ವಿಷಯಕ್ಕೆ ಹೋಗು

೧೮೯೦ರ ಮುಂಬಯಿನಗರದ ಪ್ಲೇಗ್ ಪಿಡುಗು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(೧೮೯೦ರ ಮುಂಬೈ ಪ್ಲೇಗ್ ಇಂದ ಪುನರ್ನಿರ್ದೇಶಿತ)
'ಬೊಂಬಾಯಿನ ಹಾಫ್ ಕಿನ್ ಆಸ್ಪತ್ರೆ'

೧೮೯೦ ರ ಮುಂಬಯಿನಗರದಲ್ಲಿ ತಲೆದೋರಿದ ಪ್ಲೇಗ್ ಪಿಡುಗು,[] ಚರಿತ್ರೆಯಲ್ಲಿ ದಾಖಲಾಗಿದೆ. ಆ ಸಮಯದಲ್ಲಿ ಬೊಂಬಾಯಿನಗರಕ್ಕೆ ಉದ್ಯೋಗಾವಕಾಶಗಳಿಗಾಗಿ ವಲಸೆಬಂದ ಜನಸಮೂಹಕ್ಕೆ ಅವರ ವರಮಾನಕ್ಕೆ ಸರಿಯಾದ ವಸತಿಗೃಹಗಳ ಸೌಲಭ್ಯವಿಲ್ಲದೆ,ಕೊಳಚೆಪ್ರದೇಶಗಳಲ್ಲಿ ವಾಸ್ತ್ಯವ್ಯ ಅನಿವಾರ್ಯವಾಗಿತ್ತು. ಆ ಸಮಯದಲ್ಲಿ ಪ್ಲೇಗ್, ಕ್ಷಯ, ಕಾಲರಾ, ಮುಂತಾದ ಹಲವು ಕಾಯಿಲೆಗಳು ತಲೆದೋರಿದವು. ಉತ್ತರಬೊಂಬಾಯಿನಿಂದ 'ಪರೇಲ್', ವರೆಗೆ ಮಾತ್ರ ನಗರದ ಬೆಳವಣಿಗೆಯಾಗಿತ್ತು. ಅಲ್ಲಿಂದ ಮುಂದೆ ದೊಡ್ಡ ಕಾಡು, ಕಂದಕ, ಚಿಕ್ಕಪುಟ್ಟಕಲ್ಲಿನ ದಿಣ್ಣೆಗಳು, ಅನಾರೋಗ್ಯಕರವಾದ ನಾಲೆಗಳು, ಹಳ್ಳ-ಕೊಳ್ಳಗಳು, ಕೆಸರಿನಹೊಂಡಗಳಿಂದಾಗಿ ಯೂರೋಪಿಯನ್ನರು ಆ ಸ್ಥಾನಗಳಲ್ಲಿ ವಾಸ್ತವ್ಯಮಾಡಲು ಒಪ್ಪುತ್ತಿರಲಿಲ್ಲ. ಆ ಸಮಯದಲ್ಲೇ 'ಪರೇಲ್ 'ವಲಯದಲ್ಲಿ ಆಗಿನಕಾಲದ ಗವರ್ನರ್ ರವರ ವಸತಿಗೃಹವನ್ನು ಕಟ್ಟಲಾಗಿತ್ತು. ಅವರು ದಕ್ಷಿಬೊಂಬಾಯಿನ 'ಮಲಬಾರ್ ಹಿಲ್ಸ್' ನಲ್ಲಿ ತಮ್ಮ ಬಂಗಲೆಕಟ್ಟಲು ವ್ಯವಸ್ಥೆಮಾಡಿಕೊಂಡರು. ತೆರವಾಗಿದ್ದ ಅವರ ಬಂಗಲೆಯನ್ನು ಒಂದು ಆಸ್ಪತ್ರೆಯನ್ನಾಗಿ ಬದಲಾಯಿಸಲಾಯಿತು. ಅಂದಿನ ದಿನಗಳಲ್ಲಿ ಸಾರ್ವಜನಿಕರನ್ನು ಕಾಡುತ್ತಿದ್ದ ಕಾಯಿಲೆಗಳಲ್ಲಿ ಮುಖ್ಯವಾದದ್ದು ಪ್ಲೇಗ್ ಜ್ವರ. ೧೮೯೧ ಜನಗಣತಿಯ ಪ್ರಕಾರ, ಬೊಂಬಾಯಿನ ಜನಸಂಖ್ಯೆ, ೮೨೦,೦೦೦ ಇತ್ತು.(ಹೆಚ್ಚುಭಾಗ ಅಂದರೆ, ೭೦% ನಷ್ಟು) ವಲಸೆಗಾಗಿ ಬಂದ ಕೆಲಸಗಾರರು,ಚಾಲ್ ಗಳಲ್ಲಿ ನೆಲೆಸಿದ್ದರು. ಈ ಪ್ರದೇಶಗಳು ನಗರಸಭೆಯ ವ್ಯಾಪ್ತಿಯಲ್ಲಿ ಬರದೆ ನೈರ್ಮಲ್ಯ, ಹಾಗೂ ಕೆಲವು ಪ್ರಮುಖ ಪ್ರಾಥಮಿಕ ಆದ್ಯತೆಗಳಿಂದ ವಂಚಿತವಾಗಿದ್ದವು. ೧೮೯೬ ಸೆಪ್ಟೆಂಬರ್, ರಲ್ಲಿ ಪ್ರಥಮವಾಗಿ 'ಬ್ಯುಬೊನಿಕ್ ಪ್ಲೇಗ್' ಬೊಂಬಾಯಿನ ಉಪನಗರವಾಗಿದ್ದ, ಮಾಂಡವಿ, ಯಲ್ಲಿ ಕಾಣಿಸಿಕೊಂಡಿತು. ಈ ಪಿಡಿಗು ನಿಧಾನವಾಗಿ ಬೇರೆ ಪ್ರದೇಶಗಳಿಗೂ ಪಸರಿಸಿತು. ಪ್ರತಿವಾರ ಇದಕ್ಕೆ,ತುತ್ತಾದವರು, ಸುಮಾರು ೧,೯೦೦ ಜನ. ಜನ ಹೆದರಿ,ಕಂಗಾಲಾಗಿ ಊರುಬಿಟ್ಟು ಓಡಿಹೋದರು. ೧೯೦೧,ರಲ್ಲಿ ಜನಸಂಖ್ಯೆ ೭೮೦,೦೦೦ ಕ್ಕೆ ಇಳಿಯಿತು.

