ಹೊಗಳಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೊಗಳಿಕೆ ಒಬ್ಬ ವ್ಯಕ್ತಿಯು ಮತ್ತೊಬ್ಬನ ಉತ್ಪನ್ನಗಳು, ಪ್ರದರ್ಶನಗಳು, ಅಥವಾ ಗುಣಲಕ್ಷಣಗಳ ಬಗ್ಗೆ ಮಾಡಿದ ಸಕಾರಾತ್ಮಕ ಮೌಲ್ಯಮಾಪನಗಳನ್ನು ಸೂಚಿಸುತ್ತದೆ, ಮತ್ತು ಇದರಲ್ಲಿ ಮೌಲ್ಯಮಾಪಕನು ಮಾನದಂಡಗಳ (ಮೌಲ್ಯಮಾಪನ ಇವುಗಳನ್ನು ಆಧರಿಸಿರುತ್ತದೆ) ಸಿಂಧುತ್ವವನ್ನು ಭಾವಿಸುತ್ತಾನೆ.[೧] ಒಬ್ಬ ವ್ಯಕ್ತಿಯ ಮೇಲೆ ಹೊಗಳಿಕೆಯ ಪ್ರಭಾವ, ಸಂದರ್ಭ, ಹೊಗಳಿಕೆಯು ತಿಳಿಸಬಹುದಾದ ಅರ್ಥಗಳು, ಗ್ರಾಹಿಯ ಲಕ್ಷಣಗಳು ಮತ್ತು ಅರ್ಥವಿವರಣೆಗಳನ್ನು ಒಳಗೊಂಡಂತೆ, ಅನೇಕ ಅಂಶಗಳನ್ನು ಆಧರಿಸಿರಬಹುದು. ಹೊಗಳಿಕೆಯು ಗುರುತಿಸುವಿಕೆಯ ಹೆಚ್ಚು ತಟಸ್ಥ ರೂಪಗಳಾದ ಮನ್ನಣೆ ಅಥವಾ ಹಿನ್ನುಣಿಕೆಯಿಂದ, ಮತ್ತು ಹೆಚ್ಚು ಭವಿಷ್ಯ ಉದ್ದೇಶಿತವಾದ ಪ್ರೋತ್ಸಾಹದಿಂದ ಭಿನ್ನವಾಗಿದೆ. ಜೊತೆಗೆ, ಹೊಗಳಿಕೆಯು ಸ್ಪಷ್ಟವಾದ ಪ್ರತಿಫಲಗಳೊಂದಿಗೆ ಕೆಲವು ಭವಿಷ್ಯಸೂಚಕ ಸಂಬಂಧಗಳನ್ನು (ಸಕಾರಾತ್ಮಕ ಮತ್ತು ನಕಾರಾತ್ಮಕ ಎರಡೂ) ಹಂಚಿಕೊಳ್ಳಬಹುದಾದರೂ, ಅದು ಕಡಿಮೆ ಪ್ರಧಾನ ಮತ್ತು ನಿರೀಕ್ಷಿತವಿರುವ ಪ್ರವೃತ್ತಿ ತೋರುತ್ತದೆ, ಸಾಮರ್ಥ್ಯದ ಬಗ್ಗೆ ಹೆಚ್ಚು ಮಾಹಿತಿ ನೀಡುತ್ತದೆ, ಮತ್ತು ಸಾಮಾನ್ಯವಾಗಿ ಬಯಸಿದ ವರ್ತನೆಯ ಹೆಚ್ಚು ತಕ್ಷಣ ನೀಡಲ್ಪಡುತ್ತದೆ.

