2014ನೇ ಇಸವಿಯ ಕೆಲವು ಪ್ರಮುಖ ಘಟನೆಗಳು

ವಿಕಿಪೀಡಿಯ ಇಂದ
Jump to navigation Jump to search

(ಇನ್ನೂ ಕೆಲವು ಬಿಟ್ಟಹೋದ ಘಟನೆಗಳನ್ನು ತುಂಬಿರಿ)

೨೦೧೪ ಭಾರತ[ಬದಲಾಯಿಸಿ]

 1. 2014 ರ ಭಾರತದ ಸಾರ್ವತ್ರಿಕ ಚುನಾವಣೆ ಏಪ್ರಿಲ್ ಮೇ ಯಲ್ಲಿ ನೆಡೆದು ಮೇ 16, 2014ರಂದು ಎಣಿಕೆಯಾಗಿ ,ಭಾರತೀಯ ಜನತಾ ಪಕ್ಷವು ಬಹಮತ(282) ಪಡೆದಿದ್ದು , ಮೇ 26, 2014, ರಂದು ಮೊದಲೇ ನಿರ್ಧರಿಸಿದಂತೆ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಶ್ರೀ ನರೇಂದ್ರ ಮೋದಿ ಆ ಹುದ್ದೆಯನ್ನು ತ್ಯಜಿಸಿ ದೆಹಲಿಯಲ್ಲಿ ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
 2. 20-9-2014, ಬೆಳಗ್ಗೆ ನಡೆದ ಶೂಟಿಂಗ್‌ ಸ್ಪರ್ಧೆಯಲ್ಲಿ ಭಾರತದ ಜೀತು ರಾಯ್ ಚಿನ್ನದ ಪದಕ ಸಾಧನೆ ಮಾಡಿದ್ದಾರೆ.
 3. 19-9-2014 ಶುಕ್ರವಾರದಿಂದ ಅ.4ರವರೆಗೆ ಇಂಚೆನ್‌ನಲ್ಲಿ ಸೀಮಾ ಪೂನಿಯಾ ಸೋಮವಾರ ನಡೆದ ಡಿಸ್ಕಸ್‌ ಥ್ರೋ ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಬಂಗಾರ ತಂದುಕೊಟ್ಟರು
 4. 29-9-2014 ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಬೆಳ್ಳಿ ಗೆದ್ದು ಐತಿಹಾಸಿಕ ಸಾಧನೆ ಮಾಡಿರುವ ಸೌರವ್‌ ಘೋಷಾಲ್‌ಗೆ ಶಹಬ್ಬಾಸ್‌ . ಏಷ್ಯನ್‌ ಕ್ರೀಡಾಕೂಟದ ಸ್ಕ್ವಾಷ್‌ನಲ್ಲಿ ಭಾರತ ಬೆಳ್ಳಿ ಪದಕ ಪಡೆದದ್ದು ಇದೇ ಮೊದಲು
 5. 19-9-2014 ಶುಕ್ರವಾರದಿಂದ ಅ.4ರವರೆಗೆ ಇಂಚೆನ್‌ನಲ್ಲಿ ಕರ್ನಾಟಕದ ಎಂ.ಆರ್. ಪೂವಮ್ಮ- ಎಂ.ಆರ್‌.ಪೂವಮ್ಮ, ಪ್ರಿಯಾಂಕಾ ಪನ್ವಾರ್‌, ಟಿಂಟು ಲೂಕಾ ಮತ್ತು ಮನ್‌ದೀಪ್‌ ಕೌರ್‌ ಅವರನ್ನೊಳಗೊಂಡ ಭಾರತ ಮಹಿಳಾ ರಿಲೇ ತಂಡ 4X400ಮೀ. ಸ್ಪರ್ಧೆಯಲ್ಲಿ ಬಂಗಾರದ ಪದಕ ಗೆದ್ದುಕೊಂಡಿತು.
