೧೨ ಗಂಟೆಗಳ ಗಡಿಯಾರ
ಈ ಲೇಖನ ಯಾವುದೇ ವಿಕಿಪೀಡಿಯ ಲೇಖನಕ್ಕೆ ಕೊಂಡಿಗಳನ್ನು (Interwiki links) ಹೊಂದಿಲ್ಲ. (ಜುಲೈ ೨೦೧೭) |
೧೨ ಗಂಟೆಗಳ ಗಡಿಯಾರ ಸಮಯದ ಒಂದು ಒಪ್ಪಂದ. ಇದರಲ್ಲಿ ದಿನದ ೨೪ ಗಂಟೆಗಳನ್ನು ಎರಡು ಕಾಲಾವಧಿಗಳಲ್ಲಿ ವಿಭಜಿಸಲಾಗುತ್ತದೆ:[೧] ಪೂರ್ವಾಹ್ನ (ಅಂದರೆ ನಡುಹಗಲಿನ ಮೊದಲು) ಮತ್ತು ಅಪರಾಹ್ನ (ಅಂದರೆ ನಡುಹಗಲಿನ ನಂತರ). ಪ್ರತಿ ಕಾಲಾವಧಿಯು ಸಂಖ್ಯೆಯಿಂದ ಗುರುತಿಸಲ್ಪಟ್ಟ ೧೨ ಗಂಟೆಗಳನ್ನು ಹೊಂದಿರುತ್ತದೆ: (ಶೂನ್ಯವಾಗಿ ಕಾರ್ಯನಿರ್ವಹಿಸುವ) 12 , 1, 2, 3, 4, 5, 6, 7, 8, 9, 10, ಮತ್ತು 11. ೨೪ ಗಂಟೆಗಳ ದೈನಿಕ ಆವರ್ತ ಮಧ್ಯರಾತ್ರಿ ೧೨ ಕ್ಕೆ ಶುರುವಾಗುತ್ತದೆ (೧೨ ಪೂರ್ವಾಹ್ನ ಎಂದು ಸೂಚಿಸಲಾಗುತ್ತದೆ), ನಡುಹಗಲು ೧೨ ರ ಮೂಲಕ ಹಾದುಹೋಗಿ (೧೨ ಅಪರಾಹ್ನ ಎಂದು ಸೂಚಿಸಲಾಗುತ್ತದೆ), ಮತ್ತು ದಿನದ ಕೊನೆಯ ಮಧ್ಯರಾತ್ರಿವರೆಗೆ ಮುಂದುವರಿಯುತ್ತದೆ. ೧೨ ಗಂಟೆಗಳ ಗಡಿಯಾರವನ್ನು ಕ್ರಿ.ಪೂ. ಎರಡನೇ ಸಹಸ್ರಮಾನದ ಮಧ್ಯದಿಂದ ಕ್ರಿ.ಶ. ೧೬ನೇ ಶತಮಾನದವರೆಗಿನ ಕಾಲಾನಂತರದಲ್ಲಿ ಅಭಿವೃದ್ಧಿಪಡಿಸಲಾಯಿತು.
೧೨ ಗಂಟೆಗಳ ಗಡಿಯಾರವನ್ನು ಮೆಸೊಪೊಟೇಮಿಯಾ ಮತ್ತು ಪ್ರಾಚೀನ ಈಜಿಪ್ಟ್‌ನಷ್ಟು ಹಿಂದೆ ಗುರುತಿಸಬಹುದು. ಹಗಲಿನ ಸಮಯದ ಬಳಕೆಗೆ ಈಜಿಪ್ಟಿಯನ್ ನೆರಳು ಗಡಿಯಾರ ಮತ್ತು ರಾತ್ರಿ ಸಮಯದ ಬಳಕೆಗೆ ಈಜಿಪ್ಟಿಯನ್ ಜಲಗಡಿಯಾರ ಎರಡನ್ನೂ ಫ಼್ಯಾರೊ ಅಮೆನ್‍ಹೊಟೆಪ್‍ನ ಗೋರಿಯಲ್ಲಿ ಕಂಡುಹಿಡಿಯಲಾಯಿತು. ಕ್ರಿ.ಶ. ೧೫೦೦ ರ ಕಾಲಮಾನದ ಈ ಗಡಿಯಾರಗಳು ತಮ್ಮ ಬಳಕೆಯ ಆಯಾ ಸಮಯಗಳನ್ನು ೧೨ ಗಂಟೆಗಳಾಗಿ ವಿಭಜಿಸಿದವು.