ವರ್ತನ ಬಲವರ್ಧನೆಯ ಸಾಧನವಾಗಿ ಹೊಗಳಿಕೆಯ ಪರಿಕಲ್ಪನೆಯು ಕಾರ್ಯಕಾರಿ ನಿಯಂತ್ರಣ ಮಾದರಿಯಲ್ಲಿ ಬೇರುಗಳನ್ನು ಹೊಂದಿದೆ. ಈ ದೃಷ್ಟಿಕೋನದಿಂದ, ಹೊಗಳಿಕೆಯನ್ನು ಸಕಾರಾತ್ಮಕ ಬಲವರ್ಧನೆಯ ಸಾಧನವಾಗಿ ಕಾಣಲಾಗಿದೆ, ಮತ್ತು ಇದರಲ್ಲಿ ಅನಿಶ್ಚಿತವಾಗಿ ಗಮನಿಸಿದ ವರ್ತನೆಯನ್ನು ಹೊಗಳಿ ಅದು ಸಂಭವಿಸುವ ಸಾಧ್ಯತೆಯನ್ನು ಹೆಚ್ಚು ಮಾಡಲಾಗುತ್ತದೆ. ನೂರಾರು ಅಧ್ಯಯನಗಳು ಸಕಾರಾತ್ಮಕ ವರ್ತನೆಗಳನ್ನು ಪ್ರೋತ್ಸಾಹಿಸುವಲ್ಲಿ ಹೊಗಳಿಕೆಯ ಪರಿಣಾಮಕಾರಿತ್ವವನ್ನು ತೋರಿಸಿಕೊಟ್ಟಿವೆ, ಗಮನಾರ್ಹವಾಗಿ ಸುಧಾರಿತ ವರ್ತನೆ ಮತ್ತು ಶೈಕ್ಷಣಿಕ ಸಾಧನೆಯನು ಪ್ರೋತ್ಸಾಹಿಸಲು ಶಿಕ್ಷಕ ಮತ್ತು ಹೆತ್ತವರಿಂದ ಮಗುವಿನ ಮೇಲೆ ಹೊಗಳಿಕೆಯ ಬಳಕೆ ಅಧ್ಯಯನದಲ್ಲಿ, ಜೊತೆಗೆ ಕೆಲಸದ ಸಾಧನೆಯ ಅಧ್ಯಯನದಲ್ಲಿ ಕೂಡ. ಹೊಗಳಿಕೆಯು, ಅದರ ರೂಪ, ವಿಷಯ ಮತ್ತು ಶೈಲಿಯನ್ನು ಆಧರಿಸಿ, ವರ್ತನೆಯನ್ನು ಬದಲಾಯಿಸುವಲ್ಲಿ ಹೆಚ್ಚು ಅಥವಾ ಕಡಿಮೆ ಪರಿಣಾಮಕಾರಿಯಾಗಿರಬಹುದು. ಹೊಗಳಿಕೆಯು ಸಕಾರಾತ್ಮಕ ವರ್ತನ ಬದಲಾವಣೆಯನ್ನು ಉಂಟುಮಾಡಲು, ಅದು ಸಕಾರಾತ್ಮಕ ವರ್ತನೆಯನ್ನು ಅನಿಶ್ಚಿತವಾಗಿ ಆಧರಿಸಿರಬೇಕು, ಬಲವರ್ದನೆ ಮಾಡಬೇಕಾಗಿರುವ ವರ್ತನೆಯ ವಿವರಗಳನ್ನು ನಿರ್ದಿಷ್ಟಪಡಿಸಬೇಕು, ಮತ್ತು ಅದನ್ನು ಪ್ರಾಮಾಣಿಕವಾಗಿ ಹಾಗೂ ನಂಬಲರ್ಹವಾಗಿ ತಲುಪಿಸಬೇಕು.

ಉಲ್ಲೇಖಗಳು[ಬದಲಾಯಿಸಿ]

  1. Kanouse, D. E.; Gumpert, P.; Canavan-Gumpert, D. (1981). "The semantics of praise". New directions in attribution research. 3: 97–115.
"https://kn.wikipedia.org/w/index.php?title=ಹೊಗಳಿಕೆ&oldid=757810" ಇಂದ ಪಡೆಯಲ್ಪಟ್ಟಿದೆ