ಹಾಥೀಂಟಾ ಬೆನಾವೆಂಟೀ ಮಾರ್ಟೀನೆಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'Jacinto Benavente Y Martinez'[ಬದಲಾಯಿಸಿ]

(೧೮೬೬-೧೯೫೪)

ಈ ಸ್ಪಾನಿಷ್ ದೇಶದ ನಾಟಕಕಾರ, ೧೯೨೨ ರಲ್ಲಿ ನೋಬೆಲ್ ಪ್ರಶಸ್ತಿಯನ್ನು ಪಡೆದರು. 'ಹಾಥೀಂಟಾ ಬೆನಾವೆಂಟೀ ಮಾರ್ಟೀನೆಸ್,' ರವರ ತಂದೆ ಕಾನೂನಿನಲ್ಲಿ ಶಿಕ್ಷಣಪಡೆದು ಅಭ್ಯಾಸಮಾಡುತ್ತಿದ್ದರು. ತಂದೆ ಆಪಾರ ಶ್ರೀಮಂತರು. ಅವರು ಮೃತರಾದಾಗ 'ಹಾಥೀಂಟಾ ಬೆನಾವೆಂಟೀ ಮಾರ್ಟೀನೆಸ್' ರ ಬಳಿ ಅಪಾರ ಆಸ್ತಿಯನ್ನು ಬಿಟ್ಟುಹೋಗಿದ್ದರು. 'ಹಾಥೀಂಟಾ ಬೆನಾವೆಂಟೀ ಮಾರ್ಟೀನೆಸ್' ತಮ್ಮ ವಿದ್ಯಾಭ್ಯಾಸವನ್ನು ನಿಲ್ಲಿಸಿ, ಇಂಗ್ಲೆಂಡ್, ಫ್ರಾನ್ಸ್, ರಷ್ಯಾದೇಶಗಳಲ್ಲಿ ದೀರ್ಘಕಾಲ ಪ್ರವಾಸಮಾಡಿ, ಲೋಕಾನುಭವವನ್ನು ಸಂಪಾದಿಸಿದರು.

ಮಾತೃ-ಭೂಮಿಗೆ ಮರಳಿದರು[ಬದಲಾಯಿಸಿ]

'ಹಾಥೀಂಟಾ ಬೆನಾವೆಂಟೀ ಮಾರ್ಟೀನೆಸ್' ರವರು ಪುನಃ ತಮ್ಮ ಮಾತೃ-ಭೂಮಿ, ಸ್ಪೇನ್ ದೇಶಕ್ಕೆ ಬಂದಾಗ, ಅಲ್ಲಿನ ಸ್ಥಳೀಯ ನಿಯತಕಾಲಿಕಗಳಲ್ಲಿ ಅಂಕಣಗಳನ್ನು ಬರೆಯಲು ಪ್ರಾರಂಭಿಸಿದರು. ಅವರಿಗೆ ಹೆಚ್ಚಿನ ಜನಪ್ರಿಯತೆಯನ್ನು ತಂದದ್ದು, ’ಹೆಂಗಸರ ಪತ್ರಗಳು,’ ಎಂಬ ಬರಗಳು. ಇವು ಆ ಪತ್ರಿಕೆಗಳಿಗೆ ’ವಾಚಕರವಾಣಿ’ ಯೆಂದು ಹೆಂಗೆಳೆಯರು ಬರೆದ ಪತ್ರಗಳಿಗೆ ತಮ್ಮ ವಿಚಾರಪೂರ್ಣ ಉತ್ತರಗಳನ್ನು ಬರೆದು ಅವರ ಸಮಸ್ಯೆಗಳಿಗೆ ಸಮಾಧಾನ ದೊರಕಿಸಿಕೊಡುತ್ತಿದ್ದರು. ಇದಾದ ಬಳಿಕ ಅವರ ಗಮನ ನಾಟಕ ರಚನೆಯಕಡೆಗೆ ತಿರುಗಿತು. 'ಹಾಥೀಂಟಾ ಬೆನಾವೆಂಟೀ ಮಾರ್ಟೀನೆಸ್,' ರಚಿಸಿದ ೧೭೨ ನಾಟಕಗಳಲ್ಲಿ ಪ್ರಮುಖವಾದವುಗಳು.

  • 'Another's Nest' (1854)
  • 'High Society' (1896)
  • 'Los intereses creados' (1907), comedy involving situations similar to those found in the Commedia dell Arte; it is Benavente's most famous and often performed work. It has been translated as The Bonds of Interest.
  • 'Rosas de otoño' (1905), sentimental comedy.
  • 'Señora ama' (1908), penetrante estudio psicológico de una mujer asediada por los celos.
  • 'La malquerida' (1913), drama.
  • 'La ciudad alegre y confiada' (1916), continuation from Los intereses creados.
  • 'Campo de armiño' (1916)
  • 'Lecciones de buen amor' (1924)
  • 'La mariposa que voló sobre el mar' (1926)
  • 'Pepa Doncel' (1928)
  • 'Vidas cruzadas' (1929)
  • 'Aves y pájaros' (1940)
  • 'La honradez de la cerradura' (1942)
  • 'La infanzona' (1945)
  • 'Titania' (1946)
  • 'La infanzona' (1947)
  • 'Abdicación' (1948)
  • 'Ha llegado Don Juan' (1952)
  • 'El alfiler en la boca' (1954)
  • 'Governer's Wife' ಮುಂತಾದ ನಾಟಕಗಳು.

