ಹೊಗೆನಕಲ್ ಜಲಪಾತ
![]() | This article needs more links to other articles to help integrate it into the encyclopedia. (ಡಿಸೆಂಬರ್ ೨೦೧೫) |

ಹೊಗೆನಕಲ್ ಜಲಪಾತವು ದಕ್ಷಿಣ ಭಾರತದ ಕಾವೇರಿ ನದಿಗೆ ಸೇರಿದ್ದು. ಬೆಂಗಳೂರಿನಿಂದ ಸುಮಾರು ೧೮೦ ಕಿ.ಮಿ. ದೊರದಲ್ಲಿದೆ. ಭಾರತದ "ನಯಾಗರ ಜಲಪಾತ"ವೆಂದೇ ಸುಪ್ರಸಿದ್ಧ. ಬಂಡೆಗಳ ಮೇಲೆ ಅಪ್ಪಳಿಸುವ ನೀರು ಹೊಗೆಯಂತೆ ಹೊರಹೊಮ್ಮುತ್ತದೆ, ಆದ್ದರಿಂದ ಇದಕ್ಕೆ "ಹೊಗೆನಕಲ್" ಎಂದು ನಾಮಕರಣವಾಯಿತು. ಹೊಗೆನಕಲ್ ಜಲಪಾತ ಕರ್ನಾಟಕ-ತಮಿಳುನಾಡು ರಾಜ್ಯಗಳ ಗಡಿಯಲ್ಲಿದೆ.
ಇತಿವೃತ್ತ[ಬದಲಾಯಿಸಿ]
ಶಿವನಸಮುದ್ರದಲ್ಲಿ ಅದ್ಭುತ ಜಲಧಾರೆಯನ್ನು ಸೃಷ್ಠಿಸಿ ಪೂರ್ವಾಭಿಮುಖವಾಗಿ ಸಾಗುವ ಕಾವೇರಿ ಮೆಟ್ಟೂರು ಜಲಾಶಯ ಸೇರುವ ಮುನ್ನ ನಯನ ಮನೋಹರ ಜಲಪಾತವನ್ನು ಸೃಜಿಸಿದ್ದಾಳೆ. ಹೊಗೆನಕಲ್ ಜಲಪಾತದ ಬಳಿಗೆ ಹೋಗಲು ಒಂದು ಕಿ.ಮೀ ದೂರ ನದಿ ಹರಿಯುವ ದಿಕ್ಕಿಗೆ ವಿರುದ್ಧವಾಗಿ ದೋಣಿ ಪಯಣ ಮಾಡಬೇಕು. ಹೊಗೆನಕಲ್ ನಲ್ಲಿ ಕಾವೇರಿ ಎರಡು ಕವಲುಗಳಾಗಿ, ಮತ್ತೆ ಹಲವು ಶಾಖೆಗಳಾಗಿ ಜಲಧಾರೆಯನ್ನು ಸೃಷ್ಠಿಸಿದೆ. ಬಂಡೆಗಳ ಮೇಲೆ ಅಪ್ಪಳಿಸುವ ನೀರು ಹೊಗೆಯಲ್ಲಿ ಕೆಲವೊಮ್ಮೆ ಕಾಮನಬಿಲ್ಲು ಮೂಡುತ್ತದೆ.
ತಲುಪುವ ಮಾರ್ಗ[ಬದಲಾಯಿಸಿ]
ಹೊಗೆನಕಲ್ ಜಲಪಾತಕ್ಕೆ ಹೋಗಲು ಎರಡು ಮಾರ್ಗಗಳಿವೆ.
- ಬೆಂಗಳೂರಿನಿಂದ ಧರ್ಮಪುರಿ-ಪೆನ್ನಾಗರಂ ಮಾರ್ಗ.
- ಕೊಳ್ಳೇಗಾಲ-ಮಹದೇಶ್ವರಬೆಟ್ಟ-ಗೋಪಿನಾಥಂ ಮಾರ್ಗ. ಮಹದೇಶ್ವರಬೆಟ್ಟದಿಂದ ಹೊಗೆನಕಲ್ ಗೆ ೪೭ ಕಿ.ಮೀ ದೂರ.
ಇನ್ನಿತರ ಆಕರ್ಷಣೀಯ ಸ್ಥಳಗಳು[ಬದಲಾಯಿಸಿ]
ಹೊಗೆನಕಲ್ ನ ಇತರ ಪ್ರವಾಸಿ ಆಕರ್ಷಣೀಯ ಸ್ಥಳಗಳೆಂದರೆ- 'ಮೊಸಳೆ ಫಾರಂ', 'ಪ್ರಾಣಿ ಸಂಗ್ರಹಾಲಯ' ಮತ್ತು 'ಸಸ್ಯ ಅಭಿವೃದ್ಧಿ ಕೇಂದ್ರ'.
ಚಿತ್ರ ಸಂಪುಟ[ಬದಲಾಯಿಸಿ]
ಇತರೆ ಉಲ್ಲೇಖಗಳು[ಬದಲಾಯಿಸಿ]
- Protest against `encroachment' of island near Hogenekal Falls Archived 2007-08-25 ವೇಬ್ಯಾಕ್ ಮೆಷಿನ್ ನಲ್ಲಿ.
- Satellite view
- Hogenakal Archived 2008-10-03 ವೇಬ್ಯಾಕ್ ಮೆಷಿನ್ ನಲ್ಲಿ.

- Articles with too few wikilinks from ಡಿಸೆಂಬರ್ ೨೦೧೫
- Articles with invalid date parameter in template
- All articles with too few wikilinks
- Articles covered by WikiProject Wikify from ಡಿಸೆಂಬರ್ ೨೦೧೫
- All articles covered by WikiProject Wikify
- Orphaned articles from ಡಿಸೆಂಬರ್ ೨೦೧೫
- All orphaned articles
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Commons link is locally defined
- ಜಲಪಾತಗಳು
- ಕರ್ನಾಟಕದ ಪ್ರವಾಸಿ ತಾಣಗಳು