 6. ಅ.1: ಭಾರತದ ಮಹಿಳಾ ಬಾಕ್ಸರ್‌ ಮೇರಿ ಕೋಮ್‌ ಏಷ್ಯಾನ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡರು. ಮೇರಿ ಕೋಮ್‌ ಏಷ್ಯಾನ್‌ ಗೇಮ್ಸ್‌ನಲ್ಲಿ ಪಡೆದ ಮೊದಲ ಚಿನ್ನದ ಪದಕ ಇದಾಗಿದೆ.
 7. 19-9-2014 ಶುಕ್ರವಾರದಿಂದ ಅ.4ರವರೆಗೆ ಇಂಚೆನ್‌ನಲ್ಲಿ ಭಾರತದ ಮಹಿಳಾ ಕಬಡ್ಡಿ ತಂಡವು ಇರಾನ್ ಎದುರು 31-21 ಅಂಕಗಳಿಂದ ಗೆದ್ದು ಚಿನ್ನ ಗೆದ್ದರೆ, ಇರಾನ್ ಪುರುಷರೆದುರು ಭಾರತೀಯ ಪುರುಷರೂ 27-25 ಅಂತರದಿಂದ ಶುಕ್ರವಾರ ರೋಮಾಂಚಕ ವಿಜಯ ಸಾಧಿಸಿ ಸ್ವರ್ಣ ಪದಕ ಗೆದ್ದರು.
 8. ಅ. 2: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗಾಂಧಿ ಜಯಂತಿ ದಿನ ದೇಶದಾದ್ಯಂತ ‘ಸ್ವಚ್ಛ ಭಾರತ’ ಅಭಿಯಾನಕ್ಕೆ ಚಾಲನೆ ನೀಡಿದರು. ದೆಹಲಿಯ ಕೊಳೆಗೇರಿ ಪ್ರದೇಶದಲ್ಲಿ ಕಸ ಗುಡಿಸಿ ಅಭಿಯಾನಕ್ಕೆ ಚಾಲನೆ ನೀಡಿದರು.
 9. ಅ. 3: ಬಿಹಾರದ ರಾಜಧಾನಿ ಪಟ್ನಾದ ಗಾಂಧಿ ಮೈದಾನದಲ್ಲಿ ದಸರಾ ಪ್ರಯುಕ್ತ ಏರ್ಪಡಿಸುವ ದೇವತೆಗಳ ಉತ್ಸವ ಸಂದರ್ಭದಲ್ಲಿ ಕಾಲ್ತುಳಿತದಿಂದ 32 ಜನರು ಮೃತಪಟ್ಟು 15 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
 10. ಅ. 4 : ಗೂಗಲ್‌ನ ಸಾಮಾಜಿಕ ಜಾಲತಾಣವಾಗಿದ್ದ ‘ಆರ್ಕುಟ್‌’ಅನ್ನು ಸ್ಥಗಿತಗೊಳಿಸುವುದಾಗಿ ಗೂಗಲ್‌ ಕಂಪೆನಿ ಘೋಷಿಸಿತು. ಫೇಸ್‌ಬುಕ್‌ ಮತ್ತು ಟ್ವಿಟ್ಟರ್‌ ಜನಪ್ರಿಯವಾದ ಹಿನ್ನೆಲೆಯಲ್ಲಿ ‘ಆರ್ಕುಟ್‌’ ಬಳಸುವವರ ಸಂಖ್ಯೆ ಕಡಿಮೆಯಾದ್ದರಿಂದ ಸ್ಥಗಿತಗೊಳಿಸಲಾಯಿತು ಎಂದು ಕಂಪೆನಿ ತಿಳಿಸಿತು.
