ಹಾಡವಳ್ಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂಗೀತಪುರ, ಉತ್ತರಕನ್ನಡ ಜಿಲ್ಲೆಯ ಭಟ್ಕಳದಿಂದ ೨೦ ಕಿಲೋ ಮೀಟರ್ ದೂರದಲ್ಲಿದೆ. ಇಂದು ಇದನ್ನು ಹಾಡುವಳ್ಳಿ ಎಂದು ಕರೆಯುತ್ತಾರೆ. ಈ ಊರಿಗೆ ಹಾಡುವಳಲ್ ಎಂಬ ಹೆಸರೂ ಇತ್ತು.

ಪರಿಸರ[ಬದಲಾಯಿಸಿ]

ಸಮುದ್ರಮಟ್ಟದಲ್ಲಿರುವ ಭಟ್ಕಳದಿಂದ ಒಳಬಾಗದಲ್ಲಿರುವ ಸಂಗೀತಪುರದ ಸುತ್ತ ದಟ್ಟವಾದ ಹಸಿರುಕಾಡುಗಳಿದೆ. ಈ ಕಾಡುಗಳಲ್ಲಿ ಭಾರಿ ಮರಗಳು, ಮರದಿಂದ ಮರಕ್ಕೆ ತೂಗುಬಿದ್ದ ಬಳ್ಳಿಗಳು ಹಾಗು ಬೆಳೆದಿರುವ ಮರಗಿಡ ಪೊದೆಗಳು. ಬೇಸಿಗೆಯ ಸುಡುಬಿಸಿಲು ಕೂಡ ಇಲ್ಲಿ ತಂಪಾಗಿರುತ್ತದೆ. ಅಂತೆಯೇ ಕಾಡುಕೊಣದಂತಹಾ ಕಾಡು ಜೀವಿಗಳು ಈ ಕಾಡಿನಲ್ಲಿ ನಿರಾತಂಕವಾಗಿ ಒಡಾಡಿಕೊಂಡಿರುತ್ತವೆ. ಸುತ್ತಲೂ ಸಣ್ಣ ಪುಟ್ಟ ಬೆಟ್ಟ ಗುಡ್ಡ ಗುಡ್ಡಗಳಿವೆ.

ಇತಿಹಾಸ[ಬದಲಾಯಿಸಿ]

ಹಿಂದೆ ಹಾಡುವಳ್ಳಿ ಅಥವಾ ಸಂಗೀತಪುರ ರಾಜ್ಯವೆಂದು ಕರೆಯಲಾಗುತ್ತಿದ್ದ ರಾಜ್ಯದ ರಾಜಧಾನಿ ಇದು. ಇಂದು ಒಂದು ಕುಗ್ರಾಮ. ಈಗ ಹಂಚಿನಮನೆಗಳು. ರೈತಾಪಿ ಜನರ ಗುಡಿಸಿಲುಗಳು, ಹೊಲಗದ್ದೆ, ಬಾಳೆ ಅಡಕೆ ತೋಟಗಳು ಇವೆ. ಆದರೆ ಸಂಗೀತಪುರದ ವೈಭವವನ್ನು ಸಾರಿ ಹೆಳಲು ಹಲವಾರು ಬಸದಿಗಳು ಉಳಿದುಕೊಂಡಿವೆ. ಜಿನಬಿಂಬಗಳು, ಬಿಡಿವಿಗ್ರಹಗಳು ಗುಡಿದೇವಾಲಯಗಳ ಕಂಬಗಳು, ಕಲ್ಲುಗಳು ಅಲ್ಲಲ್ಲಿ ಎದುರಾಗುತ್ತವೆ. ಮುಖ್ಯವಾಗಿ ಊರ ನಡುವಿನ 'ಇಂದ್ರೆಗಿರಿ' ಮತ್ತು 'ಚಂದ್ರಗಿರಿ' ಎಂಬ ಎರಡು ಗುಡ್ಡಗಳ ಮೇಲಿನ ಬಸದಿಗಳು ಸಂಗೀತಪುರದ ಕತೆಯನ್ನು ಹೆಳುತ್ತವೆ.

ಉಲ್ಲೇಖನಗಳು[ಬದಲಾಯಿಸಿ]

೧. ಹಾಡುವಳ್ಳಿ ಜೈನಶಾಸನ ವಾಸ್ತು-ಮೂರ್ತಿ ಶಿಲ್ಪ., ಲೇಖಕರು- ಕೆ.ಜಿ. ಭಟ್ ಸೂರಿ, ಕನ್ನಡ ವಿಶ್ವವಿದ್ಯಾಲಯ ಹಂಪಿ ೨೦೧೧

೨. ಕರ್ನಾಟಕ ಗೆಜೆಟಿಯರ್ -ಉತ್ತರ ಕನ್ನಡ ಜಿಲ್ಲೆ-೧೯೮೫ , ಪುಟ ಸಂಖ್ಯೆ:೧೮೩-೧೮೫.

೩. ಸಂಗೀತಪುರ ಪುಸ್ತಕ- ಲೇಖಕ ನಾ.ಡಿಸೋಜಾ

ಹೊರಗಿನ ಸಂಪರ್ಕಗಳು[ಬದಲಾಯಿಸಿ]