'ಬೊಂಬಾಯಿನ ಸರ್ ಜೆ.ಜೆ.ಆಸ್ಪತ್ರೆ'

ಅದೇ ವರ್ಷ ಬೊಂಬಾಯಿನಗರದಲ್ಲಿ ಸರ್ ಜೆ.ಜೆ.ಆಸ್ಪತ್ರೆ, ಹಾಫ್ಕಿನ್ ಇನ್ಸ್ಟಿಟ್ಯೂಟ್, ಮುಂತಾದ ವೈದ್ಯಕೀಯ ಚಿತ್ಸಾಲಯಗಳು ತಲೆಯೆತ್ತಿದವು. ಸರ್.ಜೆ. ಜೆ. ಆಸ್ಪತ್ರೆ ಯನ್ನು, ೧೮೯೯ ರಲ್ಲಿ 'Government House' ಪರೆಲ್, ಗೆ ವರ್ಗಾವಣೆಮಾಡಲಾಯಿತು. ಡಾ.ಡಬ್ಲ್ಯೂ .ಎಮ್.ಹಾಫ್ ಕಿನ್, ರ ಹೆಸರಿನಲ್ಲಿ ಹಾಫ್ಕಿನ್ ಇನ್ಸ್ಟಿಟ್ಯೂಟ್, ಪ್ರಾರಂಭವಾಯಿತು. ಆದರೆ, ಹಳೆಕಾಲದ ಮನೋಭಾವನೆಯಿದ್ದವರು,ಆಧುನಿಕ ವ್ಯದ್ಯಪದ್ಧತಿಯನ್ನು ತಿರಸ್ಕರಿಸಿದರು. ಕೆಲವು ಆಧುನಿಕಪದ್ಧತಿಗಳನ್ನು ಗೌರವಿಸುವಜನ,ಇಂತಹ ಸ್ಥಳಗಳಿಗೆ ಭೇಟಿನೀಡಿ ಆಧುನಿಕ ಚಿಕಿತ್ಸೆಯಲಾಭಪಡೆಯುತ್ತಿದ್ದರು. ಹಿಂದಿನವಿಚಾರಧಾರೆಯನ್ನೇ ನಂಬಿ ಜೀವನದಲ್ಲಿ ಆಗುವ ಬದಲಾವಣೆಗೆ ಹೊಂದಿಕೊಳ್ಳದ ವ್ಯಕ್ತಿಗಳು ಮಹಾಮಾರಿಗೆ ತುತ್ತಾಗಿ ಪ್ರಾಣತೆತ್ತರು.

ಟಾಟರವರ ಅಮೂಲ್ಯ ಕೊಡುಗೆ

[ಬದಲಾಯಿಸಿ]

