೨೦೧೬ ಸೌತ್ ಏಷ್ಯನ್ ಕ್ರೀಡಾಕೂಟ
ಗೋಚರ
::2016 ದಕ್ಷಿಣ ಏಷಿಯಾ ಕ್ರೀಡಾ ಕೂಟ
- ಹೆಸರು = 12ನೇ ಸೌತ್ ಏಷ್ಯನ್ ಕ್ರೀಡಾಕೂಟ
- ಅತಿಥೇಯ ನಗರ = ಗುವಾಹಟಿಮತ್ತುಶಿಲ್ಲಾಂಗ್
- ರಾಜ್ಯ - ದೇಶ =ಅಸ್ಸಾಮ್ -ಭಾರತ.
- ಕ್ರೀಡಾ ಚನ್ಹೆ = ಎರಡು ಕಾಲಲ್ಲಿ ನಿಂತಿರುವ 'ಬಾಲ ಘೇಂಡಾ ಮೃಗ'
- ಭಾಗವಹಿಸುವ ರಾಜ್ಯಗಳು = 8 > ಅಫ್ಘಾನಿಸ್ಥಾನ/ಅಫ್ಘಾನಿಸ್ತಾನ, ಭಾರತ, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ, ಶ್ರೀಲಂಕಾ.
- ಭಾಗವಹಿಸುವ ಕ್ರೀಡಾಪಟಗಳು = 2,672
- ಸ್ಪರ್ಧೆಗಳು = 228 in 23 sports
- ಉದ್ಘಾಟನೆ = 5 ಫೆಬ್ರವರಿ (ಗುವಾಹಟಿ)
6 ಫೆಬ್ರವರಿ (ಶಿಲ್ಲಾಂಗ್) - ಮುಕ್ತಾಯ = 16 ಫೆಬ್ರವರಿ 2016
- ಉದ್ಘಾಟಕರು = ನರೇಂದ್ರ ಮೋದಿ
- ಕ್ರೀಡಾಂಗಣ = ಇಂದಿರಾಗಾಂಧಿ ಕ್ರೀಡಾಂಗಣ (ಗುವಾಹಟಿ)
ಜವಾಹರಲಾಲ್ ನೆಹರು ಕ್ರೀಡಾಂಗಣ(ಶಿಲ್ಲಾಂಗ್) - ಗುರಿಯ-ಘೋಷನೆ = ಶಾಂತಿ, ಅಭಿವೃದ್ಧಿ ಮತ್ತು ಸಂಮೃದ್ಧಿಗಾಗಿ ಆಟ.
12ನೇ ಸೌತ್ ಏಷ್ಯನ್ ಕ್ರೀಡಾಕೂಟ
[ಬದಲಾಯಿಸಿ]- 2016 ರ 12ನೇ ಸೌತ್ ಏಷ್ಯನ್ ಕ್ರೀಡಾಕೂಟ ದಿ.೫-೨-೨೦೧೬ ಶುಕ್ರವಾರ ಚಾಲನೆಯಾಗಿದೆ.ಶುಕ್ರವಾರ ಭಾರತದ ಅಸ್ಸಾಮ್ ರಾಜ್ಯದ ರಾಜಧಾನಿ ಗುವಾಹಟಿಯ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಟಕ್ಕೆ ಚಾಲನೆ ನೀಡಿದ್ದಾರೆ.
- 12ನೇ ಆವೃತ್ತಿಯ ಕ್ರೀಡಾಕೂಟ 2012ರಲ್ಲಿ ನವದೆಹಲಿಯಲ್ಲಿ ನಡೆದಿತ್ತು. ದೆಹಲಿ ವಿಧಾನಸಭೆ ಚುನಾವಣೆಯ ಕಾರಣ ಕೂಟವನ್ನು ಮುಂದೂಡ ಲಾಗಿತ್ತು. 2012ರ ಡಿಸೆಂಬರ್‌ನಿಂದ 2014ರ ಫೆಬ್ರುವರಿಯವರೆಗೆ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಭಾರತ ಒಲಿಂಪಿಕ್ ಸಂಸ್ಥೆಯನ್ನು ಅಮಾನತಿ ನಲ್ಲಿಟ್ಟಿತ್ತು. ಹೀಗಾಗಿ ಕೂಟ ನಡೆದಿರಲ್ಲ. ಈಗ ಅಸ್ಸಾಮ್ ಮತ್ತು ಮೇಘಾಲಯ ರಾಜ್ಯಗಳು ಒಟ್ಟಾಗಿ ಈ ಕ್ರೀಡಾಕೂಟ ನೆಡಸುತ್ತವೆ.