ರೋಮನ್ನರೂ ೧೨ ಗಂಟೆಗಳ ಗಡಿಯಾರವನ್ನು ಬಳಸುತ್ತಿದ್ದರು: ಹಗಲ ಬೆಳಕನ್ನು ೧೨ ಸಮಾನ ಗಂಟೆಗಳಾಗಿ (ಹಾಗಾಗಿ ಗಂಟೆಗಳು ವರ್ಷದಾದ್ಯಂತ ಬದಲಾಗುವ ಕಾಲಾವಧಿಯನ್ನು ಹೊಂದಿರುತ್ತಿದ್ದವು) ವಿಭಜಿಸಲಾಗಿತ್ತು ಮತ್ತು ರಾತ್ರಿಯನ್ನು ನಾಲ್ಕು ಪಹರೆಗಳಾಗಿ ವಿಭಜಿಸಲಾಗಿತ್ತು.
ಇಂದಿನ ಬಹುತೇಕ ಸಾದೃಶ್ಯಕ ಗಡಿಯಾರಗಳು ಮತ್ತು ಕೈಗಡಿಯಾರಗಳು ೧೨ ಗಂಟೆಗಳ ಸೂಚೀಫಲಕವನ್ನು ಬಳಸುತ್ತವೆ. ಇದರ ಮೇಲೆ ಗಿಡ್ಡನೆಯ ಗಂಟೆ ಮುಳ್ಳು ಪ್ರತಿ ೧೨ ಗಂಟೆಗಳಿಗೊಮ್ಮೆ ಮತ್ತು ಒಂದು ದಿನದಲ್ಲಿ ಎರಡು ಬಾರಿ ತಿರುಗುತ್ತದೆ. ಕೆಲವು ಸಾದೃಶ್ಯಕ ಗಡಿಯಾರದ ಸೂಚೀಫಲಕಗಳು ಸಾಮಾನ್ಯ ೧ ರಿಂದ ೧೨ ರ ವರೆಗಿನ ಸಂಖ್ಯಾ ಗುರುತಿನ ವರ್ತುಲದ ಜೊತೆಗೆ ಸಂಖ್ಯೆಗಳ ಒಂದು ಒಳಗಿನ ವರ್ತುಲವನ್ನು ಹೊಂದಿರುತ್ತವೆ. ಸಂಖ್ಯೆ ೧೨ ನ್ನು ೦೦ ಅಥವಾ ೨೪ ರೊಂದಿಗೆ ಜೊತೆಗೂಡಿಸಲಾಗಿರುತ್ತದೆ, ಅದೇ ೧ ರಿಂದ ೧೧ ರ ವರೆಗಿನ ಸಂಖ್ಯೆಗಳನ್ನು ಅನುಕ್ರಮವಾಗಿ ೧೩ ರಿಂದ ೨೩ ರ ವರೆಗಿನ ಸಂಖ್ಯೆಗಳೊಂದಿಗೆ ಜೊತೆಗೂಡಿಸಲಾಗಿರುತ್ತದೆ. ಈ ಬಗೆಯ ೧೨ ಗಂಟೆಗಳ ಗಡಿಯಾರವನ್ನು ೨೪ ಗಂಟೆಗಳ ಗಡಿಯಾರ ಇಷ್ಟಪಡುವ ದೇಶಗಳಲ್ಲಿ ಕಾಣಬಹುದು.
ಉಲ್ಲೇಖಗಳು
[ಬದಲಾಯಿಸಿ]- ↑ "Time". The New Encyclopædia Britannica. Vol. 28. 1986. pp. 660 2a.
"Time". Encyclopædia Britannica. Encyclopædia Britannica Online Library Edition. (subscription required)
"The use of AM or PM to designate either noon or midnight can cause ambiguity. To designate noon, either the word noon or 1200 or 12 M should be used. To designate midnight without causing ambiguity, the two dates between which it falls should be given unless the 24-hour notation is used. Thus, midnight may be written: May 15–16 or 2400 May 15 or 0000 May 16."
- Pages containing links to subscription-only content
- Dead-end pages from ಜುಲೈ ೨೦೧೭
- Articles with invalid date parameter in template
- All dead-end pages
- Articles covered by WikiProject Wikify from ಜುಲೈ ೨೦೧೭
- All articles covered by WikiProject Wikify
- ವಿಕಿಪೀಡಿಯ ನಿರ್ವಹಣೆ
- Orphaned articles from ಜುಲೈ ೨೦೧೭
- All orphaned articles
- ಸಮಯ ಮಾಪನ ವ್ಯವಸ್ಥೆಗಳು