ಹೆಂಡ್ತಿಗೇಳ್ಬೇಡಿ (ಚಲನಚಿತ್ರ)
ಗೋಚರ
| ಹೆಂಡ್ತಿಗೇಳ್ಬೇಡಿ (ಚಲನಚಿತ್ರ) | |
|---|---|
| ಹೆಂಡ್ತಿಗೇಳ್ಬೇಡಿ | |
| ನಿರ್ದೇಶನ | ದಿನೇಶ್ ಬಾಬು |
| ನಿರ್ಮಾಪಕ | ಶೋಭಾ ಪ್ರಕಾಶ್ |
| ಪಾತ್ರವರ್ಗ | ಅನಂತನಾಗ್ ಮಹಾಲಕ್ಷ್ಮಿ ತಾರ, ದೇವರಾಜ್, ಸುಂದರ್ ಕೃಷ್ಣ ಅರಸ್ |
| ಸಂಗೀತ | ವಿಜಯಾನಂದ್ |
| ಛಾಯಾಗ್ರಹಣ | ದಿನೇಶ್ ಬಾಬು |
| ಬಿಡುಗಡೆಯಾಗಿದ್ದು | ೧೯೮೯ |
| ಚಿತ್ರ ನಿರ್ಮಾಣ ಸಂಸ್ಥೆ | ರಕ್ಷಿತಾ ಫಿಲಂಸ್ |
| ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಕಥೆ ಸಾರಾಂಶ ಹೀಗಿದೆ
ಆನಂದ್ ಹಾಗೂ ಚಿತ್ರ ಗಂಡ ಹೆಂಡತಿ. ಆನಂದ ನಿಗೆ ಹುಡುಗಿಯರ ಹುಚ್ಚು. ಚಿತ್ರಳಿಗೆ ಆನಂದನ ಮೇಲೆ ಸದಾ ಒಂದು ಕಣ್ಣು. ಚಿತ್ರ ತನ್ನ ತವರಿಗೆ ಹೋಗುವ ಪ್ರಸಂಗ ಬರುತ್ತದೆ. ಅವಳನ್ನು ಕಾರಿನಲ್ಲಿ ಬಿಟ್ಟು ಬರುವಾಗ ಆಕಸ್ಮಿಕವಾಗಿ ರೂಪ ಎಂಬ ಗರ್ಭಿಣಿ ಕಾರಿನಲ್ಲಿ ಕೂತು ಮನೆಗೆ ಬರುತ್ತಾಳೆ. ಮನೆಯಲ್ಲಿ ಹೆರಿಗೆ ಹಾಗೂ ಕೊಲೆ ಆಗುತ್ತದೆ. ಈ ಹಿನ್ನೆಲೆಯಲ್ಲಿ ಆನಂದ್ ಹೇಗೆ ಹೊರಗೆ ಬರುತ್ತಾನೆ ಎಂಬುದು ಮಿಕ್ಕ ಕಥೆ.