ಹಾಲುಬೆತ್ತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಾಲುಬೆತ್ತ ಬೆತ್ತದ ಹಲವಾರು ಪ್ರಭೇದಗಳಿಲ್ಲಿ ಒಂದು. ವೈಜ್ಞಾನಿಕ ಹೆಸರು ಕಲಾಮಸ್ ಸ್ಯುಡೋಟೇನಿಯಸ್ ಕೆಲವು ಪ್ರದೇಶಗಳಲ್ಲಿ ಇದನ್ನು ಒಂಟಿ ಬೆತ್ತ[೧] ಎಂದೂ ಕರೆಯುತ್ತಾರೆ.ಮಲಯಾಳಂ ಭಾಷೆಯಲ್ಲಿ ಇದನ್ನು ಚೂರಾಲ್ ಎಂದು ಕರೆಯುತ್ತಾರೆ.ಭಾರತ ಮತ್ತು ಶ್ರೀಲಂಕಾ ದೇಶಗಳಲ್ಲಿ ಬೆಳೆಯುವ ಸಸ್ಯ.

ವಿವರಣೆ[ಬದಲಾಯಿಸಿ]

ಇದು ಸುಮಾರು ೫ ಸೆಂಟಿಮೀಟರ್ ವ್ಯಾಸವನ್ನು ಹೊಂದಿದ್ದು ಸುಮಾರು ೧೫ ಮೀಟರ್ ಉದ್ದ ಇರುತ್ತದೆ.ಎಲೆಗಳ ಪೊರೆಗಳು ಕಂದು ಬಣ್ಣದ ಕೂದಲಿನೊಂದಿಗೆ ಹಳದಿ ಮಿಶ್ರಿತ ಹಸಿರು ಬಣ್ಣದ್ದಾಗಿದ್ದು, ಹೂಗೊಂಚಲುಗಳು 3 ಮೀ ಉದ್ದವಿರುತ್ತವೆ, ಹಣ್ಣು ದುಂಡಾಗಿರುತ್ತದೆ.ಅಕ್ಟೋಬರ್-ಮಾರ್ಚ್ ತಿಂಗಳುಗಳಲ್ಲಿ ಹೂವು ಹಣ್ಣು ಬಿಡುತ್ತದೆ.

ಬೌಗೋಳಿಕ ಹರಡುವಿಕೆ[ಬದಲಾಯಿಸಿ]

ಇದು ದಕ್ಷಿಣ ಭಾರತದಲ್ಲಿ ಪಶ್ಚಿಮ ಘಟ್ಟಗಳ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಕಂಡುಬರುತ್ತದೆ.

ಉಲ್ಲೇಖಗಳು[ಬದಲಾಯಿಸಿ]