ವಿಷಯಕ್ಕೆ ಹೋಗು

ಐಸೆಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(AIESEC (ಐಸೆಕ್ ) ಇಂದ ಪುನರ್ನಿರ್ದೇಶಿತ)
Association Internationale des Étudiants en Sciences Économiques et Commerciales
ಚಿತ್ರ:Blue on white short height100.gif
Logo of AIESEC
ಸಂಕ್ಷಿಪ್ತ ಹೆಸರುAIESEC
ಸ್ಥಾಪನೆ1948
ಶೈಲಿNGO
PurposeProviding a platform for youth leadership development
ಪ್ರಧಾನ ಕಚೇರಿRotterdam, Netherlands
ಪ್ರದೇಶ served
Worldwide
Membership
50.000
ಅಧಿಕೃತ ಭಾಷೆ
English
AIESEC International President (PAI)
Hugo Pereira
ಮುಖ್ಯ ಭಾಗ
Global Plenary
ಅಧಿಕೃತ ಜಾಲತಾಣwww.aiesec.org, www.myAIESEC.net
RemarksAIESEC is the world's largest student-run organization

AIESEC (ಇದನ್ನು "ಐಸೆಕ್ "ಇದು ತನ್ನ ವಿವರಣಾತ್ಮಕ ರೂಪವಾದ ''ಅಸೊಶಿಯೇಶನ್ ಇಂಟರ್ ನ್ಯಾಶನೇಲ್ ಡೆಸ್ ಎಟುಡಿಯಂಟ್ಸ್ ಎನ್ ಸೈನ್ಸ್ ಎಕೊನೊಮಿಕುಸ್ ಎಟ್ ಕಮರ್ಸಿಯೇಲ್ಸ್ , ಈ ಸಂಸ್ಥೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳ ವಿನಿಮಯ ಮತ್ತು ಪೂರ್ವ ತರಬೇತಿ ಕಾರ್ಯಯೋಜನೆಗಳನ್ನು ಅದು ಲಾಭದಾಯಕ ಮತ್ತು ಲಾಭದ ಉದ್ದೇಶ ರಹಿತ ಸಂಘಟನೆಗಳ ಮೂಲಕ ವಿದ್ಯಾರ್ಥಿ ವರ್ಗಕ್ಕೆ ಶಿಕ್ಷಣ ಮತ್ತು ಉದಯುಗ ಪೂರ್ವ ತರಬೇತಿಗಳಿಗೆ ಅನುಕೂಲವೊದಗಿಸುತ್ತದೆ. ಇದರ ಅಂತಾರಾಷ್ಟ್ರೀಯ ಕಚೇರಿಯು ನೆದರ್ ಲ್ಯಾಂಡ್ಸ್ ನ ರೊಟ್ಟೆರ್ ಡ್ಯಾಮ್ ನಲ್ಲಿದೆ. AIESEC ಸಂಸ್ಥೆಯ ಜಾಲದ 2009 ರ ಜೂನ್ ವರೆಗಿನ ಕಾರ್ಯಚಟುವಟಿಕೆಯಿಂದಾಗಿ 107 ದೇಶಗಳ ಮತ್ತು ಕೇಂದ್ರಾಡಳಿತ ಪ್ರದೇಶದ ಸುಮಾರು 45,000 ಕ್ಕೂ ಅಧಿಕ ವಿದ್ಯಾರ್ಥಿಗಳು ಈ ವಿನಿಮಯ ಮತ್ತು ತರಬೇತಿ ಯೋಜನೆಯ ಫಲಾನುಭವಿಗಳಾಗಿದ್ದಾರೆ.ವಿಶ್ವದಲ್ಲೇ ಅತಿ ದೊಡ್ಡ ಪ್ರಮಾಣದಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಶ್ರಮಿಸುತ್ತಿರುವ ಸಂಘಟನೆ [ಸೂಕ್ತ ಉಲ್ಲೇಖನ ಬೇಕು]ಇದಾಗಿದೆ. ಸದ್ಯ ಜಾಗತಿಕ ಮಟ್ಟದಲ್ಲಿ ಸುಮಾರು 1,700 ಕ್ಕೂ ಅಧಿಕ ವಿಶ್ವವಿದ್ಯಾಲಯಗಳಲ್ಲಿ ಇದು ತನ್ನ ಅಸ್ತಿತ್ವ ಹೊಂದಿದೆ.ಹೀಗೆ ಅದು ಪ್ರತಿವರ್ಷ ಸುಮಾರು 8,5೦೦ ವಿದ್ಯಾರ್ಥಿಗಳು ಮತ್ತು ಪದವೀಧರರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ದೇಶಗಳ ನಡುವೆ ವಿನಿಮಯ [] ಮಾಡಿಸುತ್ತದೆ.

