ಹುಲ ಬಣ್ಣದ ಕಪ್ಪೆ
ಹುಲಾ ಬಣ್ಣದ ಕಪ್ಪೆಯು, ಪ್ರಸಕ್ತ (೨೦೧೭ರ ಹೊತ್ತಿಗೆ) ಜೀನಸ್ ಲಾಟೋನಿಯ ಪ್ರಭೇಧದ ಬದುಕಿರುವ ಏಕೈಕ ಉಭಯಚರ ಜೀವಿ.[೧] ಈ ಕಪ್ಪೆಯು ೧೯೫೦ರ ಹೊತ್ತಿಗೆ ಅಳಿದುಹೋಗಿದೆ ಎಂದು ಭಾವಿಸಲಾಗಿತ್ತು. ಆದರೆ ೨೦೧೧ರಲ್ಲಿ ಹುಲಾ ಬಣ್ಣದ ಕಪ್ಪೆಯು ಬದುಕಿರುವುದನ್ನು ಕಂಡುಹಿಡಿಯಲಾಯಿತು.[೨]
ಪ್ರಭೇಧ
[ಬದಲಾಯಿಸಿ]ಅನಿಮಲಿಯ ಕಾರ್ಡೇಟಾ ಆಂಫಿಬಿಯ ಅನುರಾ ಅಲಿಟಿಡೇ ಎಲ್. ನಿಗ್ರಿವೆಂಟರ್ ಲಾಟೋನಿಯ ನಿಗ್ರಿವೆಂಟರ್ ಮೆಂಡೆಲ್ಸೋನ್ ಮರ್ರು ಸ್ಟೇನಿತ್ಜ಼್ ೧೯೪೩ರಲ್ಲಿ
ರೂಪುರೇಷೆ
[ಬದಲಾಯಿಸಿ]ಹುಲಾ ಬಣ್ಣದ ಕಪ್ಪೆಯ ಹೊಟ್ಟೆಭಾಗದಲ್ಲಿ ಕಪ್ಪನೆಯ ಚರ್ಮವಿದ್ದು, ಬಿಳಿ ಬಣ್ಣದ ಸಣ್ಣ ಸಣ್ಣ ಚುಕ್ಕೆಗಳು ಇರುತ್ತವೆ. ಮಾಸಿದ ಕಂದು ಆಲೀವ್ ಬಣ್ಣದ ಗುರುತುಗಳು ಇರುತ್ತವೆ.
ಇತರ ಬಣ್ಣದ ಕಪ್ಪೆಗಳಿಗೂ ಇದಕ್ಕೂ ಇರುವ ಪ್ರಮುಖ ವ್ಯತ್ಯಾಸಗಳು ಎಂದರೆ
- ಕಣ್ಣುಗಳ ಮಧ್ಯೆ ಹೆಚ್ಚಿನ ಅಗಲ
- ಉದ್ದನೆಯ ಮುಂಗಾಲುಗಳು
- ಸಣ್ಣನೆಯ ಮೂಗು
- ಅಂಡಾಕಾರದ ನಾಲಿಗೆ
- ನಾಲಿಗೆಯನ್ನು ಕೀಟಗಳನ್ನು ಬೇಟೇಯಾಡುವುದಕ್ಕೆ ಬಳಸದಿರುವುದು
ಉದ್ದ
[ಬದಲಾಯಿಸಿ]ಹುಲಾ ಬಣ್ಣದ ಕಪ್ಪೆಯು ೪೦ ಮಿಲಿಮೀಟರ್ ನಷ್ಟು ,ಅರ್ಥಾತ್ ೧.೬ ಇಂಚಿನಷ್ಟು ಉದ್ದ ಇರುತ್ತವೆ.