ಬೊಂಬಾಯಿನ ಖ್ಯಾತಉದ್ಯಮಿ, ಜಮ್ ಶೆಟ್ ಜಿ ಟಾಟ, ಉತ್ತರ ಬಾಂಬೆಗೆ ಕೆಲವುರೋಗಿಗಳನ್ನು ಸಾಗಿಸಿ ಔಷಧೋಪಚಾರಮಾಡಿಸಲು ಪ್ರಯತ್ನಮಾಡಿದರು. ಮಿಲ್ ಕೆಲಸಗಾರರು ಹೆಚ್ಚಾಗಿ ಇದಕ್ಕೆ ಬಲಿಯಾದರು. ಪ್ಲೇಗ್ ವಿರುದ್ಧ ಹೊಡೆದಾಡಬೇಕಾದರೆ, ಆರೋಗ್ಯ ಇಲಾಖೆಗೆ ಪೋಲಿಸ್ ತಪಾಸಣೆ, ರೋಗಿಗಳನ್ನು ಪ್ರತ್ಯೇಕವಾಗಿ ಸಂರಕ್ಷಿಸುವ ವ್ಯವಸ್ಥೆ,ವಲಸೆಗಾರರ ತಪಾಸಣೆ, ಮುಂತಾದ ಸೌಲಭ್ಯಗಳ ಆವಶ್ಯಕತೆಯಿತ್ತು. ಬ್ರಿಟಿಷ್ ಸರ್ಕಾರ ಖಡ್ಡಾಯವಾಗಿ ನಗರವಾಸಿಗಳನ್ನು ಬೇರೆಕಡೆ ಸ್ಥಳಗಳಿಗೆ ರವಾನೆಮಾಡಿಸಿ ಸ್ವಲ್ಪಮಟ್ಟಿಗೆ ರೋಗವನ್ನು ತಡೆಗಟ್ಟುವ ಪ್ರಯತ್ನಮಾಡಿದರು. ತಿಳುವಳಿಕೆಯಿಲ್ಲದ ಜನರು ಇದನ್ನು ಬಹಳ ವಿರೋಧಿಸಿದರು.

ಬೊಂಬಾಯಿನಗರದ ನಾಗರಿಕರು,ಹಲವು ರೋಗಗಳಿಗೆ ಬಲಿಯಾದರು

[ಬದಲಾಯಿಸಿ]
  • ೧೯೦೦,ರಲ್ಲಿ ಜನಸತ್ತವರು ೨೨ ಪ್ರತಿಸಾವಿರಕ್ಕೆ.
  • ಅದೇವರ್ಷದಲ್ಲಿ ಕ್ಷಯರೋಗದಿಂದ ಮಡಿದವರ ಸಂಖ್ಯೆ ೧೨, ಪ್ರತಿಸಾವಿರಕ್ಕೆ.
  • ಕಾಲರ ರೋಗದಿಂದ ಸತ್ತವರು,೧೪, ಪ್ರತಿಸಾವಿರಕ್ಕೆ
  • ಬರಿ ಜ್ವರವೆಂದು ದಾಖಲಾದ ರೋಗಿಗಳಲ್ಲಿ ಸತ್ತವರು, ೨೨, ಪ್ರತಿಸಾವಿರಜನ ತುತ್ತಾದರು.
  • ಪ್ಲೇಗ್ ಹೆದರಿಕೆಯಲ್ಲದೆ, ಬೇರೆ ಸಾಮಾನ್ಯವಾಗಿ ಸಾಂಕ್ರಾಮಿಕವಾಗಿಬರುವ ಜ್ವರ ಇತ್ಯಾದಿಯಿಂದ ಸತ್ತವರು ಹೆಚ್ಚು.

ಡಿಸೆಂಬರ್ ೧೮೯೮ ರಲ್ಲಿ ಬೊಂಬಾಯಿನಗರದಲ್ಲಿ, 'ಸಿಟಿ ಇಂಪ್ರೂವ್ ಮೆಂಟ್ ಟ್ರಸ್ಟ್' ಸ್ಥಾಪನೆಯಾಯಿತು. ಬ್ರಿಟಿಷ್ ಪಾರ್ಲಿಮೆಂಟ್, ಅದಕ್ಕೆ ಅನುಮೋದನೆನೀಡಿತು. ಸಿಟಿ ಇಂಪ್ರೂವ್ ಮೆಂಟ್ ಟ್ರಸ್ಟ್ ನಗರದ ಜನರ ಸ್ವಾಸ್ಥ್ಯವನ್ನು ಕಾಪಾಡಲು ಶ್ರಮವಹಿಸಿತು. ನಗರವನ್ನು ಕಟ್ಟಲು,ವಿಸ್ತರಿಸಲು, ಹಾಗೂ ಹಲವಾರು ಮಾರ್ಪಾಡುಗಳನ್ನು ಜನಹಿತಕ್ಕಾಗಿ ಮಾಡಲು ಅಧಿಕಾರವನ್ನು ಪಡೆಯಿತು. 'ಸಿಟಿ ಇಂಪ್ರೂವ್ ಮೆಂಟ್ ಟ್ರಸ್ಟ್',ನ ಪದಾಧಿಕಾರಿಗಳು,ನಗರದ ರಸ್ತೆ, ಚರಂಡಿ, ಸೇತುವೆಗಳ ನಿರ್ಮಾಣಕಾರ್ಯವನ್ನು ಕೈಗೆ ತೆಗೆದುಕೊಂಡರು. 'ಪ್ರಿನ್ಸೆಸ್ ಸ್ಟ್ರೀಟ್ ' ಮತ್ತು 'ಸಿಡ್ನೆಹಮ್ ರಸ್ತೆ', (ಈಗಿನ 'ಮೊಹಮ್ಮದಾಲಿ ರಸ್ತೆ'), ಆಗ ಶುರುವಾಯಿತು.

ಉಲ್ಲೇಖಗಳು

[ಬದಲಾಯಿಸಿ]
  1. 'Report from Bombay, work of the Plague Research Laboratory on inoculations'

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]