 11. ಅ. 5: ಮಹೇಂದ್ರ ಸಿಂಗ್‌ ದೋನಿ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು 2014 ರ ಚಾಂಪಿಯನ್‌ ಲೀಗ್‌ ಕ್ರಿಕೆಟ್‌ ಟ್ರೋಪಿಯನ್ನು ಗೆದ್ದುಕೊಂಡಿತು. ಬೆಂಗಳೂರಿನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಕೆಕೆಆರ್‌ ತಂಡವನ್ನು ಮಣಿಸಿತು.
 12. ಅ.5: ರಾಜಸ್ತಾನದ ಬಿಕನೇರ್‌ ಸಮೀಪದಲ್ಲಿ ‘ಆಲಿವ್‌’ ಮರದ ಎಣ್ಣೆ ತಯಾರಕ ಘಟಕವನ್ನು ರಾಜಸ್ತಾನ ಸರ್ಕಾರ ಆರಂಭಿಸಿತು. ಆ ಮೂಲಕ ಭಾರತದಲ್ಲೇ ಆಲಿವ್‌ ಮರದ ಎಣ್ಣೆ ಘಟಕ ಆರಂಭಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು.
 13. ಅ. 6: ಸೈಕಲಾಜಿ ಅಥವಾ ಔಷಧಿ ವಿಭಾಗದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಮೂವರು ವಿಜ್ಞಾನಿಗಳಿಗೆ 2014 ನೇ ಸಾಲಿನ ನೊಬೆಲ್‌ ಪ್ರಶಸ್ತಿಯನ್ನು ಘೋಷಿಸಲಾಯಿತು. ಜಾನ್ ಓ ಕೀಫೆ, ಬ್ರಿಟ್‌ ಮೋಸರ್‌ ಮತ್ತು ಎಡ್ವರ್ಡ್‌ ಐ ಈ ಪ್ರಶಸ್ತಿ ಪಡೆದಿದ್ದಾರೆ.
 14. ಅ.6: ಭಾರತದ ಯಶಸ್ವಿ ಮಂಗಳಯಾನ ಯೋಜನೆ ಕುರಿತಂತೆ ಅಮೆರಿಕದ ‘ನ್ಯೂಯಾರ್ಕ್‌ ಟೈಮ್ಸ್‌’ ಪತ್ರಿಕೆ ಆಕ್ಷೇಪಾರ್ಹ ವ್ಯಂಗ್ಯ ಚಿತ್ರ ಪ್ರಕಟಿಸಿದ್ದಕ್ಕಾಗಿ ಪತ್ರಿಕೆ ಭಾರತದ ಕ್ಷಮೆಯಾಚಿಸಿತು.
 15. ಅ.9: ರಾಷ್ಟ್ರೀಯ ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಲೀಲಾ ಸ್ಯಾಮ್ಸನ್‌ ರಾಜೀನಾಮೆ ನೀಡಿದರು. ಅವರ ರಾಜೀನಾಮೆಯನ್ನು ಕೇಂದ್ರ ಸಂಸ್ಕೃತಿ ಸಚಿವಾಲಯ ಅಂಗೀಕರಿಸಿತು.
 16. ಅ.9: ಫ್ರಾನ್ಸ್‌ನ ಹಿರಿಯ ಲೇಖಕ ಹಾಗೂ ಜನಪ್ರಿಯ ಕಾದಂಬರಿಕಾರರಾದ ಪ್ಯಾಟ್ರಿಕ್‌ ಮೊಡಿಯಾನೊ 2014 ನೇ ಸಾಲಿನ ಸಾಹಿತ್ಯ ನೊಬೆಲ್‌ ಪ್ರಶಸ್ತಿಯನ್ನು ಪಡೆದರು. ಅವರ ಒಟ್ಟು ಸಾಹಿತ್ಯ ಸೇವೆಗೆ ಈ ಪ್ರಶಸ್ತಿ ಸಂದಿದೆ.