ಇತಿಹಾಸ

[ಬದಲಾಯಿಸಿ]

AIESEC(ಐಸೆಕ್ ) ಸಂಸ್ಥೆಯ ಈ ಆಲೋಚನೆಯು 1930 ರಲ್ಲಿ ಅನುಷ್ಠಾನಗೊಂಡಿತು. ಯುರೊಪಿನಾದ್ಯಂತದ ಶಾಲಾ-ಕಾಲೇಜುಗಳಿಂದ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯ ವಿನಿಮಯ ಆರಂಭವಾಯಿತು. ಅದರಲ್ಲೂ ವಹಿವಾಟು ಮತ್ತು ಆರ್ಥಿಕ ವಲಯದಲ್ಲಿ ಹೆಸರು ಮಾಡಿದ ವಿದ್ಯಾರ್ಥಿಗಳಿಂದ ಮಾಹಿತಿ, ಹೆಚ್ಚಿನ ತರಬೇತು,ಪರಸ್ಪರ ವಿಚಾರ-ವಿನಿಮಯವು ಅದರ ಅಭಿವೃದ್ಧಿ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಿತು. ಈ ಮೊದಲು ವಿದ್ಯಾರ್ಥಿಗಳು ಇನ್ನುಳಿದ ದೇಶಗಳಲ್ಲಿ ಪೂರ್ವ ತರಬೇತಿ ತೆಗೆದುಕೊಳ್ಳುತ್ತಿದ್ದರು. ಆದರೆ ಇದು ಅವರ ಸ್ವಯಂ ಪ್ರೇರಣೆಯಿಂದ ಇತ್ತು. ಯಾವಾಗ ಎರಡನೆಯ ಮಹಾಯುದ್ದ ಸಂದರ್ಭದಲ್ಲಿನ ದುಷ್ಪರಿಣಾಮವು ಈ ಪ್ರಕ್ರಿಯೆಯನ್ನು [] ಸ್ಥಬ್ದಗೊಳಿಸಿತು. ಅದೇ 1944 ರಲ್ಲಿ ತಟಸ್ಥ ಸ್ಕ್ಯಾಂಡೇನೆವಿಯನ್ ದೇಶಗಳು ಈ ವಿನಿಮಯವನ್ನು ಮುಂದುವರೆಸಿದ್ದವು: ಸ್ಟಾಕ್ ಹೊಲ್ಮ್ ನಲ್ಲಿನ ಬೆರ್ಟಿಲ್ ಹೆಡ್ ಬರ್ಗ್ (ಸ್ಟಾಕ್ ಹೊಲ್ಮ್ಸ್ ನ ಸ್ಕೂಲ್ ಆಫ್ ಎಕಾನಾಮಿಕ್ಸ್ ನಲ್ಲಿ ಅಧಿಕಾರಿಯಾಗಿದ್ದರು) ಮತ್ತು ಇಬ್ಬರು ವಿದ್ಯಾರ್ಥಿಗಳಾದ ಝೆಕೊಸ್ಲಾವಾಕಿಯಾದ ಜಾರೊಸ್ಲಾವ್ ಝಿಚ್ , ಬೆಲ್ಜಿಯಮ್ ನ ಸ್ಟಾನಿ ಸ್ಲಾಶ ಕ್ಯಾಲೆನ್ಸ್ ಇವರು AIESE ಐಸೆಕ್ ನ ಸಂಸ್ಥಾಪಕರಾದರು, ಅವರು AIESE ಇದರ ಮೂಲ [] ಪ್ರವರ್ತಕರೆನ್ನಬಹುದು.

