ವಿಷಯಕ್ಕೆ ಹೋಗು

ಹಿಮ್ಮುಖ ಪರಾಸರಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಮ್ಮುಖ ಪರಾಸರಣ (ಆರ್‍ಒ) ಅಥವಾ ವಿಪರ್ಯಯ ಪರಾಸರಣ (Reverse Osmosis –RO) ಕುಡಿಯುವ ನೀರಿನಿಂದ ಅಯಾನುಗಳು, ಅಣುಗಳು, ಮತ್ತು ದೊಡ್ಡ ಕಣಗಳನ್ನು ತೆಗೆಯಲು ಅರೆ ಪ್ರವೇಶಸಾಧ್ಯ ಪೊರೆಯನ್ನು ಬಳಸುವ ಒಂದು ಜಲ ಶುದ್ಧೀಕರಣ ತಂತ್ರಜ್ಞಾನ. ಹಿಮ್ಮುಖ ಪರಾಸರಣದಲ್ಲಿ, ಪರಾಸರಣ ಒತ್ತಡವನ್ನು ದಾಟಲು ಅನ್ವಯಿಕ ಒತ್ತಡವನ್ನು ಬಳಸಲಾಗುತ್ತದೆ. ಅನ್ವಯಿಕ ಒತ್ತಡ ದ್ರಾವಕದ ರಾಸಾಯನಿಕ ಸಂಭಾವ್ಯತಾ ವ್ಯತ್ಯಾಸಗಳಿಂದ ಚಾಲಿತವಾಗಿರುತ್ತದೆ. ನೆನಪಿನಲ್ಲಿಡಬೇಕಾದ ಅಂಶವೆಂದರೆ, ಪರಾಸರಣ ಒತ್ತಡ ಒಂದು ಬಂಧಕ ಗುಣಲಕ್ಷಣವಾದರೆ, ಸಂಭಾವ್ಯತಾ ವ್ಯತ್ಯಾಸ ಒಂದು ಉಷ್ಣಬಲ ನಿಯತಾಂಕ. ಹಿಮ್ಮುಖ ಪರಾಸರಣ ನೀರಿನಿಂದ ಅನೇಕ ಬಗೆಯ ಕರಗಿದ ಮತ್ತು ನೇತಾಡುತ್ತಿರುವ ಕಣಗಳನ್ನು ತೆಗೆಯಬಲ್ಲದು, ಮತ್ತು ಕೈಗಾರಿಕಾ ಪ್ರಕ್ರಿಯೆಗಳು ಹಾಗೂ ಕುಡಿಯುವ ನೀರಿನ ಉತ್ಪಾದನೆ ಎರಡರಲ್ಲೂ ಬಳಸಲ್ಪಡುತ್ತದೆ. ಪರಿಣಾಮವೇನೆಂದರೆ ದ್ರಾವಣವನ್ನು ಪೊರೆಯ ಒತ್ತಡದ ಬದಿಯಲ್ಲಿ ಉಳಿಸಿಕೊಳ್ಳಲಾಗುತ್ತದೆ ಮತ್ತು ಶುದ್ಧ ದ್ರಾವಕವನ್ನು ಬೇರೆ ಬದಿಗೆ ಹೋಗಲು ಆಗಗೊಡಲಾಗುತ್ತದೆ. ಈ ಪೊರೆಯು ದೊಡ್ಡ ಅಣುಗಳು ಅಥವಾ ಅಯಾನುಗಳನ್ನು ರಂಧ್ರಗಳ ಮೂಲಕ ಹೋಗಲು ಬಿಡಬಾರದು, ಆದರೆ ದ್ರಾವಣದ ಸಣ್ಣ ಘಟಕಗಳನ್ನು ಮುಕ್ತವಾಗಿ ಹೋಗಲು ಬಿಡಬೇಕು.

