* ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಸುಮಾರು 1 ಗಂಟೆ 50 ನಿಮಷಗಳ ಕಾಲ ಬಜೆಟ್ ಭಾಷಣ ಮುಗಿದೊಡನೆ ಕಲಾಪವನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಶುಕ್ರವಾರಕ್ಕೆ ಮುಂದೂಡಿದರು. ಸಂಸದ, ಮಾಜಿ ವಿದೇಶಾಂಗ ಸಚಿವ ಇ.ಆಹ್ಮದ್ ನಿಧನದ ಹಿನ್ನಲೆಯಲ್ಲಿ ಸಂತಾಪ ಸೂಚಕವಾಗಿ ನಾಳೆ ಕಾಲಪ ನಡೆಯುವುದಿಲ್ಲ. ಬುಧವಾರ ಬಜೆಟ್ಕುರಿತಾಗಿ ಚರ್ಚೆ ನಡೆಯಲಿದೆ.
* 12:53 PM
* ಈ ಬಾರಿ ಆದಾಯ ತೆರಿಗೆ ಏರಿಕೆ ಮಾಡಿಲ್ಲ.ವಾರ್ಷಿಕ 2.5 ಲಕ್ಷ ರೂ ಗಳಿಂದ 5 ಲಕ್ಷ ರೂಗಳ ವರೆಗಿನ ಆದಾಯದ ಮೇಲೆ ಈಗಿರುವ ಶೇಕಡಾ 10 ರ ತೆರಿಗೆಯನ್ನು ಶೇಕಡಾ 5 ಕ್ಕೆ ಇಳಿಸಲಾಗಿದೆ. ಇನ್ಮುಂದೆ 3 ಲಕ್ಷಕ್ಕಿಂತ ಹೆಚ್ಚಿನ ಆದಾಯಕ್ಕೆ ತೆರಿಗೆ . ಹಿರಿಯ ನಾಗರಿಕರಿಗೆ 3.5 ಲಕ್ಷಕ್ಕಿಂತ ಹೆಚ್ಚಿನ ಆದಾಯಕ್ಕೆ ತೆರಿಗೆ (ಇಲ್ಲಿಯವರೆಗೆ 3 ಲಕ್ಷಕ್ಕೆ ತೆರಿಗೆ ಇತ್ತು)
* 12:45 PM
* ವರ್ಷಕ್ಕೆ 50 ಲಕ್ಷ ರೂ.ಗಳಿಂದ 1 ಕೋಟಿ ರೂ. ಆದಾಯದ ಮೇಲೆ ಶೇ.15ರ ಸರ್ಚಾರ್ಜ್ ಅನ್ವಯವಾಗುತ್ತದೆ. 1 ಕೋಟಿ ರೂ. ಮೀರಿದ ವಾರ್ಷಿಕ ಆದಾಯದ ಮೇಲೆ ಈಗಿರುವ ಶೇ.15ರ ಸರ್ಚಾರ್ಜ್ ಅಂತೆಯೇ ಮುಂದುವರಿಯುತ್ತದೆ. 5 ಲಕ್ಷ ರೂ. ವರೆಗೆ ವಾರ್ಷಿಕ ಆದಾಯ ಇರುವ ತೆರಿಗೆ ಪಾವತಿದಾರರಿಗೆ ಇನ್ನು ಮುಂದೆ ಕೇವಲ 1 ಪುಟದ ಸರಳ ತೆರಿಗೆ ಪಾವತಿ ಅರ್ಜಿ ಫಾರಂ ಇರುತ್ತದೆ. 3ಲಕ್ಷಕ್ಕಿಂತ ಹೆಚ್ಚು ನಗದು ವಹಿವಾಟಿಗೆ ಅವಕಾಶ ಇಲ್ಲ. ರಾಜಕೀಯ ಪಕ್ಷಗಳಿಗೆ 2 ಸಾವಿರ ರೂಪಾಯಿಗಿಂತ ಹೆಚ್ಚು ದೇಣಿಗೆ ಕೊಟ್ಟವರ ಮಾಹಿತಿ ಕಡ್ಡಾಯ.
* 12:41 PM
* ಶೇಕಡಾ 5.97 ಕಂಪೆನಿಗಳಿಂದ ಮಾತ್ರವೇ ತೆರಿಗೆ ಪಾವತಿಯಾಗುತ್ತಿದೆ.ವಾರ್ಷಿಕ 50 ಕೋಟಿ ರೂ ವ್ಯವಹಾರ ಇರುವ ಕಂಪೆನಿಗಳಿಗೆ ಶೇ.25 ರಷ್ಟು ತೆರಿಗೆ
* 12:40 PM
* ಬಜೆಟ್ ಒಟ್ಟು ವೆಚ್ಚ 21.47 ಲಕ್ಷ ಕೋಟಿ. ಚಿಟ್ಫಂಡ್ ಕ್ಷೇತ್ರದ ನಿಯಂತ್ರಣಕ್ಕೆ ಹೊಸ ಕಾನೂನು. ಆಂಧ್ರಕ್ಕೆ ಬಂಪರ್ ತೆರಿಗೆ ವಿನಾಯಿತಿ ಘೋಷಣೆ .
* 12:40 PM
* 99 ಲಕ್ಷ ಜನರಿಂದ ಮಾತ್ರ ತೆರಿಗೆ ಪಾವತಿ. 24 ಲಕ್ಷ ಜನರು 10 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. 50 ಲಕ್ಷಕ್ಕಿಂತ ಮೀರಿದ ಆದಾಯ ಹೊಂದಿರುವುದಾಗಿ ಘೋಷಿಸಿಕೊಂಡವರು 1.72 ಲಕ್ಷ ಜನರು . 2.5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವುದಾಗಿ ಘೋಷಿಸಿಕೊಂಡವರು 99 ಲಕ್ಷ ಜನ.
* 12:34 PM
* 2,74,414 ಕೋಟಿ ರೂಪಾಯಿ ರಕ್ಷಣಾ ಯೋಜನೆಗೆ ಅನುದಾನ. ವಿಜ್ಞಾನ ಕ್ಷೇತ್ರಕ್ಕೆ 37,435 ಕೋಟಿ ರೂ ಅನುದಾನ.