ಸಾಮಾನ್ಯವಾಗಿ ವಾಡಿಕೆಯಂತೆ "ಸದಸ್ಯ ರಾಷ್ಟ್ರಗಳ ಮಧ್ಯೆ ಸ್ನೇಹಪರ ವಾತಾವರಣ ಮತ್ತು ಅಭಿವೃದ್ಧಿಗೆ ನೆರವಾಗುವ"ಈ ಪ್ರಕ್ರಿಯೆಯು 1946 ರಲ್ಲಿ ಆರಂಭವಾಯಿತು. ಅದಲ್ಲದೇ AIESEC ಐಸೆಕ್ ಅಧಿಕೃತವಾಗಿ 1948ರಲ್ಲಿ ತನ್ನ ಕೆಲಸ ಪ್ರಾರಂಭಿಸಿತು. ಆ ಸಮಯದಲ್ಲಿ ಆ ಉದ್ದೇಶವು "ವ್ಯಕ್ತಿಗಳ ಬಗ್ಗೆ ಅರಿಯುವ ಮೂಲಕ ಆಯಾ ದೇಶಗಳಲ್ಲಿನ ಪರಸ್ಪರ ತಿಳಿವಳಿಕೆ ಮೂಡಿಸಲು, ಅದನ್ನು ವಿಸ್ತರಿಸಿ ವಿಶ್ವವನ್ನು ಓರ್ವ ವ್ಯಕ್ತಿಯ ಸುಧಾರಣೆಯೊಂದಿಗೆ ಒಂದೇ ವೇಳೆಗೆ ಎರಡನ್ನೂ ಪ್ರಗತಿಯ ವಲಯಕ್ಕೆ ತರುವ ವಿನೂತನ ಕಾರ್ಯ [] ಆರಂಭವಾಯಿತು." ಆ ವೇಳೆಗೆ 1949 ರಲ್ಲಿ ನಡೆದ ಮೊದಲ ವಿನಿಮಯ ಕಾರ್ಯಕ್ರಮದಲ್ಲಿ 89 ವಿದ್ಯಾರ್ಥಿಗಳು "ಸ್ಟಾಕ್ ಹೊಲ್ಮ್ ಕಾಂಗ್ರೆಸ್ "ಎಂದು ಕರೆಯಲಾದ ಸಭೆಯಲ್ಲಿ [] ಪಾಲ್ಗೊಂಡರು. ಆ ಕೂಡಲೇ AIESEC ಐಸೆಕ್ ಜನಪ್ರಿಯಗೊಂಡಿತು: 1960 ರ ಹೊತ್ತಿಗೆ ಸುಮಾರು 2467 ವಿನಿಮಯಗಳು ವರದಿಯಾದವು; ಅದಲ್ಲದೇ 1970 ರ ಕೊನೆಗೆ 4232 ಪರಸ್ಪರ ವಿನಿಮಯಗಳು ವರದಿಯಾದವು. AIESEC ಐಸೆಕ್ ನ ಇತಿಹಾಸದಲ್ಲೇ ಮೈಲುಗಲ್ಲು ಎನ್ನಲಾದ "ಇಂಟರ್ ನ್ಯಾಶನಲ್ ಥೀಮ್ ಪ್ರೊಗ್ರಾಮ್ " ಕಾರ್ಯಕ್ರಮವು ಅಂತಾರಾಷ್ಟ್ರೀಯ, ಪ್ರಾದೇಶಿಕ ಮತ್ತು ಸ್ಥಳೀಯವಾಗಿ ವಿಚಾರ ಸಂಕಿರಣಗಳ ಮೂಲಕ ವಿಶಿಷ್ಟ ಯೋಜನೆಗಳಿಗೆ ತನ್ನನ್ನು ತಾನು ತೆರೆದುಕೊಂಡಿತು. ಇದು ಭವಿಷ್ಯದ AIESEC ಐಸೆಕ್ ವಿದ್ಯಾರ್ಥಿಗಳಿಗೆ ಮಾರ್ಗಸೂಚಿಯಾಗಿ ಪರಿಣಮಿಸಿತು. ಮುಂಬರುವ ಪೀಳಿಗೆಗೆ ಇದು [] ಸೂತ್ರವಾಗಿತ್ತು. ಈ ಕಳೆದ ದಶಕಗಳಲ್ಲಿ ಚರ್ಚಿತ ಮುಖ್ಯ ವಿಷಯಗಳೆಂದರೆ ಅಂತಾರಾಷ್ಟ್ರೀಯ ವ್ಯಾಪಾರ, ಆಡಳಿತ ನಿರ್ವಹಣಾ ಶಿಕ್ಷಣ, ನಿರಂತರ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಕಾರ್ಪೊರೇಟ್ [] ಜವಾಬ್ದಾರಿಗಳು, ಇತ್ಯಾದಿ. ಅದೇ 1990 ರಲ್ಲಿ ಇಂಟರಾನೆಟ್ ಗಳು ಪರಸ್ಪರ ಜಾಲ ರಚನೆಗೆ ಒತ್ತು [] ನೀಡಿದವು.

AIESEC ಐಸೆಕ್ ಇಂದೂ ಕೂಡಾ "ತಾನು ಯುವಜನರಲ್ಲಿನ ಪ್ರತಿಭೆ ಹೊರತೆಗೆದು ಅವರಲ್ಲಿನ ನಾಯಕತ್ವದ ಗುಣಗಳನ್ನು ಸಾಮರ್ಥ್ಯಗನುಗುಣವಾಗಿ ಅಭಿವೃದ್ಧಿಪಡಿಸುವ ಒಂದು ವೇದಿಕೆಯಾಗಿ ಕೆಲಸ ಮಾಡುತ್ತಿದ್ದೇನೆ." ಎಂದು [] ಹೇಳಿಕೊಳ್ಳುತ್ತದೆ. ಅದು ಪ್ರತಿವರ್ಷ "8,000 ನಾಯಕತ್ವದ ಹುದ್ದೆಗಳನ್ನು ಮತ್ತು 470 ಸಮಾವೇಶಗಳನ್ನು ತನ್ನ ಸದಸ್ಯರಿಗಾಗಿ ಆಯೋಜಿಸುತ್ತದೆ.ಅದಕ್ಕೀಗ 50,000 ಕ್ಕೂ ಅಧಿಕ ವಿದ್ಯಾರ್ಥಿಗಳ ಸದಸ್ಯತ್ವ ಇದೆ". AIESEC ಐಸೆಕ್ ಒಂದು ಅಂತಾರಾಷ್ಟ್ರೀಯ ವಿನಿಮಯ ಕಾರ್ಯಕ್ರಮವಯೊಂದನ್ನು ನಡೆಸಿ ಸುಮಾರು 5550 ಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು ಹೊಸ ಪದವೀಧರರಿಗೆ ಬೇರೆ ದೇಶಗಳಲ್ಲಿ ಬದುಕಲು ಹಾಗು ತರಬೇತು ಪಡೆಯಲು ಅವಕಾಶ [] ಒದಗಿಸುತ್ತದೆ.

