ಹಿಂದೂ ಧರ್ಮ ಮತ್ತು ಗರ್ಭಪಾತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗರ್ಭಿಣಿಯ ಹೊಟ್ಟೆಯಲ್ಲಿನ ಕೂಸನ್ನು ಗರ್ಭಿಣಿಯ ಇಚ್ಛೆಯ ಅನುಸಾರ ಕೊನೆಗೊಳಿಸುವುದು ಗರ್ಭಪಾತ. ಗರ್ಭಪಾತದ ಬಗ್ಗೆ ಹಿಂದೂ ಧರ್ಮದಲ್ಲಿ ಉಪನಿಷತ್ ಮತ್ತು ವೇದಗಳಲ್ಲಿ ಉಲ್ಲೇಖವಿದೆ.

ಗರ್ಭ ಮತ್ತು ಜೀವ[ಬದಲಾಯಿಸಿ]

ಏಳನೆಯ ತಿಂಗಳಿನಲ್ಲಿ, ಜೀವವು ಗರ್ಭವನ್ನು ಪ್ರವೇಶಿಸುತ್ತದೆ ಎಂಬುದು ಮಹಾನಾರಾಯಣ ಉಪನಿಷತ್ ನಲ್ಲಿನ ಉಲ್ಲೇಖ. ಹಿಂದೂ ಧರ್ಮವು ಸ್ಪಷ್ಟವಾಗಿ ಗರ್ಭಪಾತವು ಪಾಪ ಎಂದು ಬಗೆಯುವುದು. ಜೀವವನ್ನು ಅಂತ್ಯಗೊಳಿಸುವುದು ಎಂದಿಗೂ ಪಾಪವೇ. ಶಿಶುಹತ್ಯಾದೋಷ ಬಲು ದೊಡ್ಡ ಪಾಪ ಎಂಬುದು ಹಿಂದೂ ಸೂಕ್ತಿಗಳ ಉಲ್ಲೇಖ. ಪ್ರತಿಯೊಂದು ಸನ್ನಿವೇಶವನ್ನೂ ಅದರ ಸಂದರ್ಭಕ್ಕೆ ಅನುಗುಣವಾಗಿ ಬಗೆಯುವುದು ಧರ್ಮದ ಬಗೆ. ತಾಯಿಯ ಗರ್ಭದಲ್ಲಿನ ಶಿಶುವು ತನ್ನ ಕರ್ಮ ಸಂಕೋಲೆಗಳನ್ನು ತನ್ನೊಂದಿಗೆ ಇಟ್ಟುಕೊಂಡಿರುತ್ತದೆ ಎಂದೂ, ಶಿಶುವನ್ನು ಕೊನೆಗಾಣಿಸುವುದು ಕರ್ಮಸಂಕೋಲೆಯನ್ನು ಅಕಾರಣವಾಗಿ ಕೊನೆಗೊಳಿಸುವುದು ಮತ್ತು ಇನ್ನೊಂದು ಜನ್ಮದಲ್ಲಿ ಕರ್ಮಸಂಕರವು ಮುಂದುವರೆಯುವುದು ಎಂಬುದು ಹಿಂದೂ ಧರ್ಮದ ವಾದ.
ಮೃತ್ಯುವಿನ ಇನ್ನೊಂದು ಮುಖ ಜನನವಾದ್ದರಿಂದ, ಗರ್ಭಪಾತವು ಜನ್ಮಸಂಕರವನ್ನು ತಡೆಯದು. ತಾಯಿಯ ಜೀವಕ್ಕೆ ಅಪಾಯವಿದ್ದಲ್ಲಿ ಗರ್ಭಪಾತ ಸಮಂಜಸ ಎಂಬುದು ವಾಡಿಕೆ. [೧]

ಬ್ರಹ್ಮಕುಮಾರಿ ಸಮಾಜ[ಬದಲಾಯಿಸಿ]

ಪ್ರತಿ ಸನ್ನಿವೇಶವನ್ನೂ ಅದರ ಸಮಂಜಸತೆಯ ಅನುಗುಣವಾಗಿ ನೋಡಿಕೊಂಡು,ತಾಯಿ ಮತ್ತು ಮಗುವಿನ್ ಆರೋಗ್ಯವನ್ನು ಗಮನದಲ್ಲಿ ಇಟ್ಟು, ಗರ್ಭವನ್ನು ಪಾತಕಗೊಳಿಸುವುದೇ ಅಥವಾ ಗರ್ಭವನ್ನು ಮುಂದುವರೆಸುವುದೋ, ಆ ನಿರ್ಧಾರವನ್ನು ಕೈಗೊಳ್ಳುವುದನ್ನು ಬ್ರಹ್ಮಕುಮಾರಿ ಸಮಾಜ ಬೆಂಬಲಿಸುತ್ತದೆ.[೨]

ಇಸ್ಕಾನ್[ಬದಲಾಯಿಸಿ]

[೩] ಇಸ್ಕಾನ್ ಸಂಸ್ಥಾಪಕ ಶ್ರೀ ಪ್ರಭುಪಾದರ ಪ್ರಕಾರ ಜೀವವು ಪ್ರಪಂಚಕ್ಕೆ ಬಂದ ಮೇಲಾಗಲಿ, ತಾಯಿಯ ಗರ್ಭದಲ್ಲಿಯೇ ಆಗಲಿ, ಹತ್ಯೆಯು ಹತ್ಯೆಯೇ. ತಾಯಿಯ ಪ್ರಾಣವನ್ನು ಉಳಿಸಲೋಸುಗ ಮಗುವನ್ನು ಬಲಿಕೊಟ್ಟರೂ ಸಹಿತ ಅದು ಕರ್ಮದ ಅನುಗುಣವಾಗಿ ಹತ್ಯೆಯೇ. ತಾಯಿಯ ಪ್ರಾಣವನ್ನು ಉಳಿಸಿದ ಪುಣ್ಯವು ಶಿಶುಹತ್ಯೆಯ ದೋಷವನ್ನು ಪೂರ್ಣವಾಗಿ ತೊಳೆಯದು. [೪]

ವೇದಗಳು[ಬದಲಾಯಿಸಿ]

ಚಿತ್ರಕೇತು ಮಹಾರಾಜನು ಭಗವಂತನ ಬಳಿ ತೆರಳಿ ಶಿಶುಹತ್ಯಾ ದೋಷದ ಬಗ್ಗೆ ತಿಳಿವು ಕೇಳುತ್ತಾನೆ. ಜೀವವು ದೇಹದಲ್ಲಿ ಪ್ರವೇಶವಾದ ನಂತರ ಅದನ್ನು ಕೊಲ್ಲುವುದು ಜನ್ಮಸಂಕರವನ್ನು ತಡೆದು ಪಾಪವನ್ನು ಅಂಟಿಸಿಕೊಳ್ಳುವ ಬಗೆ. ಇದು ಶಿಶುಹತ್ಯೆ ಮತ್ತು ಸ್ಪಷ್ಟವಾದ ಪಾಪ ಎಂದು ಸಾರುತ್ತದೆ.
ಕಂಸ, ಹಿರಣ್ಯಕಶಿಪು ಇವರುಗಳು ಚಿಕ್ಕ ಮಕ್ಕಳನ್ನು ಕೊಂದ ಪಾಪಕ್ಕೆ ಗುರಿಯಾಗುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

  1. https://www.speakingtree.in/allslides/what-hinduism-says-about-abortion-article
  2. http://brahmakumaris.info/forum/viewtopic.php?t=677&start=15
  3. http://www.krishna.com/info/abortion
  4. http://www.krishna.com/info/abortion