* 12:29 PM
* ಎಲ್ಲಾ ಜಿಲ್ಲಾ ಅಂಚೆ ಕಚೇರಿಗಳಲ್ಲಿ ಪಾಸ್ಪೋರ್ಟ್ ಸೇವೆ ಲಭ್ಯ
* 12:26 PM
* ಹೊಸ ಕಾನೂನುಗಳ ಮೂಲಕ ಆಸ್ತಿ ಜಪ್ತಿ,ಸಾಲ ಪಾವತಿಸದೆ ತಪ್ಪಿಸಿಕೊಂಡವರ ವಿರುದ್ಧ ಕಠಿಣ ಕ್ರಮ.
* 12:24 PM
* ಕರಾವಳಿ ಹೈವೇಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು. ಸಾರಿಗೆ ಕ್ಷೇತ್ರಕ್ಕೆ 2.41 ಲಕ್ಷ ಕೋಟಿ ರೂಪಾಯಿ ಅನುದಾನ. ಆಲ್ ಲೈನ್ ನಲ್ಲಿ ಎಫ್ ಡಿಐ ಪ್ರಸ್ತಾವನೆ. 1ಕೋಟಿ 50 ಲಕ್ಷ ಹಳ್ಳಿಗಳಿಗೆ ಬ್ರಾಡ್ ಬ್ಯಾಂಡ್ ಯೋಜನೆ.
* 12:22 PM
* ಭಾರತವನ್ನು "ಎಲೆಕ್ಟ್ರಾನಿಕ್ ಹಬ್' ಮಾಡಲಾಗುವುದು.ಸಣ್ಣ ನಗರಗಳಲ್ಲೂ ವಿಮಾನ ನಿಲ್ದಾಣಗಳ ನಿರ್ಮಾಣ.
* 12:18 PM
* ಕರಾವಳಿ ಹೈವೇಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು- 64 ಸಾವಿರ ಕೋಟಿ ಅನುದಾನ.ಸಾರಿಗೆ ಕ್ಷೇತ್ರಕ್ಕೆ 2.41 ಲಕ್ಷ ಕೋಟಿ ರೂಪಾಯಿ ಅನುದಾನ. ಆಲ್ ಲೈನ್ ನಲ್ಲಿ ಎಫ್ ಡಿಐ ಪ್ರಸ್ತಾವನೆ. 1ಕೋಟಿ 50 ಲಕ್ಷ ಹಳ್ಳಿಗಳಿಗೆ ಬ್ರಾಡ್ ಬ್ಯಾಂಡ್ ಯೋಜನೆ.
* 12:14 PM
* ಎಲ್ಲಾ ರಾಷ್ಟ್ರೀಯ ಬ್ಯಾಂಕ್ ಗಳಿಗೆ 10 ಸಾವಿರ ಕೋಟಿ ಅನುದಾನ. ಪೇಮೆಂಟ್ ನಿಯಂತ್ರಣ ಮಂಡಳಿ ಸ್ಥಾಪನೆ. ಎಲ್ಲಾ ಸರ್ಕಾರಿ ಸಂಸ್ಥೆಗಳಿಗೆ ಡಿಜಿಟಲ್ ಪಾವತಿ ಕಡ್ಡಾಯ.
* 12:13 PM
* ಅಕ್ರಮ ಚಿಟ್ ಫಂಡ್ ಗಳಿಗೆ ಕಡಿವಾಣ ಹಾಕಲು ದಿಟ್ಟ ಕ್ರಮ. 25 ಲಕ್ಷ ಕೋಟಿ ಜನರಿಂದ ಭೀಮ್ ಆಪ್ ಬಳಕೆ. ಮುದ್ರಾ ಯೋಜನೆಯಡಿ ಸಾಲ ವಿತರಣೆ. ಭೀಮ್ ಆಪ್ ಬಳಕೆದಾರರಿಗೆ 2 ಹೊಸ ಯೋಜನೆ. ಬ್ಯಾಂಕಿಂಗ್ ವಲಯದಲ್ಲಿ ಡಿಜಿಟಲ್ ಕ್ರಾಂತಿ.
* 12:11 PM
* ಟೆಕ್ಸ್ ಟೈಲ್ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗೆ ಯೋಜನೆ. ಎಲ್ಲಾ ಪರೀಕ್ಷಗಳಿಗೆ ಒಂದೇ ಒಂದು ಪ್ರಾಧಿಕಾರ. ದೇಶದಲ್ಲಿ 2 ಹೊಸ ತೈಲಾಗಾರ ಸ್ಥಾಪನೆ ಯೋಜನೆ. ಹಣಕಾಸು ವಲಯದಲ್ಲಿ ಸೈಬರ್ ಸೆಕ್ಯುರಿಟಿಗೆ ಒತ್ತು.
* 12:06 PM
* ರೈಲ್ವೆ ಸುರಕ್ಷಾ ಯೋಜನೆಗೆ 1 ಲಕ್ಷ ಕೋಟಿ ರೂಪಾಯಿ, ದೇಶದಲ್ಲಿ 70 ರೈಲ್ವೆ ಯೋಜನೆಗಳಿಗೆ ಅಸ್ತು.
* 12:05 PM
* ತೀರ್ಥಯಾತ್ರಗೆ ವಿಶೇಷ ರೈಲುಗಳ ಆಯೋಜನೆ.ರೈಲ್ವೆ ಮಾರ್ಗ ಅಭಿವೃದ್ಧಿಗೆ 1.31ಲಕ್ಷ ಕೋಟಿ ರೂಪಾಯಿ ಅನುದಾನ. 25 ರೈಲ್ವೆ ನಿಲ್ದಾಣ ನವೀಕರಣ ಮತ್ತು ಅಭಿವೃದ್ಧಿ. ದೂರು ನೀಡಿದರೆ, ತಕ್ಷಣ ರೈಲ್ವೆ ಬೋಗಿಗಳ ಶುಚಿತ್ವಕ್ಕೆ ಅವಕಾಶ.
* 12:03 PM
* ರೈಲ್ವೆ ವೆಬ್ ಸೈಟ್ ನಲ್ಲಿ ಟಿಕೆಟ್ ಬುಕ್ ಮಾಡಿದರೆ ಸರ್ವಿಸ್ ಚಾರ್ಜ್ ಇಲ್ಲ. 3500 ಕಿಮೀ ಹೊಸ ರೈಲ್ವೆ ಹಳಿಗಳಿಗೆ ಯೋಜನೆ. ಬಂಡವಾಳ ಹೂಡಿಕೆ ಸುರಕ್ಷತೆಗೆ ಒತ್ತು.
