ಹೈ ಪಾರ್ಕ್, ಟೊರಾಂಟೋ
'ಹೈಪಾರ್ಕ್,' ಕೆನಡಾದ, ಟೊರಾಂಟೋನಗರದ ಮುನಿಸಿಪಲ್ ಉದ್ಯಾನ. ಈ ಪಾರ್ಕ್, ೧೬೧ ಹೆಕ್ಟೇರ್ (೪೦೦ ಎಕರೆ)ಜಾಗದಲ್ಲಿ ನಿರ್ಮಾಣಗೊಂಡಿರುವ ಮನರಂಜನೆಯ ತಾಣವೆಂದು ಹೆಸರುವಾಸಿಯಾಗಿದೆ. ಈ ಉದ್ಯಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ನಡೆಸಲು ಅನುಕೂಲವಿದೆ. ಶೈಕ್ಷಣಿಕ ತರಬೇತಿಯ ಪ್ರಕ್ರಿಯೆ, ಆಟದ ಮೈದಾನ, ಮೃಗಾಲಯ,ಎಲ್ಲವೂ ಒಟ್ಟಾಗಿ ಇರುವುದರಿಂದ ಮಕ್ಕಳಿಗೆ, ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ, ಹಾಗೂ ಎಲ್ಲಾ ವಯೋಮಿತಿಯ ನಾಗರಿಕರಿಗೆ ಇದು ಅತ್ಯಂತ ಮುದಕೊಡುವ ಜಾಗ. ಮೂರನೆಯ ಒಂದುಭಾಗ ಮರ-ಗಿಡ,ಚಿಕ್ಕಕೆರೆಗಳು, ಹುಲ್ಲುಮೈದಾನಗಳಿಂದ ಸುತ್ತುವರೆದಿದೆ. ವಿಶೇಷ ಓಕ್ ಮರಗಳ ಸವನ್ನಾ ಪರಿಸರ ವಿದೆ. 'ಹೈಪಾರ್ಕ್', ೧೮೭೬ ರಲ್ಲಿ ಮೊಟ್ಟಮೊದಲು ಸಾರ್ವಜನಿಕರಿಗೆ ತೆರೆಯಲಾಯಿತು. ಟೊರಾಂಟೋನಗರಕ್ಕೆ ಜಾನ್ ಜಾರ್ಜ್ ಹೊವಾರ್ಡ್ ರವರ ಊರಿನ ಬಗ್ಗೆ ಇದ್ದ ಅಪಾರ ಪ್ರೀತಿಯ, ಉದಾರ ದಾನದ ಕೊಡುಗೆಯಿಂದ ಸಾಧ್ಯವಾಯಿತು. ಇದು ಅತಿದೊಡ್ಡ ಉದ್ಯಾನ. ರೂಜ್ ಪಾರ್ಕ್ ಅತಿದೊಡ್ಡದು. ಆದರೆ ಅದು ಆಂಟೇರಿಯೋದ ಹೊರಗೆ, 'ಮಾರ್ಕ್ ಹಮ್' ವರೆಗೂ ಹಬ್ಬಿದೆ.
ಹೈಪಾರ್ಕ್ ತಲುಪಲು
[ಬದಲಾಯಿಸಿ]ಹೈ ಪಾರ್ಕ್ ಉದ್ಯಾನ, ಟೊರಾಂಟೋ ಪಟ್ಟಣದ 'ಡೌನ್ ಟೌನ್' ನ ಪಶ್ಚಿಮಕ್ಕಿದೆ. ಹಂಬರ್ ಬೇ ಯ ಉತ್ತರಕ್ಕೆ. ಬ್ಲೂರ್ ಸ್ಟ್ರೀಟ್ ಪಶ್ಚಿಮದಿಂದ ಕ್ವೀನ್ಸ್ ವೇವರೆಗೆ ಹೋದರೆ, ದಕ್ಷಿಣಕ್ಕೆ ಇದೆ. ಲೇಕ್ ಆಂಟೇರಿಯೋ ನ ಉತ್ತರಕ್ಕೆ. ಪಶ್ಚಿಮಕ್ಕೆ ಎಲ್ಲೀಸ್ ಪಾರ್ಕ್ ರೋಡ್, ಮತ್ತು ಗ್ರೆನಡಿಯರ್ ಪಾಂಡ್ ಮತ್ತು ಪೂರ್ವಕ್ಕೆ ಪಾರ್ಕ್ ಸೈಡ್ ಡ್ರೈವ್ ಇವೆ.
ಉಲ್ಲೇಖನ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]