ಹೆಲ್ಲೊ ವರ್ಲ್ಡ್ ಕಂಪ್ಯೂಟರ್ ಪ್ರೋಗ್ರ್ಯಾಮ್

ಹೆಲ್ಲೊ ವರ್ಲ್ಡ್! ಪ್ರೋಗ್ರ್ಯಾಮು ( '"Hello, World!" program )' ತೋರುತೆರೆಯೊಂದರ ಮೇಲೆ "Hello, World!" ( ಅಥವಾ ಅಂತಹ ಬೇರೆ ಸಂದೇಶ ) ಎಂದು ತೋರಿಸುವ ಒಂದು ಕಂಪ್ಯೂಟರ್ ಪ್ರೊಗ್ರ್ಯಾಮ್ ಆಗಿದೆ. ಬಹಳಷ್ಟು ಪ್ರೋಗ್ರ್ಯಾಮಿಂಗ್ ಭಾಷೆಗಳಲ್ಲಿ ಸಾಧ್ಯವಿರುವ ಬಲುಸರಳವಾದ ಪ್ರೋಗ್ರ್ಯಾಂ ಆದ ಕಾರಣ ಅದನ್ನು ಪ್ರೋಗ್ರ್ಯಾಮಿಂಗ್ ಭಾಷೆಯೊಂದನ್ನು ಕಲಿಯಲು ಆರಂಭಿಸುವವರಿಗೆ ಆ ಭಾಷೆಯ ಮೂಲ ರಚನೆಯನ್ನು ತೋರಿಸಿಕೊಡಲು ಬಳಸಲಾಗುತ್ತಿದೆ. ಒಂದು ಭಾಷೆ ಅಥವಾ ಕಂಪ್ಯೂಟರ್ ನ ಕಾರ್ಯಕಾರಿ ವ್ಯವಸ್ಥೆಯು ವ್ಯವಸ್ಥೆ ಯು ಸರಿಯಾಗಿ ಕೆಲಸ ಮಾಡುತ್ತಿರುವುದನ್ನು ಖಚಿತಪಡಿಸಿಕೊಳ್ಳಲೂ ಅದನ್ನು ಬಳಸಲಾಗುತ್ತದೆ.
ಉದ್ದೇಶ
[ಬದಲಾಯಿಸಿ]ಹೆಲ್ಲೊ ವರ್ಲ್ಡ್" ಪ್ರೋಗ್ರ್ಯಾಮು (ಕ್ರಮವಿಧಿ) ಸಾಮಾನ್ಯವಾಗಿ ಕಂಪ್ಯೂಟರ್ ಪ್ರೋಗ್ರ್ಯಾಮಿಂಗ್ ಕಲಿಯುವವರ ಪಾಲಿನ ಮೊದಲ ಪಾಠವಾಗಿದೆ. ಅದು ತುಂಬ ಸರಳವಾಗಿದ್ದು, ತಿಳಿದುಕೊಳ್ಳಲು ಬಲು ಸುಲಭವಾಗಿದೆ. ಇದನ್ನು ಆಧಾರವಾಗಿಟ್ಟುಕೊಂಡು ಒಂದು ಕಂಪ್ಯೂಟರ್ ಭಾಷೆಯಲ್ಲಿನ ಗಣಕ ವಿಜ್ಞಾನ(computer science)ದ ಮೂಲ ತತ್ವಗಳನ್ನು ಹೊಸಬರಿಗೆ ವಿವರಿಸಬಹುದಾಗಿದೆ. ನುರಿತ ಪ್ರೋಗ್ರ್ಯಾಮರ್ ಗಳು ಕೂಡ ಹೊಸಭಾಷೆಯೊಂದನ್ನು ಕಲಿಯುವಾಗ ಅದರ ನುಡಿಗಟ್ಟನ್ನೂ. ಭಾಷೆಯ ರಚನೆಯನ್ನೂ ಈ ಪ್ರೊಗ್ರ್ಯಾಮಿನಿಂದ ತಿಳಿಯಬಹುದಾಗಿದೆ. ಅಷ್ಟೇ ಅಲ್ಲದೆ, ಒಂದು ಭಾಷೆಯ ಕಂಪೈಲರ್, ಅಭಿವೃದ್ಧಿ-ಪೂರಕ-ಪರಿಕರ ( development environment) ಮತ್ತು ಇತರ ಪರಿಕರಗಳು ಕಂಪ್ಯೂಟರ್ ನಲ್ಲಿ ಸರಿಯಾಗಿ ಅಳವಡಿಕೆಯಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಇದನ್ನು ಬಳಸಲಾಗುತ್ತದೆ.
ಇತಿಹಾಸ
[ಬದಲಾಯಿಸಿ]ಇಂಥ ಪರೀಕ್ಷಾ-ಪ್ರೋಗ್ರ್ಯಾಮುಗಳು ಮೊದಲೆ ಇದ್ದುವಾದರೂ "Hello, world!" ನುಡಿಗುಚ್ಛವನ್ನು ಬಳಸುವ ಪದ್ದತಿಗೆ ದ ಸಿ ಪ್ರೋಗ್ರಾಮ್ಮಿಂಗ್ ಲಾಂಗ್ವೇಜ್ಎಂಬ ಪುಸ್ತಕದಲ್ಲಿನ ಉದಾಹರಣೆಯೊಂದು ಪ್ರೇರಣೆಯಾಯಿತು.
ಆ ಪುಸ್ತಕದಲ್ಲಿನ ಉದಾಹರಣೆಯು "hello, world
" ಎಂದು ತೆರೆಯ ಮೇಲೆ ತೋರಿಸುತ್ತದೆ,ಇದನ್ನು [citation needed] ೧೯೭೪ ರ ಬೆಲ್ ಲ್ಯಾಬೊರೇಟರಿಯ ಬ್ರಯನ್ ಕೆರ್ನಿಘಾನ್ ರ ಆಂತರಿಕ ಮೆಮೊ - ಪ್ರೋಗ್ರಾಮ್ಮಿಂಗ್ ಇನ್ ಸಿ: ಏ ತುಟೋರಿಯಲ್,[೧] ದಿಂದ ತೆಗೆದುಕೊಳ್ಳಲಾಗಿದೆ.
ಉಲ್ಲೇಖಗಳು
[ಬದಲಾಯಿಸಿ]
- ↑ "Programming in C: A Tutorial" (PDF). Archived from the original (PDF) on 2015-02-23. Retrieved 2015-03-30.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Rösler, Wolfram. "Hello World Collection". helloworldcollection.de. — with 450+ programs, plus "Hello World" in 60+ human languages
- Hosey, Peter. "Hello World, cut four ways: How to write good (and bad) programs". boredzo.org. Archived from the original on 2013-01-13. Retrieved 2015-03-30.
- "Unsung Heroes of IT / Part One: Brian Kernighan" Archived 2016-03-26 ವೇಬ್ಯಾಕ್ ಮೆಷಿನ್ ನಲ್ಲಿ.. TheUnsungHeroesOfIT.com.
- "HelloData: A Simple ADO Application". MSDN. Microsoft.