* 12:02 PM
* ಇ ಟಿಕೆಟ್ ಮೇಲೆ ಸರ್ವಿಸ್ ಚಾರ್ಜ್ ಇರುವುದಿಲ್ಲ. 2020ರೊಳಗೆ ಮಾನವ ರಹಿತ ರೈಲ್ವೆ ಕ್ರಾಸಿಂಗ್. 4 ಪ್ರಮುಖ ಉದ್ದೇಶಗಳೊಂದಿಗೆ ರೈಲ್ವೆ ಅಭಿವೃದ್ಧಿ. ಆನ್ ಲೈನ್ ರೈಲು ಟಿಕೆಂಟ್ ಬುಕ್ಕಿಂಗ್ ಗೆ ಸೇವಾದರ ಇಲ್ಲ.
* 12:01 PM
* ರೈಲ್ವೆ ಸುರಕ್ಷತೆಗೆ 1 ಲಕ್ಷ ಕೋಟಿ, ಈ ಸಾಲಿನಲ್ಲಿ ಹೆಚ್ಚುವರಿ 5000 ಪಿಜಿ ಸೀಟ್ಸ್. 600 ಜಿಲ್ಲೆಗಳಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ. ಹಿರಿಯ ನಾಗರಿಕರಿಗೆ ಆರೋಗ್ಯ ಕಾರ್ಡ್ ಗಳ ವಿತರಣೆ.
* 11:59 AM
* ಪರಿಶಿಷ್ಟ ಜಾತಿಗೆ 53ಸಾವಿರ ಕೋಟಿ ಅನುದಾನ. ಕೌಶಲಾಭಿವೃದ್ಧಿಗಾಗಿ 100 ಕೇಂದ್ರಗಳ ಸ್ಥಾಪನೆಗೆ ನಿರ್ಧಾರ. ಕೃಷಿ ವಿಜ್ಞಾನ ಪ್ರಯೋಗಾಲಯ ಸ್ಥಾಪನೆಗೆ ನಿರ್ಧಾರ. ದೇಶದ ಪ್ರತಿ ಹಳ್ಳಿಯಲ್ಲಿಯೂ ಶೌಚಾಲಯ ನಿರ್ಮಾಣ.
* 11:56 AM
* ಹೆಚ್ಚು ಕಾಲೇಜುಗಳಿಗೆ ಸ್ವಾಯತ್ತೆ ನೀಡಲು ನಿರ್ಧಾರ. ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರಕ್ಕೆ 10 ಗುರಿ. ರೈತರ ಪ್ರಗತಿ, ಯುವಶಕ್ತಿ ಬಲವರ್ಧನೆ, ಡಿಜಿಟಲ್ ಇಂಡಿಯಾ, ಸಾರ್ವಜನಿಕ ಸೇವೆ, ದುಂದುವೆಚ್ಚಕ್ಕೆ ಕಡಿವಾಣ ಸೇರಿ 10 ಅಂಶಗಳತ್ತ ಚಿತ್ತ.
* 11:54 AM
* ಹಿರಿಯ ನಾಗರಿಕರಿಗೆ ಪಿಂಚಣಿ, ವಿದ್ಯುತ್ ಯೋಜನೆಗೆ 4500 ಕೋಟಿ ರೂಪಾಯಿ. ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರಿನ ಯೋಜನೆ.ಶಾಲೆಗಳಲ್ಲಿ ಕಲಿಕೆಗೆ ಹೊಸ ಸುಧಾರಿತ ವ್ಯವಸ್ಥೆ. ಗ್ರಾಮೀಣ ಶಿಕ್ಷಣಕ್ಕಾಗಿ ತಂತ್ರಜ್ಞಾನದ ಅಳವಡಿಕೆ.
* 11:52 AM
* ದೇಶದಲ್ಲಿ ಒಂದೂವರೆ ಲಕ್ಷ ಉಪ ಆರೋಗ್ಯ ಕೇಂದ್ರಗಳು ಮೇಲ್ದರ್ಜೆಗೆ ಏರಿಕೆ. ದೇಶದ 5 ಕಡೆ ಪ್ರವಾಸೋದ್ಯಮ ವಲಯ ಸ್ಥಾಪನೆ. ಆಧಾರ್ ಕಾರ್ಡ್ ಆಧಾರಿತ ಆರೋಗ್ಯ ಕಾರ್ಡ್ ಯೋಜನೆ.
* 11:51 AM
* ಸಿಬಿಎಸ್ ಸಿ ಪ್ರವೇಶ ಪರೀಕ್ಷೆ ಇಲ್ಲ. ಹನಿ ನೀರಾವರಿಗೆ 500 ಕೋಟಿ ರೂಪಾಯಿ. ಜಾರ್ಖಂಡ್, ಗುಜರಾತ್ ನಲ್ಲಿ ಏಮ್ಸ್ ಸ್ಥಾಪನೆ. 2025ರೊಳಗೆ ಕ್ಷಯರೋಗ ನಿರ್ಮೂಲನೆಗೆ ಗುರಿ.
* 11:49 AM
* 1 ಕೋಟಿ ಕುಟುಂಬಗಳಿಗೆ ಅಂತ್ಯೋದಯ ಯೋಜನೆ. ಗರ್ಭಿಣಿಯರಿಗೆ 6 ಸಾವಿರ ರೂಪಾಯಿ ಸಹಾಯಧನ. ನೇರವಾಗಿ ಗರ್ಭಿಣಿಯರ ಖಾತೆಗೆ ಹಣ. 14 ಲಕ್ಷ ಅಂಗನವಾಡಿಗಳ ಸ್ಥಾಪನೆ. ಗ್ರಾಮೀಣ ಭಾಗದಲ್ಲಿ ಮನೆ ನಿರ್ಮಾಣಕ್ಕೆ ಕಡಿಮೆ ಬಡ್ಡಿದರದಲ್ಲಿ ಸಾಲ.
* 11:48 AM
* ಮಣ್ಣಿನ ಗುಣಮಟ್ಟ ಪರೀಕ್ಷಾ ಕೇಂದ್ರಗಳ ಸ್ಥಾಪನೆ. 1.87 ಲಕ್ಷ ಕೋಟಿ ಗ್ರಾಮೀಣದ ಅಭಿವೃದ್ಧಿಗೆ ಬಳಕೆ. ರಾಷ್ಟ್ರೀಯ ಗುಣಮಟ್ಟ ಅಕಾಡೆಮಿ ಸ್ಥಾಪನೆ ಯೋಜನೆ.
