ಹಿಮ ಗೂಬೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಹಿಮ ಗೂಬೆ
Bubo scandiacus (Linnaeus, 1758) Male.jpg
ಗಂಡು
Snowy Owl - Schnee-Eule.jpg
ಹೆಣ್ಣು
Conservation status
Egg fossil classification e
Unrecognized taxon (fix): ಬೂಬೊ
Species:
ಬ. ಸ್ಕೇಂಡಿಯೇಕಸ್
Binomial nomenclature
ಬೂಬೊ ಸ್ಕೇಂಡಿಯೇಕಸ್
Cypron-Range Bubo scandiacus.svg

     ಸಂತಾನೋತ್ಪತ್ತಿ      ಅವಾಸ
Synonym (taxonomy)
  • Strix scandiaca Linnaeus, 1758
  • Strix nyctea Linnaeus, 1758
  • Nyctea scandiaca (Linnaeus, 1758)
Bubo scandiacus

ಹಿಮ ಗೂಬೆ, ಗೂಬೆ ಜಾತಿಯ ಒಂದು ದೊಡ್ಡ ಗಾತ್ರದ ಬಿಳಿ ಗೂಬೆ.

ವಿವರ[ಬದಲಾಯಿಸಿ]

ಹಿಮ ಗೂಬೆ ಒಂದು ದೊಡ್ಡ ಬಿಳಿಯ ಜಾತಿಯ ಗೂಬೆ. ಹಿಮ ಗೂಬೆಗಳು ಮೂಲತಃ ಏಷ್ಯಾ , ಯುರೋಪ್ ಮತ್ತು ಉತ್ತರ ಅಮೇರಿಕ ಆರ್ಕ್ಟಿಕ್ ದೇಶದಲ್ಲಿವೆ. ಗಂಡು ಗೂಬೆ ಸಾಮಾನ್ಯವಾಗಿ ಬಿಳಿಯದಾಗಿರುತ್ತದೆ. ಹೆಣ್ಣು ಗೂಬೆಯ ಮೈ ಬಣ್ಣವೂ ಬಿಳಿಯದಾಗಿದ್ದು,ಮೈಯಮೇಲೆ ಕಪ್ಪು ಚುಕ್ಕೆಗಳಿರುತ್ತವೆ. ಹಿಮ ಗೂಬೆ ಮರಿಗಳು ಕಪ್ಪು ಪುಕ್ಕಗಳನ್ನು ಹೊಂದಿದ್ದು ನಂತರ ಬಿಳಿಯ ಬಣ್ಣಕ್ಕೆ ತಿರುಗುತ್ತವೆ. ಇವು ನೆಲದಲ್ಲಿ ಗೂಡು ಕಟ್ಟುವ ಒಂದು ಪಕ್ಷಿ. ಇವು ಧ್ವಂಸಕಗಳು, ಜಲಪಕ್ಷಿಗಳು ಮತ್ತು ಕೊಳೆತ ಪ್ರಾಣಿಗಳನ್ನು ತಿನ್ನುತ್ತವೆ. ಎಲ್ಲಾ ಜಾತಿಯ ಗೂಬೆಗಳು ಹಗಲಿನಲ್ಲಿ ಮಲಗಿದ್ದು ರಾತ್ರಿ ಹೊತ್ತಿನಲ್ಲಿ ಬೇಟೆಯಾಡುತ್ತವೆ. ಆದರೆ ಹಿಮ ಗೂಬೆಗಳು ರಾತ್ರಿ ನಿದ್ರಿಸಿ, ಹಗಲಿನಲ್ಲಿ ಬೇಟೆಯಾಡುತ್ತವೆ.

ಸಂತಾನೋತ್ಪತ್ತಿ[ಬದಲಾಯಿಸಿ]

