ಹೃದಯವೈಶಾಲ್ಯ
ಹೃದಯವೈಶಾಲ್ಯವು (ದೊಡ್ಡತನ) ಮನಸ್ಸು ಮತ್ತು ಹೃದಯದಿಂದ ವಿಶಾಲವಾಗಿರುವ ಸದ್ಗುಣವಾಗಿದೆ. ಆಂಗ್ಲ ಭಾಷೆಯಲ್ಲಿ ಮ್ಯಾಗ್ನ್ಯಾನಿಮಿಟಿ. ಇದು ಸಾಮಾನ್ಯವಾಗಿ, ಸಂಕುಚಿತ ಮನಸ್ಸನ್ನು ಹೊಂದದಿರುವುದು, ಅಪಾಯವನ್ನು ಎದುರಿಸಲು ಮನಸ್ಸು ಮಾಡುವುದು, ಮತ್ತು ಉದಾತ್ತ ಉದ್ದೇಶಗಳಿಗಾಗಿ ಮಾಡುವ ಕಾರ್ಯಗಳನ್ನು ಒಳಗೊಳ್ಳುತ್ತದೆ. ಇದರ ವಿರುದ್ಧಾರ್ಥಕ ಪದವೆಂದರೆ ಹೇಡಿತನ/ಪುಕ್ಕಲು. ಆಂಗ್ಲ ಪದವಾದ ಮ್ಯಾಗ್ನ್ಯಾನಿಮಿಟಿ ಅರಿಸ್ಟಾಟಲ್‍ನ ತತ್ತ್ವಶಾಸ್ತ್ರಕ್ಕೆ ಸಾಂಪ್ರದಾಯಿಕ ಸಂಬಂಧ ಹೊಂದಿದೆ.
ಅರಿಸ್ಟಾಟಲ್
[ಬದಲಾಯಿಸಿ]ಮ್ಯಾಗ್ನಾನಿಮಿಟಿ ಪದವು ಗ್ರೀಕ್ ಶಬ್ದವಾದ ಮೆಗಾಲೊಸೈಕಿಯಾ ದಿಂದ ವ್ಯುತ್ಪನ್ನವಾಗಿದೆ. ಅರಿಸ್ಟಾಟಲ್ ಮೆಗಾಲೊಸೈಕಿಯಾ ಶಬ್ದವನ್ನು ಹೆಮ್ಮೆ ಮತ್ತು ಆತ್ಮಾಭಿಮಾನದ ಭಾವದೊಂದಿಗೆ ಸಂಬಂಧಿಸುತ್ತಾನೆ. ಇದು ಆಧುನಿಕ ಅರ್ಥವನ್ನು ಕೊಡುವುದಿಲ್ಲ. ಅರಿಸ್ಟಾಟಲ್ ಹೀಗೆ ಬರೆಯುತ್ತಾನೆ:
ತಾನು ಅರ್ಹನಾಗಿದ್ದಕ್ಕಿಂತ ಕಡಿಮೆ ಬೇಡುವವನು ಸಣ್ಣಮನಸ್ಸಿನವನು...ಏಕೆಂದರೆ ಇತರ ಜನರನ್ನು ಕಡೆಗಣಿಸುವುದರಲ್ಲಿ ದೊಡ್ಡ ಮನಸ್ಸಿನ ವ್ಯಕ್ತಿಯು ಸಮರ್ಥಿಸಿಕೊಳ್ಳಬಲ್ಲನು—ಅವನ ಅಂದಾಜುಗಳು ಸರಿಯಿರುತ್ತವೆ;