ವಾಸಸ್ಥಾನ
[ಬದಲಾಯಿಸಿ]ಹುಲಾ ಬಣ್ಣದ ಕಪ್ಪೆಯನ್ನು ಕೇವಲ ಇಸ್ರೇಲ್ ದೇಶದ ಹುಲಾ ಸರೋವರದ ಅಂಚಿನಲ್ಲಿ ಕಾಣಬಹುದು. ೨ ಕಿಮೀ ನಷ್ಟು ವಿಸ್ತೀರ್ಣದ ಪ್ರದೇಶದಲ್ಲಿ ಮಾತ್ರ ಇದನ್ನು ಕಾಣಬಹುದು.[೩]
ಇತಿಹಾಸ
[ಬದಲಾಯಿಸಿ]ಹುಲಾ ಬಣ್ಣದ ಕಪ್ಪೆಯ ಇತಿಹಾಸದ ಬಗ್ಗೆಹೆಚ್ಚು ಮಾಹಿತಿ ವಿಜ್ಞಾನಿಗಳಿಗೆ ದೊರಕಿದ್ದ್ದು ೧೯೪೦ರ ಹೊತ್ತಿಗೆ. ೨ ವಯಸ್ಕ ಕಪ್ಪೆಗಳು ಮತು ೨ ಮರಿಗಳು ದೊರಕಿದಾಗ ಇದರ ಬಗ್ಗೆ ಸಂಶೋಧನೆ ಶುರುವಾಯಿತು. ದುರದೃಷ್ಟವಶಾತ್, ಇದರ ಮರಿಗಳಲ್ಲಿ ಒಂದನ್ನು ದೊಡ್ಡ ಕಪ್ಪೆಯೊಂದು ನುಂಗಿಬಿಟ್ಟಿತು. ಇದರ ಫಲವಾಗಿ, ತಿಂದು ಜೀವಂತವಾಗಿದ್ದ ಕಪ್ಪೆಯನ್ನೇ ಏಕೈಕ ಸದಸ್ಯ ವರ್ಗಪ್ರಾಣಿ ಎಂದು ಪರಿಗಣಿಸಿ ಸ್ಪೆಸಿಮನ್ ಆಗಿ ಗುರುತಿಸಲಾಯಿತು. ೧೯೫೫ರಲ್ಲಿ ಇನ್ನೊಂದು ಹುಲಾಬಣ್ಣದ ಕಪ್ಪೆಯನ್ನು ಗುರುತಿಸಲಾಯಿತು. ೨೦೧೧ರವರೆಗೆ, ಈ ಎರಡು ಪ್ರಾಣಿಗಳ ಆವಶೇಷವನ್ನೇ ಹುಲಾ ಬಣ್ಣದ ಕಪ್ಪೆಗಳ ಮಾಹಿತಿಗೆ ಆಕರವಾಗಿ ಬಳಸಲಾಯಿತು.[೪]
ಮರುವರ್ಗೀಕರಣ
[ಬದಲಾಯಿಸಿ]ಹುಲಾ ಬಣ್ಣದ ಕಪ್ಪೆಯನ್ನು ಮೂಲತಃ ಜೀನಸ್ ಡಿಸ್ಕೋಗ್ಲೋಸುಸ್ ನ ಪ್ರಭೇಧದಲ್ಲಿ ಸೇರಿಸಲಾಗಿತ್ತು. ೧೯೫೫ರ ಹೊತ್ತಿಗೆ ದೇಹದ ರಚನೆ ಮತ್ತು ಜೀನ್ ತಳಿ ಅಧ್ಯಯನದ ನಂತರ ಲಾಟೋನಿಯ ಪ್ರಭೇಧಕ್ಕೆ ಸೇರಿಸಲಾಗಿದೆ. ಲಾಟೋನಿಯ ಪ್ರಭೇಧದ ಕಟ್ಟಕಡೆಯ ಜೀವಿಯು ೧೦ ಲಕ್ಷ ವರ್ಷದಷ್ಟು ಹಿಂದೆ ಬದುಕಿತ್ತು ಎಂದು ಅಂದಾಜು ಮಾಡಲಾಗಿದೆ. ಹುಲಾ ಬಣ್ಣದ ಕಪ್ಪೆಯು ಜೀವ ವೈವಿಧ್ಯದಲ್ಲಿ ಅತ್ಯಂತ ವಿಶಿಷ್ಟವಾಗಿರುವುದಕ್ಕೆ ಇದು ಅತ್ಯುತ್ತಮ ನಿದರ್ಶನ. ಚೋದ್ಯದ ಸಂಗತಿ ಎಂದರೆ ಮುಂಚಿನ ಪ್ರಭೇಧ ಎಂದು ವರ್ಗೀಕರಣ ಮಾಡಿದ್ದ ಡಿಸ್ಕೋಗ್ಲೋಸುಸ್ ನ ಕಟ್ಟ ಕಡೆಯ ಪ್ರಾಣಿಯು ೩.೨ ಕೋಟಿ ವರ್ಷಗಳಷ್ಟು ಹಿಂದೆ ಬದುಕಿತ್ತು. ಈಕಾರನದಿಂದ, ಹುಲಾ ಬಣ್ಣದ ಕಪ್ಪೆಯನ್ನು ಅತ್ಯಂತ ನಾಜೂಕಿನ, "ಬದುಕಿರುವ ಪಳೆಯುಳಿಕೆ ಕಪ್ಪೆ" ಎಂದು ಕರೆಯಲಾಗುತ್ತದೆ