* 11:46 AM
* 2018ರ ವೇಳೆಗೆ ಹಳ್ಳಿ, ಹಳ್ಳಿಗೂ ವಿದ್ಯುತ್ ಯೋಜನೆ ಗುರಿ. ನೀರಾವರಿ ಯೋಜನೆಗೆ 20 ಸಾವಿರ ಕೋಟಿ ರೂಪಾಯಿ. ಗ್ರಾಮೀಣ ರಸ್ತೆ ಅಭಿವೃದ್ಧಿಗೆ 27 ಸಾವಿರ ಕೋಟಿ ರೂಪಾಯಿ ವಿನಿಯೋಗ.
* 11:45 AM
* ನರೇಗಾ ಯೋಜನೆಗೆ 48 ಸಾವಿರ ಕೋಟಿ ರೂಪಾಯಿ ಅನುದಾನ. ಗ್ರಾಮೀಣ ಪ್ರದೇಶದ ಸ್ಥಳೀಯ ಸಂಶೋಧನಾ ಪ್ರತಿಭೆಗಳಿಗೆ ಅವಕಾಶ. ಆನ್ ಲೈನ್ ಶಿಕ್ಷಣಕ್ಕೆ ಒತ್ತು. 350 ಹೊಸ ಕೋರ್ಸ್.
* 11:44 AM
* 2019ರ ಅಂತ್ಯಕ್ಕೆ ಗ್ರಾಮಗಳಲ್ಲಿ 1 ಕೋಟಿ ಮನೆಗಳ ನಿರ್ಮಾಣದ ಗುರಿ. ಪ್ರಧಾನಮಂತ್ರಿ ಅವಾಜ್ ಯೋಜನೆಗೆ 28 ಸಾವಿರ ಕೋಟಿ ರೂಪಾಯಿ. ಗ್ರಾಮಗಳ ಅಭಿವೃದ್ಧಿಗೆ 3 ಲಕ್ಷ ಕೋಟಿ ರೂಪಾಯಿ.
* 11:41 AM
* ಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ಧಿಗೆ ಒತ್ತು. ಹಾಲು ಉತ್ಪಾದನೆ ನಿಧಿಯಲ್ಲಿ ಹೆಚ್ಚಳ. 2018ರೊಳಗೆ ಗ್ರಾಮೀಣ ಪ್ರದೇಶದಲ್ಲಿ ಶೇ.100ರಷ್ಟು ವಿದ್ಯುತ್ ಪೂರೈಕೆ.
* 11:40 AM
* 1 ಕೋಟಿ ಮನೆಗಳ ನಿರ್ಮಾಣದ ಗುರಿ. 50 ಸಾವಿರ ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿಗೆ ಮನ್ನಣೆ. 28 ಸಾವಿರ ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆ. ಡಿಜಿಟಲ್ ಇಂಡಿಯಾಗೆ ಒತ್ತು.
* 11:39 AM
* ಯುವಶಕ್ತಿ ಬಲವರ್ಧನೆ, ಮೂಲಭೂತ ವ್ಯವಸ್ಥೆಗೆ ಆದ್ಯತೆ.ಬಡವರ ಅಭ್ಯುದಯ, ಹಳ್ಳಿಗಳ ಅಭಿವೃದ್ಧಿ ಕೇಂದ್ರದ ಗುರಿ. ಹೈನುಗಾರಿಕೆ ಅಭಿವೃದ್ಧಿಗೆ 8 ಸಾವಿರ ಕೋಟಿ. ಗ್ರಾಮೀಣ ಪ್ರದೇಶಗಳ 1 ಕೋಟಿ ಕುಟುಂಬಗಳ ಬಡತನ ನಿರ್ಮೂಲನೆ.
* 11:37 AM
* ರೈತರಿಗೆ 10 ಲಕ್ಷ ಕೋಟಿ ರೂಪಾಯಿ ಸಾಲ ಸೌಲಭ್ಯದ ಗುರಿ. ಡಿಸೆಂಬರ್ 31ಕ್ಕೆ ಪ್ರಧಾನಿ ಮೋದಿ ಅವರಿಂದ ಹಲವು ಯೋಜನೆಗಳ ಘೋಷಣೆಯಾಗಿದೆ.
* 11:36 AM
* ಜಿಡಿಪಿ ದರದಲ್ಲಿ ಹೆಚ್ಚಳವಾಗುತ್ತದೆ, ಪ್ರಗತಿ ಸಾಧ್ಯವಾಗಲಿದೆ. ದಾಸ್ಯದ ದಿನಗಳ ಸಂಪ್ರದಾಯವ್ನು ಕೈಬಿಡಲಾಗಿದೆ. ಜಿಎಸ್ ಟಿ ಜಾರಿ ಬಳಿಕ ದೇಶದ ಪ್ರಗತಿ ವೇಗವಾಗಿ ಬೆಳೆಯಲಿದೆ. ಭಾರತದ ಮುಂದಿನ ಗುರಿ ಟಿಎಫ್ ಸಿ ಇಂಡಿಯಾ ಯೋಜನೆ
* 11:34 AM
* ಭಾರತದ ಮುಂದಿನ ಗುರಿ ಟೆಕ್ ಇಂಡಿಯಾ ಯೋಜನೆ. ಫಲಸ್ ಭೀಮಾ ಯೋಜನೆಯೂ ಸಹ ರೈತರಿಗೆ ನೆರವು. ಬೆಳೆ ವಿಮೆ ಯೋಜನೆಗೆ 9 ಸಾವಿರ ಕೋಟಿ ರೂ.
* 11:33 AM
* ಇನ್ನು ಮೂರು ವರ್ಷಗಳಲ್ಲಿ ರಾಜ್ಯ ಸರಕಾರಗಳ ಹಣಕಾಸು ಸಹಯೋಗದೊಂದಿಗೆ ಸಹಕಾರಿ ಬ್ಯಾಂಕುಗಳ ಕಂಪ್ಯೂಟರೀಕರಣ ಹಾಗೂ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಡಿಯಲ್ಲಿ ತರುವ ಪ್ರಯತ್ನಗಳು ಸಾಗಿವೆ.