ವರ್ಷ 2008 ನ್ನು ಐಸೆಕ್ AIESEC ಸ್ಥಾಪನೆಯ 60 ನೆಯ ವಾರ್ಷಿಕೋತ್ಸವವನ್ನಾಗಿ ಆಚರಿಸಲಾಯಿತು. ಆಚರಣಾ ಸಮಾರಂಭಗಳು ಲಂಡನ್ ನಲ್ಲಿ(ಜನವರಿ 2008), ಟೊಕಿಯೊ (ಮಾರ್ಚ್ 2008), ಬುಡಾಪೆಸ್ಟ್ (ಮೇ 2008), ಬ್ರುಸೆಲ್ಸ್ (ಜೂನ್ 2008), ಬ್ರಾಜಿಲ್ (ಆಗಷ್ಟ 2008), ಸ್ಟಾಕ್ ಹೊಲ್ಮ್ (ಅಕ್ಟೋಬರ್ 2008), ಮತ್ತು the ಯುನೈಟೆಡ್ ಸ್ಟೇಟ್ಸ್ (ಡಿಸೆಂಬರ್ 2008)ನೆರವೇರಿದವು.

ತನ್ನ ಕಾರ್ಯಕ್ಷಮತೆ ಹಾಗು ಅಸ್ತಿತ್ವವನ್ನು ಜೀವಂತವಾಗಿಡಲು ಅಂತಾರಾಷ್ಟ್ರೀಯ ಸಂಬಂಧಗಳಿಗೆ ಆಗಾಗ ತನ್ನನ್ನು ತಾನು ಒಡ್ಡಿಕೊಳ್ಳುತ್ತದೆ.AIESEC ಐಸೆಕ್ ಸಮಯಾನುಸಾರವಾಗಿ ಹೊಸ ದೇಶಗಳಿಗೆ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಿ ಜಾಗತಿಕ ಜನಪ್ರಿಯತೆಗೆ ಶ್ರಮಿಸುತ್ತದೆ. AIESEC ಐಸೆಕ್ ನ :ಅಧಿಕೃತ ವಿಭಾಗೀಯ ಕಚೇರಿಗಳು" " 13, 2009,ರ ಮಾರ್ಚ್ 13 ರ ವರೆಗಿನ ಅಂಕಿಅಂಶಗಳ ಪಟ್ಟಿ ಪ್ರಕಾರ, ಅಲ್ಜೆರಿಯಾ, ಅಂಗೊಲಾ, ಅರ್ಮೆನಿಯಾ, ಅಜೆರ್ ಬೈಜಾನ್, ಬಹ್ರೆನ್, ಬೆನಿನ್, ಎಥಿಯೊಪಿಯಾ, ಗ್ಯಾಬೊನ್, ಜಾರ್ಜಿಯಾ, ಐರ್ಲೆಂಡ್, ಇರಾನ್, ಮಾರಿಶೆಸ್, ಮಂಗೊಲಿಯಾ, ಒಮನ್, ಕತಾರ್, ಕಿಂಗ್ ಡಮ್ ಆಫ್ ಸೌದಿ ಅರೇಬಿಯಾ, ತಜಿಕಿಸ್ತಾನ್, ಮತ್ತು ವಿಯೆಟ್ನಾಮ್ ಸೇರಿವೆ.

AIESEC ಐಸೆಕ್ ನಾಲ್ಕು ಹಂತಗಳಲ್ಲಿ ಕಾರ್ಯ ನಿರ್ವಹಿಸುತ್ತದೆ: ಲೋಕಲ್ ಕಮೀಟೀಸ್ (LCs), ಮೆಂಬರ್ ಕಮೀಟೀಸ್ (MCs), ಗ್ರೊತ್ ನೆಟ್ ವರ್ಕ್ಸ್ (GN) ಮತ್ತು AIESEC ಇಂಟರ್ ನ್ಯಾಶನಲ್(AI).

