ಹಾಸುಗಲ್ಲು
ಗೋಚರ
ಹಾಸುಗಲ್ಲು ನಿಯತ ಆಯತ ಅಥವಾ ಚೌಕಾಕಾರದಲ್ಲಿ ಕತ್ತರಿಸಿದ ಸಾಮಾನ್ಯ ಚಪ್ಪಟೆ ಕಲ್ಲು. ಇದನ್ನು ಸಾಮಾನ್ಯವಾಗಿ ಹಾದಿ ಚಪ್ಪಡಿಗಳು ಅಥವಾ ನಡೆದಾರಿಗಳು, ಒಳಾಂಗಣಗಳು, ನೆಲಹಾಸು, ಬೇಲಿಗಳು ಹಾಗೂ ಛಾವಣಿ ನಿರ್ಮಾಣದಲ್ಲಿ ಬಳಸಲಾಗುತ್ತದೆ. ಇದನ್ನು ಸ್ಮಾರಕಗಳು, ಸಮಾಧಿಶಿಲೆಗಳು, ಮುಖಭಾಗಗಳು ಹಾಗೂ ಇತರ ನಿರ್ಮಾಣಕ್ಕಾಗಿ ಬಳಸಬಹುದು.
ಹಾಸುಗಲ್ಲು ಸ್ತರದ ಸಮತಲಗಳುದ್ದಕ್ಕೆ ಪದರಗಳಾಗಿ ಸೀಳಿಕೊಂಡಿರುವ ಜಲಶಿಲೆಯಾಗಿರುತ್ತದೆ. ಹಾಸುಗಲ್ಲು ಸಾಮಾನ್ಯವಾಗಿ ಫೆಲ್ಡ್‌ಸ್ಪಾರ್ ಹಾಗೂ ಬೆಣಚುಕಲ್ಲಿನಿಂದ ರಚಿತವಾಗಿರುವ ಮರಳುಗಲ್ಲಿನ ರೂಪವಾಗಿರುತ್ತದೆ. ಕಣದ ಗಾತ್ರದಲ್ಲಿ ಇದು ಮರಳಿನಂತೆ ಇರುತ್ತದೆ. ಹಾಸುಗಲ್ಲನ್ನು ಬಂಧಿಸುವ ವಸ್ತುವು ಸಾಮಾನ್ಯವಾಗಿ ಸಿಲಿಕಾ, ಕ್ಯಾಲ್ಸೈಟ್, ಅಥವಾ ಕಬ್ಬಿಣದ ಆಕ್ಸೈಡ್‍ನಿಂದ ರಚಿತವಾಗಿರುತ್ತದೆ. ಶಿಲೆಯ ಬಣ್ಣ ಸಾಮಾನ್ಯವಾಗಿ ಈ ಬಂಧಕ ವಸ್ತುಗಳಿಂದ ಬರುತ್ತದೆ. ಹಾಸುಗಲ್ಲಿನ ಸಾಮಾನ್ಯವಾದ ಬಣ್ಣಗಳೆಂದರೆ ಕೆಂಪು, ನೀಲಿ ಹಾಗೂ ಮಾಸಲು ಹಳದಿ, ಆದರೆ ಅಸಾಮಾನ್ಯ ಬಣ್ಣದವೂ ಇರುತ್ತವೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]