ಹೇರ್ ಬನ್ ವಿನ್ಯಾಸ
ಕಚೇರಿ ಕೆಲಸಕ್ಕೆ ಹೋಗುವಾಗ ಹೇಗೆಂದರೆ ಹಾಗೆ ಹೋಗಲು ಸಾಧ್ಯವಿಲ್ಲ. ಉಡುಗೆ ತೊಡುಗೆ ಸೇರಿದಂತೆ ಕೇಶ ವಿನ್ಯಾಸವೂ ಬಹುಮುಖ್ಯ ಪಾತ್ರವಹಿಸುತ್ತದೆ. ಸೂಕ್ತ ರೀತಿಯ ಕೇಶ ವಿನ್ಯಾಸ ಮಾಡಿಕೊಳ್ಳದಿದ್ದರೆ ನೋಡುವವರಿಗಷ್ಟೇ ಅಲ್ಲ ನಮಗೂ ಕೆಲಸ ಮಾಡಲು ಅಡ್ಡಿ ಉಂಟಾಗುತ್ತದೆ. ಜೊತೆಗೆ ಅವುಗಳನ್ನು ಸರಿ ಪಡಿಸಿಕೊಳ್ಳುವಷ್ಟರಲ್ಲೇ ಒಂದಿಷ್ಟು ಸಮಯ ಕಳೆದಿರುತ್ತೇವೆ. ಜೊತೆಗೆ ಕೆಲಸದಲ್ಲಿ ಗಮನವಹಿಸಲು ಸಾಧ್ಯವಾಗದು.
ಈ ರೀತಿಯ ತೊಂದರೆಗೆ ಪರಿಹಾರ ನೀಡಬಲ್ಲ ಕೇಶವಿನ್ಯಾಸವೆಂದರೆ ಅದು “ಹೇರ್ ಬನ್’ ಇದರ ಹೆಸರು ಕೇಳಲು ಉದಾಸ ಎನಿಸಿದರೂ ವಿನ್ಯಾಸ ಮಾಡಲು ಸುಲಭ. ಒಮ್ಮೆ ಈ ವಿನ್ಯಾಸ ಮಾಡಿಕೊಂಡರೆ ಕಚೇರಿ ಕೆಲಸ ಮುಗಿಸಿ ಮನೆಗೆ ಹೋಗುವವರೆಗೂ ಯಾವುದೇ ಕಿರಿಕಿರಿ ಉಂಟಾಗದು. ಈ ಹೇರ್ ಬನ್ ವಿನ್ಯಾಸದಲ್ಲಿಯೇ ಹಲವು ಬಗೆಯಿದೆ. ಎಲ್ಲವೂ ಸರಳ ಹಾಗೂ ಸುಲಭ. ನೋಡಲು ಹೆಚ್ಚು ಆಕರ್ಷಕ ನೋಟವನ್ನು ನೀಡುತ್ತವೆ. ನೀವೂ ಈ ವಿನ್ಯಾಸಗಳ ಬಗ್ಗೆ ತಿಳಿಯಬೇಕೆಂದರೆ ಇಲ್ಲಿದೆ ನೋಡಿ ವಿವರ.
ಡೋನಟ್ ಹೇರ್ ಬನ್
[ಬದಲಾಯಿಸಿ]ಸಾಮಾಗ್ರಿಗಳು
ದಪ್ಪವಾದ ರಬ್ಬರ್ ಬ್ಯಾಂಡ್ ಅಥವಾ ಹೇರ್ ಡೋನಟ್ ಮತ್ತು ಹೇರ್ ಪಿನ್.
ವಿಧಾನ:
• ಮೊದಲು ಕೇಶರಾಶಿಯನ್ನು ಜಡಕಿಲ್ಲದಂತೆ ಬಾಚಿಕೊಳ್ಳಬೇಕು.
• ಬನ್ ತಲೆಯ ಯಾವ ಭಾಗದಲ್ಲಿ ಇರಬೇಕೆಂದು ಬಯಸುತ್ತೀರಿ ಎಂದು ನಿರ್ಧರಿಸಿ.
• ನೆತ್ತಿಯ ಮೇಲೆ, ತಲೆಯ ಹಿಂಭಾಗದಲಿ ಎಡ ಬದಿಗೆ ಅಥವಾ ಬಲಬದಿಗೆ ಎಲ್ಲಾದರೊಂದು ಕಡೆ ರಬ್ಬರ್ ಬ್ಯಾಂಡ್‍ನಿಂದ ಕೂದಲು ರಾಶಿಯನ್ನು ಕಟ್ಟಿ.