- ದಕ್ಷಿಣ ಏಷ್ಯನ್ ಒಲಿಂಪಿಕ್ ಕೌನ್ಸಿಲ್ ಆಶ್ರಯದಲ್ಲಿ 12 ದಿನ ನಡೆಯುವ ಕೂಟದಲ್ಲಿ ಎಂಟು ಸಾರ್ಕ್ ರಾಷ್ಟ್ರಗಳ 2,672 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.2010ರಲ್ಲಿ ಬಾಂಗ್ಲಾದೇಶದಲ್ಲಿ ನಡೆದಿದ್ದ ಕೂಟದಲ್ಲಿ ಭಾರತ 90 ಚಿನ್ನ ಸೇರಿದಂತೆ ಒಟ್ಟು 175 ಪದಕಗಳಿಗೆ ಜಯಿಸಿತ್ತು.ಈ ಬಾರಿಯ ಕೂಟದಲ್ಲಿ ಭಾಗ ವಹಿಸುವ ಅಥ್ಲೀಟ್‌ಗಳಿಗೆ ತಲಾ 228 ಚಿನ್ನ ಮತ್ತು ಬೆಳ್ಳಿ ಹಾಗೂ 308 ಕಂಚಿನ ಪದಕಗಳನ್ನು ಗೆಲ್ಲುವ ಅವಕಾಶ ಇದೆ. ಕೂಟದಲ್ಲಿ ಸೇರಿಸಲಾಗಿರುವ ಎಲ್ಲಾ ವಿಭಾಗಗಳಲ್ಲಿ ಪುರುಷರಂತೆ ಮಹಿಳೆ ಯರಿಗೂ ಪಾಲ್ಗೊಳ್ಳುವ ಅವಕಾಶ ಕೊಡಲಾಗಿದೆ. ಹಿಂದಿನ ಎಲ್ಲಾ ಆವೃತ್ತಿಗಳಲ್ಲಿಯೂ ಹೆಚ್ಚು ಪದಕ ಗೆದ್ದ ದಾಖಲೆ ಭಾರತದ ಹೆಸರಿನಲ್ಲಿದೆ. ಹೀಗಾಗಿ ಈ ಬಾರಿ 254 ಮಹಿಳಾ ಸ್ಪರ್ಧಿಗಳು ಸೇರಿದಂತೆ 521 ಕ್ರೀಡಾಪಟುಗಳನ್ನು ಭಾರತ ಕಣಕ್ಕಿಳಿಸಿದೆ. ನೇಪಾಳ ಮತ್ತು ಬಾಂಗ್ಲಾದೇಶ ದಿಂದ ಕ್ರಮವಾಗಿ 381 ಮತ್ತು 370 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಪಾಕಿಸ್ತಾನ 346 ಅಥ್ಲೀಟ್‌ಗಳ ತಂಡವನ್ನು ಕಣಕ್ಕಿಳಿಸಿದೆ.
- 12 ನೇ ದಕ್ಷಿಣ ಏಷ್ಯಾದ ಕ್ರೀಡೆಗಳ ಹಾಡು "ಹೇ ಪ್ರಿತಿಬಿ ಏಕ್ ಕ್ರಿರಾಂಗಣ್- -" ಅಕ್ಷರಶಃ ಭಾಷಾಂತರಿಸಿದರೆ "ವಿಶ್ವವು(ಪೃಥ್ವಿ) ಒಂದು ಆಟದ ಕ್ರೀಡಾಂಗಣ ಆಗಿದೆ".(ಥೀಮ್) ಭಾರತದ ಪ್ರಸಿದ್ಧ ವ್ಯಕ್ತಿ ಡಾ ಭೂಪೇನ್ ಹಜಾರಿಕಾ (1926-2011) ಈ ಹಾಡು ಬರೆದಿದ್ದಾರೆ. ಈ ಕ್ರೀಡಾಕೂಟದ ಸಂಕೇತ ಎರಡು ಕಾಲಿನ ಮೇಲೆ ನಿಂತಿರುವ "ಮರಿ-ಘೇಂಡಾಮೃಗ". ಕ್ರೀಡಾ ಘೋಷಣೆ: ಶಾಂತಿ,ಪುಷ್ಟಿ, ತುಷ್ಟಿ.(ಅಭಿವೃದ್ಧಿ, ಸಮೃದ್ಧಿ)
ವ್ಯವಸ್ಥೆ
[ಬದಲಾಯಿಸಿ]- ಭಾರತದ ಕೇಂದ್ರ ಸರ್ಕಾರ ಕ್ರೀಡಾಕೂಟದ ಆಯೋಜನೆಗೆ ಒಟ್ಟು ರೂ. 150 ಕೋಟಿ ಬಿಡುಗಡೆ ಮಾಡಿದೆ. ಈ ಪೈಕಿ ಭದ್ರತೆಗಾಗಿಯೇ ₹ 60 ಕೋಟಿ ಮೀಸಲಿಡಲಾಗಿದೆ.