 17. ಅ,10: 2014 ನೇ ಸಾಲಿನ ನೊಬೆಲ್‌ ಶಾಂತಿ ಪ್ರಶಸ್ತಿಯನ್ನು ಪ್ರಕಟಿಸಲಾಯಿತು. ಭಾರತದ ಕೈಲಾಶ್‌ ಸತ್ಯಾರ್ಥಿ ಮತ್ತು ಪಾಕಿಸ್ತಾನದ ಅತಿ ಕಿರಿಯ ಸಮಾಜ ಸೇವಕಿ ಮಲಾಲಗೆ ಜಂಟಿಯಾಗಿ ಈ ಪ್ರಶಸ್ತಿ ನೀಡಲಾಯಿತು.
 18. ಅ 11: ಅಮೆರಿಕದ ವೈದ್ಯಕೀಯ ವಿಜ್ಞಾನಿಗಳ ತಂಡವು ಎಚ್‌ಐವಿ ವೈರಾಣುವನ್ನು ನೋಡಬಹದಾದ ಅತಿ ಸೂಕ್ಷ್ಮ ಸಾಧನವನ್ನು ಅಭಿವೃದ್ಧಿಪಡಿಸಿರುವುದಾಗಿ ಪ್ರಕಟಿಸಿದೆ.
 19. ಅ. 13: ಅರ್ಥಶಾಸ್ತ್ರ ವಿಭಾಗಕ್ಕೆ ನೀಡುವ 2014 ಸಾಲಿನ ನೊಬೆಲ್‌ ಪ್ರಶಸ್ತಿ ಫ್ರಾನ್ಸ್ ದೇಶದ ಆರ್ಥಿಕ ತಜ್ಞ ಜಿನ್‌ ಟಿರೋಲ್‌ ಅವರಿಗೆ ಸಂದಿದೆ.
 20. ಅ. 14 : ಬಾಲಿವುಡ್‌ನ ಖ್ಯಾತ ಚಿತ್ರ ಸಾಹಿತಿ ’ಸಮೀರ್‌’ ಅವರಿಗೆ 2013ನೇ ಸಾಲಿನ ರಾಷ್ಟ್ರೀಯ ಕಿಶೋರ್‌ ಕುಮಾರ್‌ ಪ್ರಶಸ್ತಿ ಲಭಿಸಿತು.
 21. ಅ.14 : ಯಮನ್‌ ದೇಶದ ಪ್ರಧಾನಿಯಾಗಿ ಖಲೇದ ಬ್ಹಾ ಅವರನ್ನು ನೇಮಕ ಮಾಡಲಾಯಿತು.
 22. ಅ.15: ಆಸ್ಟ್ರೇಲಿಯಾದ ಲೇಖಕ ರಿಚರ್ಡ್‌ ಪ್ಲಾನಗನ್‌ ಅವರಿಗೆ 2014 ನೇ ಸಾಲಿನ ಮ್ಯಾನ್‌ ಆಫ್‌ ದಿ ಬೂಕರ್‌ ಪ್ರಶಸ್ತಿ ಲಭಿಸಿದೆ. ಅವರ ಯುದ್ಧಕಾಲಿನ ಕಾದಂಬರಿ ‘ ದಿ ನ್ಯಾರೊ ರೋಡ್‌ ಟು ದಿ ಡೀಪ್‌ ನಾರ್ತ್‌’ ಕೃತಿಗೆ ಈ ಪುರಸ್ಕಾರ ಸಂದಿದೆ.
 23. ಅ. 15: ತೆಲುಗಿನ ಖ್ಯಾತ ಬರಹಗಾರ್ತಿ ತುರಗ ಜಾನಕಿ ರಾಣಿ ನಿಧನರಾದರು. ಇವರು ಆಂಧ್ರಪ್ರದೇಶದ ಬಾನುಲಿಯಲ್ಲಿ ಸುದ್ದಿ ನಿರೂಪಕಿಯಾಗಿ ಭಾರೀ ಜನಪ್ರಿಯತೆ ಪಡೆದಿದ್ದರು.
