ವಿಷಯಕ್ಕೆ ಹೋಗು

೨೦೦೪ ಹಿಂದೂ ಮಹಾಸಾಗರದ ಭೂಕಂಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(೨೦೦೪ ಹಿ೦ದೂ ಮಹಾಸಾಗರದ ಭೂಕ೦ಪ ಇಂದ ಪುನರ್ನಿರ್ದೇಶಿತ)
ಭೂಕ೦ಪದಿ೦ದೆದ್ದ ಸುನಾಮಿ ಅಲೆಗಳು

೨೦೦೪ರ ಹಿಂದೂ ಮಹಾಸಾಗರದ ಭೂಕಂಪ ಸಮುದ್ರದ ನೀರಿನಡಿ ನಡೆದ ರಿಖ್ಟರ್ ಮಾಪನದಲ್ಲಿ ೮.೯ ರಷ್ಟು ಬಲವಾದ ಭೂಕಂಪ. ಇದು ಡಿಸೆಂಬರ್ ೨೬, ೨೦೦೪ ರಂದು ಇಂಡೊನೇಷ್ಯಾದಲ್ಲಿರುವ ಸುಮಾತ್ರ ದ್ವೀಪದ ಬಳಿ ಸಂಭವಿಸಿತು. ಸಮುದ್ರದ ಅಡಿಯಲ್ಲಿ ನಡೆದದ್ದರಿಂದ ಈ ಭೂಕಂಪ ಸಮುದ್ರದಲ್ಲಿ ಎಬ್ಬಿಸಿದ ಅಲೆಗಳು ಭಾರತ, ಶ್ರೀಲಂಕಾ, ಇಂಡೊನೇಷಿಯಾ ಮೊದಲಾದ ದೇಶಗಳಲ್ಲಿ ವಿಕೋಪ ಸೃಷ್ಟಿಸಿದ್ದು ಒಟ್ಟು ಸುಮಾರು ೧,೫೦,೦೦೦ ಜನರು ಮೃತಪಟ್ಟರು. ಸುನಾಮಿ ಅಲೆಗಳೆಂದು ಕರೆಯಲ್ಪಡುವ ಈ ಅಲೆಗಳು ಕೆಲವು ಕಡೆ ೩೩ ಅಡಿಗಳಷ್ಟು ಎತ್ತರವಿದ್ದವು.

ಭೂಕಂಪದ ಶಕ್ತಿ

[ಬದಲಾಯಿಸಿ]

ಮೊದಲ ವರದಿಗಳ ಪ್ರಕಾರ ರಿಖ್ಟರ್ ಮಾಪನದಲ್ಲಿ ೬.೮ ರಷ್ಟು ಬಲವಾದ ಭೂಕಂಪ, ನಂತರ ರಿಖ್ಟರ್ ೮.೯ ರಷ್ಟು ಇದೆಯೆ೦ದು ನಿಗದಿಪಡಿಸಲಾಯಿತು. ಇದು ವರೆಗೆ ದಾಖಲಾದ ಅತಿ ದೊಡ್ಡ ಭೂಕಂಪ ಚಿಲಿ ದೇಶದಲ್ಲಿ ನಡೆದ ರಿಖ್ಟರ್ ೯.೫ ರಷ್ಟಿತ್ತು. ಈಗ ನಡೆದ ಭೂಕಂಪ ಕಳೆದ ೪೦ ವರ್ಷಗಳಲ್ಲಿ ಅತಿ ದೊಡ್ಡದು.

ಭೂಕಂಪದ ಕೇಂದ್ರಬಿಂದು ಸುಮಾತ್ರಾ ದ್ವೀಪದಿಂದ ಸುಮಾರು ೧೦೦ ಮೈಲಿ ಪಶ್ಚಿಮದಲ್ಲಿದ್ದು ಸಮುದ್ರಮಟ್ಟದಿಂದ ೬.೨ ಮೈಲಿ ಕೆಳಗಿತ್ತು. ಭೂಕಂಪವನ್ನು ದೂರದೇಶಗಳಲ್ಲಿಯೂ ಗುರುತಿಸಲಾಗುವಷ್ಟು ಬಲವಾಗಿತ್ತು (ಉದಾ: ಭಾರತ, ಶ್ರೀಲಂಕಾ).

ಹಾನಿಗೊಳಗಾದವರ ಸಂಖ್ಯೆ
ಅನುಕ್ರಮ ದೇಶ ಮೃತಪಟ್ಟವರ ಸಂಖ್ಯೆ ಗಾಯಕ್ಕೊಳಗಾದವರು ನಾಪತ್ತೆಯಾದವರು
ಶ್ರೀಲಂಕಾ ೨೧,೭೧೫ ೪,೦೦೦+ ೨೦,೦೦೦+
ಭಾರತ ೧೨,೪೦೦ -- ೩೦,೦೦೦+
ಇಂಡೊನೇಷ್ಯಾ ೨೭,೦೦೦ ೧,೦೦,೦೦೦+ ಸಾವಿರಾರು
ಥೈಲೆಂಡ್ ೧,೫೦೦+ ೮,೪೦೦ ೧,೨೦೦
ಸೊಮಾಲಿಯಾ ೧೦೦ -- --
ಮ್ಯಾನ್‌ಮಾರ್ ೯೦ -- --
ಮಲೇಷ್ಯಾ ೬೫ ೧೮೩ ೨೬
ಮಾಲ್ಡೀವ್ಸ್ ೫೨ -- ೭೬
ಬಾಂಗ್ಲಾದೇಶ -- --
೧೦ ಕೀನ್ಯಾ -- --
ಒಟ್ಟು ೬೩,೦೦೦+ ೧,೦೦,೦೦೦+ ೫೦,೦೦೦+
ಮಾಲ್ಡೀವ್ಸ್ ನ ರಾಜಧಾನಿ ಮಾಲೆಯಲ್ಲಿ ಸುನಾಮಿ ಅಲೆಗಳಿ೦ದ ಹಾನಿ
ಭಾರತದ ಚೆನ್ನೈ ನಗರದಲ್ಲಿ ಅಲೆಗಳಿ೦ದ ಕಾರುಗಳು ರಸ್ತೆಯಿ೦ದ ತಳ್ಳಲ್ಪಟ್ಟವು