AIESEC ಐಸೆಕ್ ನ ತರಬೇತು ಪೂರ್ವ ಕಾರ್ಯಕ್ರಮ ಕಾರ್ಯಾಗಾರ ಶಿಬಿರಗಳನ್ನು ನಡೆಸುವ ಸ್ಥಳೀಯ ಸಮಿತಿ ಅಥವಾ ಲೋಕಲ್ ಕಮೀಟಿಯು ವಿಶ್ವವಿದ್ಯಾಲಯ ಆಚೆಗಿನದು (ಅಥವಾ ಹತ್ತಿರದ ವಿಶ್ವವಿದ್ಯಾಲಯಗಳ ಸಮೂಹ). ಪ್ರತಿ ದೇಶವು (ಕೆಲವು ವೇಳೆ ದೇಶಗಳ ಸಮೂಹ ಅಥವಾ ದೇಶದೊಳಗಿನ ಕೇಂದ್ರಾಡಳಿತದ ಪ್ರದೇಶಗಳು)AIESEC ಐಸೆಕ್ ನ ಅಸ್ತಿತ್ವಕ್ಕಾಗಿ ತನ್ನ ಸದಸ್ಯತ್ವ ಸಮಿತಿಯನ್ನು (MC)ಹೊಂದಿರುತ್ತದೆ,ಅದು ಸಂಬಂಧಪಟ್ಟ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದ ಸಮಾವೇಶಗಳು,ದೊಡ್ಡ ಪ್ರಮಾಣದ ಪಾಲುದಾರಿಕೆಗಳು ಮತ್ತು ಸರ್ಕಾರ ಸಂಬಂಧಿಸಿದ್ದವುಗಳ ಚರ್ಚಿಸುತ್ತದೆ.(ಉದಾಹರಣೆಗೆ ವಿಸಾಗಳು) ಒಟ್ಟಾರೆಯಾಗಿ MC ಸದಸ್ಯರುಗಳು (ಸಮೂಹವಾಗಿ)LC ಗಳ ಮೊಲಕ ಆಯ್ಕೆ ಮಾಡಲಾಗುತ್ತದೆ.ಇವರನ್ನು ಪೂರ್ಣಾವಧಿ ಇಲ್ಲವೇ ಅಲ್ಪಾವಧಿ ನುಕರರಂತೆ ಕೆಲಸ ನಿರ್ವಹಿಸಲು ಶಿಷ್ಯವೇತನ ನೀಡಲಾಗುತ್ತದೆ. AIESEC ಐಸೆಕ್ ಇಂಟರ್ ನ್ಯಾಶನಲ್ ಮೆಂಬರ್ ಕಮೀಟೀಸ್ ನ ಚನಾಯಿತ MC ಸದಸ್ಯರಿಗೆ ಬೆಂಬಲ ನೀಡುತ್ತದೆ.(ಸಂಪೂರ್ಣ್ ಅಥವಾ ಭಾಗಶಃ)

ಇದರ ಸದಸ್ಯರಲ್ಲದೇ AIESEC ಐಸೆಕ್ ನ ಇಂಟರ್ ನ್ಯಾಶನಲ್ ಮೆಂಬರ್ ಕಮೀಟಿಗಳು ಮತ್ತು ಲೋಕಲ್ ಕಮೀಟಿಗಳು ಸಾಮಾನ್ಯವಾಗಿ ನಿರ್ದೇಶಕ ಮಂಡಳಿ/ನಿರ್ದೇಶಕ ಸಲಹೆಗಾರರ ಮಂಡಳಿಯನ್ನು ಆಯಾ ಪ್ರದೇಶಕ್ಕನುಗುಣವಾಗಿ ಬಾಹ್ಯ ಪ್ರದೇಶಗಳ ಮೂಲಕ ನೇಮಕ ಮಾಡುತ್ತದೆ. ಈ ಮಂಡಳಿಯು ಸಂಘಟನೆಗಳಿಗೆ ಮಾರ್ಗದರ್ಶನ ನೀಡುತ್ತದೆ,ಇನ್ನು ಕೆಲವು ಪ್ರಕರಣಗಳಲ್ಲಿ ಕಾನೂನು ಪ್ರಕಾರ AIESEC ಐಸೆಕ್ ನ ಕಾರ್ಯಚಟುವಟಿಕೆಗಳಿಗೆ ಬದ್ದತೆಯನ್ನು ಹೊರೆಸಲಾಗುತ್ತದೆ.

ಸಾಧನೆಯ ಹಾದಿ

[ಬದಲಾಯಿಸಿ]

ವೆಬ್ ಸೈಟ್ ವೊಂದರ ಮೂಲಕ AIESEC ತಾನು "ಧನಾತ್ಮಕ ಸಾಮಾಜಿಕ ಬದಲಾವಣೆಗೆ "AIESEC ಐಸೆಕ್ ಮಾರ್ಗ" ಅನುಸರಿಸುತ್ತಿರುವುದಾಗಿ [] ಹೇಳಿದೆ. ಐಸೆಕ್ ನ ಮಾರ್ಗವೆಂದರೆ "ಮಾನವ ಕುಲಕೋಟಿಯ ಸಾಮರ್ಥ್ಯವನ್ನು ಶಾಂತಿ ಮತ್ತು ತೃಪ್ತಿ ಹೊಂದುವ ಗುಣ ಬೆಳೆಸುವ [] ಮನೋಧೈರ್ಯವಾಗಿದೆ." AIESEC ಐಸೆಕ್ ಪ್ರಕಾರ ಒಟ್ಟು ಆರು ಮೌಲ್ಯಗಳು ಅದಕ್ಕಿವೆ,ನಾಯಕತ್ವದ ಕ್ರಿಯಾಶೀಲತೆ,ಸಮಗ್ರತೆಯ ಪ್ರದರ್ಶನ,ವಿವಿಧತೆಯಲ್ಲಿ ಬದುಕುವುದು,ಭಾಗವಹಿಸುವಿಕೆಯನ್ನು ಆನಂದಿಸುವುದು,ಉದಾತ್ತತೆಗಾಗಿ ಹಂಬಲಿಸುವುದು ಮತ್ತು ನಿರಂತರತೆ [] ಕಾಯ್ದುಕೊಳ್ಳುವುದು.