* 11:33 AM
* ರೈತರು ಉತ್ತಮ ಬೆಳೆಯನ್ನು ಬೆಳೆಯಲು ಸರಿಯಾದ ಸಮಯದಲ್ಲಿ ಸಾಲ ಸೌಲಭ್ಯ ಲಭ್ಯವಾಗಬೇಕು. ಹಿಂದುಳಿದ ಭಾಗದ ರೈತರಿಗೆ ಸಾಲಸೌಲಭ್ಯ ಸಿಗುವಂತೆ ನಮ್ಮ ಗಮನವನ್ನು ಹರಿಸಿದ್ದೇವೆ. ಇದರಲ್ಲಿ ಈಶಾನ್ಯ ಭಾರತದ ಭಾಗಗಳೂ ಸೇರಿವೆ.
* 11:32 AM
* ಮಹಾತ್ಮಗಾಂಧಿ ಹೇಳಿಕೆ ಉಲ್ಲೇಖಿಸಿದ ಅರುಣ್ ಜೇಟ್ಲಿ. ಕೃಷಿ ಕ್ಷೇತ್ರದ ಅತ್ಯುತ್ತಮ ಪ್ರಗತಿಯಲ್ಲಿ ಭಾರತವಿದೆ. ಆರ್ಥಿಕವಾಗಿ ಅತೀ ವೇಗದಲ್ಲಿ ಭಾರತ ಬೆಳೆಯುತ್ತಿದೆ. ಸಣ್ಣ ಹಾಗೂ ಮಧ್ಯಮ ವರ್ಗದ ರೈತರಿಗೆ ಕೇಂದ್ರದ ನೆರವು.
* 11:30 AM
* ನೋಟು ನಿಷೇಧದ ಲಾಭ ಸಾರ್ವಜನಿಕರಿಗೆ ಮುಂದಿನ ದಿನಗಳಲ್ಲಿ ಸಿಗಲಿದೆ. ಆರ್ಥಿಕ ಸ್ಥಿತಿ ಅಭಿವೃದ್ಧಿಗೆ ನೋಟು ನಿಷೇಧ ಪೂರಕ. ಬೆಳವಣಿಗೆ ಹಾಗೂ ಅಭಿವೃದ್ಧಿ ಹಾದಿಯಲ್ಲಿ ಕೇಂದ್ರ ಸರ್ಕಾರವಿದೆ.
* 11:29 AM
* ಜಿಎಸ್ ಟಿ ಕೌನ್ಸಿಲ್ ಗಳಲ್ಲಿ ಎಲ್ಲಾ ಸಮಸ್ಯೆ ಬಗೆಹರಿಸಲಾಗಿದೆ. ನೋಟು ನಿಷೇಧ ಕೇಂದ್ರ ಸರ್ಕಾರದ ಸಾಧನೆ ಎಂದು ಬಣ್ಣನೆ. ನೋಟು ನಿಷೇಧದ ನಿರ್ಧಾರದಿಂದ ಬ್ಯಾಂಕ್ ಗಳಲ್ಲಿ ಸಾಲ ಕಡಿಮೆಯಾಗಿದೆ.
* 11:27 AM
* ಅಮಾನ್ಯೀಕರಣದ ಲಾಭ ದೇಶದಲ್ಲಿ ಈಗಾಗಲೇ ಕಾಣುತ್ತಿದೆ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗಾಗಿ ಹೆಚ್ಚಿನ ಬಂಡವಾಳ ಹೂಡಿಕೆ. ಉತ್ತಮ ಉದ್ದೇಶ ಎಂದಿಗೂ ಸಹ ವೈಫಲ್ಯ ಆಗುವುದಿಲ್ಲ.
* 11:26 AM
* ಎಫ್ ಡಿಎ ನೀತಿಗಳಲ್ಲಿ ಮಹತ್ವದ ಬದಲಾವಣೆ. ಆರ್ಥಿಕ ಸುಧಾರಣೆಗೆ ಜಿಎಸ್ ಟಿ ಜಾರಿ. ಟೆಕ್ ಇಂಡಿಯಾಕ್ಕೆ ಒತ್ತು. ಮೂರು ಪ್ರಮುಖ ಸುಧಾರಣೆಗಳ ಘೋಷಣೆ.
* 11:25 AM
* ಬಡರಿಗೆ ವಸತಿ ಸೌಲಭ್ಯಕ್ಕೆ ಕ್ರಮ, 2017ರ ಜಿಡಿಪಿ ದರ ಶೇ.7.2ರಷ್ಟು. ನೀರಾವರಿ ಯೋಜನೆಗಳಿಗೆ ಹೆಚ್ಚಿನ ಬಂಡವಾಳ. ಮೂಲಭೂತ ಸೌಕರ್ಯಕ್ಕೆ, ಬಡತನ ನಿರ್ಮೂಲನೆಗೆ ಹೆಚ್ಚಿನ ಒತ್ತು.
* 11:23 AM
* ನೋಟು ನಿಷೇಧದ ನಂತರ ದೇಶದಲ್ಲಿ ಆರ್ಥಿಕ ಕ್ರಾಂತಿಯಾಗಿದೆ. ನೋಟು ನಿಷೇಧ ದೇಶದ ಅರ್ಥವ್ಯವಸ್ಥೆಗೆ ಭವಿಷ್ಯದಲ್ಲಿ ಲಾಭದಾಯಕವಾಗಲಿದೆ.
* 11:22 AM
* ಜಗತ್ತಿನ 6ನೇ ಅತಿ ದೊಡ್ಡ ಆರ್ಥಿಕ ಶಕ್ತಿ ಹೊಂದಿದ ದೇಶ ಭಾರತವಾಗಿದೆ. ವಿದೇಶಿ ಬಂಡವಾಳದ ಹೂಡಿಕೆ ಶೇ.36ರಷ್ಟು ಹೆಚ್ಚಳವಾಗಿದೆ. ದೇಶದ ವಿದೇಶಿ ವಿನಿಮಯ ಹೆಚ್ಚಳವಾಗಿದೆ.
* 11:20 AM
* ವಸಂತ ಪಂಚಮಿ ದಿನ ಬಜೆಟ್ ಮಂಡನೆ ಆರಂಭಿಸಿದ್ದೇನೆ. ದೇಶದ ಅರ್ಥವ್ಯವಸ್ಥೆಯ ಮೇಲೆ ಅಮೆರಿಕ ಚುನಾವಣೆಯ ಪ್ರಭಾವವೂ ಇದೆ. ಜಗತ್ತಿನ ಆರ್ಥಿಕ ಪ್ರಗತಿ ದೇಶದ ಅಭಿವೃದ್ಧಿ ಅವಲಂಬಿತವಾಗಿದೆ.