ಅಳಿದುಹೋಗಿರುವಿಕೆ
[ಬದಲಾಯಿಸಿ]೧೯೯೬ರಲ್ಲಿ ಐ.ಯು.ಸಿ.ಎನ್ ಹುಲಾ ಬಣ್ಣದ ಕಪ್ಪೆಯನ್ನು "ಆಳಿದುಹೋಗಿರುವ ಪ್ರಾಣಿಗಳ ಜಾತಿ"ಗೆ ಸೇರಿಸಿತು. [೫]ಆದರೆ, ಇಸ್ರೇಲ್ ಇದನ್ನು ಒಪ್ಪದೆ "ಅಳಿವಿನ ಅಂಚಿನಲ್ಲಿ ಇರುವ ಪಾಣಿಗಳ ವರ್ಗದಲ್ಲಿ ಹುಲಾ ಬಣ್ಣದ ಕಪ್ಪೆಯನ್ನು ಸೇರಿಸಿತು. ಗೋಲನ್ ದಿಬ್ಬ ಅಥವಾ ದಕ್ಷಿಣ ಲೆಬನಾನ್, ಇವೆರಡು ಪ್ರದೇಶದಲ್ಲಿ ಹುಲಾ ಬಣ್ಣದ ಕಪ್ಪೆಯನ್ನು ಕಾಣಬಹುದು ಎಂದು ಇಸ್ರೇಲ್ ಪ್ರಯತ್ನ ಪಡುತ್ತಿತ್ತು. ಹುಲಾ ಸರೋವರದ ಅಂಚಿನಲ್ಲಿ ಜಲ-ಮರುಪೂರಣ, ಪರಿಸರ ಸಂರಕ್ಷಣೆ, ಜೌಗು ನೆಲದ ಪುನರ್ರುಜೀವನ, ಹೀಗೆ ಹತ್ತು ಹಲವು ಕಾರ್ಯಗಳನ್ನು ಮಾಡಿತು. [೬]
೨೦೦೦ರಲ್ಲಿ ಲೆಬನಾನ್ ದೇಶದ ಏ ರೋಚಾ ವನ್ಯಜೀವಿ ಸಂಘಟನೆಯ ವಿಜ್ಞಾನಿಯೊಬ್ಬರು ಹುಲಾ ಬಣ್ಣದ ಕಪ್ಪೆಯನ್ನು ಕಂಡದ್ದಾಗಿ ಉಲ್ಲೇಖ ಮಾಡಿದ್ದರು. ದಕ್ಷಿಣ ಲೆಬನಾನಿನ ಬೇಕಾ ಕಣಿವೆಯಲ್ಲಿ ಇವು ಬದುಕಿವೆ ಎಂದು ಬಂದ ವರದಿಯ ಅನ್ವಯ ೨೦೦೪ ಮತ್ತು ೨೦೦೫ರಲ್ಲಿ ಬ್ರಿಟಿಷ್ ವಿಜ್ಞಾನಿಗಳ ತಂಡಗಳು ಪ್ರವಾಸ-ಉತ್ಕರ್ಷವನ್ನು ಕೈಗೊಂಡವು. ಹುಲಾ ಬಣ್ಣದ ಕಪ್ಪೆಯನ್ನು ಈ ಅವಧಿ ಮತ್ತು ಪ್ರದೇಶದಲ್ಲಿ ಕಂಡುಹಿಡಿಯಲಾಗಲಿಲ್ಲ.[೭]
೨೦೧೧ರಲ್ಲಿ ಹುಲಾ ರಕ್ಷಿತ ಅರಣ್ಯ ಪ್ರದೇಶದಲ್ಲಿ ಯೋರಂ ಮಲ್ಕಾ ಎಂಬ ವನ್ಯಜೀವಿ ಸಂರಕ್ಷಣಾ ಅಧಿಕಾರಿಯು ಹುಲಾ ಬಣ್ಣದ ಕಪ್ಪೆಯನ್ನು ಕಂಡರು. ಇಸ್ರೇಲಿನ ಪರಿಸರ ವಿಜ್ಞಾನಿಗಳಿಲ್ಗೆ ಆನಂದವೋ ಆನಂದ. ಕಳೆದೇ ಹೋಗಿದೆ ಎಮ್ದು ಭಾವಿಸಿದ್ದ ಪ್ರಭೇಧವೊಂದು ಮತ್ತೆ ಬದುಕುತ್ತಿದೆ ಎಂಬುದು, ಹುಲಾ ಸರೋವರದ ಸಂರಕ್ಷಣೆಗೆ ಸಂದ ಅತಿ ದೊಡ್ಡ ಗೌರವ ಎಂದೇ ಬಿಂಬಿತವಾಯಿತು.[೮] ೪ ವರ್ಷಗಳ ಒಲಗೆ ಕನಿಷ್ಟ ೧೦ ಬೇರೆ ಬೇರೆ ಹುಲಾ ಬಣ್ಣದ ಕಪ್ಪೆಗಳನ್ನು ಕಂಡುಹಿಡಿಯಲಾಯಿತು. ಹೆಣ್ಣು ಹುಲಾ ಬಣ್ಣದ ಕಪ್ಪೆಯೊಂದು ೧೩ ಗ್ರಾಂ ತೂಕವಿದ್ದು, ಆರೋಗ್ಯವಾಗ್ಗಿತ್ತು.