ನಾವು ಇದನ್ನು "ಯಾವ ಮಾರ್ಗ ಅನುಸರಿಸಿ ಮಾಡುತ್ತೇವೆ" ಅಲ್ಲದೇ ಇದನ್ನು ಪ್ರತಿ ವ್ಯಕ್ತಿ ಮೂಲಕ ಹೇಗೆ ಮಾಡಿಸುವುದನ್ನು ಐಸೆಕ್ ನ ಸದಸ್ಯರು ಮನಗಂಡಿರುತ್ತಾರೆ:"ಐಸೆಲ್ ತನ್ನ ಸದಸ್ಯರಿಗೆ ಸಮಗ್ರ ಅಭಿವೃದ್ಧಿಯ ಅನುಭವವನ್ನು ಧಾರೆಯೆರೆಯುತ್ತದೆ.(ದಿ ಐಸೆಕ್ ಎಕ್ಸ್ ಪಿರಿಯನ್ಸ್ ),ನಾಯಕತ್ವದ ಅವಕಾಶಗಳು,ಅಂತಾರಾಷ್ಟ್ರೀಯ ಪೂರ್ವತರಬೇತಿಗಳು ಮತ್ತು ಜಾಗತಿಕ ಪರಿಸರ ಅಧ್ಯಯನದಲ್ಲಿ ಪಾಲ್ಗೊಳ್ಳುವಿಕೆಯನ್ನು comprised ofಹೇಳಿಕೊಡುತ್ತದೆ.

ಓರ್ವ ವ್ಯಕ್ತಿಯನ್ನು ಪರಿಗಣಿಸಿದರೆ ಆತನ ಹಂತವು AIESEC ಐಸೆಕ್ ಮೂಲಕ ಪೂರ್ಣಗೊಳ್ಳುತ್ತದೆ.ಐಸೆಕ್ ಅನುಭವದಿಂದ ವಿದ್ಯಾರ್ಥಿಗಳು ನಾಯಕತ್ವದ ಅವಕಾಶಗಳನ್ನು ಪಡೆಯಬೇಕು,ವ್ಯವಹಾರ ಚತುರತೆಗಳು ಅಲ್ಲದೇ ವಿದ್ಯಾರ್ಥಿಗಳ ಜಾಗತಿಕ ಜಾಲದ ಮಾಹಿತಿಯನ್ನು ಸಮಾವೇಶಗಳಲ್ಲಿ ಪಾಲ್ಗೊಳ್ಳುವ ಮೂಲಕ ವ್ದೇಶಗಳಲ್ಲಿ ನೀಡಲು ಸಮರ್ಥರಾಗಿರಬೇಕು. ಇದರಲ್ಲಿ ಪ್ರಮುಖವಾಗಿ ಐದು ತತ್ವಗಳಿವೆ,ಕ್ರಿಯಾತ್ಮಕವಾಗಿ ಇಲ್ಲವೇ ಕ್ರಿಯಾಶೀಲತೆಯಿಂದ ಪಾಲ್ಗೊಳ್ಳುವಿಕೆ,(ಪ್ರಮುಖ ಗುರಿ:ಆದ್ಯತಾ ಕ್ರಿಯೆಯ ನಡತೆ)ಸ್ವಯಂ-ಜಾಗೃತಿಯ ಅಭಿವೃದ್ದಿ ಮತ್ತು ವೈಯಕ್ತಿಕ ಮುನ್ನೋಟ,ಕನಸು,(ಜವಾಬ್ದಾರಿ ವಹಿಸುವಿಕೆ)ಸಾಮರ್ಥ್ಯದ ಹೆಚ್ಚಳ (ವಿಒಷಯವನ್ನು ಕಳಿತು ಅದನ್ನು ಪ್ರಾಯೋಗಿಕವಾಗಿ ಅಳವಡಿಸುವಿಕೆ)ಜಾಲದ ರಚನೆ (ನೆಟ್ ವರ್ಕಿಂಗ್ )ವಿಶ್ವದ ಅಭಿಪ್ರಾಯಕ್ಕೆ ಸವಾಲು (ಧಾರ್ಮಿಕ ಜಗತ್ತಿನ [] ನೋಟ)

ಇಲ್ಲಿ ಕ್ಲಿಕ್ಕಿಸಿ

[ಬದಲಾಯಿಸಿ]