ಹಿಮ ಗೂಬೆಗಳು ಸ್ಪಷ್ಟ ವೀಕ್ಷಣೆಗೆ ಅನುಕೂಲಕರವಾದ ವಿಶಾಲ ಬಯಲು ಪ್ರದೇಶದಲ್ಲಿ, ನೆಲದ ಮೇಲೆ ಇಲ್ಲವೆ ಬಂಡೆಗಳ ಮೇಲೆ ಕಲ್ಲು, ಕಡ್ಡಿ , ಕಸದಿಂದ ಗುಪ್ಪೆಯ ರೂಪದಲ್ಲಿ ಗೂಡು ನಿರ್ಮಿಸುತ್ತವೆ. ಗುಪ್ಪೆಯ ಮೇಲೆ ಸಣ್ಣ ಹಳ್ಳದಲ್ಲಿ ಹೆಣ್ಣು ಗೂಬೆ ೩ ರಿಂದ ೧೧ ಮೊಟ್ಟೆಗಳನ್ನು, ಮೇ ಅಥವ ಜೂನ್ ತಿಂಗಳುಗಳಲ್ಲಿ ಇಡುತ್ತವೆ. ಮೊಟ್ಟೆ ಇಡುವುದು ಎರಡು ವಾರಗಳ ಅವಧಿಯ ವರೆಗೂ ಸಾಗುವುದರಿಂದ ಎಲ್ಲ ಮೊಟ್ಟೆಗಳು ಒಟ್ಟಿಗೆ ಮರಿಯಾಗುವುದಿಲ್ಲ. ಮೊಟ್ಟೆಗಳು ಮರಿಯಾಗಲು ಸುಮಾರು ೫ ವಾರಗಳ ಅವಧಿ ಬೇಕಾಗುತ್ತದೆ. ಕೆಲವೊಮ್ಮೆ ಮೊದಲ ಮರಿ ಕೊನೆಯ ಮರಿಗೆ ಹೋಲಿಸಿದರೆ ೧೦ ರಿಂದ ೧೫ ಪಟ್ಟು ಗಾತ್ರದಲ್ಲಿ ದೊಡ್ಡದಾಗಿರುತ್ತದೆ.ಹೀಗಿದ್ದರೂ ಮರಿಗಳ ಅನ್ಯೋನ್ಯತೆಗೆ ಯಾವುದೇ ದಕ್ಕೆ ಇರುವುದಿಲ್ಲ. ಅಷ್ಟೇ ಅಲ್ಲದೆ ಗರುಡ, ಹದ್ದು ಇತರ ಪಕ್ಷಿಗಳ ಸಂತತಿಯಲ್ಲಿರುವಂತೆ ಸೋದರ ವೈರ ಅಥವ ಸೋದರ ಹತ್ಯೆ ಹಿಮ ಗೂಬೆಗಳಲ್ಲಿ ಕಂಡು ಬರುವುದಿಲ್ಲ. ಮರಿಗಳು ಎಳೆಯದಾಗಿದ್ದಾಗ ಗಂಡು ಮಾತ್ರ ಬೇಟೆಯಾಡಿ ಅಹಾರ ಒದಗಿಸುವ ಹೊಣೆಯನ್ನು ಹೊತ್ತಿರುತ್ತದೆ. ಹೆಣ್ಣು ಮತ್ತು ಗಂಡು ಎರಡೂ ಪರಭಕ್ಷಕರಿಂದ ಸಂತಾನ ರಕ್ಷಣೆಯ ಜವಾಬ್ದಾರಿಯನ್ನು ಸಕ್ರಿಯೆಯಿಂದ ಕೈಗೊಳ್ಳುತ್ತವೆ. ರಕ್ಷಣೆಯ ತಂತ್ರವಾಗಿ ಪ್ರಹಾರ ಮತ್ತು ರಕ್ಷಣಾ ಮಾರ್ಗಗಳನ್ನೆರಡನ್ನೂ ಬಳಸುತ್ತವೆ. ಗಂಡು ಗೂಬೆ ಕೆಲವೊಮ್ಮೆ ಎರಡು ಹೆಣ್ಣುಗಳೊಂದಿಗೆ ಏಕಕಾಲದಲ್ಲಿ ಸಂತಾನೋತ್ಪತ್ತಿಯಲ್ಲಿ ತೊಡಗಿದಾಗ ಎರಡೂ ಗೂಡುಗಳು ಸುಮಾರು ೧ ಕಿಮೀ ಅಂತರದಲ್ಲಿರುತ್ತವೆ.[೨]

ಚಿತ್ರ ಪ್ರದರ್ಶನ[ಬದಲಾಯಿಸಿ]

ಮೂಲಗಳು[ಬದಲಾಯಿಸಿ]

  1. BirdLife International (2017). " Bubo scandiacus". IUCN Red List of Threatened Species. IUCN. 2017: e.T22689055A119342767. Retrieved 10 December 2017.CS1 maint: uses authors parameter (link)[permanent dead link]
  2. Watson, Adam (1957). "The behaviour, breeding and food-ecology of the Snowy Owl Nycea scandiaca". Ibis. 99 (3): 419–462. doi:10.1111/j.1474-919X.1957.tb01959.x.