* 11:18 AM
* ಬಜೆಟ್ ಅನ್ನು ಬಡವರಿಗೆ ತಲುಪಿಸುವುದೇ ನಮ್ಮ ಗುರಿ. ನಮ್ಮ ಅವಧಿಯಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಬಂದಿದೆ. ದೇಶದಲ್ಲಿ ಕಪ್ಪು ಹಣ ನಿಯಂತ್ರಿಸಿದ್ದೇವೆ. ಈ ವರ್ಷ ಎಲ್ಲಾ ಆರ್ಥಿಕ ವಲಯ ಚೇತರಿಕೆ ಕಾಣಲಿದೆ.
* 11:17 AM
* ನೋಟು ನಿಷೇಧದ ನಂತರ ಮೊದಲ ಬಾರಿಗೆ ಬಜೆಟ್ ಮಂಡನೆ. ಕಳೆದ ವರ್ಷ ಜಿಡಿಪಿ ದರದಲ್ಲಿ ವೃದ್ಧಿ. ಉದ್ಯೋಗ ಕ್ಷೇತ್ರದಲ್ಲಿ ಬಲವರ್ಧನೆ ನಮ್ಮ ಗುರಿ. ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಶ್ರಮಿಸುತ್ತಿದೆ.
* 11:15 AM
* 4ನೇ ಕೇಂದ್ರ ಬಜೆಟ್ ಮಂಡಿಸುತ್ತಿರುವ ವಿತ್ತ ಸಚಿವ ಜೇಟ್ಲಿ. ನಮ್ಮ ಅವಧಿಯಲ್ಲಿ ಎರಡಂಕೆಯ ಹಣದುಬ್ಬರ ನಿಯಂತ್ರಣ. ಸಾರ್ವಜನಿಕ ಹಣವನ್ನು ಸದುಪಯೋಗಪಡಿಸಲು ಕ್ರಮ.
* 11:13 AM
* ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಫೆ.1ರಂದು ಬಜೆಟ್ ಮಂಡಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ರೈಲ್ವೆ ಬಜೆಟ್ ಸಾಮಾನ್ಯ ಬಜೆಟ್ ನಲ್ಲಿ ವಿಲೀನ.
* 11:11 AM
* ವಿಪಕ್ಷಗಳ ಗದ್ದಲದ ನಡುವೆಯೇ ಬಜೆಟ್ ಮಂಡನೆ ಆರಂಭಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ, ಸ್ಪೀಕರ್ ಸುಮಿತ್ರಾ ಮಹಾಜನ್ ಬಜೆಟ್ ಮುಂದೂಡಬೇಕೆಂಬ ಮನವಿಯನ್ನು ತಿರಸ್ಕರಿಸಿದ್ದಾರೆ.
* 11:08 AM
* ಲೋಕಸಭಾ ಕಲಾಪ ಆರಂಭ. 79 ವರ್ಷದ ಇ ಮಹಮ್ಮದ್ ನಿಧನಕ್ಕೆ ಲೋಕಸಭೆಯಲ್ಲಿ ಮೌನ ಸಂತಾಪ ಸೂಚಿಸಲಾಯಿತು. ಆದರೆ ಸ್ಪೀಕರ್ ಬಜೆಟ್ ಮಂಡನೆ ಅನಿವಾರ್ಯ ಎಂದು ಹೇಳುತ್ತಿದ್ದಂತೆಯೇ ವಿಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿದವು.
* 10:58 AM
* ಬಜೆಟ್ ಮಂಡನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ. ಇನ್ನು ಕೆಲವೇ ಕ್ಷಣದಲ್ಲಿ ಲೋಕಸಭೆಯಲ್ಲಿ ಬಜೆಟ್ ಮಂಡನೆ ಆರಂಭವಾಗಲಿದೆ.
* 10:46 AM
* ಬಜೆಟ್ ಮಂಡನೆ ಸಾಂವಿಧಾನಿಕ ಜವಾಬ್ದಾರಿ. ಹಾಗಾಗಿ ಇಂದೇ 11ಗಂಟೆಗೆ ಸಂಸತ್ ನಲ್ಲಿ ಬಜೆಟ್ ಮಂಡನೆಯಾಗಲಿದೆ ಎಂದು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಸ್ಪಷ್ಟಪಡಿಸಿದ್ದಾರೆ.
* 10:44 AM
* ಬಜೆಟ್ ಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ವಿತ್ತ ಸಚಿವರು, ನಾನು ಬುಧವಾರ 2017-18ನೇ ಸಾಲಿನ ಬಜೆಟ್ ಅನ್ನು ಮಂಡಿಸುತ್ತಿದ್ದೇನೆ. ಅದೇ ರೀತಿ ನೀವು ನನಗೆ ನೇರವಾಗಿ ಪ್ರಶ್ನೆಗಳನ್ನು ಕೇಳಬಹುದು, ಅದಕ್ಕೆ ಉತ್ತರ ಕೊಡಲು ನನಗೆ ತುಂಬಾ ಸಂತಸದ ವಿಷಯವಾಗಿದೆ ಎಂದು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
* 10:27 AM
* ನಿಗದಿಯಂತೆ 11ಗಂಟೆಗೆ ಬಜೆಟ್ ಮಂಡನೆಯಾಗಲಿದೆ. ಇದರಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಟ್ವೀಟ್ ಮಾಡುವ ಮೂಲಕ ಅನುಮಾನಕ್ಕೆ ತೆರೆ ಎಳೆದಿದ್ದಾರೆ.
* 10:26 AM
* 2017ನೇ ಸಾಲಿನ ಬಜೆಟ್ ಮಂಡನೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಂಕಿತ. ಪ್ರಧಾನಿ ನರೇಂದ್ರ ಮೋದಿ ಸಂಸತ್ ಭವನಕ್ಕೆ ಆಗಮನ. ಪ್ರಧಾನಿ ನೇತೃತ್ವದಲ್ಲಿ ಸಂಪುಟ ಸಭೆ ಆರಂಭವಾಗಲಿದೆ.
ಸುಮಾರು 2 ಗಂಟೆ ಅವಧಿಯ 2017ನೇ ಸಾಲಿನ ಕೇಂದ್ರ ಬಜೆಟ್ನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿ ಬಜೆಟ್ ಭಾಷಣ ಮುಗಿಸಿದರು.