• ನಂತರ ರಬ್ಬರ್ ಸುತ್ತಲು ಕೂದಲು ಬರುವಂತೆ ಹೊರ ತೆಗೆದು , ಅದರ ಮೇಲಿನಿಂದ ಒಂದು ತೆಳುವಾದ ರಬ್ಬರ್ ಬ್ಯಾಂಡ್ ಹಾಕಿರಿ.
• ಹೊರ ಬಂದ ಕೂದಲುಗಳನ್ನು ಸುತ್ತಲು ಬಳ್ಳಿಯಂತೆ ಸುತ್ತಿ ತುದಿಗೆ ಬಿಚ್ಚದಂತೆ ಒಂದು ಹೇರ್ ಪಿನ್ ಹಾಕಿರಿ.
==ಸೈಡ್ ಪ್ಲೇಟ್ ಜೊತೆ ಸರಳ ಡೋನಟ್ ಬನ್==
ಸಾಮಾಗ್ರಿಗಳು/ದಪ್ಪವಾದ/ಡೋನಟ್ ಹೇರ್ ಬ್ಯಾಂಡ್, ಹೇರ್ ಪಿನ್
ವಿಧಾನ
• ಕೇಶ ರಾಶಿಯನ್ನು ಸರಿಯಾಗಿ ಎರಡು ಇಬ್ಭಾಗ ಮಾಡಿ. ಒಂದು ಭಾಗಕ್ಕೆ ರಬ್ಬರ್ ಬ್ಯಾಂಡ್ ಹಾಕಿ.
• ಇನ್ನೊಂದು ಭಾಗದಲ್ಲಿ ಜಡೆಯನ್ನು ನೇಯ್ದು ರಬ್ಬರ್ ಬ್ಯಾಂಡ್ ಹಾಕಿ.
• ಬನ್‍ಗೆ ಬಿಟ್ಟ ಕೂದಲನ್ನು ಡೋನಟ್‍ನಂತೆ ಹಾಕಿ, ಉಳಿದ ಕೂದಲನ್ನು ಸುತ್ತಲೂ ಸುತ್ತಿ ಪಿನ್ ಮಾಡಬೇಕು.
• ಪಕ್ಕದಲ್ಲಿ ನೆಯ್ದ ಕೂದಲನ್ನು ಡೋನಟ್ ಸುತ್ತ ಸುತ್ತಬೇಕು, ತುದಿ ಕಾಣದಂತೆ ಹೇರ್ ಪಿನ್ ಹಾಕಬೇಕು.
ಸೆಂಟರ್ ಲೂಪ್ ಬನ್
[ಬದಲಾಯಿಸಿ]ಈ ಕೇಶ ವಿನ್ಯಾಸ ಒಂದು ಬಗೆಯ ಪೋನಿಟೇಲ್ ಮೇಲೆ ಅವಲಂಬಿತವಾದಂತೆ ಇರುತ್ತದೆ. ಇದಕ್ಕೆ ತೆಳುವಾದ ರಬ್ಬರ್ ಬ್ಯಾಂ ಡ್‍ಗಳು ಮತ್ತು ಹೇರ್ ಪಿನ್‍ಗಳು ಬೇಕು.
ವಿಧಾನ
• ಕೇಶ ರಾಶಿಯನ್ನು ಸರಿಯಾಗಿ ಬಾಚಿಕೊಂಡು, ಪೋನಿಟೇಲ್ ಹಾಕುವ ಹಾಗೆ ಅರ್ಧ ಕೇಶಕ್ಕೆ ರಬ್ಬರ್ ಹಾಕಬೇಕು
ನಂತರ ಉಳಿದ ಕೂದಲನ್ನು ಪೋನಿಟೇಲ್ ಸುತ್ತಲೂ ಸುತ್ತಿ ಪಿನ್ ಮಾಡಬೇಕು. ಕೂದಲು ನಯವಾಗಿ ಆಕರ್ಷಕವಾಗಿ ಕಾಣುವುದು.
ಓಪನ್ ಹೇರ್‍ನೊಂದಿಗೆ ಟಾಪ್ ಹಾಫ್ ಬನ್
ಇದೊಂದು ಅತ್ಯಂತ ಪ್ರಚಲಿತದಲ್ಲಿರುವ ಕೇಶ ವಿನ್ಯಾಸ. ಇದನ್ನು ಮಾಡಲು ರಬ್ಬರ್ ಬ್ಯಾಂಡ್ ಮತ್ತು ಹೇರ್ ಪಿನ್ ಬೇಕು.
