ಹೆರಿಗೆ ಸಮಯದಲ್ಲಿನ ದುರುಪಯೋಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೆರಿಗೆ ಸಮಯದಲ್ಲಿನ ದುರುಪಯೋಗ (ಅಥವಾ ಪ್ರಸೂತಿ ಹಿಂಸೆ) ಅಂದರೆ ಹೆರಿಗೆ ಸಮಯದಲ್ಲಿನ ನಿರ್ಲಕ್ಷ್ಯ, ದೈಹಿಕ ದುರುಪಯೋಗ ಮತ್ತು ಗೌರವದ ಕೊರತೆ. ಇದನ್ನು ಮಹಿಳಾ ಹಕ್ಕುಗಳ ಉಲ್ಲಂಘನೆ ಎಂದು ಪರಿಗಣಿಸಲಾಗಿದೆ. ಪ್ರಸವ-ಪೂರ್ವ ಆರೈಕೆಯನ್ನು ಮತ್ತು ಇತರ ಆರೋಗ್ಯ ಸೇವೆಗಳನ್ನು ಮಹಿಳೆಯರು ಬಳಸುವುದನ್ನು ತಡೆಯುವುದು ಕೂಡಾ ಇದರೊಳಗೆ ಸೇರಿಕೊಂಡಿದೆ. ಹೆರಿಗೆಯ ಸಮಯದಲ್ಲಿನ ದುರುಪಯೋಗ ಮಹಿಳೆಯರ ವಿರುದ್ಧ ಹಿಂಸೆಯ ಒಂದು ಸ್ವರೂಪವಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ ವರದಿ[ಬದಲಾಯಿಸಿ]

ಈ ಬೆಳವಣಿಗೆಗಳ ವ್ಯಾಪಕತೆಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ತನಿಖೆ ನಡೆಸಿತು. ಅದರ ಅಧ್ಯಯನಗಳ ಪ್ರಕಾರ ಇದೊಂದು ಜಾಗತಿಕ ಸಮಸ್ಯೆಯೆಂದು ಕಂಡುಬರುತ್ತದೆ. ಮಗು ಗರ್ಭದಲ್ಲಿರುವಾಗಿನ ವೈದ್ಯಕೀಯ ಮತ್ತು ಆರೋಗ್ಯ ಸೌಲಭ್ಯಗಳಲ್ಲಿ, ಹೆರಿಗೆ ಸಮಯದಲ್ಲಿ ಮಹಿಳೆಯರು ಅಗೌರವ, ದುರುಪಯೋಗ ಅಥವಾ ನಿರ್ಲಕ್ಷ್ಯವನ್ನು ಅನುಭವಿಸುತ್ತಾರೆ. ಜನನದ ಸಮಯದಲ್ಲಿ ಮಹಿಳೆಯರು ಮತ್ತು ಆರೋಗ್ಯ ಪೂರೈಕೆದಾರರ ನಡುವಿನ ನಿಂದನೀಯ ಸಂಬಂಧ ಮತ್ತು ನಂಬಿಕೆ ವೈದ್ಯಕೀಯ ನೆರವು ಪಡೆಯಲು ಕಷ್ಟವಾಗುತ್ತದೆ. ಗರ್ಭಾವಸ್ಥೆಯಲ್ಲಿ ಅಗೌರವ ಮತ್ತು ಹಿಂಸೆಯಂತಹ ಉಪಚಾರವನ್ನು ಅನುಭವಿಸಬಹುದು. ಹೆರಿಗೆಯ ಸಮಯದಲ್ಲಿ, ಮಹಿಳೆ ದುರ್ಬಲಳಾಗಿರುತ್ತಾಳೆ ಮತ್ತು ಸ್ವತಃ ರಕ್ಷಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ದುರುಪಯೋಗದ ಫಲಿತಾಂಶಗಳು ಶಿಶು ಮತ್ತು ತಾಯಿಯ ಮೇಲೆ ಬಹಳ ಋಣಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು.

ದೈಹಿಕ ದುರ್ಬಳಕೆ, ನೋವಿನ ಔಷಧಿಗಳನ್ನು ತಡೆಹಿಡಿಯುವುದು, ಅಗೌರವ, ಅವಮಾನ, ವಿಶ್ವಾಸದ ಕೊರತೆ, ಗೌಪ್ಯತೆಯ ಕೊರತೆ, ವೈದ್ಯಕೀಯ ಮಾಹಿತಿ ನೀಡದಿರುವುದು ಮತ್ತು ಸೌಲಭ್ಯಗಳನ್ನು ತಡೆಹಿಡಿಯುವಂತಹ ಸಂದರ್ಭಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಗುರುತಿಸಿದೆ. ಇದರ ಜೊತೆಗೆ, ಹೆರಿಗೆಯ ಸಮಯದಲ್ಲಿನ ನಿರ್ಲಕ್ಷ್ಯವು ದೈಹಿಕ ಹಸ್ತಕ್ಷೇಪದ ಪ್ರತಿಕ್ರಿಯೆಯನ್ನು ಉಂಟುಮಾಡಬಹುದಾದ ಜೀವ ಬೆದರಿಕೆಗೆ ಉಂಟಾಗುವ ತೊಡಕುಗಳಿಗೆ ಕಾರಣವಾಗಿದೆ.[೧]

