ಹೃದಯ ಸಂಪುಟ

ವಿಕಿಪೀಡಿಯ ಇಂದ
Jump to navigation Jump to searchಹೃದಯ ಸಂಪುಟ
cover
ಲೇಖಕರುಶ್ರೀಮತಿ ವಾಗೀಶ್ವರಿ ಶಾಸ್ತ್ರಿ
ದೇಶಭಾರತ
ಭಾಷೆಕನ್ನಡ
ವಿಷಯಸಂಪ್ರದಾಯದ ಹಾಡುಗಳು
ಪ್ರಕಾರಸಂಗ್ರಹ
ಪ್ರಕಾಶಕರುಶ್ರೀಮತಿ ವಾಗೀಶ್ವರಿ ಶಾಸ್ತ್ರಿ
ಪ್ರಕಟವಾದ ದಿನಾಂಕ
ಮಾರ್ಚ್ ೧೯೮೫
ಪುಟಗಳು೯೬೦

ಈ ಸಂಪುಟ ಶ್ರೀಮತಿ ವಾಗೀಶ್ವರಿ ಶಾಸ್ತ್ರಿ ಅವರ ಒಂದು ಜೀವಮಾನ ಸಾಧನೆಯ ಕೆಲಸ.

ಈ ಕೃತಿಗೆ ೧೯೮೫ ರ ‘ಕಾವ್ಯಾನಂದ ಪುರಸ್ಕಾರ’, ೧೯೯೨ರ ಜಾನಪದ ಅಕಾಡೆಮಿ ಪ್ರಶಸ್ತಿ, ೧೯೯೪ ರ ಶಾಶ್ವತಿ ಸಂಸ್ಥೆ ನೀಡುವ ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿಯು ಲಭಿಸಿದೆ.

ಹೃದಯ ಸಂಪುಟದಲ್ಲಿ, ಈ ಗ್ರಂಥವನ್ನು ಓದಿ ತಮ್ಮ ಅನಿಸಿಕೆಗಳನ್ನು ಬರೆದಿರುವ ಎಲ್ಲ ಕನ್ನಡ ಹಿರಿಯ ಚೇತನಗಳ ಬರಹವಿದೆ. ವಾಗೀಶ್ವರಿಯವರು ಎರಡು ಆವೃತ್ತಿಗಳಿಗೆ ಬರೆದಿರುವ ಮುನ್ನುಡಿಗಳಿವೆ. ಪ್ರೊ.ಎಂ.ವಿ.ಸೀಯವರ ನಲ್ನುಡಿಯಿದೆ. ಗೊರೂರು ಅವರ ಮುನ್ನುಡಿಮಾಲೆಯಿದೆ. ಜೀ.ಶಂ.ಪ ಅವರ ಅನುಭವ ಬರಹವಿದೆ. ವೆಂಕಟಸುಬ್ಬಯ್ಯನವರ ಮುನ್ನುಡಿಯಿದೆ.

ಸಂಪ್ರದಾಯ ಗೀತೆಗಳನ್ನು ಆರು ಭಾಗಗಳಲ್ಲಿ ಸಂಗ್ರಹಿಸಿದ್ದಾರೆ. ಮೊದಲ ಭಾಗವು ಅಕ್ಕರಾಸ್ಥೆಯ ಶಾಸ್ತ್ರದ ಹಾಡುಗಳು. ಹಸೆಗೆ ಕರೆಯುವುದು, ಆರತಿ ಎತ್ತುವುದು, ತೊಟ್ಟಿಲು ಶಾಸ್ತ್ರ, ಚೌಲ, ಉಪನಯನ, ಮದುವೆ, ಉರುಟಣೆ, ಬೀಗರ ಹಾಡುಗಳಿವೆ. ಆಶೀರ್ವಾದದ ಹಾಡುಗಳಿವೆ. ಎರಡನೆಯ ಭಾಗದಲ್ಲಿ ದೇವತಾಕಾರ್ಯಗಳಿಗೆ ಸಂಬಂಧಪಟ್ಟ ಹಬ್ಬದ ಹಾಡುಗಳಿವೆ. ಮೂರನೆಯ ಭಾಗದಲ್ಲಿ ವ್ರತಕಥೆ ಹಾಡುಗಳಿವೆ. ನಾಲ್ಕನೆಯ ಭಾಗದಲ್ಲಿ ನಿತ್ಯ ಪಾರಾಯಣದ ಸ್ತೋತ್ರದ ಹಾಡುಗಳಿವೆ. ಐದನೆಯ ಭಾಗದಲ್ಲಿ ಕಥನ ಗೀತೆಗಳು ಹಾಗೂ ಆರನೆಯ ಭಾಗದಲ್ಲಿ ಮಕ್ಕಳ ಹಾಡುಗಳಿವೆ. ಅನುಬಂಧದಲ್ಲಿ ಸಂಪ್ರದಾಯ ಹಾಡುಗಳನ್ನು ಬರೆದವರು, ಹೇಳಿಕೊಟ್ಟವರು ಮುಂತಾದ ಮಾಹಿತಿಯಿದೆ. ಅಪರೂಪದ ಭಾವಚಿತ್ರಗಳಿವೆ. ಸಾಕಷ್ಟು ಹಾಡುಗಳಿಗೆ ರಾಗ-ತಾಳಗಳನ್ನು ಸೂಚಿಸಲಾಗಿದೆ.

ಪ್ರಶಸ್ತಿ ಮತ್ತು ಪುರಸ್ಕಾರಗಳು[ಬದಲಾಯಿಸಿ]

ಹೃದಯ ಸಂಪುಟಕ್ಕೆ

  • ೧೯೮೫ ರ ‘ಕಾವ್ಯಾನಂದ ಪುರಸ್ಕಾರ’
  • ೧೯೯೨ರ ಜಾನಪದ ಅಕಾಡೆಮಿ ಪ್ರಶಸ್ತಿ
  • ೧೯೯೪ ರ ಶಾಶ್ವತಿ ಸಂಸ್ಥೆ ನೀಡುವ ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ


ಬಾಹ್ಯ ಕೊಂಡಿಗಳು[ಬದಲಾಯಿಸಿ]