ವಿಧಾನ :
• ಒಂದು ಕಿವಿಯ ಮೇಲ್ಭಾಗದಿಂದ ಇನ್ನೊಂದು ಕಿವಿಯ ಮೇಲ್ಭಾಗದವರೆಗೆ ಸರಿಯಾಗಿ ಕೂದಲನ್ನು ಬೇರ್ಪಡಿಸಬೇಕು.
• ನೆತ್ತಿಯ ಮೇಲ್ಭಾಗದ ಕೂದಲನ್ನು ಬನ್ ರೀತಿಯಲ್ಲಿ ಗಂಟು ಕಟ್ಟಿ ಉಳಿದ ಕೂದಲನ್ನು ಅದರ ಸುತ್ತಲೂ ಸುತ್ತಬೇಕು.
• ಕೆಳಭಾಗದಲ್ಲಿರುವ ಕೂದಲನ್ನು ಹಾಗೇ ಫ್ರೀ ಆಗಿ ಬಿಟ್ಟರೆ ಆಯಿತು
ಟ್ವಿ ಸ್ಟೆಡ್ ಪ್ಲೆಟೆಡ್ ನಡುವೆ ಬನ್
[ಬದಲಾಯಿಸಿ]ಸಾಮಾಗ್ರಿ ಹೇರ್ ಪಿನ್ ಮತ್ತು ಹೇರ್ ಬ್ಯಾಂಡ್
ವಿಧಾನ:
1 ಮೊದಲು ಒಂದು ಪೋನಿಟೆಲ್ ಚಂದವಾಗಿ ಹಾಕಿಕೊಳ್ಳಬೇಕು
2 ಕೂದಲನ್ನು ಸರಿಯಾಗಿ ಎರಡು ಭಾಗ ಮಾಡಿ ಮೇಲ್ಭಾಗದ ಕೂದಲಿಂದ ಜಡೆ ನೇಯ್ದುಕೊಳ್ಳಬೇಕು.
3 ಉಳಿದ ಕೇಶಗಳಿಂದ ಒಂದು ಸುಂದರವಾಗಿ ಬನ್ ಹಾಕಿಕೊಳ್ಳಬೇಕು
4 ನಂತರ ಬನ್ ಸುತ್ತಲೂ ಜಡೆಯನ್ನು ಸುತ್ತಿ ಪಿನ್ ಮಾಡಬೇಕು.
ಕಡಿಮೆ ಟ್ವಿ ಸ್ಟೆಡ್ ಲೂಪ್ ಹೇರ್ ಬನ್
[ಬದಲಾಯಿಸಿ]ವಿಧಾನ:
ಒಂದು ಪೋನಿಟೆಲ್‍ಅನ್ನು ಅರ್ಧಕ್ಕೆ ಬರುವ ಹಾಗೆ ರಬ್ಬರ್ ಬ್ಯಾಂಡ್ ಹಾಕಿಕೊಳ್ಳಬೇಕು. ನಂತರ ಉಳಿದ ಕೇಶ ರಾಶಿಯನ್ನು ಲೂಪಾ ಹೇರ್‍ನ ಮೇಲ್ಭಾಗಕ್ಕೆ ಬರುವಂತೆ ಟ್ವಿಸ್ಟ್ ಒಂದು ಗಂಟು ಹಾಕಬೇಕು. ಕೂದಲು ಮೇಲೆ ಬರದಂತೆ ಪಿನ್ ಮಾಡಬೇಕು. ಯಾವುದೇ ಕಾರ್ಯಕ್ರಮಗಳಿಗೆ ಈ ರೀತಿಯ ಕೂದಲ ವಿನ್ಯಾಸ ಮಾಡಿಕೊಂಡು ಸುಲಭವಾಗಿ ಹೋಗಬಹುದು.
ಉಲ್ಲೇಖ
[ಬದಲಾಯಿಸಿ]hಣಣಠಿs://ತಿತಿತಿ.googಟe.ಛಿo.iಟಿ/seಚಿಡಿಛಿh?-e-ಠಿi-=7%2ಛಿಠಿಚಿg http://www.dailymail.co.uk/femail/article-2326370/Rise-sock-bun-How-master-hipster-updo-fast-height-hair-fashion.html[೧]