ಹಾಥಿಂಟಾ ರವರ ಸ್ಪಾನಿಷ್-ಭಾಷಾಪ್ರೇಮ ಅಪಾರವಾಗಿತ್ತು[ಬದಲಾಯಿಸಿ]

'ಹಾಥೀಂಟಾ ಬೆನಾವೆಂಟೀ ಮಾರ್ಟೀನೆಸ್', ಸ್ಪಾನಿಷ್ ಭಾಷೆ, ಸಾಹಿತ್ಯಕ್ಕೆ, ಹಾಗೂ ಸ್ಪಾನಿಷ್ ಭಾಷೆಯ ರಂಗಭೂಮಿಯ ಬೆಳವಣಿಗೆಗೆ ಮಾಡಿದ ಸೇವೆ, ಅನನ್ಯವೆಂದು ಪರಿಗಣಿಸಲ್ಪಟ್ಟಿದೆ. ಅವರ ನಾಟಕ ಕೃತಿಗಳಲ್ಲಿ ಹಾಸ್ಯವಲ್ಲದೆ ಅದ್ಭುತ, ರಮ್ಯ-ಸನ್ನಿವೇಶಗಳನ್ನು ಹೆಣೆಯುವ ತಂತ್ರದಲ್ಲಿ ಅವರು ಸಿದ್ಧಿಪಡೆದಿದ್ದರು. ಅಂದಿನ ಸಮಾಜದ ಕುಂದು-ಕೊರತೆಗಳನ್ನು ಎತ್ತಿ ತೋರಿಸಿ ಕ್ಷ-ಕಿರಣಬೀರುತ್ತಿದ್ದರು. 'ಹಾಥೀಂಟಾ ಬೆನಾವೆಂಟೀ ಮಾರ್ಟೀನೆಸ್' ಕೊನೆಯವರೆಗೂ ಅವಿವಾಹಿತರಾಗೇ ಉಳಿದಿದ್ದರು. ಸ್ಪಾನಿಷ್ ಭಾಷೆಯ ನಾಟಕಗಳಲ್ಲಿ ವಾಸ್ತವಿಕ ಅಂಶಗಳಿಗೆ ಒತ್ತುಕೊಡುವುದಲ್ಲದೆ, ಅತಿರಂಜಿತ ನಾಟಕೀಯ ಸಂಭಾಷಣೆಗಳನ್ನು ರಂಗಮಂಚದ ಮೇಲೆ, ತಂದಿದ್ದಲ್ಲದೆ, ಸಹಜಮಾತಿನ ಎಳೆಗಳಲ್ಲಿ ತಿಳುವಳಿಕೆಯ ಸಂದೇಶಗಳನ್ನೂ ಜೊತೆ-ಜೊತೆಯಾಗಿ ತರುತ್ತಿದ್ದರು. 'ಹಾಥೀಂಟಾ ಬೆನಾವೆಂಟೀ ಮಾರ್ಟೀನೆಸ್' 'ಮೆಲೋಡ್ರಾಮ' ದ ಜೊತೆಗೆ ಹಾಸ್ಯದ ಲೇಪವನ್ನೂ ಸೇರಿಸಿ, ಸಿದ್ಧ ಚೌಕಟ್ಟಿನ ಮಾದರಿಗಳನ್ನು ಮುಕ್ತ-ಪರಿಶೀಲನೆಗೆ ಒರೆಹಚ್ಚುವ ಕಡೆಗೆ ತಮ್ಮ ಒಳನೋಟವನ್ನು ತೋರಿಸುತ್ತಿದ್ದರು. ಅಂದಿನ ದಿನಗಳಲ್ಲಿ ಅಸ್ತಿತ್ವದಲ್ಲಿದ್ದ ಕೆಲವು ಒರಟು-ರಂಗಕ್ರಿಯೆಗಳನ್ನು ಸೂಕ್ಷ್ಮ ಬೌಧ್ದಿಕ ವಿವೇಚನೆಗಳಿಗೆ ಒಡ್ಡಿ, ಸ್ಪಾನಿಷ್ ಭಾಷೆಯ ರಂಗಭೂಮಿಯ ಸ್ಥರವನ್ನು ಉಚ್ಚಮಟ್ಟಕ್ಕೆ ಕೊಂಡೊಯ್ದರು. 'ಹಾಥೀಂಟಾ ಬೆನಾವೆಂಟೀ ಮಾರ್ಟೀನೆಸ್' ಎತ್ತರದ ಸ್ಥರದ ರಾಜಕೀಯ ಚಿಂತಕರೂ ಹೌದು.

ಮರಣ[ಬದಲಾಯಿಸಿ]

'ಹಾಥೀಂಟಾ ಬೆನಾವೆಂಟೀ ಮಾರ್ಟೀನೆಸ್', ತಮ್ಮ ೮೭ ನೆಯ ವಯಸ್ಸಿನಲ್ಲಿ ಕಾಲವಶರಾದರು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]