೨೦೧೩ ಇಂಡಿಯನ್ ಪ್ರೀಮಿಯರ್ ಲೀಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
2013 Indian Premier League
ದಿನಾಂಕ3 ಏಪ್ರಿಲ್ 2013 (2013-04-03) – 26 ಮೇ 2013 (2013-05-26)
ನಿರ್ವಾಹಕBCCI
ಕ್ರಿಕೆಟ್ ಸ್ವರೂಪTwenty20
ಪಂದ್ಯಾವಳಿ ಸ್ವರೂಪDouble round robin and playoffs
ಅತಿಥೆಯಭಾರತ
ಚಾಂಪಿಯನ್Mumbai Indians
ಸ್ಪರ್ಧಿಗಳು9
ಪಂದ್ಯಗಳು76
ಹೆಚ್ಚಿನ ರನ್ಗಳುMichael Hussey (CSK) (733)
ಹೆಚ್ಚಿನ ವಿಕೆಟ್‌ಗಳುDwayne Bravo (CSK) (32)
Official websitewww.iplt20.com
2012
2014

೨೦೧೩ರ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಐ ಪಿ ಎಲ್ ೬ ಎಂದೂ ಕರೆಯಲಾಗುತ್ತದೆ. ೨೦೦೭ರಲ್ಲಿ ಆರಂಭವಾದ ಈ ಕ್ರೀಡಾಕೂಟದ ೬ನೇ ಆವೃತ್ತಿ ಇದು. ಈ ಅವೃತ್ತಿಯಲ್ಲಿ ೯ ತಂಡಗಳು ಭಾಗವಹಿಸಿದ್ದವು. ಇದು ಏಪ್ರಿಲ್ ೩ ರಿಂದ ಮೇ ೨೬ ರವರೆಗೆ ನಡೆಯಿತು. ಇದರ ಉದ್ಘಾಟನಾ ಸಮಾರಂಭ ಎಪ್ರಿಲ್ ೨ರಂದು ಕಲ್ಕತ್ತಾದ ಸಾಲ್ಟ್ ಲೇಕ್ ಕ್ರಿಡಾಂಗಣದಲ್ಲಿ ನಡೆಯಿತು. ಇದೇ ಮೊದಲ ಬಾರಿಗೆ ಪೆಪ್ಸಿ ಕಂಪನಿಯು ಐಪಿಎಲ್ ನ ಮುಖ್ಯ ಪೋಷಕರಾದರು. ಈ ಆವೃತ್ತಿಯು ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರರು ನಡೆಸಿದ ಕಳ್ಳಾಟ ಬಯಲಿಗೆ ಬಂದು ಕುಖ್ಯಾತಿ ಪಡೆಯಿತು. ಫ಼ಿನಲ್ ನಲ್ಲಿ ಮುಂಬಯಿ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ೨೩ ರನ್ ಗಳಿಂದ ಸೋಲಿಸಿ ಚಾಂಪಿಯನ್ನರಾದರು.