 24. ಅ. 17: ಕರ್ನಾಟಕ ರಾಜ್ಯದ 12 ನಗರಗಳ ಮರು ನಾಮಕರಣಕ್ಕೆ ಕೇಂದ್ರ ಗೃಹ ಸಚಿವಾಲಯ ಅನುಮೋದನೆ ನೀಡಿತು. ನಗರಗಳ ಹೆಸರು ಬದಲಾವಣೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ವಿಶೇಷ ಮನವಿ ಮಾಡಿದ್ದರು.
 25. ಅ. 18: ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕಾಗಿ ವಿಶೇಷ ಆರೋಗ್ಯ ಯೋಜನೆಯನ್ನು ಪ್ರಕಟಿಸಿತು. ಅದನ್ನು ಜಮ್ಮು ಕಾಶ್ಮೀರ ಆರೋಗ್ಯ ಗ್ರಾಮ ಯೋಜನೆ ಎಂದು ಕರೆಯಲಾಗುವುದು. ಇದನ್ನು ಕೇಂದ್ರ ಆರೋಗ್ಯ ಸಚಿವರು ಮತ್ತು ಮುಖ್ಯಮಂತ್ರಿ ಓಮರ್‌ ಅಬ್ದುಲ್ಲಾ ಲೋಕಾರ್ಪಣೆ ಮಾಡಿದರು.
 26. ಅ. 22: ತಿಹರ್‌ ಜೈಲಿನಲ್ಲಿ ಮಹಿಳಾ ಕೈದಿಗಳಿಗಾಗಿ ಇ–ಗ್ರಂಥಾಲಯವನ್ನು ಆರಂಭಿಸಲಾಯಿತು.
 27. ಅ. 27: ಹರಿಯಾಣ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಮನೋಹರ್‌ ಲಾಲ್‌ ಖಟ್ಟರ್‌ ಅವರು ಪ್ರಮಾಣ ವಚನ ಸ್ವೀಕರಿಸಿದರು. ಹರಿಯಾಣದಲ್ಲಿ ಮೊದಲ ಸಲ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ.
 28. ಅ. 29: ಪ್ರಸಾರ ಭಾರತೀಯ ಮುಖ್ಯಸ್ಥರಾಗಿ ಸೂರ್ಯ ಪ್ರಕಾಶ್‌ ಅಧಿಕಾರ ಸ್ವೀಕರಿಸಿದರು. ಇವರ ಅಧಿಕಾರ ಅವಧಿ ಮೂರು ವರ್ಷಗಳವರೆಗೆ ಇರಲಿದೆ.
 29. ಅ. 30: ಕೇಂದ್ರ ಸರ್ಕಾರ ವಿದೇಶದಲ್ಲಿ ಕಪ್ಪು ಹಣ ಇಟ್ಟಿರುವ 615 ಜನರ ಮಾಹಿತಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿತು.
 30. ಅ. 31: ದೇವೇಂದ್ರ ಫಡ್ನವೀಸ್‌ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನಾ ಪಕ್ಷಗಳ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿದೆ.
 31. ಡಿಸೆಂಬರ್‌ 12 ,2014ನೇ ಸಾಲಿನ ನೃಪ­ತುಂಗ ಪ್ರಶಸ್ತಿಗೆ ಸಾಹಿತಿ ಕುಂ. ವೀರಭದ್ರಪ್ಪ ಪ್ರಶಸ್ತಿಯನ್ನು ಡಿಸೆಂಬರ್‌ 12ರಂದು ಬೆಂಗಳೂರಿನಲ್ಲಿ ಪ್ರದಾನ ಮಾಡಿದೆ. ಪ್ರಶಸ್ತಿಯು ರೂ. 7,00,001 ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ.

ನೋಡಿ

ಉಲ್ಲೇಖ[ಬದಲಾಯಿಸಿ]

 • ಪ್ರಜಾವಾಣಿ ೧೯-೧-೨೦೧೫