- ಅಧ್ಯಕ್ಷ - ಸಂಘಟನಾ ಸಮಿತಿ ಶ್ರೀ ಸರ್ವಾನಂದ ಸೋನೋವಾಲ್ (Sarbananda Sonowal). ಶ್ರೀ ಎನ್ ರಾಮಚಂದ್ರನ್ ಯೂತ್ ಅಫೇರ್ಸ್ ಅಂಡ್ ಸ್ಪೋರ್ಟ್ಸ್ ರಾಜ್ಯ ಭಾರತೀಯ ಮಂತ್ರಿ, ಅಧ್ಯಕ್ಷ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷತೆಯ ಅಡಿಯಲ್ಲಿ ವ್ಯವಸ್ಥೆಗೊಳಿಸಲಾಗಿದೆ.
- 635 ಭಾರತ ಒಲಂಪಿಕ್ (NOC) ತಂಡದ ಅಧಿಕಾರಿಗಳು ಸೇರಿ 1505 ಪುರುಷರು ಮತ್ತು 1167 ಮಹಿಳಾ ಕ್ರೀಡಾಪಟುಗಳ ಒಟ್ಟು ಪಡೆ, ಇನ್ನೂರು ಇಂಟರ್ನ್ಯಾಷನಲ್ ಟೆಕ್ನಿಕಲ್ ಅಧಿಕಾರಿಗಳು ಮತ್ತು ಸುಮಾರು 100 ಅಂತರರಾಷ್ಟ್ರೀಯ ಮಾಧ್ಯಮ ಪ್ರತಿನಿಧಿಗಳು ವೀಕ್ಷಿಸಲು ಬರುವರೆಂದು ನಿರೀಕ್ಷಿಸಲಾಗಿದೆ.೫
17 ಸ್ಪರ್ಧೆಗಳು
[ಬದಲಾಯಿಸಿ]- ಗುವಾಹಟಿ ವೇದಿಕೆ:17 ಸ್ಪರ್ಧೆಗಳು.
ಕ್ರೀಡೆಗಳು | ಕ್ರೀಡೆಗಳು |
---|---|
1.ಅಥ್ಲೆಟಿಕ್ಸ್,
2.ಬ್ಯಾಸ್ಕೆಟ್‌ಬಾಲ್, 3.ಸೈಕ್ಲಿಂಗ್, 4.ಫುಟ್ ಬಾಲ್, 5.ಹ್ಯಾಂಡ್‌ಬಾಲ್, 6.ಹಾಕಿ, 7.ಕಬಡ್ಡಿ, 8.ಕೊಕ್ಕೊ, 9.ಶೂಟಿಂಗ್, |
10.ಸ್ಕ್ವಾಷ್, 11.ಈಜು, 12.ಟೆನಿಸ್, 13.ಟ್ರಯಥ್ಲಾನ್, 14.ವಾಲಿಬಾಲ್, 15.ವೇಟ್ ಲಿಫ್ಟಿಂಗ್, 16.ಕುಸ್ತಿ 17. ಪುರುಷರ ಫುಟ್‌ಬಾಲ್ |
- ಶಿಲ್ಲಾಂಗ್‌ನಲ್ಲಿ 8 ಸ್ಪರ್ಧೆಗಳು:
ಕ್ರೀಡೆಗಳು | ಕ್ರೀಡೆಗಳು |
---|---|
1.ಆರ್ಚರಿ,
2.ಬ್ಯಾಡ್ಮಿಂಟನ್, 3.ಬಾಕ್ಸಿಂಗ್, 4.ಜೂಡೊ, |
5.ಟೇಬಲ್ ಟೆನಿಸ್,
6.ಟೇಕ್ವಾಂಡೊ, 7.ವುಶು ಮತ್ತು 8.ಮಹಿಳೆಯರ ಫುಟ್‌ಬಾಲ್ ಸ್ಪರ್ಧೆ |
ಕ್ರೀಡೆಗಳು ಮತ್ತು ಸ್ಪರ್ಧಿಗಳು
[ಬದಲಾಯಿಸಿ]- ವಿವರ:
SAARC | ಪುರಷರು | ಪುರಷರು | ಮಹಿಳೆಯರು | ಮಹಿಳೆಯರು | |
---|---|---|---|---|---|
ದೇಶಗಳು | ಕ್ರೀಡೆ | ಕ್ರೀಡಾಪಟುಗಳು | ಕ್ರೀಡೆ | ಕ್ರೀಡಾಪಟುಗಳು | ಒಟ್ಟು |
ಆಫ್ಘಾನಿಸ್ತಾನ | 20 | 171 | 12 | 83 | 254 |
ಬಾಂಗ್ಲಾದೇಶ | 22 | 241 | 18 | 168 | 409 |
ಭೂತಾನ | 9 | 09 | 06 | 28 | 87 |
ಭಾರತ | 23 | 275 | 23 | 244 | 519 |
ಮಾಲಡೀವ್ಸ್ | 10 | 96 | 9 | 88 | 194 |
ನೇಪಾಲ | 23 | 211 | 23 | 187 | 398 |