01:07 PM:
ಜಿಎಸ್ಟಿ ಅನುಷ್ಠಾನಕ್ಕೆ ಸಲ್ಲಿಸಿದ್ದ ಶಿಫಾರಸ್ಸುಗಳನ್ನು ಸಮಿತಿಯು ಅಂತಿಮಗೊಳಿಸಿದೆ. ಜಿಎಸ್ಟಿ ಜಾರಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದಾಯ ತೆರಿಗೆ ಹೆಚ್ಚು ಸಂಗ್ರಹವಾಗುವ ನಿರೀಕ್ಷೆಯಿದೆ.
01:00 PM:
ವಾರ್ಷಿಕ 50 ಲಕ್ಷದಿಂದ 1 ಕೋಟಿ ಆದಾಯ ಹೊಂದಿರುವವರಿಗೆ 10% ಹೆಚ್ಚುವರಿ ಸರ್ಚಾರ್ಜ್
12:57 PM:
3 ಲಕ್ಷ ವಾರ್ಷಿಕ ಆದಾಯ ಹೊಂದಿದವರಿಗೆ ತೆರಿಗೆ ಹೊರೆ ಇಲ್ಲ
12:54 PM:
2.5 ಲಕ್ಷದಿಂದ 5 ಲಕ್ಷಕ್ಕೆ ಆದಾಯ ತೆರಿಗೆ ಮಿತಿ 5% ಇಳಿಕೆ
12:52 PM:
ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ತಲಾ ಒಬ್ಬರಿಗೆ 2 ಸಾವಿರ ನಗದು ಮೀಸಲು. ವಾರ್ಷಿಕ ತೆರಿಗೆ ಮಾಹಿತಿ ಸಲ್ಲಿಸುವುದು ಎಲ್ಲ ರಾಜಕೀಯ ಪಕ್ಷಗಳಿಗೆ ಕಡ್ಡಾಯ
12:46 PM:
ಮೂರು ಲಕ್ಷಕ್ಕಿಂತ ಅಧಿಕ ನಗದು ವಹಿವಾಟಿಗೆ ಕಡಿವಾಣ, ಚೆಕ್, ಆನ್ಲೈನ್ ವಹಿವಾಟಿಗೆ ಒತ್ತು
12:41 PM:
ವಾರ್ಷಿಕ 50 ಕೋಟಿ ವಹಿವಾಟು ನಡೆಸುವ ಕಂಪೆನಿಗಳ ವಾರ್ಷಿಕ ತೆರಿಗೆಯಲ್ಲಿ 5% ಕಡಿತ
12:36 PM:
ವಿಜ್ಞಾನ ಮತ್ತು ಸಂಶೋಧನೆ ಕ್ಷೇತ್ರಕ್ಕೆ 37,435 ಕೋಟಿ ಅನುದಾನ.
12:32 PM:
ಪೆಟ್ರೋಲ್ ಬಂಕ್, ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆ ಕಡ್ಡಾಯ
12:29 PM:
ಮುಖ್ಯ ಅಂಚೆ ಕಚೇರಿಗಳು ಪಾಸ್ಪೋರ್ಟ್ ಸೇವಾ ಕೇಂದ್ರಗಳಾಗಿ ಮುಂಬರುವ ದಿನಗಳಲ್ಲಿ ಕಾರ್ಯ ನಿರ್ವಹಿಸಲಿವೆ.
12:27 PM:
ಸಾಲ ವಂಚನೆ ಮಾಡುವವರ ಆಸ್ತಿ ಜಪ್ತಿಗೆ ಹೊಸ ಕಾನೂನು ರಚನೆ
12:24 PM:
ಮಾರ್ಚ್ ಅಂತ್ಯಕ್ಕೆ ಬ್ಯಾಂಕುಗಳಲ್ಲಿ ಹೆಚ್ಚುವರಿ 10 ಲಕ್ಷ ಪಿಒಎಸ್ ಮಷಿನ್ ಅಳವಡಿಕೆ. ಆಧಾರ್ ಕಾರ್ಡ್ ಜೋಡಣೆ ಮೂಲಕ ವ್ಯವಹಾರದಲ್ಲಿ ಪಾರದರ್ಶಕತೆ ತರಲಾಗುವುದು.
12:20 PM:
ಸಾರಿಗೆ ಕ್ಷೇತ್ರಕ್ಕೆ 2.41 ಕೋಟಿ ಮೀಸಲು. ಕರಾವಳಿ ಹೆದ್ದಾರಿಗಳ ಅಭಿವೃದ್ಧಿಗೆ ಕ್ರಮ.
12:18 PM:
25 ಕೋಟಿ ಜನ ಭೀಮ್ ಆ್ಯಪ್ ಬಳಕೆದಾರರಿದ್ದಾರೆ. ಆ್ಯಪ್ ಬಳಕೆದಾರರರಿಗೆ ವಿಶೇಷ ಸೌಲಭ್ಯಗಳು.
12:15 PM:
ರಕ್ಷಣಾ ಕ್ಷೇತ್ರದವರಿಗೆ ಮತ್ತು ಯೋಧರಿಗೆ ನೇರ ವಿಮಾನ ಟಿಕೆಟ್ ಬುಕಿಂಗ್ ಸೌಲಭ್ಯ
12:09 PM:
2019ರ ಅಂತ್ಯಕ್ಕೆ ದೇಶದಾದ್ಯಂತ ಜೈವಿಕ ಶೌಚಾಲಯ ನಿರ್ಮಾಣ ಗುರಿ
12:07 PM:
ಸಾರಿಗೆ ವಲಯಕ್ಕೆ ₹ 2.41 ಲಕ್ಷ ಕೋಟಿ ಮತ್ತು ಭಾರತ್ ನೆಟ್ ಯೋಜನೆಗೆ ₹ 10 ಸಾವಿರ ಕೋಟಿ
12:06 PM:
ರೈಲ್ವೆ ಇ–ಟಿಕೆಟ್ ಮೇಲಿನ ಸೇವಾ ಶುಲ್ಕ ರದ್ದು
12:04 PM:
2019ರ ವೇಳೆಗೆ ಭಾರತೀಯ ರೈಲ್ವೆಯ ಎಲ್ಲಾ ಕೋಚ್ಗಳಲ್ಲಿ ಪರಿಸರ ಸ್ನೇಹಿ ಶೌಚಾಲಯ (Bio-toilet)
12:03 PM:
ಮುಂಬರುವ 5 ವರ್ಷದಲ್ಲಿ ರೈಲ್ವೆ ಸುರಕ್ಷತಾ ಧನವನ್ನು 1 ಲಕ್ಷ ಕೋಟಿ ಮೂಲನಿಧಿಯಾಗಿ ಪರಿವರ್ತಿಸಲಾಗುವುದು.
