಪ್ರಥಮ ಬಹುಮಾನವನ್ನು ಗಳಿಸಿದ್ದೇನೆ.ಚಿತ್ರ ಬಿಡಿಸುವುದು ,ನೃತ್ಯ ಮಾಡುವುದು ,ಸಂಗೀತ ಕೇಳುವುದು ,ಪುಸ್ತಕಗಳನ್ನು ಓದುವುದು ಇವುಗಳು ನನ್ನ ಹವ್ಯಾಸಗಳಾಗಿವೆ.ನನಗೆ ತುಂಬಾ ಇಷ್ಟವಾದ ಕ್ರೀಡೆ ಎಂದರೆ ಅದು ಬ್ಯಾಡ್ಮಿಂಟನ್ .ಬ್ಯಾಡ್ಮಿಂಟನ್ ನನ್ನು ಆಡುವಾಗ ಮನಸ್ಸಿಗೆ ಶಾಂತಿ ಹಾಗೂ ಖುಷಿಯಾಗುತ್ತದೆ .ನನಗೆ ಈ ಆಟ ತುಂಬಾ ಇಷ್ಟ .ಹಾಗೆಯೇ ನನ್ನ ಬಗ್ಗೆ ಹೇಳಬೇಕೆಂದರೆ ನನ್ನಲ್ಲಿ ಅನ್ಯರಿಗೆ ಸಹಾಯ ಮಾಡುವ ಗುಣ ಇದೆ .ನಾನು ಪರಿಸರವನ್ನು ಬಹಳ ಪ್ರೀತಿಸುತ್ತೇನೆ .ನನಗೆ ಗಿಡಗಳು ಪಕ್ಷಿ ಪ್ರಾಣಿಗಳು ಎಂದರೆ ತುಂಬಾ ಇಷ್ಟ .ನನಗೆ ಇಷ್ಟವಾದ ಪ್ರಾಣಿ ಬೆಕ್ಕು ಹಾಗೂ ನಾಯಿ .ಪ್ರಾಣಿಗಳಿಂದ ಸಹ ನಾವು ಒಳ್ಳೆಯ ಗುಣಗಳನ್ನು .ಅವುಗಳಿಂದ ನಾನು ಹೇಗೆ ನಿಷ್ಠಾವಂತ ಹಾಗೂ ಧೈರ್ಯವಾಗಿ ಇರಬಹುದೆಂಬುದನ್ನು ಕಲಿಯಬಹುದು ಹಾಗೂ ನಾನು ಕಲಿತಿದ್ದೇನೆ.ನನಗೆ ತುಂಬಾ ಇಷ್ಟವಾದ ವಿಷಯ ಜೀವಶಾಸ್ತ್ರ ಏಕೆಂದರೆ ಜೀವಶಾಸ್ತ್ರದ ಒಂದೊಂದು ಅಂಗವೂ ಕೂಡ ನಮ್ಮ ದಿನನಿತ್ಯದ ಜೀವನಕ್ಕೆ ಸಂಬಂಧ ಪಟ್ಟಿರುತ್ತದೆ.ನಮ್ಮ ಬಗ್ಗೆ ನಾವೇ ತಿಳಿದುಕೊಳ್ಳುವ ವಿಷಯಗಳು ಇರುತ್ತದೆ.ಹಾಗಾಗಿ ಅದೊಂದು ಆಸಕ್ತಿಯುಳ್ಳ ವಿಷಯವಾಗಿದೆ ಹಾಗೂ ನನಗೆ ಇದು ತುಂಬ ಇಷ್ಟ .ನಾನು ಪರಿಸರ ಪ್ರೇಮಿಯಾಗಿರುವುದರಿಂದ ಗಿಡಗಳನ್ನು ನೆಡುವುದು ನನ್ನ ಅಭ್ಯಾಸವಾಗಿದೆ.ಹಾಗೆ ರೈತರನ್ನು ನಾನು ಬಹಳ ಗೌರವ ನೀಡುತ್ತೇನೆ.

ಗುರಿ

ಈಗಲೂ ಸಹ ನಾನು ವಿಜ್ಞಾನವನ್ನು ಆಯ್ಕೆ ಮಾಡಿಕೊಂಡ ಅದೆ ವಿಷಯವನ್ನು ಓದುತ್ತಿದ್ದೇನೆ.ನಾನು ಯು.ಪಿ.ಎಸ್.ಸಿ ಪರೀಕ್ಷೆಯನ್ನು ಬರೆದು ಐ.ಎ.ಎಸ್ ಅಧಿಕಾರಿ ಆಗುವುದು ನನ್ನ ಜೀವನದ ಗುರಿ ಆಗಿದೆ ಇದಕ್ಕಾಗಿ ನಾನು ಕಷ್ಟಪಡುತ್ತಿದ್ದೇನೆ.ಇದರಿಂದ ಅಧಿಕಾರಿಯಾದ ಮೇಲೆ ಬಡ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ಕೊಡಿಸಬಹುದು ಎಂಬುದು ನನ್ನ ಆಸೆ ಹಾಗೆಯೇ ಬಡವರಿಗೆ ಸಹಾಯ ಮಾಡಬಹುದು ಎಂಬುದು ನನ್ನ ಗುರಿಯಾಗಿದೆ.ಹಾಗಾಗಿ ಇದಕ್ಕಾಗಿ ನಾನು ತುಂಬಾ ಕಷ್ಟ ಪಟ್ಟು ಓದುತ್ತಿದ್ದೇನೆ . ಕೊನೆಗೆ ನಾನು ಚೆನ್ನಾಗಿ ಓದಿ ಒಂದು ಒಳ್ಳೆಯ ಕೆಲಸ ಸಿಕ್ಕಿ ನನ್ನ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿ ಕೊಳ್ಳಬೇಕೆಂಬುದು ನನ್ನ ಆಸೆಯಾಗಿದೆ .ಇದ್ದಷ್ಟು ನನ್ನ ವೈಯಕ್ತಿಕ ವಿಚಾರ.