ವಿಷಯಕ್ಕೆ ಹೋಗು

ಹೊಗೆನಕಲ್ ಜಲಪಾತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಹೊಗೆನ್ಕಲ್ ಜಲಪಾತ ಇಂದ ಪುನರ್ನಿರ್ದೇಶಿತ)
ಹೊಗೆನಕಲ್ ಜಲಪಾತ,ಕರ್ನಾಟಕ

ಹೊಗೆನಕಲ್ ಜಲಪಾತವು ದಕ್ಷಿಣ ಭಾರತದ ಕಾವೇರಿ ನದಿಗೆ ಸೇರಿದ್ದು. ಬೆಂಗಳೂರಿನಿಂದ ಸುಮಾರು ೧೮೦ ಕಿ.ಮಿ. ದೊರದಲ್ಲಿದೆ. ಭಾರತದ "ನಯಾಗರ ಜಲಪಾತ"ವೆಂದೇ ಸುಪ್ರಸಿದ್ಧ. ಬಂಡೆಗಳ ಮೇಲೆ ಅಪ್ಪಳಿಸುವ ನೀರು ಹೊಗೆಯಂತೆ ಹೊರಹೊಮ್ಮುತ್ತದೆ, ಆದ್ದರಿಂದ ಇದಕ್ಕೆ "ಹೊಗೆನಕಲ್" ಎಂದು ನಾಮಕರಣವಾಯಿತು. ಹೊಗೆನಕಲ್ ಜಲಪಾತ ಕರ್ನಾಟಕ-ತಮಿಳುನಾಡು ರಾಜ್ಯಗಳ ಗಡಿಯಲ್ಲಿದೆ.

ಇತಿವೃತ್ತ

[ಬದಲಾಯಿಸಿ]

ಶಿವನಸಮುದ್ರದಲ್ಲಿ ಅದ್ಭುತ ಜಲಧಾರೆಯನ್ನು ಸೃಷ್ಠಿಸಿ ಪೂರ್ವಾಭಿಮುಖವಾಗಿ ಸಾಗುವ ಕಾವೇರಿ ಮೆಟ್ಟೂರು ಜಲಾಶಯ ಸೇರುವ ಮುನ್ನ ನಯನ ಮನೋಹರ ಜಲಪಾತವನ್ನು ಸೃಜಿಸಿದ್ದಾಳೆ. ಹೊಗೆನಕಲ್ ಜಲಪಾತದ ಬಳಿಗೆ ಹೋಗಲು ಒಂದು ಕಿ.ಮೀ ದೂರ ನದಿ ಹರಿಯುವ ದಿಕ್ಕಿಗೆ ವಿರುದ್ಧವಾಗಿ ದೋಣಿ ಪಯಣ ಮಾಡಬೇಕು. ಹೊಗೆನಕಲ್ ನಲ್ಲಿ ಕಾವೇರಿ ಎರಡು ಕವಲುಗಳಾಗಿ, ಮತ್ತೆ ಹಲವು ಶಾಖೆಗಳಾಗಿ ಜಲಧಾರೆಯನ್ನು ಸೃಷ್ಠಿಸಿದೆ. ಬಂಡೆಗಳ ಮೇಲೆ ಅಪ್ಪಳಿಸುವ ನೀರು ಹೊಗೆಯಲ್ಲಿ ಕೆಲವೊಮ್ಮೆ ಕಾಮನಬಿಲ್ಲು ಮೂಡುತ್ತದೆ.

ತಲುಪುವ ಮಾರ್ಗ

[ಬದಲಾಯಿಸಿ]

ಹೊಗೆನಕಲ್ ಜಲಪಾತಕ್ಕೆ ಹೋಗಲು ಎರಡು ಮಾರ್ಗಗಳಿವೆ.

  1. ಬೆಂಗಳೂರಿನಿಂದ ಧರ್ಮಪುರಿ-ಪೆನ್ನಾಗರಂ ಮಾರ್ಗ.
  2. ಕೊಳ್ಳೇಗಾಲ-ಮಹದೇಶ್ವರಬೆಟ್ಟ-ಗೋಪಿನಾಥಂ ಮಾರ್ಗ. ಮಹದೇಶ್ವರಬೆಟ್ಟದಿಂದ ಹೊಗೆನಕಲ್ ಗೆ ೪೭ ಕಿ.ಮೀ ದೂರ.

ಇನ್ನಿತರ ಆಕರ್ಷಣೀಯ ಸ್ಥಳಗಳು

[ಬದಲಾಯಿಸಿ]

ಹೊಗೆನಕಲ್ ನ ಇತರ ಪ್ರವಾಸಿ ಆಕರ್ಷಣೀಯ ಸ್ಥಳಗಳೆಂದರೆ- 'ಮೊಸಳೆ ಫಾರಂ', 'ಪ್ರಾಣಿ ಸಂಗ್ರಹಾಲಯ' ಮತ್ತು 'ಸಸ್ಯ ಅಭಿವೃದ್ಧಿ ಕೇಂದ್ರ'.

ಚಿತ್ರ ಸಂಪುಟ

[ಬದಲಾಯಿಸಿ]
Photos of Hogenakkl Falls
A section of the waterfall.
A section of the waterfall. 
Hogenakkal Hill View.
Hogenakkal Hill View. 
Approaching Hogenakkal Falls.
Approaching Hogenakkal Falls. 
Gorge of Hogenakkal Falls during the dry season.
Gorge of Hogenakkal Falls during the dry season. 
Hogenakkal Nature
Hogenakkal Nature 
The river Kaveri around Hogenakkal falls
The river Kaveri around Hogenakkal falls 
View from watch tower - Pre-monsoon time
View from watch tower - Pre-monsoon time 

ಇತರೆ ಉಲ್ಲೇಖಗಳು

[ಬದಲಾಯಿಸಿ]

ಕನ್ನಡ:ಹೊಗೆನಕಲ್ ಜಲಪಾತ,ಕರ್ನಾಟಕ