11:57 AM:
ನೂತನ ವಿದ್ಯುತ್ ಯೋಜನೆಗಳಿಗೆ 4500 ಕೋಟಿ ಒದಗಿಸಲಾಗುವುದು. ಗ್ರಾಮೀಣ ಶಿಕ್ಷಣ, ಕುಡಿಯುವ ನೀರು ಪೂರೈಕೆಗೆ ಹೆಚ್ಚಿನ ಗಮನ
11:54 AM:
ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ 2019 ರ ವೇಳೆಗೆ ನಿರಾಶ್ರಿತರಿಗೆ 1 ಕೋಟಿ ಮನೆ ನಿರ್ಮಿಸಿಕೊಡಲಾಗುವುದು.
11:53 AM:
‘ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ವಲಯದ ಅಭಿವೃದ್ಧಿಗೆ ₹ 1,87,223 ಕೋಟಿ’
11:52 AM:
ನರೇಗಾ ಯೋಜನೆಗಳಿಗೆ ಬಜೆಟ್ನಲ್ಲಿ ಈ ಬಾರಿ ದಾಖಲೆಯ 48 ಸಾವಿರ ಕೋಟಿ ಮೀಸಲಿರಿಸಲಾಗಿದೆ.
11:51 AM:
‘ನರೇಗಾ ಯೋಜನೆಗೆ ₹ 48 ಸಾವಿರ ಕೋಟಿ’
11:49 AM:
‘ಜಾರ್ಖಂಡ್ ಮತ್ತು ಗುಜರಾತ್ನಲ್ಲಿ ಏಮ್ಸ್ ಸ್ಥಾಪನೆ’
11:49 AM:
ಗ್ರಾಮೀಣಾಭಿವೃದ್ಧಿ, ಕೃಷಿ ಕ್ಷೇತ್ರಕ್ಕೆ ಪ್ರಸಕ್ತ ಸಾಲಿನಲ್ಲಿ 1,87,223 ಕೋಟಿ ಮೀಸಲು. ಕಳೆದ ಬಾರಿಗಿಂತ ಇದು 24% ಹೆಚ್ಚಳ
11:45 AM:
2017–18 ಸಾಲಿನಲ್ಲಿ ರೈತರಿಗೆ ಕೃಷಿ ಸಾಲದ ಮಿತಿ 10 ಲಕ್ಷ ಕೋಟಿಗೆ ಏರಿಸಲಾಗುವುದು
11:44 AM:
‘ದೇಶದ 600 ಜಿಲ್ಲೆಗಳಲ್ಲಿ ಪ್ರಧಾನಮಂತ್ರಿ ಕೌಶಲ ಅಭಿವೃದ್ಧಿ ಕೇಂದ್ರಗಳ ಆರಂಭ; 100 ಕಡೆ ಅಂತರರಾಷ್ಟ್ರೀಯ ಕೌಶಲ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆ’
11:42 AM:
ಬೆಳೆ ವಿಮೆ ಯೋಜನೆಗೆ 9 ಸಾವಿರ ಕೋಟಿ ಮೀಸಲು. ರೈತರಿಗೆ ಫಸಲ್ ಬೀಮಾ ಯೋಜನೆ ಅಡಿ ಹಲವು ಹೊಸ ಅಂಶಗಳ ಘೋಷಣೆ
11:38 AM:
ಹೈನುಗಾರಿಕೆ ಸಂಸ್ಕರಣಾ ಘಟಕ ಸ್ಥಾಪನೆಗೆ ನಬಾರ್ಡ್ ಬ್ಯಾಂಕಿನಿಂದ 8 ಸಾವಿರ ಕೋಟಿ ಧನ ಸಹಾಯ
11:36 AM:
ರೈತರಿಗೆ ಮಣ್ಣು ಆರೋಗ್ಯ ಕಾರ್ಡ್ ವಿತರಣೆ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳ ನಿರ್ಮಾಣ
11:33 AM:
‘ಹಾಲು ಉತ್ಪಾದನೆ ಹೆಚ್ಚಿಸಲು ನಬಾರ್ಡ್ನಿಂದ ₹ 8 ಸಾವಿರ ಕೋಟಿ ಬಿಡುಗಡೆ’
11:31 AM:
ಕೃಷಿ ಆಧಾರಿತ ರಾಷ್ಟ್ರದಲ್ಲಿ ಈ ಬಾರಿ ಉತ್ತಮ ಮುಂಗಾರಿನ ನಿರೀಕ್ಷೆಯಿದೆ. ಇದರಿಂದ ಕೃಷಿ ಕ್ಷೇತ್ರದಲ್ಲಿ 4.1% ಪ್ರಗತಿ ಸಾಧ್ಯತೆ.
11:31 AM:
‘ರೈತರು ಮಣ್ಣು ಪರೀಕ್ಷೆ ಮಾಡಿಸಲು ಹೆಚ್ಚುವರಿ ಮಿನಿ ಲ್ಯಾಬ್ಗಳ ಸ್ಥಾಪನೆ’
11:27 AM:
ವಿದೇಶಿ ನೇರ ಬಂಡವಾಳದಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಜಿಎಸ್ಟಿ ಕಾಯ್ದೆ ಮಹತ್ವದ ಬದಲಾವಣೆ ತರಲಿದೆ.
11:27 AM:
‘ಕೃಷಿ ಉತ್ಪಾದನೆ ಈ ವರ್ಷ ಶೇಕಡ 4.1ರಷ್ಟು ಹೆಚ್ಚಾಗುವ ಸಾಧ್ಯತೆ’
11:24 AM:
ಸಾಮಾನ್ಯ ಬಜೆಟ್ ಜತೆಗೆ ರೈಲ್ವೆ ಬಜೆಟ್ ಸೇರ್ಪಡೆ ಐತಿಹಾಸಿಕ ನಿರ್ಧಾರ: ಅರುಣ್ ಜೇಟ್ಲಿ
11:22 AM:
ಕಳೆದ ಒಂದು ವರ್ಷದಿಂದ ಜಾಗತಿಕ ಮಟ್ಟದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಭಾರತ. ನೋಟು ರದ್ದತಿ ಕ್ರಮ ನಿರ್ಣಾಯಕ ಪಾತ್ರ ವಹಿಸಲಿದೆ.