ಪಾಕಿಸ್ತಾನ | 20 | 195 | 18 | 142 | 337 |
ಶ್ರೀಲಂಕಾ | 23 | 257 | 23 | 227 | 484 |
ಒಟ್ಟು | 23 | 1505 | 23 | 1167 | 2672 |
ಪದಕ ಗಳಿಕೆ ಪಟ್ಟಿ
[ಬದಲಾಯಿಸಿ]- ದಿ.೫-೨-೨೦೧೬ ರಂದು ಆರಂಭವಾದ ೧೨ನೇ ಸೌತ್ ಏಷ್ಯನ್ ಕ್ರೀಡಾಕೂಟ ೧೬-೨-೨೦೧೬ ಮಂಗಳವಾರ ಮುಕ್ತಾಯವಾಯಿತು.
- ೨೦೧೬ ಸೌತ್ ಏಷ್ಯನ್ ಕ್ರೀಡಾಕೂಟದಲ್ಲಿ ದೇಶಗಳು ಗಳಿಸಿದ ಪದಕ ಪಟ್ಟಿ :[೧]
ಶ್ರೇಣಿ | ದೇಶ | ಚಿನ್ನ | ಬೆಳ್ಳಿ | ಕಂಚು | ಒಟ್ಟು |
---|---|---|---|---|---|
1 | ಇಂಡಿಯಾ(ಭಾರತ | 188 | 90 | 30 | 308 |
2 | ಶ್ರೀಲಂಕಾ (ಶ್ರೀ | ) 25 | 63 | 98 | 186 |
3 | ಪಾಕಿಸ್ತಾನ (ಪಾಕ್) | 12 | 37 | 57 | 106 |
4 | ಅಫ್ಘಾನಿಸ್ಥಾನ (AFG) | 7 | 9 | 19 | 35 |
5 | ಬಾಂಗ್ಲಾದೇಶ (ಬಾನ್) | 4 | 15 | 56 | 75 |
6 | ನೇಪಾಳ (NEP ಯು) | 3 | 23 | 34 | 60 |
7 | ಮಾಲ್ಡೀವ್ಸ್ (MDV) | 0 | 2 | 1 | 3 |
8 | ಭೂತಾನ್ (ಬಿಎಚ್ಯು) | 0 | 1 | 15 | 16 |
* | ಒಟ್ಟು | 239 | 239 | 310 | 788 |
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2016-03-17. Retrieved 2016-02-18.
ನೋಡಿ
[ಬದಲಾಯಿಸಿ]- ೨೦೧೪ ಏಷ್ಯನ್ ಕ್ರೀಡಾಕೂಟ
- ಫೀಫಾ:--2014 ರ ಫೀಫಾ ಫುಟ್ ಬಾಲ್ ವಿಶ್ವ ಕಪ್ ಪಂದ್ಯ
- 17ನೇ ಏಷ್ಯನ್ ಕ್ರೀಡಾಕೂಟ 2014
- ಸೌತ್ ಏಷ್ಯನ್ ಕ್ರೀಡಾಕೂಟ
- 2017 ರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ಸ್
ಉಲ್ಲೇಖ
[ಬದಲಾಯಿಸಿ]- 1.www.prajavani.net/article/ಪದಕ-ಬೇಟೆಗೆ-ಭಾರತ-ತಂಡ-ಸಜ್ಜು[೧]
- 2.http://www.dailynews.lk/?q=2015/12/30/sports/sri-lanka-field-484-athletes-23-disciplines
- 3.https://commons.wikimedia.org/wiki/File:Map_of_Meghalaya_India.png
- 4.http://timesofindia.indiatimes.com/sports/more-sports/cycling/South-Asian-Games-Indian-cyclists-bag-three-more-medals/articleshow/50888513.cms