AIESEC ಐಸೆಕ್ ಅತ್ಯುನ್ನತ ಕಂಪನಿಗಳೊಂದಿಗೆ ಅಥವಾ ಸಂಘಕ್ಟಣೆಯೊಂದಿಗೆ ಪಾಲುದಾರಿಕೆ ಹೊಂದಿದೆ. ಅಲ್ಕಾಟೆಲ್, ಎಬಿಎನ್ ಅಮ್ರೊ, ಕ್ಯಾಡ್ ಬರಿ ಸ್ಕೆಪೀಸ್ , ಡಿಎಚ್ ಎಲ್, ಫೇಸ್ ಬುಕ್ , ಎಲೆಕ್ಟ್ರೊಲಕ್ಸ್, ಎಬಿಇನ್ ಬೆವ್, ಪಿಡಬ್ಲುಸಿ, ಎಂಟರ್ ಪ್ರೈಸ್ ಏಶಿಯಾ , ಎಚ್ ಪಿ, ಮೈಕ್ರೊಸಾಫ್ಟ್, ಸಿಸ್ಕೊ ಸಿಸ್ಟೆಮ್ಸ್ [] ಮತ್ತುಯುಬಿಎಸ್.ಐಸೆಕ್ ನ ವೇದಿಕೆಯಲ್ಲಿ ಇವು ತಮ್ಮ ಹಾಜರಿಯನ್ನು ತೋರಿಸುವುದರಿಂದ ಬಹುಶಃ ಇವುಗಳ ಭಾಗವಹಿಸುವಿಕೆಯು ಉತ್ತಮ ಪ್ರತಿಭೆಗಳ ಆಯ್ಜೆಗೆ ಐಸೆಕ್ ಗೆ ಪಾಲುದಾರಿಕೆಗೆ [] ದಾರಿಯಾಗುತ್ತದೆ, AIESEC ಐಸೆಕ್ ಜಾಗತಿಕ ಪ್ರತಿಭಾ ಸಂಪನ್ಮೂಲವನ್ನು ಎಬಿ ಇನ್ ಬೆವ್ , ಅಲ್ಕಾಟೆಲ್ ಲುಸೆಂಟ್, ಮತ್ತುಡಿಎಚ್ ಎಲ್.[][೧೦][೧೧] ಗಳಿಗೆ ಒದಗಿಸುತ್ತದೆ.

ಹಳೆಯ ವಿದ್ಯಾರ್ಥಿಗಳು

[ಬದಲಾಯಿಸಿ]

AIESEC ಐಸೆಕ್ ಅಲ್ಯುಮ್ನಿ ಇಂಟರ್ ನ್ಯಾಶನಲ್, (AAI),ಯು ಈ ಹಿಂದಿನ ಐಸೆಕ್ ಸದಸ್ಯರ ಜಾಗತಿಕ ಸ್ವಯಂಸೇವಾ ಸಂಸ್ಥೆ ಎನಿಸಿದೆ. ಇದು 1986 ರಿಂದಲೂ ಐಸೆಕ್ ಎಂದು ಅಸ್ತಿತ್ವದಲ್ಲಿದೆ.ಇದು ಅಂತಾರಾಷ್ಟ್ರೀಯ ಮಟ್ಟದ,ರಾಜಕೀಯರಹಿತ,ಸ್ವತಂತ್ರ ಮತ್ತು ಲಾಭದ ಉದ್ದೇಶ ರಹಿತದ ಸಂಸ್ಥೆಯಾಗಿದೆ.ಇದರ ಸದಸ್ಯತ್ವವು ಸಂಸ್ಕೃತಿ,ವರ್ಗ,ಜನಾಂಗೀಯತೆ,ಲಿಂಗ,ನಾಗರಿಕತೆ,ಧರ್ಮ,ಆರ್ಥಿಕ ಪದ್ದತಿ ಮತ್ತು ಶಾಖಾ ಉತ್ತರದಾಯಿತ್ವತೆ ಶ್ರೇಣೀಕರಣ ಅಥವಾ ಪೀಳಿಗೆ,ವಂಶಪಾರಂಪರೆ ಹಾಗು ವ್ಯಾಪಾರಿ ಸಂಬಂಧಿತ ಉದ್ದೇಶಗಳಿಂದ ದೂರವಿರುತ್ತದೆ.

ಹಳೆಯ ವಿದ್ಯಾರ್ಥಿಗಳ ಸದಸ್ಯತ್ವವು ವಿಶ್ವಾದ್ಯಾಂತ ಎಲ್ಲೆಡೆ ತನ್ನ ಬೇರು ಬಿಟ್ಟಿದೆ,ಈ ಅಸೊಶಿಯೇಶನ್ ಅಂತಾರಾಷ್ಟ್ರೀಯ ಮತ್ತು ವಿಭಿನ್ನ ಸಂಸ್ಕೃತಿಯ ಪರಸ್ಪರ ತಿಳಿವಳಿಕೆ ಮೂಡಿಸಲು ಯತ್ನಿಸುತ್ತದೆ.ಐಸೆಕ್ ನ ಮೂಲ ಉದ್ದೇಶದಂತೆ ಅದರ ಸದಸ್ಯರಿಗೆ ಹಾಗು ಇನ್ನಿತರರಿಗೆ ವ್ಯಕ್ತಿಗತ ಅಭಿವೃದ್ದಿಗೆ ಮತ್ತು ಉತ್ತಮ ಸಮಾಜ ನಿರ್ಮಾಣಕ್ಕೆ ಪೂರಕವಾಗಿರುತ್ತದೆ.