೨೦೧೬ರಲ್ಲಿ ಪ್ರೊಫೆಸರ್ ಸರಿಗ್ ಗಫ್ನಿರ ತಂಡವು ೫೨ ವಿವಿಧ ಜಾಗಗಳಲ್ಲಿ ಹಲವು ನೂರು ಹುಲಾ ಬಣ್ಣದ ಕಪ್ಪೆಗಳು ವಾಸವಾಗಿರುವುದನ್ನು ಪತ್ತೆ ಹಚ್ಚಿದರು ತತ್ಸಂಬಂಧ, ೨೦೧೧ರಲ್ಲಿ
ಉಲ್ಲೇಖಗಳು
[ಬದಲಾಯಿಸಿ]- ↑ (http://www.iucnredlist.org/apps/redlist/details/6715/0 Archived 2011-09-21 ವೇಬ್ಯಾಕ್ ಮೆಷಿನ್ ನಲ್ಲಿ.
- ↑ https://www.wired.com /wiredscience/2011/11/hula-painted-frog-extinction
- ↑ http://www.haaretz.com/print-edition Archived 2012-05-14 ವೇಬ್ಯಾಕ್ ಮೆಷಿನ್ ನಲ್ಲಿ. /news/long-thought-extinct-hula-painted-frog-found-once-again-in-israeli-nature- reserve-1.396000
- ↑ http://research.amnh.org /vz/herpetology/amphibia/Amphibia/Anura/Alytidae/Latonia
- ↑ "ಆರ್ಕೈವ್ ನಕಲು". Archived from the original on 2011-09-21. Retrieved 2017-11-29.
- ↑ http://www.haaretz.com/news/national/second-of-frog-species-long-thought-[ಶಾಶ್ವತವಾಗಿ ಮಡಿದ ಕೊಂಡಿ] extinct-found-in-israel-nature-reserve-1.398516
- ↑ http://news.nationalgeographic.com/news/2013/06/130604-hula-painted-frog- extinct-species-amphibians
- ↑ http://www.jta.org/news/article/2011/11/17/3090347/extinct-[ಶಾಶ್ವತವಾಗಿ ಮಡಿದ ಕೊಂಡಿ] frog-rediscovered-in-israel
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಏಪ್ರಿಲ್ 2024
- Articles with invalid date parameter in template