ಹೆರಿಗೆಯ ಸಮಯದಲ್ಲಿ ಕೆಲವು ಮಹಿಳೆಯರು ದುರುಪಯೋಗ ಅನುಭವಿಸುತ್ತಾರೆ. ಹದಿಹರೆಯದವರು, ವಲಸಿಗ ಮಹಿಳೆಯರು, ಎಚ್ಐವಿ ಸೋಂಕಿತ ಮಹಿಳೆಯರು, ಮತ್ತು ಜನಾಂಗೀಯ ಅಲ್ಪಸಂಖ್ಯಾತರ ಮಹಿಳೆಯರ ದುರುಪಯೋಗ ಇತರರಿಗಿಂತ ಹೆಚ್ಚಾಗಿರುತ್ತದೆ.[೨]

ಪ್ರಸೂತಿ ಹಿಂಸಾಚಾರ ಎಂಬ ಪದವನ್ನು ಹೆಚ್ಚಾಗಿ ಲ್ಯಾಟಿನ್ ಅಮೆರಿಕಾದ ರಾಷ್ಟ್ರಗಳಲ್ಲಿ ಬಳಸುತ್ತಾರೆ, ಅಲ್ಲಿನ ಕಾನೂನು ಅಂತಹ ನಡವಳಿಕೆಯನ್ನು ನಿಷೇಧಿಸುತ್ತದೆ. ಅರ್ಜೆಂಟೈನಾ, ಪೋರ್ಟೊ ರಿಕೊ ಮತ್ತು ವೆನೆಜುವೆಲಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಇಂತಹ ಕಾನೂನುಗಳು ಅಸ್ತಿತ್ವದಲ್ಲಿವೆ.

ಉದಾಹರಣೆಗಳು[ಬದಲಾಯಿಸಿ]

ವಿದೇಶಗಳಲ್ಲಿ[ಬದಲಾಯಿಸಿ]

೧೯೫೦ ರಿಂದ ೧೯೮೦ ರ ನಡುವಿನಲ್ಲಿನ, ಉತ್ತರ ಅಮೇರಿಕನ್ ಮೆಡಿಸಿನ್ ಮತ್ತು ಸ್ತ್ರೀರೋಗಶಾಸ್ತ್ರಜ್ಞರ ಮೂಲಗಳ ಪ್ರಕಾರ, ಗಂಡನ ಹೊಲಿಗೆ ಎಂದು ಕರೆಯಲ್ಪಡುವ ಅಭ್ಯಾಸವೊಂದು ಬಳಕೆಯಲ್ಲಿತ್ತು. ಎಪಿಸಿಯೋಟಮಿ ಅಥವಾ ಯೋನಿಯ ನೈಸರ್ಗಿಕ ಹರಿದುಹೋಗುವಿಕೆಯ ನಂತರ ಮಹಿಳಾ ಯೋನಿಯಲ್ಲಿ ಹೆಚ್ಚುವರಿ ಹೊಲಿಗೆಗಳನ್ನು ಹಾಕುವುದರಿಂದ ಪತಿಯ ಭವಿಷ್ಯದ ಲೈಂಗಿಕ ಆನಂದವನ್ನು ಹೆಚ್ಚಿಸುತ್ತದೆ ಎಂಬ ಕಾರಣದಿಂದಾಗಿ ಮಹಿಳೆಯರಿಗೆ ದೀರ್ಘಕಾಲದ ನೋವು ಮತ್ತು ಅಸ್ವಸ್ಥತೆ ಉಂಟಾಗುತ್ತಿತ್ತು. ಆದಾಗ್ಯೂ, ಉತ್ತರ ಅಮೆರಿಕಾದಲ್ಲಿ ಇಂತಹ ಅಭ್ಯಾಸವು ವ್ಯಾಪಕವಾಗಿ ಹರಡಿಕೊಂಡಿರುವುದಕ್ಕೆ ಯಾವುದೇ ಪುರಾವೆಗಳಿಲ್ಲ, ಆದರೆ ಅದರ ಬಗ್ಗೆ ಉಲ್ಲೇಖಗಳು ಎಪಿಸಿಯೋಟಮಿ ಬಗ್ಗೆ ಬ್ರೆಜಿಲ್ ನಂತಹ ಇತರ ಅಮೆರಿಕಾ ದೇಶಗಳಲ್ಲಿ ಕೂಡ ಅಧ್ಯಯನಗಳು ಕಂಡುಬರುತ್ತವೆ.

ಭಾರತದಲ್ಲಿ[ಬದಲಾಯಿಸಿ]

೧೯೯೦ ರ ದಶಕದಲ್ಲಿ ತಮಿಳುನಾಡಿನ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೆರಿಗೆ ನೋವಿನ ಔಷಧಿ ನೀಡುವುದು ಸಾಮಾನ್ಯವಾಗಿ ಬಿಟ್ಟಿತ್ತು. ಹಲ್ಲೆ, ವಿಷವುಣಿಕೆ ಮತ್ತು ಸುಡುವುದು ಇಂತಹ ಹಿಂಸಾಚಾರಗಳೂ ಚಾಲ್ತಿಯಲ್ಲಿದ್ದುವು.[೩]

ಉಲ್ಲೇಖಗಳು[ಬದಲಾಯಿಸಿ]

  1. https://www.ncbi.nlm.nih.gov/pmc/articles/PMC4488322/
  2. https://www.emergency-live.com/kn/news/international-womens-day-2015-the-msf-priorities/
  3. http://m.varthabharati.in/article/2018_03_08/122533