AIESEC ಐಸೆಕ್ ನ ಹಳೆಯ ವಿದ್ಯಾರ್ಥಿಗಳ ಅಂತಾರಾಷ್ಟ್ರೀಯ ವೆಬ್ ಸೈಟ್ ಪ್ರಕಾರ ಅತ್ಯುನ್ನತ ವ್ಯಕ್ತಿಗಳು ಈ ಸಂಘಟನೆಯೊಂದಿಗೆ [೧೨] ಕೈಜೋಡಿಸಿದ್ದಾರೆ. ಅವೆಂದರೆ:

ರಾಜ್ಯದ ಸರ್ಕಾರೀ ಮುಖ್ಯಸ್ಥರು
  • ಕ್ಯ್ವಾಕೊ ಸಿಲ್ವಾ
  • ಮಾರ್ಟ್ಟಿ ಅಥಿಸ್ಸಾರಿ
  • ಹೆಲ್ಮುಟ್ ಕೊಹ್ಲ್
  • ಜೆನೆಜ್ ಡ್ರೊನೊವೆಸ್ಕ್
  • ಜುನಿಚಿರೊ ಕೊಜ್ಮಿ
  • ಸೀಜರ್ ಗ್ಯಾವಿರಿಯಾ
  • ನೆರ್ಸಿಸ್ ಯೆರಿಟ್ಸ್ಯಾನ್
ವ್ಯಾಪಾರಿ ನೇತಾರರು
  • ಗೆರಾರ್ಡ್ ಹಿಬರ್ಗ್
ಇನ್ನುಳಿದಟೆಂಪ್ಲೇಟು:ಭಿನ್ನವತ್ತಳೆ ಅಗತ್ಯವಿದೆ
  • ಕೊಫಿ ಅನ್ನಾನ್
  • ಫ್ರಾನ್ಸಿಕೊ ಗಿಲ್ ಡೈಸ್
  • ರತನ್ ಟಾಟಾ
  • ಆದಿ ಗೊದ್ರೆಜ್
  • ನಂದನ್ ನಿಲಕ್ಕೇನಿ
  • ಕ್ಲಾರಾ ಡೊಬ್ರೆವ್

ಇವನ್ನೂ ವೀಕ್ಷಿಸಿ

[ಬದಲಾಯಿಸಿ]
  • AIESEC ಐಸೆಕ್ ಪ್ರತಿಷ್ಠಾನ
  • AIESEC ಅಲ್ಯುಮ್ನಿ ಇಂಟರ್ ನ್ಯಾಶನಲ್
  • AIESEC ಐಸೆಕ್ ಸ್ಲೊವೆನಿಯಾ

ಉಲ್ಲೇಖಗಳು

[ಬದಲಾಯಿಸಿ]
  1. "AIESEC". AIESEC web site. 2010-05. Archived from the original on 2010-07-10. Retrieved 2010-05-05. {{cite web}}: Check date values in: |date= (help)
  2. ೨.೦ ೨.೧ ೨.೨ Kern, Beth (2003-10-02). "AIESEC helps interns make adjustments". University Chronicle. Archived from the original on 2009-01-30. Retrieved 2008-02-11.
  3. ೩.೦ ೩.೧ ೩.೨ ೩.೩ "The AIESEC History". AIESEC web site. Retrieved 2008-02-11. ದಿ ಐಸೆಕ್ ಹಿಸ್ಟ್ರಿ
  4. ೪.೦ ೪.೧ "Welcome to AIESEC". AIESEC web site. Retrieved 2008-02-11.
  5. ೫.೦ ೫.೧ ೫.೨ "The AIESEC Way". AIESEC web site. Retrieved 2008-02-11.
  6. "The AIESEC Experience". AIESEC web site. Retrieved 2008-02-11.
  7. "Cisco Systems and AIESEC". Cisco Systems Press Release Website. 2009-08-12.
  8. "Global Development Group". AIESEC web site. Retrieved 2008-02-11.
  9. "AB InBev - AIESEC". AB InBev Website. Archived from the original on 2009-09-08. Retrieved 2009-09-19.
  10. "Start your journey with us now!". Alcatel Lucent Website. Retrieved 2009-09-19.
  11. "DHL Global AIESEC Program". DHL Website. Archived from the original on 2009-11-06. Retrieved 2009-09-19.
  12. "Famous Alumni". AIESEC Alumni International. Archived from the original on 2009-03-26. Retrieved 2009-02-27.


ಬಾಹ್ಯ ಕೊಂಡಿಗಳು

[ಬದಲಾಯಿಸಿ]
"https://kn.wikipedia.org/w/index.php?title=ಐಸೆಕ್&oldid=1136716" ಇಂದ ಪಡೆಯಲ್ಪಟ್ಟಿದೆ