ಸಾಮಾನ್ಯ ಪರಾಸರಣ ಪ್ರಕ್ರಿಯೆಯಲ್ಲಿ, ದ್ರಾವಕವು ಸಹಜವಾಗಿ ಕಡಿಮೆ ಕರಗಿಕ ಸಾಂದ್ರತೆಯ ಪ್ರದೇಶದಿಂದ, ಪೊರೆಯ ಮೂಲಕ, ಹೆಚ್ಚು ಕರಗಿಕ ಸಾಂದ್ರತೆಯ ಪ್ರದೇಶಕ್ಕೆ ಚಲಿಸುತ್ತದೆ. ಪೊರೆಯ ಎರಡೂ ಬದಿ ದ್ರಾವಕ ಸಾಂದ್ರತೆಯಲ್ಲಿನ ವ್ಯತ್ಯಾಸವನ್ನು ಕಡಿಮೆಮಾಡಿದಾಗ, ವ್ಯವಸ್ಥೆಯ ಮುಕ್ತ ಶಕ್ತಿಯಲ್ಲಿನ ಕಡಿತ ದ್ರಾವಕದ ಚಲನೆಗೆ ಚಾಲಕ ಬಲವಾಗಿರುತ್ತದೆ, ಮತ್ತು ದ್ರಾವಕವು ಹೆಚ್ಚು ಸಾಂದ್ರತೆಯ ದ್ರಾವಣದಲ್ಲಿ ಚಲಿಸುವ ಕಾರಣ ಪರಾಸರಣ ಒತ್ತಡ ಹುಟ್ಟುತ್ತದೆ. ಶುದ್ಧ ದ್ರಾವಕದ ಸಹಜ ಹರಿವನ್ನು ಹಿಮ್ಮುಖವಾಗಿಸಲು ಬಾಹ್ಯ ಒತ್ತಡವನ್ನು ಹಾಕುವುದೇ ಹಿಮ್ಮುಖ ಪರಾಸರಣ. ಈ ಪ್ರಕ್ರಿಯೆ ಇತರ ಪೊರೆ ತಂತ್ರಜ್ಞಾನ ಅನ್ವಯಗಳನ್ನು ಹೋಲುತ್ತದೆ. ಆದರೆ, ಹಿಮ್ಮುಖ ಪರಾಸರಣ ಮತ್ತು ಶೋಧನೆ (ಸೋಸುವಿಕೆ) ನಡುವೆ ಪ್ರಮುಖ ವ್ಯತ್ಯಾಸಗಳು ಕಂಡುಬರುತ್ತವೆ. ಬಸಿಯುವಿಕೆ ಪೊರೆ ಶೋಧನೆಯಲ್ಲಿ ಪ್ರಧಾನ ತೆಗೆಯುವಿಕೆ ಪ್ರಕ್ರಿಯೆಯಾಗಿದೆ, ಹಾಗಾಗಿ ಈ ಪ್ರಕ್ರಿಯೆ ದ್ರಾವಣದ ಒತ್ತಡ ಮತ್ತು ಸಾಂದ್ರತೆಯಂತಹ ನಿಯತಾಂಕಗಳನ್ನು ಲೆಕ್ಕಿಸದೆ ಸೈದ್ಧಾಂತಿಕವಾಗಿ ಪರಿಪೂರ್ಣ ಫಲಕಾರಿತ್ವವನ್ನು ಸಾಧಿಸಬಹುದು. ಹಿಮ್ಮುಖ ಪರಾಸರಣವು ಪ್ರಸರಣವನ್ನೂ ಒಳಗೊಳ್ಳುತ್ತದೆ, ಹಾಗಾಗಿ ಈ ಪ್ರಕ್ರಿಯೆ ಒತ್ತಡ, ಹರಿವು ಪ್ರಮಾಣ, ಮತ್ತು ಇತರ ಪರಿಸ್ಥಿತಿಗಳನ್ನು ಅವಲಂಬಿಸಿದೆ. ಹಿಮ್ಮುಖ ಪರಾಸರಣವನ್ನು ಮುಖ್ಯವಾಗಿ ಸಮುದ್ರದ ನೀರಿನಿಂದ ಕುಡಿಯುವ ನೀರಿನ ಶುದ್ಧೀಕರಣಕ್ಕೆ ಬಳಸಲಾಗುತ್ತದೆ.[೧] ಇದು ನೀರಿನ ಅಣುಗಳಿಂದ ಉಪ್ಪು ಮತ್ತು ಇತರ ಅನುಪಯುಕ್ತ ವಸ್ತುಗಳನ್ನು ತೆಗೆಯುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. Crittenden, John; Trussell, Rhodes; Hand, David; Howe, Kerry and Tchobanoglous, George (2005). Water Treatment Principles and Design, Edition 2. John Wiley and Sons. New Jersey. ISBN 0-471-11018-3